ಆಂಗ್ಲರನ್ನು ಮಣಿಸಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ – ಗೆದ್ದರೂ ರೊಚ್ಚಿಗೆದ್ದಿದ್ದೇಕೆ ರೋಹಿತ್ ಶರ್ಮಾ?

ಆಂಗ್ಲರನ್ನು ಮಣಿಸಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ – ಗೆದ್ದರೂ ರೊಚ್ಚಿಗೆದ್ದಿದ್ದೇಕೆ ರೋಹಿತ್ ಶರ್ಮಾ?

ಇಂಡಿಯಾ VS ಇಂಗ್ಲೆಂಡ್.. ಟೆಸ್ಟ್ ಸೀರಿಸ್ 1-1 ಈಚ್ ಲೆವೆಲ್ ಆಗಿದೆ. ಫಸ್ಟ್​ ಮ್ಯಾಚ್​ನಲ್ಲಿ ಸೋತಿದ್ದ ಟೀಂ ಇಂಡಿಯಾ ಬೌನ್ಸ್​ ಬ್ಯಾಕ್ ಆಗಿ ಸೆಕೆಂಡ್ ಟೆಸ್ಟ್ ಮ್ಯಾಚ್​​ ಗೆದ್ದುಕೊಂಡಿದೆ. ಈ ಮ್ಯಾಚ್​​ನಲ್ಲಿ ಕೆಲ ಇಂಟ್ರೆಸ್ಟಿಂಗ್ ಡೆವಲಪ್​ಮೆಂಟ್​ಗಳೂ ಆಗಿವೆ. 4ನೇ ದಿನದಾಟದಲ್ಲಿ ಕಾಂಟ್ರೋವರ್ಸಿನೂ ನಡೆದಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್ ಆರ್.ಅಶ್ವಿನ್ ರೊಚ್ಚಿಗೆದ್ದಿದ್ರು. ಇಂಗ್ಲೆಂಡ್ ಬ್ಯಾಟ್ಸ್​ಮನ್​​ ಟಾಮ್​ ಹಾರ್ಟ್ಲಿ ಆಶ್ವಿನ್​ಗೆ 500ನೇ ಬಲಿಯಾಗ್ತಿದ್ರು. ಬಟ್ ಅಂಪೈರ್​ ನಾಟ್​​ಔಟ್ ಡಿಸೀಶನ್​ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಅಷ್ಟಕ್ಕೂ ವೈಜಾಗ್ ಗ್ರೌಂಡ್​​ನಲ್ಲಾದ ಈ ಹೈಡ್ರಾಮಾ ಏನು? ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಆರ್‌ಸಿಬಿ ಟೀಮ್‌ಗೆ ಇಂಜುರಿ ಶಾಕ್ – ಇಬ್ಬರು ಔಟ್, ಸ್ಟಾರ್ ಬೌಲರ್ ಎಂಟ್ರಿ?

ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್​​ಗೆ 398 ರನ್​ಗಳ ಟಾರ್ಗೆಟ್ ಕೊಟ್ಟಿತ್ತು. ಎರಡು ದಿನಗಳ ಆಟ ಇದ್ದಿದ್ರಿಂದ ಏನು ಬೇಕಾದ್ರೂ ಆಗಬಹುದಿತ್ತು. ಹೀಗಾಗಿ ಮ್ಯಾಚ್​​ ಕೂಡ ಇಂಟ್ರೆಸ್ಟಿಂಗ್​ ಆಗಿತ್ತು. ಇಂಗ್ಲೆಂಡ್ ಟೀಮ್​​ ಅಂತೂ ಬೇಜ್​ಬಾಲ್​​ ಸ್ಟ್ರ್ಯಾಟಜಿ ಮೂಲಕ ಗೆಲ್ಲೋ ಪ್ಲ್ಯಾನ್ ಮಾಡಿತ್ತು ಅಂತಾ ಕಾಣ್ಸುತ್ತೆ. ಯಾಕಂದ್ರೆ ಇಂಗ್ಲೆಂಡ್ ಗೆದ್ದಿರೋ ಕಳೆದ 10 ಟೆಸ್ಟ್ ಮ್ಯಾಚ್​​ಗಳಲ್ಲಿ 8 ಮ್ಯಾಚ್​​ಗಳನ್ನ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಚೇಸಿಂಗ್ ಮಾಡಿಯೇ ಗೆದ್ದಿದೆ. ಈ ಎಂಟೂ ಮ್ಯಾಚ್​​ಗಳಲ್ಲಿ ಇಂಗ್ಲೆಂಡ್​​ ಸಕ್ಸಸ್​​ಗೆ ಕಾರಣವಾಗಿರೋದು ಬೇಸ್​ಬಾಲ್ ಸ್ಟ್ರ್ಯಾಟಜಿ. ಈಗ ಭಾರತದ ವಿರುದ್ಧವೂ ಚೇಸ್​ ಮಾಡಿ ಗೆಲ್ಲೋ ಕಾನ್ಫಿಡೆನ್ಸ್​​ನಲ್ಲಿ ಇಂಗ್ಲಿಷ್ ಬ್ಯಾಟ್ಸ್​​ಮನ್​ಗಳಿದ್ರು. 3ನೇ ದಿನದಾಟ ಮುಗಿದ ಬಳಿಕ ಜೇಮ್ಸ್ ಆ್ಯಂಡರ್ಸನ್ ಒಂದು ಸ್ಟೇಟ್​ಮೆಂಟ್ ಕೊಟ್ಟಿದ್ರು. 70 ಓವರ್​​ಗಳಲ್ಲಿ 90 ಓವರ್​ ಕೂಡ ಅಲ್ಲ, 70 ಓವರ್​​ಗಳಲ್ಲೇ 600 ರನ್​ಗಳ ಟಾರ್ಗೆಟ್ ಇದ್ರೂ ಕೂಡ ನಾವು ಮ್ಯಾಚ್ ಗೆಲ್ಲೋಕೆ ಪ್ರಯತ್ನಿಸ್ತೇವೆ. ಹೀಗಾಗಿ ಎಷ್ಟು ಟಾರ್ಗೆಟ್ ನೀಡಬೇಕು ಅನ್ನೋ ಬಗ್ಗೆ ಟೀಂ ಇಂಡಿಯಾ ಕೂಡ ಕನ್​ಫ್ಯೂಷನ್​​ನಲ್ಲಿದೆ. ಹೀಗಾಗಿ ನಮ್ಮಿಂದ ಜಾಸ್ತಿ ಭಾರತೀಯರೇ ಹೆಚ್ಚು ಪ್ರೆಷರ್​ನಲ್ಲಿದ್ದಾರೆ ಅಂತಾ ಜೇಮ್ಸ್ ಆ್ಯಂಡರ್ಸನ್ ಹೇಳಿದ್ರು. ತಮ್ಮ ಬೇಸ್​ಬಾಲ್ ಸ್ಟ್ರ್ಯಾಟಜಿ ಬಗ್ಗೆ ಇಂಗ್ಲೆಂಡ್ ಟೀಂ ಓವರ್​ಕಾನ್ಫಿಡೆಂಟ್ ಆಗಿದೆ ಅನ್ನೋದಕ್ಕೆ ಆ್ಯಂಡರ್ಸನ್ ಹೇಳಿಕೆಯೇ ಸಾಕ್ಷಿ ನೋಡಿ. ಆದ್ರೆ ಭಾರತದಲ್ಲಿ ಪಿಚ್​ಗಳಲ್ಲಿ ಈ ಬೇಸ್​​ಬಾಲ್​ ಸ್ಟ್ರ್ಯಾಟಜಿಯೆಲ್ಲಾ ವರ್ಕೌಟ್ ಆಗೋದು ಕಷ್ಟ ಅನ್ನೋದು ಈಗ್ಲಾದ್ರೂ ಅವರಿಗೆ ಅರ್ಥವಾಗಿರಬಹುದೋ ಏನೊ.

ಅದೇ ಬೇಸ್​​ಬಾಲ್ ಮೈಂಡ್​ಸೆಟ್​​ನಲ್ಲಿ ಸೆಕೆಂಡ್​​ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್​ಗೆ ಇಳಿದಿದ್ದಂತೂ ನಿಜ. ಮೊದಲ ಒಂದು ಗಂಟೆ ಆಟದಲ್ಲಿ ಐದು ಬೌಂಡರಿ ಹೊಡೀತಾರೆ. ಬಳಿಕ ಜ್ಯಾಕ್ ಕ್ರೌಲಿ ಅಗ್ರೆಸ್ಸಿವ್ ಆಗಿ ಆಡೋಕೆ ಶುರು ಮಾಡ್ತಾರೆ. 29 ರನ್​​ನಿಂದ 73 ರನ್​ಗೆ ಕೇವಲ 72 ಬಾಲ್​​ಗಳನ್ನಷ್ಟೇ ಜ್ಯಾಕ್ ಕ್ರೌಲಿ ತಗೊಂಡಿರೋದು. ಫೈನಲಿ 132 ಬಾಲ್​ಗಳಲ್ಲಿ 73 ರನ್​ಗೆ ಔಟಾಗ್ತಾರೆ. ಇಲ್ಲಿ ಜ್ಯಾಕ್ ಕ್ರೌಲಿ ಔಟಾದ ರೀತಿ ಬಗ್ಗೆಯೂ ಈಗ ಕಾಂಟ್ರೋವರ್ಸಿಯಾಗಿದೆ. ಅದು ಏನು ಅನ್ನೋದನ್ನ ಮುಂದಕ್ಕೆ ಹೇಳ್ತೀನಿ. ಜ್ಯಾಕ್ ಕ್ರೌಲಿ ಬಿಟ್ರೆ ಇಂಗ್ಲೆಂಡ್​ನ ಇನ್ಯಾವ ಬ್ಯಾಟ್ಸ್​ಮನ್​ಗಳು ಕೂಡ ಸೆಟ್ಲ್ ಆಗಿ ಆಡಲೇ ಇಲ್ಲ. ಕ್ಯಾಪ್ಟನ್ ಬೆನ್​ ಸ್ಟೋಕ್ಸ್ ಅಂತೂ ಲೇಜಿಯಾಗಿ ಓಡಿ ರನ್ನೌಟ್ ಆದ್ರು. ಹೀಗಾಗಿ ಏನಾದ್ರೂ ಮಿರಾಕಲ್ ಆಗೋ ಚಾನ್ಸ್ ಕೂಡ ಹೋಯ್ತು.  ಲಂಚ್​ ಟೈಮ್​​ ವೇಳೆಗಾಗಲೇ ಇಂಗ್ಲೆಂಡ್ 6 ವಿಕೆಟ್​​ಗಳನ್ನ ಕಳೆದುಕೊಂಡಿತ್ತು. ಇನ್​ ದಿ ಎಂಡ್ 292 ರನ್​ಗಳಿಗೆ ಇಂಗ್ಲೆಂಡ್ ಆಲೌಟ್ ಆಗುತ್ತೆ. ಟೀಂ ಇಂಡಿಯಾ 106 ರನ್​​ಗಳ ಅಂತರದಿಂದ ಮ್ಯಾಚ್ ಗೆದ್ದಿದೆ. ಜಸ್ಪ್ರಿತ್ ಬುಮ್ರಾ ಮತ್ತು ಕುಲ್​ದೀಪ್ ಯಾದವ್ ತಲಾ 3 ವಿಕೆಟ್ ತೆಗೆದ್ರು. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಂತೂ ಟಾಪ್ ಕ್ಲಾಸ್ ಆಗಿತ್ತು. ಸ್ಪಿನ್ನರ್ಸ್​ಗಳು ಮತ್ತು ಜಸ್ಪ್ರಿತ್ ಬುಮ್ರಾರನ್ನ ತುಂಬಾನೆ ಚೆನ್ನಾಗಿ ಯೂಸ್ ಮಾಡಿದ್ರು. ಸ್ಪಿನ್ನರ್ಸ್​ಗಳ ಮಧ್ಯೆಯೇ ಬುಮ್ರಾ ಆಗಾಗ ಬೌಲಿಂಗ್ ಕೊಟ್ಟು, ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳು ಯಾವ ಹಂತದಲ್ಲೂ ಸೆಟ್ಲ್ ಆಗದಂತೆ ನೋಡಿಕೊಂಡ್ರು. ಹಾಗೆಯೇ ಡಿಆರ್​ಎಸ್​ ಡಿಸೀಶನ್​ಗಳನ್ನೆಲ್ಲಾ ಪರ್ಫೆಕ್ಟ್ ಆಗಿ ತೆಗೆದುಕೊಂಡ್ರು. ಈ ಡಿಆರ್​ಎಸ್ ಅನ್ನೋದು ಆಧುನಿಕ ಕ್ರಿಕೆಟ್​​ನಲ್ಲಿ ಕ್ಯಾಪ್ಟನ್ಸಿಯನ್ನ ಅಳೆಯೋ ಇನ್ನೊಂದು ಮಾನದಂಡ ಅಂತಾನೆ ಹೇಳ್ಬಹುದು. ಯಾಕಂದ್ರು ಡಿಆರ್​​ಎಸ್ ಅನ್ನೋದು ಕ್ರಿಕೆಟ್​ನ ಅತ್ಯಂತ ಕ್ರೂಶಿಯಲ್ ಪಾರ್ಟ್​ ಆಗಿದೆ. ಡಿಆರ್​ಎಸ್ ತಗೋಬೇಕೊ, ಬೇಡ್ವೋ ಅನ್ನೋದನ್ನ ಕ್ಯಾಪ್ಟನ್​ ನಿರ್ಧರಿಸೋದ್ರ ಮೇಲೆಯೂ ಮ್ಯಾಚ್​ನ ರಿಸಲ್ಟ್ ನಿಂತಿದೆ. ಸೋ ಈ ವಿಚಾರದಲ್ಲಿ ರೋಹಿತ್ ಶರ್ಮಾಗೆ ಫುಲ್ ಮಾರ್ಕ್ಸ್ ನೀಡಲೇಬೇಕು. ಈಗ ಅಂತೇನಲ್ಲ.. ವಂಡೇ ವರ್ಲ್ಡ್​​ಕಪ್​​ ವೇಳೆಯೂ ಅಷ್ಟೇ ರೋಹಿತ್​​ ಡಿಆರ್​ಎಸ್ ಡಿಸೀಶನ್​​ಗಳು ಸ್ಪಾಟ್ ಆನ್ ಆಗಿತ್ತು.

ನಂ.1: ಅಶ್ವಿನ್ 500ನೇ ವಿಕೆಟ್.. ಔಟ್ ಕೊಟ್ಟಿಲ್ಲ ಯಾಕೆ?

4ನೇ ದಿನದಾಟದ ಸೆಕೆಂಡ್ ಸೆಷನ್ ವೇಳೆ ಒಂದು ಮ್ಯಾಸಿವ್ ಕನ್​ಫ್ಯೂಷನ್ ಆಗಿದೆ. ಸ್ಪಿನ್ನರ್​ ಆರ್.ಅಶ್ವಿನ್ 499 ವಿಕೆಟ್ ತೆಗೆದಿದ್ದು, ಇನ್ನೊಂದು ವಿಕೆಟ್​​ಗಾಗಿ ಇನ್ನಿಲ್ಲದ ಎಫರ್ಟ್ ಹಾಕಿದ್ರು. ಈ ನಡುವೆ 63ನೇ ಓವರ್​ನಲ್ಲಿ ಅಶ್ವಿನ್ ಎಸೆದ ಕ್ಯಾರಮ್​​ ಬಾಲ್​ಗೆ​​ ಇಂಗ್ಲೆಂಡ್​ನ ಟಾಮ್ ಹಾರ್ಟ್ಲಿ ರಿವರ್ಸ್ ಸ್ವೀಪ್​ ಶಾಟ್ ಹೊಡೆಯೋಕೆ ಮುಂದಾಗ್ತಾರೆ. ಆಗ ಬಾಲ್ ಮೇಲಕ್ಕೆ ಹಾರುತ್ತೆ. ಸ್ಲಿಪ್​ನಲ್ಲಿ ಕ್ಯಾಚ್ ಹಿಡೀತಾರೆ. ಆನ್​ಫೀಲ್ಡ್ ಅಂಪೈರ್ ಔಟ್ ಕೊಡ್ತಾರೆ. ಕೂಡಲೇ ಟಾಮ್ ಹಾರ್ಟ್ಲಿ ಡಿಆರ್​ಎಸ್ ತಗೋತಾರೆ. ಆದ್ರೆ ಡಿಆರ್​ಎಸ್​​ನಲ್ಲಿ ಥರ್ಡ್ ಅಂಪೈರ್ ನಾಟ್​ಔಟ್ ಕೊಡ್ತಾರೆ. ಯಾಕಂದ್ರೆ ಡಿಆರ್​ಎಸ್​​ನಲ್ಲಿ ಚೆಕ್ ಮಾಡಿದಾಗ ಬಾಲ್ ಟಾಮ್ ಹಾರ್ಟ್ಲಿಯ ಫೋರ್​ಆರ್ಮ್​​ಗೆ ಬಡಿದು ಬಳಿಕ ಜಂಪ್​ ಆಗಿದೆ. ಅದನ್ನ ಕ್ಯಾಚ್ ಮಾಡಿದ್ದಾರೆ. ಎಟ್​​ ದ ಸೇಮ್​​ ಟೈಮ್​ ಬಾಲ್ ಲೆಗ್​​ ಸ್ಟಂಪ್​ಗೆ ಬಡಿದಿದೆ. ​ಅಂದ್ರೆ ಫೋರ್​ಆರ್ಮ್​ಗೆ ಬಾಲ್​ ಬಡಿದಾಗ ಅದು ಲೆಗ್​ಸ್ಟಂಪ್ ನೇರಕ್ಕೆ ಇತ್ತು. LBW ಆಗಬೇಕು ಅಂದ್ರೆ ಬಾಲ್​​ ಪ್ಯಾಡ್​ಗೆ ಬಡೀಬೇಕು ಅಂತೇನಿಲ್ವಲ್ಲಾ. ವಿಕೆಟ್​​ನ ಹೈಟಿಗೆ ದೇಹದ ಯಾವುದೇ ಭಾಗಕ್ಕೆ ಹೊಡೆದ್ರೂ ಅದು LBWನೇ. ಇದು ನಿಮಗೆ ಗೊತ್ತೇ ಇರುತ್ತೆ. ಸ್ಟಿಲ್ ಈ ಸಂದರ್ಭದಲ್ಲಿ ಯಾರಿಗಾದ್ರೂ ಕನ್​​ಫ್ಯೂಶನ್ ಇದ್ರೆ ಅನ್ನೋ ಕಾರಣಕ್ಕೆ ವಿವರಿಸಿದ್ದೀನಿ ಅಷ್ಟೇ. ಓಕೆ ಇಲ್ಲಿ ಥರ್ಡ್ ಅಂಪೈರ್ ಏನ್ಮಾಡಿದ್ದಾರೆ, ಬಾಲ್ ಟಾಮ್ ಹಾರ್ಟ್ಲಿಯ ಫೋರ್​ಆರ್ಮ್​ಗೆ ಬಡಿದಿದೆ. ಬ್ಯಾಟ್​​ಗೆ ಆಗಲಿ, ಗ್ಲಾಸ್​ಗೂ ಟಚ್ ಆಗಿಲ್ಲ. ಸೋ ಅದು ಅದು ಕ್ಯಾಚ್ ಔಟ್ ಆಗೋದಿಲ್ಲ ಅಂತಾ ಡಿಸೀಶನ್ ಕೊಟ್ಟಿರ್ಬೇಕು. ಥರ್ಡ್​ ಅಂಪೈರ್​ ಕಡೆಯಿಂದ ಸೂಚನೆ ಬರುತ್ತೆ ಫೀಲ್ಡ್ ಆಂಪೈರ್ ನಾಟ್​ಔಟ್ ಕೊಡ್ತಾರೆ. ಆಗ ಅಶ್ವಿನ್, ರೋಹಿತ್ ಸೇರಿದಂತೆ ನಮ್ಮ ಪ್ಲೇಯರ್ಸ್​ಗಳೆಲ್ಲಾ ಫುಲ್​ ಕನ್​ಫ್ಯೂಸ್ ಆಗ್ತಾರೆ. ಕಾಮೆಂಟ್ರಿ ಮಾಡ್ತಿದ್ದ ಇಯಾನ್ ಮಾರ್ಗನ್ ಮತ್ತು ರವಿ ಶಾಸ್ತ್ರಿಗೂ ಎಕ್ಸ್​ಪ್ಲೈನ್ ಮಾಡೋಕೆ ಕ್ಲ್ಯಾರಿಟಿ ಸಿಗೋದಿಲ್ಲ. ಅಶ್ವಿನ್ ಮತ್ತು ರೋಹಿತ್ ಅಂಪೈರ್​ ಬಳಿ ನೀವು ಔಟ್ ನೀಡಿದ್ರಲ್ಲಾ ಅಂತಾ ಹೇಳಿದಾಗ, ಔಟ್ ನೀಡಿರೋದು ಕ್ಯಾಚ್​​ಗೆ. LBWಗೆ ಅಲ್ಲ.. ಸೋ ಬಾಲ್ ಫೋರ್​ಆರ್ಮ್​ಗೆ ಬಡಿದು ಕ್ಯಾಚ್​ ಆಗಿರೋದ್ರಿಂದ ಅದು ನಾಟೌಟ್ ಅಂತಾರೆ ಸ್ಪಷ್ಟನೆ ನೀಡ್ತಾರೆ. ಇಲ್ಲೇ ನೋಡಿ ಮಜಾ ಇರೋದು. ಅಸಲಿಗೆ ಇಲ್ಲಿ ನಮ್ಮ ಪ್ಲೇಯರ್ಸ್​ಗಳು ಕ್ಯಾಚ್​​ನ್ನ ಮೈಂಡ್​​ನಲ್ಲಿಟ್ಟುಕೊಂಡು ಅಪೀಲ್​ ಮಾಡಿದ್ರೋ, ಇಲ್ಲಾ LBWಗೆ ಅಪೀಲ್ ಮಾಡಿದ್ರೋ ಗೊತ್ತಿಲ್ಲ. ಆನ್​​ಫೀಲ್ಡ್ ಅಂಪೈರ್​​ ಅಂತೂ ಮೊದಲಿಗೆ ಔಟ್ ಕೊಟ್ಟಿದ್ದು ಕ್ಯಾಚ್​ ಹಿಡಿದಿದ್ದಕ್ಕೆ. ಥರ್ಡ್ ಅಂಪೈರ್​ ಕೂಡ ಡಿಎಆರ್​ಎಸ್ ಮೂಲಕ ಮೊದಲಿಗೆ ಚೆಕ್​ ಮಾಡಿರೋದು ಇದನ್ನೇ. ಬಟ್ ಅದು ನಾಟ್​ಔಟ್ ಆಗಿತ್ತು. ಆದ್ರೆ ಅಲ್ಲಿ LBW ಕೂಡ ಇದೆ. ಬಾಲ್​​ ಲೆಗ್​ ಸ್ಟಂಪ್​​ ನೇರಕ್ಕೇ ಇತ್ತು. ಒಂದು ವೇಳೆ LBW ಪರಿಗಣಿಸಿ ಅಂಪೈರ್ ಔಟ್ ಕೊಟ್ಟಿದ್ರೆ, ಅಂಪೈರ್​ ಡಿಸೀಶನ್​ ಮೇಲೆ ಡಿಆರ್​ಎಸ್​ ಆಗ್ತಿದ್ರೂ ಅದು ಔಟಾಗ್ತಿತ್ತು. ಬಟ್ ಕ್ಯಾಚ್ ಔಟ್​​ ಬಗ್ಗೆ ಅಂಪೈರ್​ ಡಿಆರ್​​ಎಸ್​ನಲ್ಲಿ ಚೆಕ್​ ಮಾಡೋಕೆ ಸೂಚಿಸಿದ್ರಿಂದ ಅದು ನಾಟೌಟ್​​ ಆಗಿದೆ. ಹೀಗಾಗಿ ಥರ್ಡ್ ಅಂಪೈರ್ ನಾಟ್​​ಔಟ್ ಕೊಟ್ಟ ಮೇಲೆ LBW ಔಟಲ್ವಾ ಅಂತಾ ಮಾತಿಗಿಳಿದಿದ್ದಾರೆ. ಅಂತೂ ಆರ್​.ಅಶ್ವಿನ್​ಗೆ ಈ ಮ್ಯಾಚ್​ನಲ್ಲಿ 500ನೇ ವಿಕೆಟ್ ಪಡೆಯೋಕೆ ಆಗಿಲ್ಲ. ಪಾಪ ಸ್ಟಿಲ್ 499ನಲ್ಲೇ ಸ್ಟ್ರಕ್ ಆಗಿದ್ದಾರೆ.

ನಂ.2: ಜ್ಯಾಕ್ ಕ್ರೌಲಿ LBW ಔಟ್ ಅಲ್ವಾ?

ಇವೆಲ್ಲದ್ರ ಮಧ್ಯೆ, ಆಫ್ಟರ್ ಮ್ಯಾಚ್ ಮಾತನಾಡೋ ವೇಳೆ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್ ಜ್ಯಾಕ್ ಕ್ರೌಲಿ ಔಟ್ ಡಿಶೀಶನ್​​​ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಕುಲ್​ದೀಪ್ ಯಾದವ್ ಬೌಲಿಂಗ್​ನಲ್ಲಿ ಜ್ಯಾಕ್ ಕ್ರೌಲಿ ಕೂಡ LBWಗೆ ಓಳಗಾಗಿದ್ರು. ಆದ್ರೆ ಗ್ರೌಂಡ್ ಅಂಪೈರ್ ನಾಟ್​​ಔಟ್ ಕೊಡ್ತಾರೆ. ಟೀಂ ಇಂಡಿಯಾ ಡಿಆರ್​ಎಸ್ ತೆಗೆದುಕೊಳ್ಳುತ್ತೆ. ಚೆಕ್ ಮಾಡಿ ನೋಡೋವಾಗ ಆ ಬಾಲ್​ನ್ನ ಜ್ಯಾಕ್ ಕ್ರೌಲಿ ಬ್ಯಾಕ್​​ಫುಟ್​ನಲ್ಲಿ ಆಡಿರ್ತಾರೆ. ಬಾಲ್​​ ಲೆಗ್​​ಸ್ಟಂಪ್​​ಗೆ ಬಡಿಯುವಂತಿತ್ತು. ಬಾಲ್​ ಟ್ರ್ಯಾಕರ್​​​ನಲ್ಲಿ ನೋಡೋವಾಗ ನೇರವಾಗಿ ಲೆಗ್​ಸ್ಟಂಪ್​ಗೆ ಬಡಿದಿದೆ. ಹೀಗಾಗಿ ಥರ್ಡ್ ಅಂಪೈರ್ ಔಟ್ ಡಿಸೀಶನ್ ಕೊಡ್ತಾರೆ. ಆದ್ರೆ ಬೆನ್​ ಸ್ಟೋಕ್ಸ್ ಹೇಳೋ ಪ್ರಕಾರ, ಬಾಲ್​​​ ಟ್ರಾವೆಲ್​ ಮಾಡೋದನ್ನ ಜಡ್ಜ್ ಮಾಡೋದ್ರಲ್ಲಿ ಡಿಆರ್​ಎಸ್​ ಟೆಕ್ನಾಲಜಿ ಫೇಲ್ ಆಗಿದೆ. ಬಾಲ್​​ ಲೆಗ್​ ಸ್ಟಂಪ್​ಗೂ ಬಡೀತಾ ಇರಲಿಲ್ಲ. ಜ್ಯಾಕ್ ಕ್ರೌಲಿ ಆ್ಯಕ್ಚುವಲಿ ನಾಟೌಟ್ ಎಂದಿದ್ದಾರೆ.

Sulekha