ತುಂಬಿದ ಸಭೆಯಲ್ಲೇ ಮಹಿಳಾ ಸಚಿವೆಗೆ ಕಿಸ್! – ವೇದಿಕೆಯಲ್ಲೇ ಸಚಿವರಿಂದ ಅಸಭ್ಯ ವರ್ತನೆ!
ಕ್ರೊಯೇಷಿಯಾದ ವಿದೇಶಾಂಗ ಸಚಿವರೊಬ್ಬರು ತುಂಬಿದ ಸಭೆಯಲ್ಲಿ ಜರ್ಮನ್ ಮಹಿಳಾ ಸಚಿವೆಯ ಕೆನ್ನೆಗೆ ಕಿಸ್ ಸ್ವಾಗತಿಸಿದ ಆಘಾತಕಾರಿ ಘಟನೆ ನಡೆದಿದೆ. ಸಚಿವ ಮಹಿಳಾ ಸಚಿವೆಗೆ ಕಿಸ್ ನೀಡಿ ಸ್ವಾಗತಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡಾನ್ ಗ್ರಿಲಿಕ್ ರಾಡ್ಮನ್ ಎಂಬುವವರು ಜರ್ಮನ್ ಸಚಿವೆಗೆ ಮುತ್ತಿಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಗ್ರೂಪ್ ಫೋಟೋ ಸೆಷನ್ ವೇಳೆ ಈ ಕೃತ್ಯವೆಸಗಿದ್ದಾರೆ. ಅವರ ವರ್ತನೆಗೆ ಸುತ್ತಲಿದ್ದ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಸ್ವತಃ ಜರ್ಮನ್ ಸಚಿವೆಯೂ ಶಾಕ್ ಆಗಿದ್ದಾರೆ. ಸಚಿವನ ವರ್ತನಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಎಣ್ಣೆ ಮತ್ತಿನಲ್ಲಿ ಹಾವಿಗೆ ಕಿಸ್ ಕೊಟ್ಟ! – ಹಾವಿನ ಕೋಪಕ್ಕೆ ಶಿವನ ಪಾದ ಸೇರಿಬಿಟ್ಟ!
ವೈರಲ್ ಆದ ವಿಡಿಯೋದಲ್ಲಿ ತಮ್ಮ ಜರ್ಮನ್ ಸಹವರ್ತಿ ಅನ್ನಾಲೆನಾ ಬೇರ್‌ಬಾಕ್ ಅವರ ಬಳಿ ಆಗಮಿಸಿದ್ದಾರೆ. ಬಳಿಕ ಅವರ ಕೈ ಕುಲುಕಿದ್ದಾರೆ. ಬಳಿಕ ತುಂಬಿದ ಸಭೆಯಲ್ಲಿ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ವೇಳೆ ಸುತ್ತಲಿದ್ದವರೆಲ್ಲಾ ಇವರನ್ನೇ ರಫ್ ಅಂತ ನೋಡಿ ಮುಖ ಬೇರೆಡೆ ತಿರುಗಿಸಿಕೊಂಡಿದ್ದಾರೆ. ಕ್ಷಣದಲ್ಲೇ ಅವರು ವಾಸ್ತವಕ್ಕೆ ಬಂದು ಏನು ತೋಚದೇ ಸುಮ್ಮನೆ ನಿಂತು ಬಿಟ್ಟಿದ್ದಾರೆ.
ಸಚಿವನ ಈ ವರ್ತನೆಯನ್ನು ಕ್ರೊಯೇಷಿಯಾದ ಮಾಜಿ ಪ್ರಧಾನಿ ಜಡ್ರಾಂಕಾ ಕೊಸೋರ್ ಅವರ ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯನ್ನು ಹಿಂಸಾತ್ಮಕವಾಗಿ ಚುಂಬಿಸುವುದು ಕೂಡ ಹಿಂಸೆ ಅಲ್ಲವೇ ಎಂದು ಅವರು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಗೋರ್ಡನ್, ಸಮಸ್ಯೆ ಏನು ಎಂದು ನನಗೆ ಗೊತ್ತಾಗುತ್ತಿಲ್ಲ, ನಾವು ಯಾವಾಗಲೂ ಪರಸ್ಪರ ಬೆಚ್ಚನೆಯ ಸ್ವಾಗತ ಮಾಡುತ್ತೇವೆ. ಇದೊಂದು ಸಹೋದ್ಯೋಗಿಗೆ ಬೆಚ್ಚಗಿನ ಮಾನವ ಸ್ವಾಗತವಾಗಿದೆ ಎಂದು ಅವರು ಹೇಳಿದ್ದಾರೆ.