ತಳ್ಳುವ ಗಾಡಿಯಲ್ಲಿ ATM ಯಂತ್ರ ಕದ್ದೊಯ್ದ ಖತರ್ನಾಕ್‌ ಗ್ಯಾಂಗ್‌ – ಅಬ್ಬಬ್ಬಾ.. ಸಿಸಿಟಿವಿ ದೃಶ್ಯ ಕಂಡು ಪೊಲೀಸರೇ ಶಾಕ್!

ತಳ್ಳುವ ಗಾಡಿಯಲ್ಲಿ ATM ಯಂತ್ರ ಕದ್ದೊಯ್ದ ಖತರ್ನಾಕ್‌ ಗ್ಯಾಂಗ್‌ – ಅಬ್ಬಬ್ಬಾ.. ಸಿಸಿಟಿವಿ ದೃಶ್ಯ ಕಂಡು ಪೊಲೀಸರೇ ಶಾಕ್!

ಹಾಡಹಗಲೇ ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಪ್ರಕರಣ ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ. ತಳ್ಳುಗಾಡಿ ತಂದು ಎಟಿಎಂ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳ್ಳರ ಐಡಿಯಾ ಕಂಡು ಪೊಲೀಸರೇ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ KSRTC ಬಸ್‌ ಚಕ್ರಕ್ಕೆ ಸಿಲುಕಿ ನಾಡಬಾಂಬ್‌ ಸ್ಟೋಟ! – ಮುಂದೇನಾಯ್ತು?

ಬೆಳಗಾವಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಹೊಸ ವಂಟಮೂರಿ ಗ್ರಾಮದ ಬಳಿಯಿರುವ ಇಂಡಿಕ್ಯಾಶ್ ಎಟಿಎಂ ಅನ್ನ ಕಳ್ಳತನ ಮಾಡಲಾಗಿದೆ. ಮಂಗಳವಾರ ಮಧ್ಯರಾತ್ರಿ ಸಾಮಾನ್ಯ ಕಾರ್ಮಿಕರಂತೆ ಎಟಿಎಂ ಬಳಿ ಬಂದ ಖದೀಮರು, ಕಳ್ಳರು ಎಟಿಎಂ ರೂಂ ಒಳಗೆ ಪ್ರವೇಶಿಸಿ, ಕಳ್ಳತನದ ಶಬ್ದವಾದರೆ ಅಲಾರಾಂ ಸದ್ದು ಮಾಡದಂತೆ ಎಟಿಎಂ ಮಷಿನ್‌ನಲ್ಲಿರುವ ಸೆನ್ಸಾರ್‌ಗಳ ಮೇಲೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಬಳಸಿ ಮುಚ್ಚಿದ್ದಾರೆ. ಬಳಿಕ ಎಟಿಎಂ ಮಷಿನ್‌ನ ಸಂಪೂರ್ಣ ಘಟಕವನ್ನು ಕಟ್ ಮಾಡದೆ, ಸೀದಾ ತಳ್ಳು ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ನಂತರ, ಪೂರ್ವಯೋಜಿತವಾಗಿ ನಿಲ್ಲಿಸಿದ್ದ ತಮ್ಮ ವಾಹನದಲ್ಲಿ ಎಟಿಎಂ ಮಷಿನ್ ಹಾಕಿಕೊಂಡು  ಹೋಗಿದ್ದಾರೆ. . ಸೆನ್ಸಾರ್‌ ಮೇಲೆ ಸ್ಪ್ರೇ ಹಾಕಿದ್ದರಿಂದಾಗಿ ಕಳ್ಳತನದ ವೇಳೆ ಸೈರನ್‌ ಹೊಡೆದಿಲ್ಲ. ಎಟಿಎಂ ರೂಂ ಒಳಗಿದ್ದ ಸಿಸಿಟಿವಿಯಲ್ಲೂ ಅವರ ಚಲನವಲನ ರೆಕಾರ್ಡ್‌ ಆಗಿರಲಿಲ್ಲ. ಆದ್ರೆ ಅಲ್ಲೇ ಪಕ್ಕದಲ್ಲೇ ಅಳವಡಿಸಲಾದ ಸಿಸಿಟಿವಿಯಲ್ಲಿ ಇದು ರೆಕಾರ್ಡ್‌ ಆಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೀಗ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಕಳ್ಳತನದ ಐಡಿಯಾ ಕಂಡು ಪೊಲೀಸರೇ ಶಾಕ್‌ ಆಗಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಳ್ಳತನವಾಗಿರುವ ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಇತ್ತು ಎನ್ನಲಾಗಿದೆ.

Shwetha M