ಮೊದಲದಿನವೇ ಟೀಮ್ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ – 109 ರನ್‌ಗಳಿಗೆ ಭಾರತ ಆಲ್ ಔಟ್

ಮೊದಲದಿನವೇ ಟೀಮ್ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ – 109 ರನ್‌ಗಳಿಗೆ ಭಾರತ ಆಲ್ ಔಟ್

ಇಂದೋರ್‌ನಲ್ಲಿ ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 109 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಭಾರತದ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ರು. ಸಿಕ್ಕ ಈ 2 ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳದ ರೋಹಿತ್, ಕೇವಲ 12 ರನ್ ಗಳಿಸಿ ಔಟಾದ್ರು. ಆರಂಭಿಕ ಗಿಲ್ ಕೂಡ ಪೆವಿಲಿಯನ್ ಸೇರಿಕೊಂಡರು.

ಇದನ್ನೂ ಓದಿ:  ಮಾಸ್ಟರ್ ಬ್ಲಾಸ್ಟರ್ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ವಾಂಖೆಡೆಯಲ್ಲಿ ಕ್ರಿಕೆಟ್ ದೇವರ ಪ್ರತಿಮೆ

ಬಳಿಕ ಬಂದ ಚೇತೇಶ್ವರ್ ಪೂಜಾರ ಕೂಡ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲಿ ಮುಂಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರವೀಂದ್ರ ಜಡೇಜಾ ಕೂಡ ಒಂದು ಬೌಂಡರಿ ಬಾರಿಸಿ ನಿರ್ಗಮಿಸಿದ್ರು. ಶ್ರೇಯಸ್ ಅಯ್ಯರ್ ಕೂಡ ಖಾತೆ ತೆರೆಯದೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಒಂದಾದ ಮೇಲೊಂದರಂತೆ ವಿಕೆಟ್ ಉರುಳುತ್ತಿದ್ದರು ವಿರಾಟ್ ಕೊಹ್ಲಿ ತಂಡದ ಪರ ಅತ್ಯಧಿಕ ರನ್ ಅಂದರೆ 22 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಕೆಎಸ್ ಭರತ್ 17 ರನ್ಗಳಿಗೆ ಸುಸ್ತಾದರೆ, ಅಶ್ವಿನ್ 3 ರನ್ ಬಾರಿಸಿದರು. ಅಂತಿಮವಾಗಿ 2 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ, ಸ್ಫೋಟಕ ಆಟಕ್ಕೆ ಮುಂದಾಗಿದ್ದ ಉಮೇಶ್ ಯಾದವ್ ಕೂಡ 17 ರನ್‌ಗೆ ಎಲ್ಬಿಡಬ್ಲ್ಯೂಗೆ ಬಲಿಯಾದ್ರು. ಅಂತಿಮವಾಗಿ ರನ್ಔಟ್ ಆಗುವ ಮೂಲಕ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‌ ಗೆ ಅಂತ್ಯ ಹಾಡಿದರು. ಇನ್ನು ಆರಂಭಿಕ ಬ್ಯಾಟ್ಸಮನ್ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಟೆಸ್ಟ್ ನಿಂದ ಕೈ ಬಿಡಲಾಗಿತ್ತು. ಅವರ ಸ್ಥಾನದಲ್ಲಿ ಶುಭ್ ಮನ್ ಗಿಲ್ ಅವರು ಆರಂಭಿಕನಾಗಿ ಕಣಕ್ಕಿಳಿದಿದ್ದರು.

suddiyaana