ಬೀದಿಗಿಳಿದ ಬಾಂಗ್ಲಾ ಹಿಂದೂಗಳು! – ಸನಾತನ ಸಂತನಿಗೆ ಚಿತ್ರಹಿಂಸೆ!?
ಬ್ಯಾನ್ ಆಗುತ್ತಾ ‘ISKCON’?
ನಮ್ಮ ದೇಶ ಸರ್ವ ಧರ್ಮ ಸಮನ್ವಯ ದೇಶ.. ಎಲ್ಲಾ ಧರ್ಮಗಳು ಒಟ್ಟಾಗಿ ಬಾಳೋ ದೇಶ.. ನಮ್ಮ ಭಾರತ ನಮ್ಮ ಹೆಮ್ಮೆ.. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ರೂ, ಅಲ್ಪ ಸಂಖ್ಯಾತರನ್ನ ಪ್ರೀತಿಯಿಂದ ಕಾಣುತ್ತಾರೆ. ಅದು ನಮ್ಮ ಸಂಸ್ಕೃತಿ.. ಆದ್ರೆ ನಮ್ಮ ಪಕ್ಕದ ರಾಷ್ಟ್ರ ಬಾಂಗ್ಲಾದಲ್ಲಿ ಆಗ್ತಾ ಇರೋದೇ ಬೇರೆ.. ಹಿಂದೂಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಹಿಂದೂಗಳು ಅರೆಸ್ಟ್ ಆಗುತ್ತಿದ್ದಾರೆ. ಹಾಗಿದ್ರೆ ಬಾಂಗ್ಲಾದಲ್ಲಿ ಆಗ್ತಾ ಇರೋದ್ ಏನು?, ಬಾಂಗ್ಲಾದ ಸ್ವಾಮೀಜಿಯನ್ನ ಬಂಧಿಸಿದ್ದೇಕೆ? ಇವರ ಹಿನ್ನಲೆಯೇನು? ಲಾಯರ್ ಹತ್ಯೆ ಆಗಿದ್ದೇಕೆ?, ಬಾಂಗ್ಲಾ ಹಿಂದೂ ವಿರೋಧಿ ಅಲೆಗೆ ಪಾಕ್ ಸಾಥ್ ನೀಡ್ತಿದ್ಯಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:RCB ಟೀಂ ಸೆಲೆಕ್ಷನ್ ಸೂಪರ್ – ಸ್ಟಾರ್ಸ್ ಕೈಬಿಟ್ರೂ ಬಲಿಷ್ಠ ತಂಡ ರೆಡಿ
ಬಾಂಗ್ಲಾ ನೆಲದಲ್ಲಿ ಹಿಂದೂಗಳು ಪರಿಸ್ಥಿತಿ ಹೀನಾಯವಾಗಿದೆ. ಕ್ಷಣ ಕ್ಷಣಕ್ಕೂ ಹಿಂದೂಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿಭಟನೆಗಳು ಹೆಚ್ಚಾಗಿದ್ದು, ಹಿಂಸಾಚಾರಕ್ಕೆ ತಿರುಗುತ್ತಿದೆ. ಬಾಂಗ್ಲಾದೇಶದಲ್ಲಿ ಒಟ್ಟು ಶೇಕಡಾ 8 ರಷ್ಟು ಹಿಂದೂ ಅಲ್ಪಸಂಖ್ಯಾತರಿದ್ದಾರೆ. ಶೇಖ್ ಹಸೀನಾ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಆಚೆ ಬಂದ ಬಳಿಕ ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾಯ್ತು. ಯಾವಾಗ ಮೊಹಮ್ಮದ್ ಯೂನಿಸ್ ಪ್ರಧಾನಿಯಾಗಿ ನೇಮಕಾವಾದ್ರೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಯ್ತು. ಬಾಂಗ್ಲಾದೇಶದ ಹಿಂದೂ ವ್ಯಾಪಾರ ಕೇಂದ್ರಗಳು, ಮನೆಗಳು ಹಾಗೂ ಮಂದಿರಗಳನ್ನು ಗುರಿಯಾಗಿಟ್ಟುಕೊಂಡು ಅಟ್ಯಾಕ್ ಮಾಡಿದ್ರು. ಇದೇ ವಿಚಾರವಾಗಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕುರಿತು ಆಗ್ರಹಿಸಿದ ನಡೆಸಿದ ಪ್ರತಿಭಟನೆಯಲ್ಲಿ ನಿರತರಾಗಿದ್ದ 19 ಜನರ ಮೇಲೆ ದೇಶದ್ರೋಹದ ಕೇಸ್ ಹಾಕಿ ಬಂಧಿಸಲಾಗಿದೆ. ಈಗ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿಯವರ ಬಂಧನವಾಗಿದೆ.
ಹಿಂದೂಗಳ ಹೋರಾಟ ಶುರುವಾಗಿದ್ದು ಯಾಕೆ?
ಹೊಸ ಸರ್ಕಾರ ಬಂದ ಮೇಲೆ ಹಿಂದೂಗಳು ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆದ್ವು. ಇದ್ರ ನಡುವೆ ನಾರಾಯಣ ಗಂಜ್ ಎಂಬ ಗ್ರಾಮದಲ್ಲಿ ಸಾಧು ಸಂತರ ಕಾರ್ಯಕ್ರಮಕ್ಕೆ ತಯಾರಿ ನಡೆದಿತ್ತು. ಮುಕ್ತಿಧಾಮ ಆಶ್ರಮ ಈ ಕಾರ್ಯಕ್ರಮದ ಮೂಲಕ ಹಿಂದೂಗಳ ಗತ ವೈಭವ ಮರುಳುವುದಕ್ಕೆ ಸಕಸ ಸಿದ್ಧತೆ ಮಾಡಿಕೊಂಡಿತ್ತು. ಆದ್ರೆ ಇಸ್ಲಾಂಮಿಕ್ ಗುಂಪು ನಡೆಸಿದ ದಾಳಿಯಿಂದ ಇಡೀ ಕಾರ್ಯಕ್ರಮ ಬಂದ್ ಆಯ್ತು. ಹಿಂದೂಗಳ ವಿರುದ್ಧ ಹೋರಾಟ ಹೆಚ್ಚಾಯ್ತು. ಇಲ್ಲಿಂದ ಹಿಂದೂಗಳಿಗೆ ನರಕ ದರ್ಶನ ಶುರುವಾಯ್ತು.. ನಂತ್ರ ಹಿಂದೂಗಳ ಆಕ್ರೋಶ ಭಗಿಲೆಳ್ತು.. ಕೃಷ್ಣ ದಾಸ್ ಪ್ರಭು ಅವರ ನೇತೃದಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ಹೆಚ್ಚಾಯ್ತು. ಇವರ ನೇತೃದಲ್ಲಿ ಲಕ್ಷಾಂತರ ಜನ ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ರೂ ಈ ಸಂತ ಟಾರ್ಗೆಟ್ ಆದ್ರು. ಇಸ್ಕಾನ್ ಅನ್ನ ಬಯೋತ್ಫದಾನ ಸಂಘಟನೆ ಎಂಬಂತೆ ಬಿಂಬಿಸಿದ್ರು ಪೊಲೀಸರು.
ಯಾರು ಈ ಸಂತ ಚಿನ್ಮೋಯ್?
ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರು ಬಾಂಗ್ಲಾದೇಶದ ಪ್ರಮುಖ ಹಿಂದೂ ನಾಯಕ, ಅಲ್ಪಸಂಖ್ಯಾತ ಸಮುದಾಯದ ಮುಖಂಡ , ಚಟ್ಟೋಗ್ರಾಮ್‌ನಲ್ಲಿರುವ ಪುಂಡರಿಕ ಧಾಮದ ಮುಖ್ಯಸ್ಥರು. ಸಮ್ಮಿಲಿಟೊ ಸನಾತನ ಜಾಗರಣ್ ಜೋಟೆಯ ವಕ್ತಾರರು ಆಗಿರುವ ದಾಸ್, ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಇಸ್ಕಾನ್ ಸನ್ಯಾಸಿ. ಹಿಂದೂ ಧರ್ಮಕ್ಕಾಗಿ ಹೋರಾಡಿದ್ದಕ್ಕೆ ಟಾರ್ಗೆಟ್ ಆದ್ರು. ಇವರ ಮೇಲೆ ಮಸಲತ್ತು ಮಾಡಿದ ಬಾಂಗ್ಲಾ ಸರ್ಕಾರ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಅಕ್ಟೋಬರ್‌ನಲ್ಲಿ ಇವರ ಮೇಲೆ ಕೇಸ್ ದಾಖಲಿಸಲಾಗಿತ್ತು. ಅದ್ರಂತೆ ಕಳೆದ ಸೋಮವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಕೃಷ್ಣದಾಸ್ ಪ್ರಭು ಅವರನ್ನ ಅರೆಸ್ಟ್ ಮಾಡಿದ ಬಾಂಗ್ಲಾ ಪೊಲೀಸರಿಂದ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುವು ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಢಾಕಾ ಕೋರ್ಟ್ ಕೂಡ ಕೃಷ್ಣದಾಸ್‌ಗೆ ಜಾಮೀನು ನೀಡಲು ನಿರಾಕರಿಸಿದೆ.. ಹೀಗಾಗಿ ಇವರ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ಹಿಂದೂಗಳಿಂದ ಪ್ರತಿಭಟನೆ ನಡೆಸಿದ್ರು, ಪೊಲೀಸ್ ವಾಹನವನ್ನು ತಡೆದು ಪ್ರತಿಭಟನಾಕಾರರು ಆಕ್ರೋಶ ಹಾಕಿದ್ದಾರೆ. ಈ ಈ ಪ್ರತಿಭಟನೆ ವೇಳೆ 35 ವರ್ಷದ ವಕೀಲನ ಹ*ತ್ಯೆ ಕೂಡ ಆಗಿದೆ.
ಸಂಕಷ್ಟದಲ್ಲಿ ಬಾಂಗ್ಲಾಕ್ಕೆ ಸಹಾಯ ಮಾಡಿದ್ದು ಮರೆತ್ರಾ?
ನಿಜ ಈಗ ಇಸ್ಕಾನ್‌ನ ಬಯೋತ್ಪಾದಕ ಸಂಘಟನೆ ಅಂತಿದೆ ಅಲ್ಲಿನ ಪೊಲೀಸ್.. ಆದ್ರೆ ಇದೇ ಇಸ್ಕಾನ್ ಬಾಂಗ್ಲಾ ಸಂಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿತ್ತು. ಔಷಧಿ ಆಹಾರವನ್ನ ನೀಡಿತ್ತು.. ಜನರಿಗೆ ಸಹಾಯ ಮಾಡಿದ್ದ ಸಂಘಟನೆ ಈಗ ಉಗ್ರ ಸಂಘಟಟನೆ. ಅದ್ರ ಸಂತರೊಬ್ಬರು ದೇಹ ದ್ರೋಹಿ.
ಬಾಂಗ್ಲಾದಲ್ಲಿ ಇಸ್ಕಾನ್ ಬ್ಯಾನ್‌ಗೆ ನಿರ್ಧಾರ
ಹಿಂದೂಗಳ ಮೇಲಿನ ದಾಳಿ, ಧಾರ್ಮಿಕ ಮುಖಂಡ ಶ್ರೀ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಬೆನ್ನಲ್ಲೇ ISKCON ಬ್ಯಾನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ISKCON ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆ ಆಗಿದೆ. ಇಸ್ಕಾನ್ ಸಂಘಟನೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಬಾಂಗ್ಲಾ ಸರ್ಕಾರ ಕರೆದಿದೆ. ಅದನ್ನು ಬ್ಯಾನ್ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ಘೋಷಣೆ ಮಾಡಿದೆ.ಬಾಂಗ್ಲಾ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲ್ಲಿನ ಹಿಂದೂಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಸ್ಕಾನ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನೆ ಮಾಡಲಾಗಿದೆ
ಬಾಂಗ್ಲಾಗೆ ಪಾಕ್ ಸಾಥ್, ಹಿಂದೂಗಳ ಕತೆಯೇನು?
1971ರ ವಿಮೋಚನಾ ಯುದ್ಧದ ನಂತರ ಬದ್ಧ ವೈರಿಗಳಾಗಿದ್ದ ಪಾಕ್ ಬಾಂಗ್ಲಾದೇಶ ಇದೀಗ ದೋಸ್ತಿಗಳಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ನೇರ ಸಮುದ್ರ ವ್ಯಾಪಾರ ಶುರುವಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು. ಪಾಕಿಸ್ತಾನದ ಮೊದಲ ಸರಕು ಹಡಗು ಕಳೆದ ವಾರ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ತಲುಪಿದೆ. ಇದು ದ್ವಿಪಕ್ಷೀಯ ಸಂಬಂಧಲ್ಲಿ ಪ್ರಮುಖ ಹೆಜ್ಜೆ ಎಂದು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಹ್ಮದ್ ಮರೂಫ್ ಹೇಳಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದು ಭಾರತ್ಕೆ ಸಾಕಷ್ಟು ಎಫೆಕ್ಟ್ ಆಗಲಿದೆ. ಬಾಂಗ್ಲಾ ಹಿಂದುಗಳ ವಿರುದ್ಧ ಸಮರ ಸಾರುವುದಕ್ಕೂ ಇದು ಕಾರಣವಾಗಿದೆ. ಪಾಕ್‌ನಿಂದ ಸ್ಟೋಟಕ ವಸ್ತುಗಳನ್ ಬಾಂಗ್ಲಾ ಖರೀದಿ ಮಾಡುತ್ತಿರುವ ಮಾಹಿತಿ ಕೂಡ ಹೊರ ಬಂದಿದೆ. ಹೀಗಾಗಿ ಬಾಂಗ್ಲಾದಲ್ಲಿ ಹಿಂದೂಗಳ ಕಥೆ ಮುಂದೆನಾಗುತ್ತೆ ಟೆನ್ಶನ್ ಹೆಚ್ಚಾಗಿದೆ.