4 ಮ್ಯಾಚ್.. 879 ರನ್ಸ್! – ಭಾರತದ ಬೌಲಿಂಗ್ ಬರ್ಬಾದ್
ನಂ.1 ತಂಡಕ್ಕೆ ವಿಂಡೀಸ್ ಬರೆ!  

4 ಮ್ಯಾಚ್.. 879 ರನ್ಸ್! – ಭಾರತದ ಬೌಲಿಂಗ್ ಬರ್ಬಾದ್ನಂ.1 ತಂಡಕ್ಕೆ ವಿಂಡೀಸ್ ಬರೆ!  

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿ ಈಗ ರಣರೋಚಕ ಘಟ್ಟಕ್ಕೆ ಬಂದು ನಿಂತಿದೆ. ಅವ್ರು 2 ಪಂದ್ಯ, ಇವ್ರು 2 ಪಂದ್ಯ ವಿನ್ ಆಗಿ ಸಿರೀಸ್ ಈಕ್ವಲ್ ಆಗಿದೆ. ಸೋ ಬೆಂಗಳೂರಲ್ಲಿ ಶನಿವಾರ ನಡೆಯಲಿರೋ ಕ್ಲೈಮ್ಯಾಕ್ಸ್ ಪಂದ್ಯವೇ ಈಗ ಸಿರೀಸ್ ಡಿಸೈಡರ್.

ಇದನ್ನೂ ಓದಿ : ಭಾರತಕ್ಕೆ ವೆಸ್ಟ್ ಇಂಡೀಸ್ ಶಾಕ್! – 4ನೇ T20ಯಲ್ಲಿ ಟೀಂ ಇಂಡಿಯಾ ಧೂಳೀಪಟ!

ಟಿ-20ಐ ವಿಶ್ವಕಪ್​ನ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್​.. ಮಾರ್ಡ್ರೆನ್ ಕ್ರಿಕೆಟ್​ನ ಮೋಸ್ಟ್ ಡೇಂಜರಸ್ ಬ್ಯಾಟರ್ಸ್.. ಐಸಿಸಿ ರ್ಯಾಂಕಿಂಗ್​ನಲ್ಲೂ ಟಾಪರ್ಸ್.. ನಮ್ಗೆ 200+ ಸ್ಕೋರ್ ಎಲ್ಲಾ ಹ್ಯಾಬಿಟ್ ಆಗಿದೆ ಅಂತಾ ಟೀಂ ಇಂಡಿಯಾ ಹೊಸ ಟ್ರೇಡ್​ಮಾರ್ಕ್ ಸೆಟ್ ಮಾಡಿದೆ. ಆದ್ರೆ ಅಸಲಿ ಚಾಲೆಂಜ್ ಇರೋದು ಬೌಲಿಂಗ್​ನಲ್ಲಿ.. ಫೀಲ್ಡಿಂಗ್​ನಲ್ಲಿ.. 200 ಅಲ್ಲ 250 ರನ್ಸ್ ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗಲ್ಲ ಅಂದ್ರೆ ಅದು ತಂಡದ ಬಿಗ್ಗೆಸ್ಟ್ ಫೇಲ್ಯೂರ್ ಅಂತಾನೇ ಲೆಕ್ಕ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೇ ರಿವೀಲ್ ಆಗಿದೆ.

4 ಪಂದ್ಯ.. 879 ರನ್ಸ್.. 41 ಎಕ್ಸ್ ಟ್ರಾ ರನ್ಸ್ ಕೊಟ್ಟ ಭಾರತ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಸದ್ಯ ಬ್ಯಾಟರ್​ಗಳದ್ದೇ ಹವಾ.. ಌಂಡ್ ಭಾರತದಲ್ಲಿ ಭಾರತಕ್ಕಿಂತ ಜಾಸ್ತಿ ವಿಂಡೀಸ್ ದೈತ್ಯರದ್ದೇ ಆರ್ಭಟ ಜೋರಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್ ಗಳನ್ನ ಅಟ್ಟಾಡಿಸಿ ಹೊಡೆದಿದ್ದಾರೆ. ಮೊದಲ ಮ್ಯಾಚಲ್ಲಿ ಸ್ವಲ್ಪ ಎಕ್ಸ್​ಕ್ಯೂಸ್ ಕೊಟ್ಟಿದ್ರು ಅನ್ನೋದನ್ನ ಬಿಟ್ರೆ ಉಳಿದ ಮೂರೂ ಪಂದ್ಯಗಳಲ್ಲೂ ಹೊಡಿಬಡಿ ಆಟವೇ. ಲಕ್ನೋದಲ್ಲಿ ನಡೆದ ಮೊದಲ ಮ್ಯಾಚಲ್ಲಿ 171ಕ್ಕೆ ಆಲೌಟ್ ಆಗಿದ್ದ ವಿಂಡೀಸ್ ರಾಂಚಿಯಲ್ಲಿ 250 ರನ್​ಗಳ ಟಾರ್ಗೆಟ್​ನ ಚೇಸ್ ಮಾಡಿ ಗೆದ್ದಿದ್ರು. ನೆಕ್ಸ್​ಟ್ ಇಂದೋರ್ ಪಂದ್ಯದಲ್ಲಿ 209 ರನ್ ಗಳಿಸಿದ್ರೆ ಹೈದ್ರಾಬಾದ್​ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 248 ರನ್​ಗಳ ಟಾರ್ಗೆಟ್ ಸೆಟ್ ಮಾಡಿ ಪಂದ್ಯವನ್ನೂ ಗೆದ್ರು. ಸೋ ಅಲ್ಲಿಗೆ 250 ರನ್ಸ್ ಟಾರ್ಗೆಟ್ ಚೇಸ್ ಮಾಡೋಕೂ ಆಗುತ್ತೆ.. 248 ರನ್ಸ್ ಡಿಫೆನ್ಸ್ ಮಾಡಿಕೊಳ್ಳೋಕೂ ಆಗುತ್ತೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅಲ್ಲಿಗೆ ನಾಲ್ಕು ಪಂದ್ಯಗಳಿಂದ ಒಟ್ಟಾರೆಯಾಗಿ 879 ರನ್‌ಗಳನ್ನ ಕಲೆ ಹಾಕಿದ್ದಾರೆ. ಅಟ್ ದಿ ಸೇಮ್ ಟೈಂ ಭಾರತ 867 ರನ್‌ಗಳನ್ನ ಕಲೆ ಹಾಕಿದೆ. ಈ ವೇಳೆ ಭಾರತ 41 ಎಕ್ಸ್​ಟ್ರಾ ರನ್​ಗಳನ್ನ ಬಿಟ್ಟುಕೊಟ್ರೆ ವಿಂಡೀಸ್ ತಂಡ 44 ಹೆಚ್ಚುವರಿ ರನ್​​ಗಳನ್ನ ನೀಡಿದೆ. ಸೋ ಇಲ್ಲಿ ಎರಡೂ ತಂಡಗಳಲ್ಲೂ ಫೈಟ್ ಚೆನ್ನಾಗಿದೆ. ತಲಾ ಎರಡೆರಡು ಪಂದ್ಯ ಗೆದ್ದಿವೆ. ಸದ್ಯಕ್ಕೆ ಸರಣಿ ಈಕ್ವಲ್ ಇದೆ. ಆದ್ರೆ ಭಾರತದ ನಾಡಿನಲ್ಲಿ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಕ್ಷರಶಃ ಡಾಮಿನೇಟ್ ಮಾಡಿದ್ದಾರೆ. ಹತ್ತು ಹಲವು ದಾಖಲೆಗಳನ್ನೂ ಬರೆದು ಶೈನ್ ಆಗಿದ್ದಾರೆ.

ವಿಂಡೀಸ್ ವೈಭವ!

ಕ್ಯಾಪ್ಟನ್ ಶಾಯ್ ಹೋಪ್ 4 ಪಂದ್ಯಗಳಲ್ಲಿ 2 ಶತಕ ಸಿಡಿಸಿ ಮಿಂಚು

ಮಧ್ಯಮ ಕ್ರಮಾಂಕದಲ್ಲಿ ರುದರ್‌ ಫೋರ್ಡ್ (221) ಭಾರತಕ್ಕೆ ಕಂಟಕ

ಕೀಮೋ ಪಾಲ್ ನಾಲ್ಕನೇ ಪಂದ್ಯದಲ್ಲಿ 5 ವಿಕೆಟ್ಸ್ ಬೇಟೆಯಾಡಿ ಬರೆ

ರೋಸ್ಟನ್ ಚೇಸ್, ಗುಡಾಕೇಶ್ ಮೋತಿ ವಿಕೆಟ್.. ಸ್ಟ್ರಿಂಗರ್ ಪ್ರದರ್ಶನ

ಕಳೆದ ನಾಲ್ಕು ಪಂದ್ಯಗಳಲ್ಲಿ 56 ಸಿಕ್ಸರ್ಸ್ ಬಾರಿಸಿರುವ ವಿಂಡೀಸ್ ಪಡೆ

ಹೀಗೆ ವಿಂಡೀಸ್ ಪ್ಲೇಯರ್ಸ್ ಭಾರತದ ನಾಡಿನಲ್ಲಿ ತಮ್ಮದೇ ಆದ ಟ್ರೆಂಡಿಂಗ್ ಶುರು ಮಾಡಿದ್ದಾರೆ. ಮಂಕಾಗಿದ್ದ ತಂಡಕ್ಕೆ ಗೆಲುವಿನ ಟಾನಿಕ್ ನೀಡ್ತಿದ್ದಾರೆ. ಆದ್ರೆ ಭಾರತ ಮಾತ್ರ ಸಪ್ಪೆ ಸಪ್ಪೆಯಾಗೇ ಕಾಣ್ತಿದೆ. ಅದ್ರಲ್ಲೂ ಇನಿಂಗ್ಸ್‌ನ ಕೊನೆಯ 5 ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ದಾರಾಳವಾಗಿ ರನ್ಸ್ ಕೊಡ್ತಿದ್ದಾರೆ. ವಿಂಡೀಸ್ ಬ್ಯಾಟರ್‌ಗಳು ಕೊನೆಯ ಓವರ್‌ಗಳಲ್ಲಿ ಪ್ರತಿ ಓವರ್‌ಗೆ 15 ಕ್ಕಿಂತ ಹೆಚ್ಚು ರನ್ ಚಚ್ಚುತ್ತಿದ್ದಾರೆ. ಆದ್ರೆ ಭಾರತದ ಬ್ಯಾಟಿಂಗ್​ನಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ಉತ್ತಮ ಆರಂಭ ನೀಡಿದ್ರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್ ಕಳ್ಕೊಳ್ತಿದೆ. ರನ್ ಚೇಸ್ ಮಾಡುವಾಗಂತೂ ಪ್ರೆಶರ್​ನಲ್ಲಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಬೌಲಿಂಗ್ ಯುನಿಟ್ ಅಂತೂ ಯಾರ ಮೇಲೂ ಟ್ರಸ್ಟ್ ಮಾಡೋ ರೀತಿಯ ಕಂಟ್ರೋಲ್ ಇಲ್ವೇ ಇಲ್ಲ. ಇದೇ ಕಾರಣಕ್ಕೆ ಭಾರತ 2 ಪಂದ್ಯಗಳ ಸೋತಿದೆ. ಈಗ ಕೊನೆಯ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಬಂದು ನಿಂತಿದೆ.

ಶನಿವಾರ ಸರಣಿಯ ಕೊನೇ ಪಂದ್ಯ.. ಗೆದ್ದವ್ರಿಗೆ ಟ್ರೋಫಿ!

ಸದ್ಯಕ್ಕೆ ಭಾರತ ಮತ್ತು ವೆಸ್ಟ್ ಇಂಡೀಸ್ 2-2 ರಿಂದ ಸಮಬಲ ಸಾಧಿಸಿರುವುದರಿಂದ, ಶನಿವಾರ ಗೆಲ್ಲುವ ತಂಡವೇ ಟಿ20ಐ ಸರಣಿಯ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲಿದೆ. ಹಾಗೇ ಈ ಪಂದ್ಯವೂ ಹೈಸ್ಕೋರಿಂಗ್ ಗೇಮ್ ಆಗುವ ಚಾನ್ಸಸ್ ಜಾಸ್ತಿ ಇದೆ. ಚಿನ್ನಸ್ವಾಮಿ ಕ್ರೀಡಾಂಗಣವು ಸಣ್ಣ ಬೌಂಡರಿ ಮತ್ತು ಬ್ಯಾಟಿಂಗ್‌ಗೆ ಫೇಮಸ್. ಈಗಾಗಲೇ ಸರಣಿಯಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುತ್ತಿರುವ ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಗೆ ಈ ಮೈದಾನ ಮತ್ತಷ್ಟು ನೆರವಾಗುವ ಸಾಧ್ಯತೆ ಇದೆ. ಆಲ್ರೆಡಿ ನಾಲ್ಕನೇ ಪಂದ್ಯದಲ್ಲಿ 247 ರನ್ ಬಿಟ್ಟುಕೊಟ್ಟ ಭಾರತ ಕೊನೆ ಮ್ಯಾಚಲ್ಲೂ ಹೀಗೇ ಆದ್ರೆ ಹೊಡೆತ ತಿನ್ನೋದಂತೂ ಪಕ್ಕಾ. ಒಟ್ನಲ್ಲಿ ಏಷ್ಯನ್ ಗೇಮ್ಸ್​ನಲ್ಲಿ ಗೋಲ್ಡ್ ಗೆದ್ದು ವಿಂಡೀಸ್ ವಿರುದ್ಧದ ಸರಣಿಗಿಳಿದ ಶ್ರೇಯಸ್ ಕ್ಯಾಪ್ಟನ್ಸಿಯ ಭಾರತ ತಂಡ ಸಾಕಷ್ಟು ಏಳುಬೀಳುಗಳನ್ನ ಕಾಣ್ತಿದೆ.

Shantha Kumari

Leave a Reply

Your email address will not be published. Required fields are marked *