ಬಾಂಗ್ಲಾ ಭಾರತ ಗಡಿ ಕೊತ ಕೊತ!- ತಂತಿ ಬೇಲಿ ಜಗಳ, ಖಡಕ್ ತಿರುಗೇಟು
ಯೂನಸ್ ಹೊಸ ಪ್ಲ್ಯಾನ್ ಏನು?

ಬಾಂಗ್ಲಾ ಭಾರತ ಗಡಿ ಕೊತ ಕೊತ!- ತಂತಿ ಬೇಲಿ ಜಗಳ, ಖಡಕ್ ತಿರುಗೇಟುಯೂನಸ್ ಹೊಸ ಪ್ಲ್ಯಾನ್ ಏನು?

ಪಾಕ್ ಸ್ನೇಹ ಬೆಳಸಿರೋ ಬಾಂಗ್ಲಾ  ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಗಡಿ  ವಿಚಾರದಲ್ಲಿ ಕ್ಯಾತೆ ತೆಗೆದಿರೋ ಬಾಂಗ್ಲಾ ಇಲ್ಲ ಸಲ್ಲದ ಆರೋಪವನ್ನ ಮಾಡ್ತಿದೆ. ಅಂದಹಾಗೇ ಕಳೆದ ಭಾನುವಾರ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಭಾರತದ ಹೈಕಮಿಷನರ್​ ಪ್ರಣಯ್ ವರ್ಮ ಅವರಿಗೆ ಸಮನ್ಸ್​ ನೀಡಿತ್ತು. ಬಾಂಗ್ಲಾದ ಈ ಕ್ರಮಕ್ಕೆ ಭಾರತ ತಿರುಗೇಟು ನೀಡಿದ್ದು, ಭಾರತ ಕೂಡ ಬಾಂಗ್ಲಾದೇಶದ ಉನ್ನತ ರಾಯಭಾರಿಗೆ ಸಮನ್ಸ್ ನೀಡಿದೆ. ನವದೆಹಲಿ ಮತ್ತು ಢಾಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಚರ್ಚಿಸಲು ಭಾರತೀಯ ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶದ ಉನ್ನತ ರಾಯಭಾರಿಗೆ ಬರಲು ಸೂಚನೆ ನೀಡಿತ್ತು. ಈ ವೇಳೆ ಮಾತು ಕತೆ ನಡೆದಿದೆ.

ಬಾಂಗ್ಲಾದೇಶ ಜೊತೆ ಗಡಿ ಹಂಚಿಕೊಂಡಿರೋ 4.156  ಕಿಲೋಮೀಟರ್ ಉದ್ದದ ಗಡಿಯಲ್ಲಿ ಭಾರತ ಈಗಾಗಲೇ 3271  ಕಿಲೋಮೀಟರ್ ವರೆಗೆ ಬೇಲಿ ಹಾಕಿದೆ. ಸರಿಸುಮಾರು 885 ಕಿಲೋ ಮೀಟರ್ ಬೇಲಿಯನ್ನ ಬಿಟ್ಟಿತ್ತು. ಇಷ್ಟು ಟೈಂ ಶೇಕ್ ಹಸೀನಾ ಸರ್ಕಾರ ಇದಿದ್ರಿಂದ ಭಾರತ ಮತ್ತು ಬಾಂಗ್ಲಾ ಸಂಬಂಧ ಚೆನ್ನಾಗಿ ಇತ್ತು.. ಹೀಗಾಗಿ ಆ ಬೇಲಿ ಬಗ್ಗೆ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದ್ರೆ ಯೂನಸ್ ಸರ್ಕಾರ ಬಂದ ಮೇಲೆ ಬಾಂಗ್ಲಾ ಬಾಲ ಬಿಚ್ಚುತ್ತಿದೆ. ಬಾಂಗ್ಲಾ ದೇಶದಿಂದ ಭಾರತಕ್ಕೆ ಅಕ್ರಮ ವಲಸೆಗಳು ಮತ್ತು ಕಳ್ಳ ಸಾಗಾಣಿಗಳು ಹೆಚ್ಚಾಗಿವೆ.. ಇದ್ರ ಎಫೆಕ್ಟ್ ಭಾರತ ಗಡಿ ರಾಜ್ಯಗಳ ಮೇಲೆ ಆಗುತ್ತಿದೆ. ಹೀಗಾಗಿ ಆ ಜಾಗದಲ್ಲಿ ಭಾರತ ಸರ್ಕಾರ ಬೇಲಿ ಹಾಕೋಕೆ ಶುರು ಮಾಡ್ತು. ಅದರ ಮೊದಲ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಡ್ಡಾ ಮತ್ತು ಮುರ್ಶಿದಾಬಾದ್ ನಲ್ಲಿ ಬೇಲಿ ಹಾಕೋ ಕಾರ್ಯ ಶುರುವಾಯ್ತು.  ಮಡ್ಡಾ ಜಿಲ್ಲೆಯ ಖಾಲಿಯಾ ಚೆಕ್ 3 ಅನ್ನೋ ಪ್ರದೇಶದಲ್ಲಿ ತಂತಿ ಬೇಲಿ ಹಾಕೋ ಕೆಲಸ ಶುರುವಾಯ್ತು. ಈ ವೇಳೆ ಬಾಂಗ್ಲಾ ಪಡೆಗಳು ಅಂದ್ರೆ BGB ಪಡೆಗಳು ಅಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಕಿರಿಕ್ ಶುರುಮಾಡಿದ್ರು. ಅದಕ್ಕೆ ಒಂದಷ್ಟು ಬಾಂಗ್ಲಾ ಜನ ಕೂಡ ಸಾಥ್ ನೀಡಿದ್ದಾರೆ.  ಅಷ್ಟೇ ಅಲ್ಲ ಭಾರತ ಗಡಿ ಗ್ರಾಮಗಳ ಜನ ಕೂಡ ಅಲ್ಲಿ ಹೋಗಿದ್ರು.. ಎರಡು ಕಡೆಯವರ ಒಂದಿಷ್ಟು ದೊಣ್ಣೆ, ಬಡಿಕೆಯನ್ನ ತಂದಿದ್ರು. ಆಗ ಬಿಎಸ್‌ಎಫ್ ಎಂಟ್ರಿಯಾಗಿ , ಎಲ್ಲವನ್ನೂ ಕೂಲ್ ಕೂಲ್ ಆಗಿರುವಂತೆ ಮಾಡಿದ್ರು.

ಇಲ್ಲಿ ಬೇಲಿ ಮಾಡ್ತಾ ಇದ್ದಿದ್ದು, ಬಾಂಗ್ಲಾ ಜಾಗದಲ್ಲಿ ಅಲ್ಲ, ಭಾರತದ ಜಾಗದಲ್ಲೇ ಪೆನ್ಸಿಂಗ್ ಕಾಮಗಾರಿ ಮಾಡುತಿದಿದ್ದು, ಅದನ್ನ ಅಲ್ಲಿ ಜನಕ್ಕೆ ತಿಳಿಸಿ ಹೇಳಿದ್ರು.. ಇನ್ನೊಂದ್ಕಡೆ  ಮುರ್ಶಿದಾಬಾದ್ ಜಿಲ್ಲೆ ಗಡಿಯಲ್ಲಿ ಕೂಡ ತಂತಿ ಬೇಲಿ ಕಾಮಗಾರಿ  ಮಾಡೋಕೆ ಭಾರತ ಮುಂದಾಗಿದೆ.  ಈ ಜಾಗದಲ್ಲಿ ಒಂದಿಷ್ಟು ನೆಲವಿದ್ರೆ ಮತ್ತೊಂದಿಷ್ಟು ಗಡಿ ಭಾಗ ನೀರಿನಿಂದ ಕೂಡಿದೆ.  ಹೀಗಾಗಿ ಇಲ್ಲಿ ಕೂಡ ಯಾವುದೇ ಗಡಿ ಬೇಲಿ ಇಲ್ಲ. ಇಷ್ಟು ದಿನ ಶೇಕ್ ಹಸೀನಾ ಸರ್ಕಾರ ಇದ್ದಾಗ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಭಾರತ.. ಆದ್ರೆ ಈಗ ಯೂನಸ್ ಸರ್ಕಾರದಲ್ಲಿ ಅಕ್ರಮ ಚುಟುವಟಿಕೆ ಹೆಚ್ಚಾಗಿದ್ರಿಂದ ಗಡಿಯಲ್ಲಿ  ಬಿಎಸ್ಎಫ್ ಯೋಧರು ಅಲರ್ಟ್ ಆಗಿದ್ದಾರೆ. ಗಡಿಗೆ ಬೇಲಿ ಹಾಕಿದ್ರೆ ಸಮಸ್ಯೆ ಸರಿಯಾಗುತ್ತೆ ಅಂತ ಭಾರತ ಪ್ಲ್ಯಾನ್ ಮಾಡುತ್ತಿದೆ. ಆದ್ರೆ ಇದಕ್ಕೆ ಬಾಂಗ್ಲಾ ವಿರೋಧ ಮಾಡುತ್ತಿದೆ.   ಗಡಿ ಭಾಗದಲ್ಲಿ ಭಾರತ 5 ಸ್ಥಳಗಳಲ್ಲಿ ಬೇಲಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸುತ್ತಿದೆ. 4,156 ಕಿಲೋಮೀಟರ್ ಉದ್ದದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 5 ಗೊತ್ತುಪಡಿಸಿದ ಸ್ಥಳಗಳಲ್ಲಿ ಭಾರತ ಬೇಲಿಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಬಾಂಗ್ಲಾದೇಶದ ಆರೋಪಿದೆ. ಈ ಆರೋಪದ  ನಂತರ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಿತ್ತು.

ಈ ಸಭೆಯ ನಂತರ, ಪ್ರಣಯ್ ವರ್ಮಾ ಮಾಧ್ಯಮಗಳಿಗೆ ಮಾತನಾಡಿ, ಭದ್ರತಾ ಕಾರಣಗಳಿಗಾಗಿ ಢಾಕಾ ಮತ್ತು ನವದೆಹಲಿ ಎರಡೂ ಗಡಿ ಬೇಲಿ ಹಾಕುವ ಬಗ್ಗೆ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಅಕ್ರಮ ಚುಟುವಟಿಕೆಗಳಿಗೆ ಬ್ರೇಕ್ ಬೀಳುತ್ತೆ ಅಂತ ನಮ್ಮ ಜಾಗದಲ್ಲಿ ಬೇಲಿ ಮಾಡೋದಕ್ಕೆ ಬಾಂಗ್ಲಾ ತಿವ್ರ ವಿರೋಧ ಮಾಡುತ್ತಿದೆ.

Kishor KV