549 ರನ್ಸ್.. ಭಾರತಕ್ಕಿದೆ ಡ್ರಾ ಚಾನ್ಸ್! 5ನೇ ದಿನ ALL OUT ತಪ್ಪಿಸ್ತಾರಾ?
ಜೈಸ್ವಾಲ್-ಕೆಎಲ್ ಇಲ್ಲದೆ ಗೆಲ್ತಾರಾ?

ಬೌಲಿಂಗ್ನಲ್ಲಿ ಕಂಟ್ರೋಲ್ ಮಾಡ್ಲಿಲ್ಲ.. ಬ್ಯಾಟಿಂಗ್ನಲ್ಲಿ ಬೀಸಿ ಆಡ್ಲಿಲ್ಲ. ಮ್ಯಾಚ್ ಗೆಲ್ಲಲೇಬೇಕು ಅನ್ನೋ ಇಂಟೆನ್ಷನ್ನಲ್ಲಿ ಆಡಿದ್ರೆ ಅಟ್ಲೀಸ್ಟ್ ಟಫ್ ಫೈಟ್ ಆದ್ರೂ ಕೊಡ್ಬೋದಿತ್ತು. ಆದ್ರೆ ಟೀಂ ಇಂಡಿಯಾ ಪ್ಲೇಯರ್ಗಳು ಫಸ್ಟ್ ಇನ್ನಿಂಗ್ಸ್ನಿಂದ ಹಿಡ್ದು 4 ದಿನ ಕಳೆದ್ರೂ ಸ್ಟ್ರಗಲ್ ಮಾಡ್ತಾನೇ ಇದ್ದಾರೆ. ಸೌತ್ ಆಫ್ರಿಕಾ ಟೀಂ ಕಂಪ್ಲೀಟ್ ಡಾಮಿನೇಷನ್ ಮಾಡಿ ಇನ್ನೇನು ಭಾರತವನ್ನ ಕ್ಲೀನ್ ಸ್ವೀಪ್ ಮಾಡೋಕೆ ರೆಡಿಯಾಗಿ ನಿಂತಿದೆ. ಫಾಲೋಆನ್ ಅವಕಾಶ ಇದ್ರೂ ಕೈಬಿಟ್ಟು ಬಿಗ್ ಟಾರ್ಗೆಟ್ ಸೆಟ್ ಮಾಡಿ ಡಿಕ್ಲೇರ್ ಘೋಷಿಸಿದ ಸೌತ್ ಆಫ್ರಿಕಾಗೆ ಏನೆಲ್ಲಾ ಪ್ಲಸ್ ಆಯ್ತು? ಭಾರತ ಪಂದ್ಯವನ್ನ ಕೈಚೆಲ್ಲಿದ್ದೇಗೆ? ಐದನೇ ದಿನಕ್ಕೆ ಕಾಲಿಟ್ಟಿರೋ ಈ ಪಂದ್ಯವನ್ನ ಭಾರತ ಡ್ರಾ ಮಾಡಿಕೊಳ್ಳೋಕೆ ಅವಕಾಶ ಇದ್ಯಾ? ಅನ್ನೋದ್ದನ್ನ ನೋಡೋಣ.
ಗೌತಮ್ ಗಂಭೀರ್ ಮಾಡೋ ಪ್ರಯೋಗ ಒಂದೆರಡಲ್ಲ. ಈಗ ಟೀಂ ಇಂಡಿಯಾದಲ್ಲಿ ಯಾರು ಯಾವ ಸ್ಲಾಟ್ನಲ್ಲಿ ಬೇಕಿದ್ರೂ ಬ್ಯಾಟಿಂಗ್ಗೆ ಬರ್ಬೋದು. ಇಷ್ಟು ದಿನ ಆಲ್ರೌಂಡರ್ಗಳೇ ಒನ್ ಡೌನ್ ಬ್ಯಾಟರ್ಸ್ ಆಗಿ ಕ್ರೀಸ್ಗೆ ಬರ್ತಿದ್ರು. ಬಟ್ ಈಗ ಪ್ಯೂರ್ ಬೌಲರ್ ಟಾಪ್ ಆರ್ಡರ್ ಬ್ಯಾಟಿಂಗ್ಗೆ ಇಳ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಟಾಪ್ 4 ಬ್ಯಾಟರ್ ಆಗಿ ಕುಲ್ದೀಪ್ ಯಾದವ್ ಬ್ಯಾಟಿಂಗ್ಗೆ ಬಂದಿದ್ದಾರೆ. ಇನ್ನೇನು ಸೋಲಿನ ಹೊಸ್ತಿಲಿನಲ್ಲಿ ಭಾರತ ಮ್ಯಾಚ್ ಗೆಲ್ಲೋದಂತೂ ಕನಸಿನ ಮಾತು. ಹೋಗ್ಲಿ ಡ್ರಾ ಮಾಡಿಕೊಳ್ತಾರಾ ಅಂದ್ರೆ ಅದೂ ಕೂಡ ಅಸಾಧ್ಯವೇ ಆಗಿದೆ.
ರನ್ ಗಳ ಬೆಟ್ಟ ಕಟ್ಟಿ ಡಿಕ್ಲೇರ್ ಘೋಷಿಸಿದ ಟೆಂಬಾ ಬವುಮಾ ಪಡೆ!
ನ್ಯೂಜಿಲೆಂಡ್ನಂತೆಯೇ ನಾವೂ ಕೂಡ ಭಾರತವನ್ನ ಕ್ಲೀನ್ ಸ್ವೀಪ್ ಮಾಡ್ತೀವಿ ಅಂತಾ ಫುಲ್ ಕಾನ್ಫಿಡೆನ್ಸ್ನಲ್ಲಿ ಭಾರತ ಪ್ರವಾಸದಲ್ಲಿರೋ ಸೌತ್ ಆಫ್ರಿಕಾ ಈಗ ಅದನ್ನ ಮಾಡಿ ತೋರಿಸ್ತಿದೆ. ಕೊಲ್ಕತ್ತಾದಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದವ್ರು ಈಗ ಎರಡನೇ ಪಂದ್ಯವನ್ನೂ ಗೆಲ್ಲೋ ಸನಿಹದಲ್ಲಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ 288 ರನ್ಗಳ ಮುನ್ನಡೆ ಸಾಧಿಸಿತ್ತು. ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಗಳಿಸಿದ್ದು ಕೇವಲ 201 ರನ್ಗಳು ಮಾತ್ರ. ಎರಡನೇ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿ ಟೋಟಲ್ಲಾಗಿ 548 ರನ್ಸ್ ಕಲೆ ಹಾಕಿದೆ. ಹಾಗೇ ಭಾರತಕ್ಕೆ 549 ರನ್ಗಳ ಗುರಿ ನೀಡಿ ಡಿಕ್ಲೇರ್ ಘೋಷಿಸಿದೆ. ನಾಲ್ಕನೇ ದಿನದಾಟದ ಕೊನೇ ಸೆಷನ್ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಬ್ಯಾಟಿಂಗ್ನಲ್ಲಿ ಅಟ್ಟರ್ ಫ್ಲ್ಯಾಪ್ ಆಗಿದೆ. ಟೀಂ ಇಂಡಿಯಾ ಓಪನರ್ಗಳಾದ ಯಶಸ್ವಿ ಕೈಸ್ವಾಲ್ ಮತ್ತು ಕೆಎಲ್ ರಾಹುಲ್ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ.. ಜೈಸ್ವಾಲ್ 13 ರನ್ ಗಳಿಸಿ ಕ್ಯಾಚ್ ಕೊಟ್ರೆ ಕೆಎಲ್ ರಾಹುಲ್ 6 ರನ್ ಗಳಿಗೆ ಪೆವಿಲಿಯನ್ ಸೇರಿದ್ದಾರೆ. ಇನ್ನು ನಂಬರ್ 3ನಲ್ಲಿ ಸಾಯಿ ಸುದರ್ಶನ್ ಬ್ಯಾಟಿಂಗ್ಗೆ ಬಂದು 2 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ನಂಬರ್ 4ನಲ್ಲಿ ಕುಲ್ದೀಪ್ ಯಾದವ್ ಬ್ಯಾಟಿಂಗ್ಗೆ ಬಂದಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕುಲ್ದೀಪ್ 134 ಬಾಲ್ಗಳನ್ನ ಫೇಸ್ ಮಾಡಿ 19 ರನ್ ಗಳಿಸಿದ್ದಕ್ಕೆ ಈಗ ಸೆಕೆಂಡ್ ಇನ್ನಿಂಗ್ಸ್ನಲ್ಲಿ ನಂಬರ್ 4ಗೆ ಬಡ್ತಿ ನೀಡಿದ್ದಾರೆ. ನಾಲ್ಕು ರನ್ ಗಳಿಸಿರೋ ಕುಲ್ದೀಪ್ ಐದನೇ ದಿನದಾಟದಲ್ಲಿ ಸುದರ್ಶನ್ ಜೊತೆ ಬ್ಯಾಟಿಂಗ್ ಆರಂಭಿಸಲಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 27 ರನ್ಸ್ ಕಲೆ ಹಾಕಿದೆ. 90.1 ಓವರ್ ಬಾಕಿ ಇದ್ದು ಈ ಮ್ಯಾಚ್ ಗೆಲ್ಬೇಕು ಅಂದ್ರೆ ಐದನೇ ದಿನ 522 ರನ್ಸ್ ಕಲೆ ಹಾಕ್ಬೇಕಿದೆ. ಟಾರ್ಗೆಟ್ ನೋಡಿದಾಗ ಭಾರತ ಪಂದ್ಯ ಗೆಲ್ಲೋದಂತೂ ಕನಸಿನ ಮಾತು. ಅಟ್ಲೀಸ್ಟ್ ಡ್ರಾ ಮಾಡಿಕೊಳ್ಳೋಕೆ ಟ್ರೈ ಮಾಡ್ಬೋದು. ಅಂದ್ರೆ ಐದನೇ ದಿನದಾಟದಲ್ಲಿ ಇಡೀ ದಿನ ಆಲೌಟ್ ಆಗದಂತೆ ನೋಡಿಕೊಳ್ಬೇಕು. ಮೂರನೇ ಸೆಷನ್ ಮುಕ್ತಾಯದ ವೇಳೆಗೆ ಭಾರತದ ಬ್ಯಾಟರ್ಸ್ ಔಟ್ ಆಗದೇ ಉಳಿದಿದ್ರೆ ಮ್ಯಾಚ್ ಡ್ರಾ ಆಗೋ ಸಾಧ್ಯತೆ ಇದೆ. ಆದ್ರೆ ಅದು ಅಷ್ಟು ಈಸಿ ಇಲ್ಲ. ಯಾಕಂದ್ರೆ ಸೌತ್ ಆಫ್ರಿಕಾ ಮಾಡಿರೋ ಪ್ಲ್ಯಾನ್ ಹಾಗೇ ಇದೆ.
5ನೇ ದಿನದಾಟದ ಚಾಲೆಂಜಸ್!
ಸೌತ್ ಆಫ್ರಿಕಾ ಸೆಟ್ ಮಾಡಿರೋ ಬಿಗ್ ಟಾರ್ಗೆಟ್
ಫಾರ್ಮ್ ನಲ್ಲಿ ಇಲ್ಲದ ಟೀಂ ಇಂಡಿಯಾ ಬ್ಯಾಟರ್ಸ್
ಯಶಸ್ವಿ ಜೈಸ್ವಾಲ್ & ಕೆಎಲ್ ರಾಹುಲ್ ಬೇಗ ಔಟ್
ಕುಲ್ದೀಪ್ ಯಾದವ್ ನಂ.4 ಸ್ಲಾಟ್ ನಲ್ಲಿ ಬ್ಯಾಟಿಂಗ್
ನಾಲ್ಕನೇ ದಿನದಾಟದಲ್ಲಿ ಇಡೀ ದಿನ ಬ್ಯಾಟಿಂಗ್

ನೋಡಿರಿ

