ಸಂಜು ಬೆಂಕಿ.. ಧೀರ್ ಬಿರುಗಾಳಿ – 226 ರನ್ಸ್ ಬೆನ್ನಟ್ಟಿ ಇತಿಹಾಸ
ಫಸ್ಟ್ ಮ್ಯಾಚ್ ನಲ್ಲಿ NZ ಪಂಕ್ಚರ್

ಮೊದ್ಲೇ ಟೀಂ ಇಂಡಿಯಾದ ಬೌಲಿಂಗ್ ಎಕ್ಸ್ಪೆನ್ಸಿವ್.. ಈಗ ನ್ಯೂಜಿಲೆಂಡ್ನಲ್ಲೂ ಭಾರತದ ಬೌಲರ್ಸ್ ದುಬಾರಿಯಾಗೋದ್ರು.. 226 ರನ್ಗಳ ಬಿಗ್ ಟಾರ್ಗೆಟ್.. ಟೀಂ ಇಂಡಿಯಾ ಈ ಟಾರ್ಗೆಟ್ ರೀಚ್ ಮಾಡೋದು ಕಷ್ಟ ಕಷ್ಟ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಆದ್ರೆ ಬಿಗ್ ಸ್ಕೋರ್ ಸೆಟ್ ಮಾಡಿದ್ರೇನಂತೆ ಪವರ್ ಪ್ಲೇನಲ್ಲೇ ನಮ್ಮ ಪವರ್ ತೋರಿಸ್ತೀವಿ ಅಂತಾ ಆಡಿದ್ದು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ. ಭಾರತದ ಮೇಲಿದ್ದ ಪ್ರೆಶರ್ ಕಂಪ್ಲೀಟ್ ಆಗಿ ಇಲ್ಲೇ ರಿಲೀಸ್ ಆಗಿತ್ತು. ಮಿಡಲ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್ ಕಳ್ಕೊಂಡ್ರೂ ಕೊನೆಯಲ್ಲಿ ನಮನ್ ಧೀರ್ ಆರ್ಭಟಕ್ಕೆ ಕಿವೀಸ್ ಪಡೆ ಮಂಡಿಯೂರಲೇಬೇಕಾಯ್ತು. ಐತಿಹಾಸಿಕ ಚೇಸಿಂಗ್ ಮಾಡಿದ ಭಾರತ ಹೊಸ ಇತಿಹಾಸ ಬರೆದಿದೆ. ಆದ್ರೆ ಭಾರತ ಈ ಮ್ಯಾಚ್ ಗೆದ್ದಿದ್ರೂ ಸಾಕಷ್ಟು ವಿಚಾರಗಳಲ್ಲಿ ಅಲರ್ಟ್ ಆಗ್ಬೇಕಿದೆ.
ಇದನ್ನೂ ಓದಿ : ವೈಭವ್ ಸೂರ್ಯವಂಶಿಗೆ ಮತ್ತೆ ನಿರಾಸೆ – ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ
ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ 5 ಪಂದ್ಯಗಳ ಟಿ-20ಐ ಸರಣಿದ ಮೊದಲ ಮ್ಯಾಚಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಌಂಡ್ ಈ ಮ್ಯಾಚ್ಗೆ ಭಾರತದ ಪ್ಲೇಯಿಂಗ್ 11ನಲ್ಲಿ ಬ್ಯಾಟಿಂಗ್ ಆರ್ಡರ್ನಲ್ಲಿ ಯಾವುದೇ ಚೇಂಜಸ್ ಇರ್ಲಿಲ್ಲ. ನಿತೀಶ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್ ಆಲ್ರೌಂಡರ್ಸ್ ಆಗಿ ಕಣಕ್ಕಿಳಿದ್ರೆ ಭುವನೇಶ್ವರ್ ಕುಮಾರ್, ಮಯಾಂಕ್ ಯಾದವ್, ಅರ್ಶದೀಪ್ ಸಿಂಗ್ ಪೇಸ್ ಬೌಲಿಂಗ್ನಲ್ಲಿ ಕಣಕ್ಕಿಳಿದ್ರು. ಌಂಡ್ ಈ ಪಂದ್ಯಕ್ಕೆ ಯಾವುದೇ ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಅವಕಾಶ ನೀಡಿರಲಿಲ್ಲ ಅನ್ನೋದೇ ಕುತೂಹಲಕಾರಿ ವಿಚಾರ. ಹೀಗಿದ್ರೂ ರೆಕಾರ್ಡ್ ಚೇಸ್ ಮಾಡಿ ಭಾರತ ಇತಿಹಾಸ ಸೃಷ್ಟಿಸಿದೆ. ಌಂಡ್ ಇಡೀ ಮ್ಯಾಚಲ್ಲಿ ಸಿಕ್ಕಾಪಟ್ಟೆ ಶೈನ್ ಆಗಿದ್ದು ನಮನ್ ಧೀರ್.
ಬ್ಯಾಟಿಂಗ್ ನಲ್ಲಿ ಮಿಂಚಿ ಮ್ಯಾಚ್ ಗೆಲ್ಲಿಸಿದ ನಮನ್ ಧೀರ್!
226 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದಿದೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ಹಾಗೂ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧ 209 ರನ್ಗಳ ಟಾರ್ಗೆಟ್ ಚೇಸ್ ಮಾಡಿದ್ದೇ ಭಾರತಕ್ಕೆ ಇದುವರೆಗಿನ ಹೈಯೆಸ್ಟ್ ಟಿ-20ಐ ಚೇಸ್ ಆಗಿತ್ತು. ಆದ್ರೆ ಈ ಮ್ಯಾಚಲ್ಲಿ 226 ರನ್ಗಳ ಟಾರ್ಗೆಟ್ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದೆ. ಈ ದಾಖಲೆಯ ಚೇಸಿಂಗ್ ರೀಚ್ ಮಾಡೋಕೆ ಕಾರಣವೇ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಓಪನಿಂಗ್ ಪಾರ್ಟ್ನರ್ಶಿಪ್ ಌಂಡ್ ನಮನ್ ಧೀರ್ ಫಿಯರ್ಲೆಸ್ ಫಿನಿಶಿಂಗ್. ನಮನ್ ಧೀರ್ ಕೇವಲ 15 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 280ರ ಸ್ಟ್ರೈಕ್ರೇಟ್ನಲ್ಲಿ 42 ರನ್ ಚಚ್ಚಿ ಅಜೇಯರಾಗಿ ಉಳಿದ್ರು. ಹೀಗಾಗಿ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಭಾರತ 4 ವಿಕೆಟ್ಗಳಿಂದ ಪಂದ್ಯವನ್ನ ಗೆದ್ದು ಬೀಗಿದೆ.
ಟೀಂ ಇಂಡಿಯಾ ದಾಖಲೆಯ ಚೇಸಿಂಗ್!
ಟಾಸ್ ಸೋತು ಪವರ್ ಪ್ಲೇನಲ್ಲಿ 65/1 ರನ್ಸ್ ಕಲೆ ಹಾಕಿದ್ದ ನ್ಯೂಜಿಲೆಂಡ್
ನ್ಯೂಜಿಲೆಂಡ್ ಪರ ಫಿನ್ ಅಲೆನ್ 45(24), ಗ್ಲೆನ್ ಫಿಲಿಪ್ಸ್ 82*(40) ರನ್ಸ್
20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ಸ್ ಕಲೆ ಹಾಕಿದ ಕಿವೀಸ್
226 ರನ್ಸ್ ಟಾರ್ಗೆಟ್ ಬೆನ್ನಟ್ಟಿದ ಭಾರತ ಪವರ್ ಪ್ಲೇನಲ್ಲೇ ಪವರ್ ಶೋ
ಮೊದಲ 6 ಓವರ್ ಗಳಲ್ಲಿ 94/1 ರನ್ಸ್ ಕಲೆ, 29(12)ಕ್ಕೆ ಅಭಿಷೇಕ್ ಔಟ್
67(33) ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಮೂಲಕ ಪ್ರೆಶರ್ ತಗ್ಗಿಸಿದ ಸಂಜು
ತಿಲಕ್ 6(11), ಇಶಾನ್ ಕಿಶನ್ 1(3) ಔಟ್ ಆಗಿದ್ದರಿಂದ ಪ್ರೆಶರ್
24(14) ರನ್ಸ್ ಗಳಿಸಿದ ಅಕ್ಷರ್.. ಕೊನೆ 4 ಓವರ್ ಗಳಲ್ಲಿ 48 ರನ್ಸ್ ಅಗತ್ಯ
42(28) ರನ್ಸ್ ಕಲೆ ಹಾಕಿದ ಶ್ರೇಯಸ್.. 12 ಬಾಲಲ್ಲಿ ಗೆಲುವಿಗೆ 16 ರನ್ಸ್
15 ಎಸೆತಗಳಲ್ಲಿ 42* ರನ್ಸ್ ಗಳಿಸಿ ಭಾರತವನ್ನ ಗೆಲ್ಲಿಸಿದ ನಮನ್ ಧೀರ್

ನೋಡಿರಿ

