ತಿಲಕ್ ಕಂ ಬ್ಯಾಕ್.. ಯಾರು ಔಟ್? – SA ವಾರ್ಮ್ ಅಪ್ ನಲ್ಲೇ ಕ್ಲೈಮ್ಯಾಕ್ಸ್
BCCIಗೆ ಅಸಲಿ ಚಾಲೆಂಜ್ ಶುರುವಾಯ್ತಾ?

ಟಿ-20ಐ ಕ್ರಿಕೆಟ್ನ ಮಹಾರಾಜನಾಗಿ ಮೆರೀತಿರೋ ಭಾರತ ವಿಶ್ವಕಪ್ ಗೆಲ್ಲೋಕೆ ಸರ್ವಸಮರ್ಥವೂ ಆಗಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಖದರ್ಗೆ ಕ್ರಿಕೆಟ್ ಜಗತ್ತೇ ಬೆಕ್ಕಸ ಬೆರಗಾಗಿದೆ. ನ್ಯೂಜಿಲೆಂಡ್ ವಿರುದ್ಧ ಡಾಮಿನೇಷನ್ನಲ್ಲೇ ಸರಣಿ ಗೆದ್ದು ವಿಶ್ವಕಪ್ ಹೊಸ್ತಿಲಲ್ಲಿರೋ ಭಾರತಕ್ಕೆ ಈಗ ಇರುವಂಥ ಬಿಗ್ ಚಾಲೆಂಜ್ ಅಂದ್ರೆ ಪ್ಲೇಯಿಂಗ್ 11.. ತಿಲಕ್ ವರ್ಮಾ ಕಂ ಬ್ಯಾಕ್ನಿಂದ ಬ್ಯಾಟಿಂಗ್ ಆರ್ಡರ್ನಲ್ಲಿ ಒಂದಷ್ಟು ಚೇಂಜಸ್ ಆಗೋದಂತೂ ಪಕ್ಕಾ.
ಇದನ್ನೂ ಓದಿ : ಕರ್ನಾಟಕ ಬುಲ್ಡೋಜರ್ಸ್ CCL ಚಾಂಪಿಯನ್- ಕಪ್ ಹಿಡಿದ ಕಿಚ್ಚನ ಭರ್ಜರಿ ಡ್ಯಾನ್ಸ್
ಆಗ್ತಿದ್ದು ವಾರ್ಮ್ ಅಪ್ ಮ್ಯಾಚ್ಗಳ ಮೂಲಕ ಗೇಮ್ ಸ್ಟ್ರಾಟರ್ಜಿಗಳನ್ನ ರೆಡಿ ಮಾಡಿಕೊಳ್ತಿದ್ದಾರೆ. ಭಾರತ ಎ ತಂಡ ಈಗಾಗ್ಲೇ ಸೋಮವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಅಮೆರಿಕಾ ವಿರುದ್ಧ ಗೆದ್ದು ಬೀಗಿದೆ. ಬಟ್ ಈ ಪಂದ್ಯದ ಮೂಲಕ ತಿಲಕ್ ವರ್ಮಾ ಅಬ್ಬರಿಸಿದ್ದು ನಾನು ಕಂಪ್ಲೀಟ್ ಫಿಟ್ ಌಂಡ್ ಫೈನ್ ಆಗಿ ವಿಶ್ವಕಪ್ ಆಡೋಕೆ ರೆಡಿ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಸೋ ಅಲ್ಲಿಗೆ ತಿಲಕ್ ತಂಡವನ್ನ ಸೇರೋದು ಕನ್ಫರ್ಮ್ ಆಗಿದೆ. ಆದ್ರೆ ಇರೋ ಪ್ರಶ್ನೆ ಅಂದ್ರೆ ತಿಲಕ್ ಬ್ಯಾಟಿಂಗ್ಗೆ ಬಂದ್ರೆ ಯಾರು ಹೊರ ಹೋಗ್ತಾರೆ ಅನ್ನೋದು.
ಇಶಾನ್ ಅಥವಾ ಸಂಜು.. ಇಬ್ಬರಲ್ಲಿ ಯಾರಿಗೆ ಚಾನ್ಸ್ ಮಿಸ್?
ತಿಲಕ್ ವರ್ಮಾ ಪ್ಲೇಯಿಂಗ್ 11ಗೆ ಬಂದ್ರೆ ನಂಬರ್ 3ನಲ್ಲೇ ಆಡೋದು ಬಹುತೇಕ ಕನ್ಫರ್ಮ್. ಏಷ್ಯಾಕಪ್ ಬಳಿಕ ತಿಲಕ್ ಆಲ್ಮೋಸ್ಟ್ ಈ ಸ್ಲಾಟ್ನಲ್ಲೇ ಬ್ಯಾಟ್ ಬೀಸಿದ್ದಾರೆ. ಆರಂಭದಲ್ಲಿ ಸೂರ್ಯ ಈ ನಂಬರ್ನಲ್ಲಿ ಬರ್ತಿದ್ದರಾದ್ರೂ ಆ ನಂತ್ರ ಅವ್ರು ನಂಬರ್ 4ಗೆ ಹೋಗಿದ್ದಾರೆ. ಸದ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಒನ್ ಡೌನ್ ಬ್ಯಾಟರ್ ಆಗಿ ಆಡಿದ್ರು. ಸೋ ತಿಲಕ್ ಬಂದ್ರೆ ಇಶಾನ್ ಕಿಶನ್ ಸ್ಥಾನ ಬಿಟ್ಟುಕೊಡ್ಬೇಕು. ಹಾಗಂತ ಕಿಶನ್ರನ್ನ ಪ್ಲೇಯಿಂಗ್ 11ನಿಂದ ಹೊರಗಿಡೋ ಆಗಿಲ್ಲ. ಕಿವೀಸ್ ವಿರುದ್ಧದ ಸರಣಿಯಲ್ಲಿ ಶತಕ, ಅರ್ಧಶತಕ ಸೇರಿ ಸರಣಿಯಲ್ಲಿ ಟಾಪ್2 ಹೈಯೆಸ್ಟ್ ಸ್ಕೋರರ್ ಆಗಿದ್ದಾರೆ. ಹೀಗಾಗಿ ಅವ್ರನ್ನ ಕಂಟಿನ್ಯೂ ಮಾಡ್ಬೇಕು ಅಂದ್ರೆ ಓಪನರ್ ಆಗಿ ಆಡಿಸಬಹುದು. ಹಾಗ್ ಮಾಡಿದ್ರೆ ಸಂಜುಗೆ ಬೆಂಚ್ ಕಾಯಿಸ್ಬೇಕು. ಜೊತೆಗೆ ಲೆಫ್ಟ್-ರೈಟ್ ಹ್ಯಾಂಡ್ ಬ್ಯಾಟಿಂಗ್ ಕಾಂಬಿನೇಷನ್ ಮಿಸ್ ಆಗುತ್ತೆ. ಅದೆಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಯಾರನ್ನ ಆಡಿಸಿ ಯಾರನ್ನ ಕೂರಿಸುತ್ತಾರೆ ಅನ್ನೋದು ಬಿಸಿಸಿಐಗೆ ಇರೋ ಚಾಲೆಂಜ್ ಈಗ. ಅದೂ ಅಲ್ದೇ ಈ ಪಂದ್ಯ ಅಭ್ಯಾಸ ಪಂದ್ಯ ಆಗಿದ್ರೂ ಈಸಿಯಾಗಿ ತಗೊಳ್ಳೋಕೂ ಆಗಲ್ಲ.
ವಾರ್ಮ್ ಅಪ್ ಮ್ಯಾಚ್ ನಲ್ಲೇ ಸ್ಟ್ರೆಂಥ್-ವೀಕ್ ನೆಸ್ ಬಯಲು!
ಟಿ-20 ವಿಶ್ವಕಪ್ನಲ್ಲಿ ಭಾರತ ಎ ಗುಂಪಿನಲ್ಲಿದ್ದು ಸೌತ್ ಆಫ್ರಿಕಾ ಡಿ ಗ್ರೂಪ್ನಲ್ಲಿದೆ. ಸೋ ಗ್ರೂಪ್ ಸ್ಟೇಜ್ನಲ್ಲಿ ಮುಖಾಮುಖಿ ಆಗಲ್ಲ. ಬಟ್ ಸೂಪರ್ 8 ಹಂತದಲ್ಲಿ ಎದುರಾಗುವ ಸಾಧ್ಯತೆ ಇದೆ. ಹೀಗಿದ್ರೂ ಫೆಬ್ರವರಿ 4 ಅಂದ್ರೆ ಬುಧವಾರ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅಭ್ಯಾಸ ಪಂದ್ಯವು ಟಿ20 ವಿಶ್ವಕಪ್ಗೆ ಮುಂಚಿತವಾಗಿ ಎರಡೂ ತಂಡಗಳ ಸಾಮರ್ಥ್ಯ, ದೌರ್ಬಲ್ಯ ಮತ್ತು ಗೇಮ್ ಪ್ಲ್ಯಾನ್ಗಳ ಬಗ್ಗೆ ಒಂದು ಕ್ಲಾರಿಟಿ ನೀಡುತ್ತೆ. ಅದೆಲ್ಲಕ್ಕಿಂತ ಜಾಸ್ತಿ ವಾರ್ಮ್ ಅಪ್ ಮ್ಯಾಚಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಬ್ಯಾಲೆನ್ಸ್ ಕಂಡುಕೊಳ್ಳಬೇಕಿದೆ. ಅಂತಿಮ ಆಡುವ ಹನ್ನೊಂದರ ಬಳಗವನ್ನ ನಿರ್ಧರಿಸುವಲ್ಲಿ ಈ ಪಂದ್ಯವು ನಿರ್ಣಾಯಕವಾಗಿರುತ್ತದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಲೈನ್ಅಪ್ ಮತ್ತು ಪ್ರಬಲ ವೇಗದ ಬೌಲಿಂಗ್ ದಾಳಿಯೊಂದಿಗೆ ಭಾರತಕ್ಕೆ ಟಫ್ ಫೈಟ್ ಕೊಡೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಈ ಪಂದ್ಯ ಅಧಿಕೃತ ಅಲ್ಲದೇ ಇದ್ರೂ ಸ್ಟ್ರಾಂಗ್ ಟೀಮ್ನೇ ಕಣಕ್ಕಳಿಸಬೇಕು.
ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ವಾರ್ಮ್ ಅಪ್ ಪಂದ್ಯ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಿಚ್ ಸಾಮಾನ್ಯವಾಗಿ ಬ್ಯಾಟರ್ ಫ್ರೆಂಡ್ಲಿಯಾಗಿದ್ದು ಇಲ್ಲೂ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 32 ಟಿ20 ಪಂದ್ಯಗಳನ್ನು ಆಡಿವೆ. ಭಾರತವು 19 ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದ್ದರೆ, ಹರಿಣಪಡೆ 13 ಗೆಲುವುಗಳನ್ನು ಹೊಂದಿದ್ದಾರೆ. ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು 2024ರ ಟಿ-20 ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿ ಆಗಿದ್ದನ್ನೂ ಮರೆಯೋಕೆ ಆಗಲ್ಲ. ಕ್ಲೈಮ್ಯಾಕ್ಸ್ವರೆಗೂ ಹೋಗಿದ್ದ ಈ ಪಂದ್ಯವನ್ನ ಅಂತಿಮವಾಗಿ ಭಾರತ ಗೆದ್ಕೊಂಡಿತ್ತು. ಸೋ ಈ ಸಲವೂ ಭಾರತವೇ ಗೆಲ್ಲೋ ಫೇವರೆಟ್ ಟೀಂ ಆಗಿದೆ.

ನೋಡಿರಿ

