ಸೂರ್ಯಕುಮಾರ್ ಕ್ಯಾಪ್ಟನ್.. ಗಿಲ್ ವೈಸ್ ಕ್ಯಾಪ್ಟನ್ – ಏಷ್ಯಾಕಪ್ ಗೆ 15 ಸದಸ್ಯರ ಟೀಂ ಅನೌನ್ಸ್

ಸೆಪ್ಟೆಂಬರ್ 9ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ ಮಾಡಲಾಗಿದೆ. 15 ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸ್ತಾರೆ. ನಿರೀಕ್ಷೆಯಂತೆಯೇ ಟಿ20ಗೆ ಪದಾರ್ಪಣೆ ಮಾಡಿದಾಗಿನಿಂದ ಸ್ಫೋಟಕ ಬ್ಯಾಟಿಂಗ್ ನಡೆಸ್ತಿರೋ ಅಭಿಷೇಕ್ ಶರ್ಮಾ ಹಾಗೂ ಟಾಪ್ ಆರ್ಡರ್ನಲ್ಲಿ ಶೈನ್ ಆಗ್ತಿರೋ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಆರಂಭಿಕರಾಗಿ ತಮ್ಮ ಸ್ಥಾನವನ್ನ ಉಳಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ.
ಇದನ್ನೂ ಓದಿ : ರೋಹಿತ್ & ಕೊಹ್ಲಿ ಇಲ್ಲದ ಏಷ್ಯಾಕಪ್ ಡಲ್ – ಬ್ಯಾಟಿಂಗ್ ಪಂಟರ್ಸ್ ಇಲ್ಲದ್ದೇ ಮೈನಸ್
ಏಷ್ಯಾಕಪ್ ಗೆ ಟೀಂ ರೆಡಿ!
ಬ್ಯಾಟರ್ಸ್ : ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್ : ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ
ಆಲ್ ರೌಂಡರ್ : ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್
ಪೇಸರ್ಸ್ : ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ
ಸ್ಪಿನ್ನರ್ಸ್ : ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ
ಹೀಗೆ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ದುಬೈಗೆ ಹಾರಲಿರೋ 15 ಸದಸ್ಯರ ಏಷ್ಯಾಕಪ್ ತಂಡ ಪ್ರಕಟ ಆಗಿದೆ. ಅಚ್ಚರಿಯ ವಿಚಾರ ಅಂದ್ರೆ ಕರ್ನಾಟಕದ ಯಾವುದೇ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ. ಹಾಗೇ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಆಯ್ಕೆಯಾಗಿಲ್ಲ.
ಆರ್ ಸಿಬಿಯ ಜಿತೇಶ್ ಗೆ ಲಕ್.. ಮುಂಬೈ ಟೀಂ ಆಟಗಾರರ ದಂಡು!
ಏಷ್ಯಾಕಪ್ ಗೆ ಸೆಲೆಕ್ಟ್ ಆಗಿರೋರ ಪೈಕಿ ವಿಕೆಟ್ ಕೀಪರ್ ಕೋಟಾದಲ್ಲಿ ಅಚ್ಚರಿಯ ರೀತಿಯಲ್ಲಿ ಜಿತೇಶ್ ಶರ್ಮಾ ಸೆಲೆಕ್ಟ್ ಆಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ಸ್ ಆಗಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಸ್ಥಾನ ಪಡೆದಿದ್ದಾರೆ. ಇಲ್ಲಿ ಜಿತೇಶ್ ಗೆ ಸ್ಥಾನ ಸಿಗೋಕೆ ಕಾರಣವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. 2025ರ ಐಪಿಎಲ್ನಲ್ಲಿ ಆರ್ಸಿಬಿ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಅದ್ಭುತ ಅದ್ಭುತ ಪ್ರದರ್ಶನ ನೀಡಿದ್ರು. ಎಲ್‌ಎಸ್‌ಜಿ ವಿರುದ್ಧದ ಮಸ್ಟ್ ವಿನ್ ಮ್ಯಾಚಲ್ಲಿ 33 ಎಸೆತಗಳಲ್ಲೇ 85 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ರು. 257 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಟೂರ್ನಿಯುದ್ದಕ್ಕೂ ಸಾಲಿಡ್ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ರು. ಹಾಗೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಆಡಿದ ಅನುಭವ ಇರೋದ್ರಿಂದ ಸೆಕೆಂಡ್ ಪ್ರಿಯಾರಿಟಿ ಆಗಿ ಬಿಸಿಸಿಐ ಮಣೆ ಹಾಕಿದೆ. ಮತ್ತೊಂದೆಡೆ ಏಷ್ಯಾಕಪ್ ಟೂರ್ನಿಗೆ ಸೆಲೆಕ್ಟ್ ಆಗಿರೋ ಟೀಮ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ದಂಡೇ ಇದೆ. ನಾಲ್ವರಿಗೂ ಕೂಡ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗೋದು ಕೂಡ ಪಕ್ಕಾ ಇದೆ. ಟಿ20ಐ ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್, ಪೇಸ್ ಬೌಲರ್ ಆಗಿ ಜಸ್ಪ್ರೀತ್ ಬುಮ್ರಾ, ಮಿಡಲ್ ಆರ್ಡರ್ ಬ್ಯಾಟರ್ ಗೆ ತಿಲಕ್ ವರ್ಮಾ ಮತ್ತು ಆಲ್ ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯರನ್ನ ಪಿಕ್ ಮಾಡಲಾಗಿದೆ.

ನೋಡಿರಿ

