ನೇಪಾಳಕ್ಕೆ ಅಭಿ-ವೈಭವ್ ನಡುಕ – ರಿಂಕು, ರಾಣಾಗೆ ಕಂ ಬ್ಯಾಕ್ ಟಾಸ್ಕ್
ರೈಸಿಂಗ್ ಸ್ಟಾರ್ ಏಷ್ಯಾಕಪ್ ನಮ್ದೇನಾ?

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡುವೆ ಟೀಂ ಇಂಡಿಯಾ ಯಂಗ್ ಪ್ಲೇಯರ್ಸ್ ಮೈದಾನದಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಮೆಂಟ್ ಆರಂಭವಾಗಿದ್ದು ನಾಳೆ ಅಂದ್ರೆ ಶುಕ್ರವಾರ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ : KKRಗಿಲ್ಲ ಕ್ಯಾಪ್ಟನ್.. MIಗೆ ಬೇಕು ಲೀಡರ್ – ಪಟ್ಟದ ಆಟದಲ್ಲಿ SAFE ಆದವರೆಷ್ಟು?
ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರೋ ಟೀಂ ಇಂಡಿಯಾ ಒಂದ್ಕಡೆ. ಮತ್ತೊಂದೆಡೆ ಏಷ್ಯನ್ ಕ್ರಿಕೆಟ್ನಲ್ಲಿ ಸದ್ದು ಮಾಡ್ಬೇಕು ಅಂತಾ ಕಾಯ್ತಿರೋ ನೇಪಾಳ. ಈಗ ಈ ಎರಡೂ ತಂಡಗಳ ನಡುವೆ ನಾಳೆ ಪಂದ್ಯ ನಡೆಯಲಿದೆ. ದೋಹಾದ ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3.30ಕ್ಕೆ ಮ್ಯಾಚ್ ಸ್ಟಾರ್ಟ್ ಆಗಲಿದ್ದು ತಿಲಕ್ ವರ್ಮಾ ನಾಯಕತ್ವದ ಭಾರತ A ತಂಡದಲ್ಲಿ ಅಭಿಷೇಕ್ ಶರ್ಮಾ, ರಿಂಕು ಸಿಂಗ್, ವೈಭವ್ ಸೂರ್ಯವಂಶಿಯಂತಹ ಸ್ಟಾರ್ ಪ್ಲೇಯರ್ಗಳಿದ್ದಾರೆ. ಹಾಗಂತ ಸ್ಯಾಂಡೀಪ್ ಲಮಿಚಾನೆ ನೇತೃತ್ವದ ನೇಪಾಳ ತಂಡವನ್ನು ಕೂಡ ಸುಲಭವಾಗಿ ಗೆಲ್ಬೋದು ಅಂತಾನೂ ಹೇಳಂಗಿಲ್ಲ. ಅವ್ರೂ ಕೂಡ ಫೈಟ್ ಕೊಡೋಕೆ ಕಾಯ್ತಿದ್ದಾರೆ.
ಯುವ ಆಟಗಾರರಿಗೆ ಬಂಪರ್!
ಭಾರತ ತಂಡದಲ್ಲಿರುವ ಯುವ ಆಟಗಾರರಿಗೆ ಸಾಮರ್ಥ್ಯ ಪ್ರದರ್ಶಿಸೋ ಟೈಂ
ಬ್ಯಾಟಿಂಗ್ ನಲ್ಲಿ ಅಭಿಷೇಕ್ ಮತ್ತು ವೈಭವ್ ಮೇಲೆ ಎಲ್ಲರ ಕಣ್ಣು
ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಜವಾಬ್ದಾರಿ
ನೇಪಾಳದಲ್ಲೂ ಪ್ರತಿಭಾವಂತರು, ಸ್ಯಾಂಡೀಪ್ ಲಮಿಚಾನೆ ಬೌಲಿಂಗ್ ಅಸ್ತ್ರ
ಲಲಿತ್ ರಾಜ್ ಬಂಶಿ ಪ್ರಮುಖ ಬೌಲರ್, ಬ್ಯಾಟಿಂಗ್ ನಲ್ಲೂ ನಿರೀಕ್ಷೆ
ಅರ್ಜುನ್ ಕುಮಾಲ್, ದೇವ್ ಖನಾಲ್ ಮತ್ತು ಕುಶಾಲ್ ಭುರ್ಟೆಲ್ ಮೇಲೆ ನಿರೀಕ್ಷೆ
ಇತ್ತೀಚೆಗೆ ಕೆನಡಾ ಮತ್ತು ಓಮನ್ ವಿರುದ್ಧದ ಪಂದ್ಯಗಳಲ್ಲಿ ನೇಪಾಳ ಮಿಂಚಿಂಗ್
ಹೀಗೆ ಎರಡೂ ತಂಡಗಳಲ್ಲೂ ಒಂದಷ್ಟು ವಿಚಾರಗಳು ಹೈಲೆಟ್ ಆಗಲಿವೆ. ಬಟ್ ಎಂಡ್ ಆಫ್ ದಿ ಡೇ ಟೀಂ ಇಂಡಿಯಾವೇ ಮ್ಯಾಚ್ ಗೆಲ್ಲೋ ಫೇವರೆಟ್ ಟೀಂ. ವಿನ್ನಿಂಗ್ ಪ್ರೆಡಿಕ್ಟಬಿಲಿಟಿ 92 ಪರ್ಸೆಂಟ್ ಇದೆ. ಹೀಗಿದ್ರೂ ಭಾರತದ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ನೇಪಾಳ ಬೌಲರ್ ಸ್ಯಾಂಡೀಪ್ ಲಮಿಚಾನೆ ನಡುವಿನ ಸಮರ ಗಮನ ಸೆಳೆಯಲಿದೆ. ಹಾಗೇ ಭಾರತದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ಅರ್ಷದ್ ಖಾನ್ ಮತ್ತು ಪ್ರಿನ್ಸ್ ಯಾದವ್ ಕೂಡ ಪ್ರಮುಖ ಪಾತ್ರ ವಹಿಸಬಹುದು.
ಭಾರತದ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ
ಪ್ರಭ್ ಸಿಮ್ರಾನ್ ಸಿಂಗ್
ತಿಲಕ್ ವರ್ಮಾ
ರಿಂಕು ಸಿಂಗ್
ಆಯುಷ್ ಬದೋನಿ
ಸೂರ್ಯಾನ್ಶ್ ಶೆಡ್ಗೆ
ತನುಷ್ ಕೋಟ್ಯನ್
ಹರ್ಷಿತ್ ರಾಣಾ
ಅರ್ಷದ್ ಖಾನ್
ಪ್ರಿನ್ಸ್ ಯಾದವ್

ನೋಡಿರಿ

