IND Vs NZ 3ನೇ ಪಂದ್ಯಕ್ಕೆ ಮುಕ್ತಾಯ? – ಗುವಾಹಟಿಯಲ್ಲೇ ಭಾರತಕ್ಕೆ T20I ಸರಣಿ?
ಬ್ಯಾಟಿಂಗ್ ನೋಡಿಯೇ ನಡುಗಿದ ಕಿವೀಸ್

ನಾಗ್ಪುರದಲ್ಲಿ 48 ರನ್ಗಳಿಂದ ಗೆದ್ದಿದ್ದ ಭಾರತ ರಾಯ್ಪುರದಲ್ಲಿ 7 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈಗ ಆಪರೇಷನ್ ಗುವಾಹಟಿ ಅಂತಾ 3ನೇ ಪಂದ್ಯಕ್ಕೆ ರೆಡಿಯಾಗಿದೆ. ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 3ನೇ ಟಿ-20ಐ ಪಂದ್ಯ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಸ್ಟ್ ವಿನ್ ಮ್ಯಾಚೇ ಆಗುತ್ತೆ. ಯಾಕಂದ್ರೆ ಭಾರತ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಕೊಳ್ಳೋಕೆ ನೋಡಿದ್ರೆ ಅತ್ತ ಸರಣಿಯಲ್ಲಿ ಜೀವಂತವಾಗಿರೋಕೆ ನ್ಯೂಜಿಲೆಂಡ್ ಶತಾಯ ಗತಾಯ ಗೆಲ್ಲಲೇಬೇಕಿದೆ.
ಇದನ್ನೂ ಓದಿ : ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಅರ್ಧಶತಕ – 2ನೇ T20I ನ್ಯೂಜಿಲೆಂಡ್ ವಿರುದ್ಧ ಗೆದ್ದ ಭಾರತ
ಭಾರತದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ನ್ಯೂಜಿಲೆಂಡ್ ಟಿ-20ಐ ಮಾದರಿಯಲ್ಲಿ ಪಲ್ಟಿ ಹೊಡೆದಿದೆ. ಅದ್ರಲ್ಲೂ ಟೀಂ ಇಂಡಿಯಾ ಆಟಗಾರರ ಬ್ಯಾಟಿಂಗ್ಗೆ ಬೆವರಿಳಿದಿದೆ. ಐದು ಪಂದ್ಯಗಳ ಸರಣಿಯಲ್ಲಿ ಆಲ್ರೆಡಿ 2 ಪಂದ್ಯಗಳಲ್ಲಿ ಸೋತಿರೋ ನ್ಯೂಜಿಲೆಂಡ್ ಸರಣಿ ಸೋಲಿನ ಹೊಸ್ತಿಲಿನಲ್ಲಿದೆ. ಭಾನುವಾರ ಗುವಾಹಟಿಯಲ್ಲಿ ನಡೆಯಲಿರೋ ಮೂರನೇ ಪಂದ್ಯದಲ್ಲಿ ಗೆದ್ರೆ ಮಾತ್ರವೇ ರೇಸ್ನಲ್ಲಿ ಉಳ್ಕೊಳ್ತಾರೆ. ಹೀಗಾಗಿ ಪಂದ್ಯ ಗೆದ್ದು ಕಂ ಬ್ಯಾಕ್ ಮಾಡೋಕೆ ಗೇಮ್ ಪ್ಲ್ಯಾನ್ ಶುರು ಮಾಡಿದ್ದಾರೆ. ಮತ್ತೊಂದೆಡೆ ಭಾರತ ಇದೇ ಕನ್ಸಿಸ್ಟೆನ್ಸಿಯಲ್ಲೇ ಸರಣಿ ಕೈವಶ ಮಾಡಿಕೊಳ್ಳೋ ಕಾನ್ಫಿಡೆನ್ಸ್ನಲ್ಲಿದೆ. ಹಾಗೇ ಮೂರನೇ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ 2 ಬದಲಾವಣೆಯ ನಿರೀಕ್ಷೆ ಇದೆ.
3ನೇ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ & ಅಕ್ಷರ್ ಕಂ ಬ್ಯಾಕ್!
ಇನ್ನು ಸರಣಿಯ ಮೂರನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಬಹುದು. ಗಾಯದ ಕಾರಣ ಉಪನಾಯಕ ಅಕ್ಷರ್ ಪಟೇಲ್ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈಗ, ಅಕ್ಷರ್ ಪಟೇಲ್ ಮೂರನೇ ಪಂದ್ಯಕ್ಕೆ ಕಂ ಬ್ಯಾಕ್ ಮಾಡುವ ನಿರೀಕ್ಷೆ ಇದೆ. ಆದ್ರೆ ಎರಡನೇ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕುಲದೀಪ್ ಯಾದವ್ ಅವರನ್ನು ಬೆಂಚ್ ಮೇಲೆ ಕೂರಿಸಬೇಕಾಗಬಹುದು. ಹಾಗೇ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಕಂ ಬ್ಯಾಕ್ ಮಾಡ್ತಾರೆ. ಹೀಗಾಗಿ 2ನೇ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದ ಕುಲ್ದೀಪ್ ಯಾದವ್ ರನ್ನು ಹೊರಗಿಡೋ ಸಾಧ್ಯತೆ ಇದೆ. ಹರ್ಷಿತ್ ರಾಣಾ ಬೆಂಚ್ ಕಾಯಿಸಬಹುದು. ಉಳಿದಂತೆ ಬ್ಯಾಟಿಂಗ್ ಆರ್ಡರ್ನಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಇನ್ನು ಈ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಪ್ಲಸ್ ಮೈನಸ್.
ಉಭಯ ತಂಡಗಳ ಪ್ಲಸ್ & ಮೈನಸ್!
- ಭಾರತಕ್ಕೆ ಅಭಿಷೇಕ್ ಶರ್ಮಾ ಸಿಡಿದ್ರೆ ಗೆಲುವು ಫಿಕ್ಸ್
- ಕುಲ್ದೀಪ್ ಮತ್ತು ಬೂಮ್ರಾ ಇದ್ದಾಗ ಹೆಚ್ಚಿನ ಇಂಪ್ಯಾಕ್ಟ್
- ಮೊದಲ ಎರಡು ಪಂದ್ಯಗಳಂತೆಯೇ ಭಾರತಕ್ಕೆ ಬೇಕು ಬ್ಯಾಟಿಂಗ್
- ಸರಣಿಯಲ್ಲಿ ಉಳೀಬೇಕು ಅಂದ್ರೆ ನ್ಯೂಜಿಲೆಂಡ್ ಗೆ ಬ್ಯಾಟಿಂಗ್ ಸವಾಲು
- ಮಿಸ್ ಫೀಲ್ಡ್ ಮತ್ತು ಬೌಲಿಂಗ್ ಎಕ್ಸ್ ಪೆನ್ಸಿವ್ ಇರೋದೇ ಕಷ್ಟ

ನೋಡಿರಿ

