ಗಡಿಯಲ್ಲಿ ಮತ್ತೆ ಚೀನಾ ಕಿರಿಕ್! – ಸ್ನೇಹ ಮಾಡಿ ಬೆನ್ನಿಗೆ ಚೂರಿ!!
ಡ್ರ್ಯಾಗನ್ಗೆ ಬ್ರೇಕ್ ಹಾಕುತ್ತಾ ಭಾರತ?

ಗಡಿಯಲ್ಲಿ ಮತ್ತೆ ಚೀನಾ ಕಿರಿಕ್! – ಸ್ನೇಹ ಮಾಡಿ ಬೆನ್ನಿಗೆ ಚೂರಿ!!ಡ್ರ್ಯಾಗನ್ಗೆ ಬ್ರೇಕ್ ಹಾಕುತ್ತಾ ಭಾರತ?

ಭಾರತದೊಂದಿಗೆ ಸ್ನೇಹ ಹಸ್ತ ಚಾಚಿ ನಂತರ ಕಿರಿಕ್‌ ಮಾಡುವ ಚಾಳಿಯನ್ನು ಮತ್ತೆ ಚೀನಾ ಮುಂದುವರಿಸಿದೆ. ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ  ಅಂದ್ರೆ ಮುನ್ಸಿಪಲ್‌  ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಕೌಂಟಿಗಳನ್ನು ‘ಹಿಯಾನ್‌’ ಹಾಗೂ ‘ಹೆಕಾಂಗ್‌’ ಎಂದು ಹೆಸರಿಸಿದೆ. ಚೀನಾದ ಈ ನಡೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಚೀನಾವು ನಮ್ಮ ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ಭಾರತ ಎಂದೂ ಒಪ್ಪಿಲ್ಲ. ಚೀನಾ, ಹೋಟಾನ್ ಪ್ರಾಂತ್ಯದಲ್ಲಿ ರಚಿಸಲು ಹೊರಟಿರುವ 2 ಕೌಂಟಿಯ ಕೆಲ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿವೆ’ ಎಂದಿದ್ದಾರೆ.

ಹೊಸ ವರ್ಷದಲ್ಲಿ ಚೀನಾ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ತೈವಾನ್ ವಿಚಾರದಲ್ಲಿ ಅಮೆರಿಕದ ಜೊತೆ ಸಮಸ್ಯೆ ಎದುರಿಸುತ್ತಿರುವ ಚೀನಾ ಈಗ ಭಾರತದ ವಿರುದ್ಧ ಹೊಸ ತಂತ್ರ ಹೂಡಿದೆ. ಲಡಾಖ್​ನ ಕೆಲವು ಭಾಗಗಳನ್ನು ತನ್ನದೆಂದು ಹೇಳಿಕೊಂಡು ಎರಡು ಹೊಸ ಕೌಂಟಿಗಳನ್ನು ಘೋಷಿಸಿದೆ.  ಡಿಸೆಂಬರ್ 27 ರಂದು ವಾಯುವ್ಯ ಚೀನಾದ ಕಿಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ಘೋಷಿಸಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಮತ್ತು ರಾಜ್ಯ ಮಂಡಳಿ ಈ ಹೊಸ ಕೌಂಟಿಗಳಿಗೆ ಅನುಮೋದನೆ ನೀಡಿದೆ. ಈ ಎರಡೂ ಕೌಂಟಿಗಳು ಹೊಟಾನ್ ಪ್ರಾಂತ್ಯದ ವ್ಯಾಪ್ತಿಗೆ ಬರುತ್ತವೆ. ಈ ಕ್ರಮಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸರಿಯಲ್ಲ ಮತ್ತು ಆಕ್ಷೇಪಾರ್ಹ ಎಂದೂ ಹೇಳಿದೆ.

  ವಿದೇಶಾಂಗ ಸಚಿವಾಲಯ ಆಕ್ಷೇಪ

ವಿದೇಶಾಂಗ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಚೀನಾದ ಈ ಕ್ರಮವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಖಂಡಿಸಿರುವುದಾಗಿ ತಿಳಿಸಿದೆ. ಚೀನಾ ಘೋಷಿಸಿರುವ ಹೊಸ ಕೌಂಟಿಗಳು ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಭಾಗವನ್ನು ಒಳಗೊಂಡಿವೆ. ವಿದೇಶಾಂಗ ಸಚಿವಾಲಯದ ವಕ್ತಾರ ಚೀನಾ ಅಕ್ರಮವಾಗಿ ಲಡಾಖ್​ನ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಚೀನಾದ ಹೊಟಾನ್ ಪ್ರಾಂತ್ಯದಲ್ಲಿ ಎರಡು ಹೊಸ ಕೌಂಟಿಗಳನ್ನು ಘೋಷಿಸಿರುವುದನ್ನು ನಾವು ಗಮನಿಸಿದ್ದೇವೆ. ಈ ಕೌಂಟಿಗಳು ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಭಾಗವನ್ನು ಒಳಗೊಂಡಿವೆ. ಚೀನಾ ಅಕ್ರಮವಾಗಿ ಲಡಾಖ್​ನ ಭಾಗವನ್ನು ಆಕ್ರಮಿಸಿಕೊಂಡಿರುವುದನ್ನು ನಾವು ಒಪ್ಪುವುದಿಲ್ಲ. ಹೊಸ ಕೌಂಟಿಗಳ ಘೋಷಣೆಯಿಂದ ಲಡಾಖ್ ಮೇಲಿನ ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುವುದಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಕ್ಕೆ ನಮ್ಮ ಆಕ್ಷೇಪವನ್ನು ತಿಳಿಸಿದ್ದೇವೆ ಎಂದಿದ್ದಾರೆ.  ಲಡಾಖ್‌ನ ಭಾಗವಾಗಿರುವ ಚೀನಾದ ಹೊಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಘೋಷಣೆಯ ಕುರಿತು ಭಾರತವು ಚೀನಾದೊಂದಿಗೆ ಗಂಭೀರ ಪ್ರತಿಭಟನೆ ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ಸಾಯ್ ಚಿನ್‌ನಲ್ಲಿ (Aksai Chin) ಚೀನಾ ಎರಡು ಹೊಸ ‘ಕೌಂಟಿ’ಗಳನ್ನು ರಚಿಸಿ  ಕ್ಯಾತೆ ತೆಗೆದಿದೆ.   ನಮ್ಮ ಭೂಮಿಯನ್ನ ಚೀನಾ ನಮ್ಮದು ಎನ್ನುತ್ತಿದ್ದು ಎರಡು ಕೌಂಟಿ ಪ್ರದೇಶದಲ್ಲಿ ಭಾರತ  ಹಲವು ಭಾಗ ಸೇರಿದೆ. ಇದಕ್ಕೆ ಭಾರತ ಇನ್ನೂ ಯಾವ ರೀತಿಯಲ್ಲಿ ಉತ್ತರ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

Kishor KV

Leave a Reply

Your email address will not be published. Required fields are marked *