ಭಾರತದ ವಿರುದ್ಧವೂ ಸೋಲು – ಟೂರ್ನಿಯಿಂದಲೇ ಹೊರ ಬಿತ್ತಾ ಪಾಕಿಸ್ತಾನ? –

ಬೌಲಿಂಗ್ನಿಂದ ಹಿಡ್ದು ಬ್ಯಾಟಿಂಗ್ವರೆಗೂ ಪಾಕಿಸ್ತಾನದ ಮೇಲೆ ಸವಾರಿ ಮಾಡಿದ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಗೆದ್ದೇ ಗೆಲ್ತೇವೆ ಅಂತಾ ಓವರ್ ಕಾನ್ಫಿಡೆನ್ಸ್ನಲ್ಲಿ ಬಂದಿದ್ದ ಮೆನ್ ಇನ್ ಗ್ರೀನ್ ಬಾಯ್ಸ್ ಸೋತು ಸುಣ್ಣವಾಗಿದ್ದಾರೆ. ಬರೀ ಸೋಲು ಮಾತ್ರ ಅಲ್ಲ ಐಸಿಸಿ ಟೂರ್ನಿಯಿಂದಲೇ ಆಲ್ಮೋಸ್ಟ್ ಹೊರ ಬಿದ್ದಾಗಿದೆ.
ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ತುಂಬಾ ಕಾನ್ಫಿಡೆನ್ಸ್ನಿಂದಲೇ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡ್ರು. ಆರಂಭದಲ್ಲಿ ಎಲ್ಲವೂ ಚೆನ್ನಾಗೇ ಇದೆ ಅನ್ನುಸ್ತಿತ್ತು. ಬಟ್ ಈ ಡಿಸಿಷನ್ ತಗೋಬಾರದಿತ್ತು ಅನ್ನೋದು ಗೊತ್ತಾಗೋಕೆ ಜಾಸ್ತಿ ಹೊತ್ತು ಬೇಕಾಗ್ಲೇ ಇಲ್ಲ. ಅದ್ರಲ್ಲೂ ಮೊದಲ ಓವರ್ ಬೌಲ್ ಮಾಡಿದ ಮೊಹಮ್ಮದ್ ಶಮಿ ಭಾರತದ ಪರ ಬೇಡದ ದಾಖಲೆಯನ್ನೂ ಬರೆದ್ರು. ಒಂದೇ ಓವರ್ನಲ್ಲಿ 6 ಬದಲಿಗೆ 11 ಎಸೆತಗಳನ್ನು ಎಸೆದರು. ಇದರಲ್ಲಿ 5 ವೈಡ್ಗಳು ಸೇರಿವೆ. ಇದರೊಂದಿಗೆ ತಮ್ಮ ಹೆಸರಿಗೆ ಬೇಡದ ದಾಖಲೆಯನ್ನು ಸೇರಿಸಿಕೊಂಡರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಓವರ್ನಲ್ಲೆ 5 ವೈಡ್ ಎಸೆದ ಮೊದಲ ಬೌಲರ್ ಆದರು. ಒಟ್ಟಾರೆ ಎರಡನೇ ಬೌಲರ್ ಎನಿಸಕೊಂಡರು. ಹೀಗೆ ಫಸ್ಟ್ ಓವರ್ನಲ್ಲೇ 5 ವೈಡ್ಗಳಿಂದ ಲಾಭ ಪಡೆದ ಬಾಬರ್ ಸ್ಟಾರ್ಟಿಂಗ್ ನಲ್ಲಿ ಸೂಪರ್ ಪರ್ಫಾಮೆನ್ಸ್ ಕೊಟ್ಟು 5 ಬೌಂಡರಿ ಬಾರಿಸಿದ್ರು. ಬಟ್ ಇವ್ರ ಆಟ 9ನೇ ಓವರ್ನಲ್ಲೇ ಎಂಡ್ ಆಯ್ತು. 9ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ, ಬಾಬರ್ ಅಝಂ ವಿಕೆಟ್ ಎಗರಿಸಿದ್ರೆ, 10ನೇ ಓವರ್ನಲ್ಲಿ ಅಕ್ಷರ್ ಪಟೇಲ್ ಬ್ರಿಲಿಯಂಟ್ ಥ್ರೋಗೆ ಇಮಾಮ್ ಉಲ್ ಹಕ್ ಔಟಾದ್ರು. ಮೊದಲ ಪವರ್ ಪ್ಲೇನಲ್ಲಿ ಕೇವಲ 41 ರನ್ಗಳಿಸಿದ ಪಾಕ್ ಪ್ರಮುಖ 2 ಕಳೆದುಕೊಳ್ತು. ಇಲ್ಲಿಂದ ಪಾಕಿಸ್ತಾನಕ್ಕೆ ಮೇಲೇಳೋಕೆ ಆಗ್ಲೇ ಇಲ್ಲ. ಮಿಡಲ್ ಓವರ್ಗಳಲ್ಲಿ ತುಂಬಾನೇ ಪೇಷನ್ಸ್ ಇಂದ ಆಡಿದ ಶಕೀಲ್, ರಿಜ್ವಾನ್ 4ನೇ ವಿಕೆಟ್ಗೆ 104 ರನ್‌ಗಳ ಜೊತೆಯಾಟವಾಡಿದ್ರು. ಅದೂ ಹೆಚ್ಚು ಹೊತ್ತು ಉಳೀಲಿಲ್ಲ. ಅಂತಿಮವಾಗಿ . 49.4 ಓವರ್ಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ ತಂಡ 241 ರನ್ಗಳಿಸಿತು. ಭಾರತದ ಪರ ಕಳೆದ ಮ್ಯಾಚ್ನಲ್ಲಿ 5 ವಿಕೆಟ್ ಕಿತ್ತಿದ್ದ ಮೊಹಮ್ಮದ್ ಶಮಿಗೆ ಈ ಪಂದ್ಯದಲ್ಲಿ ಒಂದೂ ವಿಕೆಟ್ ಬೀಳಲಿಲ್ಲ. ಉಳಿದಂತೆ ಕುಲ್ದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಬೇಟೆಯಾಡಿದ್ರು.
242 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಅದ್ರಲ್ಲೂ ರೋಹಿತ್ ಎಂದಿನಂತೆ ಹೊಡಿಬಡಿ ಆಟ ಶುರು ಮಾಡಿದ್ರು. ಬಟ್ 20 ರನ್ಗಳಿಗೆ ಇನ್ನಿಂಗ್ ಮುಗಿಸಿದ್ರು. ಆ ನಂತ್ರ ಶುಭ್ಮನ್ ಗಿಲ್ಗೆ ವಿರಾಟ್ ಕೊಹ್ಲಿ ಜೊತೆಯಾಗಿದ್ದು, ಇಬ್ಬರು ಕೂಡ ಸೂಪರ್ ಡೂಪರ್ ಆಗಿ ಬ್ಯಾಟಿಂಗ್ ಮಾಡಿದ್ರು. ಬಟ್ ಗಿಲ್ 46 ರನ್ ಗಳಿಸಿದ್ದಾಗ ಅಬ್ರಾರ್ ಅಹ್ಮದ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಈ ಟೈಮಲ್ಲಿ ವಿರಾಟ್ ಕೊಹ್ಲಿ ಜೊತೆಯಾಗಿದ್ದು ಶ್ರೇಯಸ್ ಅಯ್ಯರ್. ಅಯ್ಯರ್ ಕೂಡ ಜವಾಬ್ದಾರಿಯುತ ಆಟವಾಡಿದ್ರು. ಒಂದ್ಕಡೆ ವಿರಾಟ್ ಮತ್ತೊಂದ್ಕಡೆ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೋಡೋದೇ ಅದ್ಭುತವಾಗಿತ್ತು. ಶ್ರೇಯಸ್ ಅಯ್ಯರ್ 56 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಬಟ್ ಕೊಹ್ಲಿ ಮಾತ್ರ ಗೋಡೆಯಂತೆ ನಿಂತು ಆಡ್ತಾನೇ ಇದ್ರು. ಪಾಕ್ ತಂಡದ ಬೌಲರ್ಗಳನ್ನು ಕಾಡಿದ ಕೊಹ್ಲಿ 111 ಎಸೆತಗಳಲ್ಲಿ 7 ಫೋರ್ ಸಮೇತ ಅಜೇಯ 100 ರನ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 90ಕ್ಕೂ ಹೆಚ್ಚಿತ್ತು.
ಪಾಕಿಸ್ತಾನವನ್ನ ಸೋಲಿಸೋ ಮೂಲಕ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ಟೀಂ ಇಂಡಿಯಾ ಮತ್ತೊಮ್ಮೆ 242 ರನ್‌ಗಳ ಗುರಿಯನ್ನು ಯಾವುದೇ ತೊಂದರೆಯಿಲ್ಲದೆ ಅದ್ಭುತ ರೀತಿಯಲ್ಲಿ ಬೆನ್ನಟ್ಟಿದೆ. ಇತ್ತ ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ತನ್ನದೇ ತವರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆಯಾದರೂ, ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬೀಳುವ ಅಂಚಿನಲ್ಲಿದೆ. ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಸೋತಿರುವ ಪಾಕ್ಗೆ ಸಂಕಷ್ಟ ಎದುರಾಗಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ ಪಾಕ್ ಸೆಮಿಸ್ ರೇಸ್ನಿಂದ ಹೊರಬೀಳಲಿದೆ.