ಭಾರತ ಗೆದ್ದಿದ್ದಕ್ಕೆ ಉರಿದುಬಿದ್ದ ಪಾಕ್ – ICC ಫೇವರಿಸಂ ಮಾಡಿದ್ದಕ್ಕೆ ಗೆದ್ರಾ?
ಗೆಲ್ಲೋಕಾಗದಿದ್ರೂ ಈ ಕಳ್ಳಾಟ ಯಾಕೆ?

ಭಾರತ ಗೆದ್ದಿದ್ದಕ್ಕೆ ಉರಿದುಬಿದ್ದ ಪಾಕ್ – ICC ಫೇವರಿಸಂ ಮಾಡಿದ್ದಕ್ಕೆ ಗೆದ್ರಾ?ಗೆಲ್ಲೋಕಾಗದಿದ್ರೂ ಈ ಕಳ್ಳಾಟ ಯಾಕೆ?

ಭಾರತ ಟಿ-20 ವಿಶ್ವಕಪ್​ ಗೆದ್ದಾಯ್ತು. ಸೆಲೆಬ್ರೇಷನ್ನೂ ಭರ್ಜರಿಯಾಗಿತ್ತು. 140 ಕೋಟಿ ಭಾರತೀಯ ಅಭಿಮಾನಿಗಳೂ ಫುಲ್ ಖುಷ್. ಇಡೀ ಕ್ರಿಕೆಟ್ ಜಗತ್ತೇ ಟೀಂ ಇಂಡಿಯಾ ಪರ್ಫಾಮೆನ್ಸ್ ಬಗ್ಗೆ ಅಪ್ರಿಶಿಯೇಟ್ ಮಾಡ್ತಿದೆ. ಌಂಡ್ ಡಿಸರ್ವ್ ಟೀಂ ಅಂತಾ ವಿಶ್ ಮಾಡ್ತಿದ್ದಾರೆ. ಆದ್ರೆ ಮೊಸರಲ್ಲೂ ಕಲ್ಲು ಹುಡುಕೋ ಪಾಕಿಸ್ತಾನಿಯರಿಗೆ ಮಾತ್ರ ಭಾರತ ಗೆದ್ದಿದ್ದನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಐಸಿಸಿ ಮೇಲೆ ಗೂಬೆ ಕೂರಿಸೋ ಕೆಲ್ಸ ಮಾಡಿದ್ದಾರೆ. ಬಟ್ ಕ್ರಿಕೆಟ್ ಸೆನ್ಸ್ ಇರೋ ಇನ್ನೊಂದಷ್ಟು ಕ್ರಿಕೆಟರ್ಸ್ ಭಾರತಕ್ಕೆ ಸಪೋರ್ಟ್ ಮಾಡಿದ್ದಾರೆ.

ಇದನ್ನೂ ಓದಿ : T20 ವಿಶ್ವಕಪ್‌ ಗೆದ್ದ ಭಾರತಕ್ಕೆ ಬಂಪರ್!‌ – ಟೀಮ್ ಇಂಡಿಯಾಗೆ 131 ಕೋಟಿ ರೂ. ಬಹುಮಾನ ಘೋಷಿಸಿದ BCCI!

ಕ್ರಿಕೆಟ್​ನಲ್ಲಿ ಪಾಕಿಸ್ತಾನಿಯರ ಬುದ್ಧಿ ಹೇಗಿದೆ ಅಂದ್ರೆ ಅವ್ರು ಗೆಲ್ತಾರೋ ಬಿಡ್ತಾರೋ ಸೆಕೆಂಡ್ರಿ. ಆದ್ರೆ ಭಾರತ ಮಾತ್ರ ಗೆಲ್ಲಬಾರದು. ಟೂರ್ನಿಯಲ್ಲಿ ನಾವು ಸೋತೆವಲ್ಲ ಅನ್ನೋ ನೋವಿಗಿಂತ ಭಾರತ ಗೆದ್ದುಬಿಡ್ತಲ್ಲ ಅನ್ನೋದಕ್ಕೆ ಜಾಸ್ತಿ ಕೊರಗ್ತಾರೆ. ಈ ಬಾರಿಯ ಟೂರ್ನಿಯಲ್ಲೂ ಅಷ್ಟೇ. ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮಸ್ಟ್ ವಿನ್ ಮ್ಯಾಚಲ್ಲಿ ಪಾಕಿಸ್ತಾನದ ಕೆಲ ಮಾಜಿ ಪ್ಲೇಯರ್ಸ್ ನಮ್ಮ ಸಪೋರ್ಟ್ ವಿಂಡೀಸ್​ಗೆ ಅಂತಾ ಓಪನ್ ಆಗೇ ಹೇಳಿದ್ರು. ನೆಕ್ಸ್​ಟ್ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್, ಫೈನಲ್​ನಲ್ಲಿ ನ್ಯೂಜಿಲೆಂಡ್ ಗೆಲ್ಲಲಿ ಅಂತಾ ಹೇಳ್ತಿದ್ರು. ಆದ್ರೆ ಅಂತಿಮವಾಗಿ ಭಾರತವೇ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. ಭಾರತದ ಈ ಗೆಲುವನ್ನ ಕೆಲ ಪಾಕಿಸ್ತಾನಿಯರು ಒಪ್ಪಿಕೊಂಡಿದ್ದಾರೆ. ತಮ್ಮದೇ ಆಟಗಾರರ ಹೀನಾಯ ಪ್ರದರ್ಶನವನ್ನ ಟೀಕಿಸಿದ್ದಾರೆ. ಬಟ್ ಇನ್ನೂ ಕೆಲವ್ರು ಇಲ್ಲೂ ಕೊಂಕು ತೆಗೆದಿದ್ದಾರೆ. ಮೊಹಮ್ಮದ್ ಅಮೀರ್ ಅಂತೂ ಮೊದ್ಲಿಂದಲೂ ಭಾರತ ವಿಶ್ವಕಪ್ ಗೆಲ್ಲಲ್ಲ ಅಂತಾನೇ ಹೇಳ್ಕೊಂಡು ಬಂದಿದ್ರು. ಆದ್ರೆ ಭಾರತ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಗಪ್​ಚುಪ್ ಆಗಿದ್ದಾರೆ.

ಭಾರತ ಟ್ರೋಫಿ ಗೆದ್ರೆ ವಿಶ್ವಕ್ರಿಕೆಟ್ ಹಾಳಾಗುತ್ತೆ ಎಂದಿದ್ದ ಅಫ್ರಿದಿ!

ಇನ್ನು ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ ಕೂಡ ಸಣ್ಣತನದ ಮಾತುಗಳನ್ನಾಡಿದ್ರು. ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಶಾಹೀದ್ ಅಫ್ರಿದಿ, ‘ಟಿ20 ವಿಶ್ವಕಪ್​ನಲ್ಲಿ ಭಾರತ ಗೆಲ್ಲಬಾರದು. ಅಕಸ್ಮಾತ್​ ಗೆದ್ದು ಬಿಟ್ರೆ ಬಿಸಿಸಿಐ ಇನ್ನೂ ಸ್ಟ್ರಾಂಗ್ ಆಗುತ್ತೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಕೋಟಿಗಟ್ಟಲೆ ಹಣ  ಹೊಂದಿದೆ. ಟೀಮ್ ಇಂಡಿಯಾ ಈಗಾಗಲೇ ಸಾಕಷ್ಟು ಟ್ರೋಫಿಗಳನ್ನು ಗೆದ್ದಿದೆ. ಈಗ, ಮತ್ತೆ ಟ್ರೋಫಿ ಗೆದ್ದರೆ, ಬಿಸಿಸಿಐ ವಿಶ್ವ ಕ್ರಿಕೆಟ್ ನ ರೂಲ್ ಮಾಡುತ್ತೆ. ಇದರಿಂದ ಕ್ರಿಕೆಟ್ ಸಂಪೂರ್ಣವಾಗಿ ನಾಶವಾಗುತ್ತದೆ. ಕ್ರಿಕೆಟ್‌ನ ಒಳಿತಿಗಾಗಿ ಭಾರತ ವಿಶ್ವಕಪ್ ಗೆಲ್ಲಬಾರದು ಅಂದಿದ್ರು. ಆದ್ರೆ ಯಾವಾಗ ಭಾರತ ನ್ಯೂಜಿಲೆಂಡ್ ವಿರುದ್ಧ ಗೆಲ್ತೋ ಆಫ್ರಿದಿ ಉಲ್ಟಾ ಹೊಡೆದಿದ್ದಾರೆ. ವಿಶ್ವಕಪ್ ಮುಗಿದಿದೆ. ಭಾರತ ಚಾಂಪಿಯನ್ ಆಗೋಕೆ ಡಿಸರ್ವ್ ಇದೆ. ಗ್ರೇಟ್ ಕಾಂಬಿನೇಷನ್ ಇದೆ. ಭಾರತ ತಂಡದಲ್ಲಿ ಬೆಂಚ್​ನಲ್ಲಿ ಕೂತಿರೋ ಆಟಗಾರರು ಕೂಡ ಪ್ಲೇಯಿಂಗ್ 11ನಲ್ಲಿ ಆಡೋಕೆ ಸರ್ವಸಮರ್ಥರೂ ಆಗಿದ್ದಾರೆ ಅಂತಾ ವಿಡಿಯೋವನ್ನೇ ಪೋಸ್ಟ್ ಮಾಡಿದ್ದಾರೆ.

ಬಲಿಷ್ಠ ಭಾರತ ಕ್ರಿಕೆಟ್ ನೇ ಹಾಳು ಮಾಡ್ತಿದೆ ಎಂದ ಶೋಯೆಬ್!

ಇನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್​ ಭಾರತದ ಬ್ಯಾಟಿಂಗ್ ಪರಾಕ್ರಮ ನೋಡಿ ಉರಿದು ಬಿದ್ದಿದ್ದಾರೆ. ಭಾರತದ ಏಳಿಗೆ ಕ್ರಿಕೆಟ್​ನೇ ಹಾಳ್ ಮಾಡ್ತಿದೆ ಅಂದಿದ್ದಾರೆ. ಟಿವಿ ಡಿಸ್ಕಶನ್​ನಲ್ಲಿ ಮಾತನಾಡ್ತಾ ಐಸಿಸಿ ಫೇವರಿಸಂ ಮಾಡಿದೆ ಅಂತಾ ಕೀಳುಮಟ್ಟದ ಮನಸ್ಥಿತಿಯನ್ನ ಹೊರ ಹಾಕಿದ್ದಾರೆ. ಪಕ್ಕದ ಊರಲ್ಲೊಂದು ಶ್ರೀಮಂತ ಮಗು ಇರುತ್ತೆ. ಆ ಮಗು ಬಡ ಮಕ್ಕಳನ್ನೆಲ್ಲಾ ಕರೆದು ಬನ್ನಿ ಕ್ರಿಕೆಟ್ ಆಡೋಣ ಅಂತಾ ಕರೆಯುತ್ತೆ. ಕೊನೆಗೆ ತಾನೇ ಗೆಲ್ಬೇಕು ಅಂತಾ ಹಠ ಮಾಡಿ ಗೆಲ್ಲುತ್ತೆ. ಭಾರತ ನಮ್ಮೊಂದಿಗೆ ಮಾಡುತ್ತಿರುವುದು ಅದನ್ನೇ. ಎಂಟು ತಂಡಗಳಲ್ಲಿ ನಾಲ್ಕನ್ನು ಅವರು ಇಟ್ಟುಕೊಳ್ಳುತ್ತಾರೆ. ಆ ನಾಲ್ವರಲ್ಲಿ ಮತ್ತೆ ಮೂವರನ್ನು ಕರೆದುಕೊಂಡು ಮುಂದಕ್ಕೆ ಹೋಗುತ್ತಾರೆ. ಆಮೇಲೆ ನೋಡಿ ನಾವೇ ಗೆದ್ದಿದ್ದು ಅಂತಾರೆ. ಭಾರತ ಕ್ರಿಕೆಟ್​ನ ಕಂಪ್ಲೀಟ್ ಆಗಿ ಹಾಳು ಮಾಡ್ತಿದೆ ಅಂತಾ ನಾಲಗೆ ಹರಿ ಬಿಟ್ಟಿದ್ದಾರೆ. ಹೀಗೆ ಒಂದಷ್ಟು ಆಟಗಾರರು ಭಾರತದ ಗೆಲುವನ್ನ ಒಪ್ಪಿಕೊಳ್ಳೋಕೆ ರೆಡಿ ಇಲ್ಲದಿದ್ರೆ ಇನ್ನೊಂದಷ್ಟು ಕ್ರಿಕೆಟರ್ಸ್ ಓಪನ್ನಾಗೇ ಭಾರತವನ್ನ ಮೆಚ್ಚಿಕೊಂಡಿದ್ದಾರೆ.

ಭಾರತವನ್ನ ಮೆಚ್ಚಿಕೊಂಡ ಪಾಕ್ ಪ್ಲೇಯರ್ಸ್!

ಭಾರತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ಮೊಹಮ್ಮದ್ ವಾಸಿಂ

ಪಾಕ್ ಕ್ರಿಕೆಟ್ ನ ಅಧ್ವಾನಗಳನ್ನ ಒಪ್ಪಿಕೊಂಡ ಜಾವೇದ್ ಮಿಯಾಂದಾದ್

ಡ್ರೆಸ್ಸಿಂಗ್ ರೂಮ್ ​ನಲ್ಲಿ ಚೆನ್ನಾಗಿದ್ದಾಗ ಕಪ್ ಗೆದ್ದಿದ್ದೇವೆಂದ ಮಿಯಾಂದಾದ್

ಅಹ್ಮದ್ ಶೆಹಜಾದ್ ತಮ್ಮದೇ ದೇಶದ ಕ್ರಿಕೆಟ್ ವ್ಯವಸ್ಥೆ ಬಗ್ಗೆ ಆಕ್ರೋಶ

ಜಿಂಬಾಬ್ವೆ, ಕೀನ್ಯಾ, ಉಗಾಂಡಾ ವಿರುದ್ಧವಷ್ಟೇ ಗೆಲುವೆಂದ ಅಹ್ಮದ್ ಶೆಹಜಾದ್

ಡಾ. ನೌಮನ್ ನಿಯಾಜ್ ಫೈನಲ್‌ ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮೆಚ್ಚುಗೆ

ಪಾಕಿಸ್ತಾನ ತಂಡದಲ್ಲಿ ಆಯ್ಕೆಯೇ ಸರಿ ಇಲ್ಲ ಎಂದ ಸಿಕಂದರ್ ಬಖ್ತ್

ಭಾರತದ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವವರೆಗೆ ಬದಲಾಗಲ್ಲ ಎಂದ ವಾಸಿಮ್

ಭಾರತೀಯ ಆಟಗಾರರಲ್ಲಿ ಯಾವುದೇ ಅಭದ್ರತೆ ಕಾಣಿಸ್ತಿಲ್ಲ ಎಂದ ಮೊಹ್ಸಿನ್ ಖಾನ್

ಪಾಕಿಸ್ತಾನ ಕ್ರಿಕೆಟ್​ನಲ್ಲಿ ಅದೆಷ್ಟು ಪ್ರಾಬ್ಲಮ್ಸ್​ ಇದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಅಲ್ಲಿ ನಡೀತಾ ಇರುವಂಥ ಮ್ಯೂಜಿಕಲ್ ಚೇರ್  ಆಟ. ಜೊತೆಗೆ ಪಿಸಿಬಿ ತೆಗೆದುಕೊಳ್ತಿರೋ ನಿರ್ಧಾರಗಳು. ಈ ಬಾರಿ ಶ್ರೀಲಂಕಾ ವಿರುದ್ಧ ಕೊನೇ ಮ್ಯಾಚ್ ಗೆದ್ರೂ ಪಾಕಿಸ್ತಾನ ನೆಟ್ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್​ಗೂ ಬರ್ಲಿಲ್ಲ. ಇದು ಪಾಕಿಸ್ತಾನ ಸೆಮಿಫೈನಲ್ ತಲುಪಲು ವಿಫಲವಾದ ಸತತ ನಾಲ್ಕನೇ ಐಸಿಸಿ ಟೂರ್ನಮೆಂಟ್ ಆಗಿದೆ. 2023ರ ಏಕದಿನ ವಿಶ್ವಕಪ್, 2024ರ ಟಿ-20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ-20 ವಿಶ್ವಕಪ್​. ಈ ನಾಲ್ಕೂ ಟೂರ್ನಿಗಳಲ್ಲೂ ಭಾರತ ಫೈನಲ್​ಗೇರಿದೆ. ಹಾಗೇ 3 ವಿಶ್ವಕಪ್​ಗಳನ್ನ ಗೆದ್ದಿದೆ. ಬಟ್ ಪಾಕಿಸ್ತಾನಕ್ಕೆ ಸೆಮೀಸ್​ಗೂ ಬರೋಕೆ ಆಗಿಲ್ಲ. ಈ ಸಲ ಕೂಡ ಲಂಕಾ ವಿರುದ್ಧ ಗೆದ್ರೂ ಸೆಮೀಸ್ ಟಿಕೆಟ್ ಸಿಗ್ಲಿಲ್ಲ. ಹೀಗಾಗಿ  ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಟಗಾರರಿಗೆ ಪೆನಾಲ್ಟಿ ಹಾಕಿದ್ರು. ಇದೆಲ್ಲಾ ಒಂದ್ಕಡೆಯಾದ್ರೆ ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನವು ಏಳು ಕೋಚ್​ಗಳನ್ನ ಹಾಗೇ ಮೂವರು T20ಐ ನಾಯಕರನ್ನ ಬದಲಿಸಿದೆ. ಹೀಗಾಗಿ ಆಟದಲ್ಲೂ ಕನ್ಸಿನ್ಸೆಸ್ಟಿ ಇಲ್ಲ ಕೋಚಿಂಗ್, ಕ್ಯಾಪ್ಟನ್ಸಿಯಲ್ಲೂ ಮ್ಯೂಸಿಕಲ್ ಚೇರ್ ನಿಂತಿಲ್ಲ ಅನ್ನೋದು ಗೊತ್ತಾಗ್ತಿದೆ. ಅಂದ್ರೆ ಮ್ಯಾಚ್ ಗೆದ್ದಿಲ್ಲ ಅಂದ್ರೆ ಕೋಚ್ ಮತ್ತು ಕ್ಯಾಪ್ಟನ್ಸ್​ಗೆ ಗೇಟ್​ಪಾಸ್ ಕೊಡ್ತಿದ್ದಾರೆ. ಸೋ ಇದನ್ನೆಲ್ಲಾ ನೋಡಿದಾಗ್ಲೇ ಗೊತ್ತಾಗುತ್ತೆ ಭಾರತ ಯಾವ ಮಟ್ಟದಲ್ಲಿದೆ ಅನ್ನೋದು. ವರ್ಷದಿಂದ ವರ್ಷಕ್ಕೆ ಬಿಸಿಸಿಐ ದೊಡ್ಡಣ್ಣನಾಗ್ತಾ ಬೆಳೀತಾ ಇದ್ರೆ ಪಿಸಿಬಿ ದಿವಾಳಿಯಾಗೋ ಮಟ್ಟಕ್ಕೆ ಬಂದು ಆಟಗಾರರ ದುಡ್ಡಿಗೂ ಕತ್ತರಿ ಹಾಕ್ತಿದೆ. ಹೀಗಾಗೇ ಭಾರತದ ಯಶಸ್ಸನ್ನ ಸಹಿಸಿಕೊಳ್ಳೋಕೆ ಆಗದೆ ಕೆಲವರು ಬೇಕಾಬಿಟ್ಟಿ ಮಾತನಾಡಿ ವಿಶ್ವಕ್ರಿಕೆಟ್​ನ ದಿಗ್ಗಜರಿಂದ ಛೀಮಾರಿ ಹಾಕಿಸಿಕೊಳ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *