ಹೊಡಿಬಡಿ ಆಡಿದ್ರಷ್ಟೇ ಭಾರತ ಸೇಫ್ – ZIM ಅಗ್ನಿಪರೀಕ್ಷೆ ಗೆಲ್ತಾರಾ?
ರಿಂಕು ಔಟ್.. ಸಂಜುಗೆ ಯಾವ ಸ್ಲಾಟ್?

ಹೊಡಿಬಡಿ ಆಡಿದ್ರಷ್ಟೇ ಭಾರತ ಸೇಫ್ – ZIM ಅಗ್ನಿಪರೀಕ್ಷೆ ಗೆಲ್ತಾರಾ?ರಿಂಕು ಔಟ್.. ಸಂಜುಗೆ ಯಾವ ಸ್ಲಾಟ್?

ಸೌತ್ ಆಫ್ರಿಕಾ ವಿರುದ್ಧದ ಪಂದ್ಯದವರೆಗೂ ಟೀಂ ಇಂಡಿಯಾ ಜರ್ನಿ ಬಗ್ಗೆ ಚಿಂತೆನೇ ಇರ್ಲಿಲ್ಲ. ಆದ್ರೆ ಯಾವಾಗ ಹರಿಣಪಡೆ ಎದುರು ಹೀನಾಯವಾಗಿ ಸೋತ್ರೋ ಈಗ ಒಂದೊಂದು ಪಂದ್ಯವನ್ನೂ ಕ್ಯಾಲ್ಕುಲೇಟ್ ಮಾಡ್ಬೇಕಾಗಿದೆ. ಇವತ್ತು ಭಾರತ ವರ್ಸಸ್ ಜಿಂಬಾಬ್ವೆ ನಡುವೆ ಮ್ಯಾಚ್ ಇದ್ದು ಸೆಮಿಫೈನಲ್ ಟಿಕೆಟ್ ರೇಸ್​ನಲ್ಲಿ ಭಾರತ ಉಳೀಬೇಕು ಅಂದ್ರೆ ಈ ಪಂದ್ಯ ಗೆಲ್ಲಲೇಬೇಕು. ಜಸ್ಟ್ ಗೆದ್ರೆ ಸಾಕಾಗಲ್ಲ ಬಿಗ್ ಮಾರ್ಜಿನ್ ವಿಕ್ಟರಿ ಬೇಕು.

ಇದನ್ನೂ ಓದಿ : ಟಿ20 ವಿಶ್ವಕಪ್‌ನಿಂದ ಲಂಕಾ ಔಟ್ – ಕ್ಷಮೆಯಾಚಿಸಿದ ಶ್ರೀಲಂಕಾ ತಂಡದ ಕ್ಯಾಪ್ಟನ್

ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಅಂತರದಲ್ಲಿ ಸೋತಿದೆ. ಈ ಸೋಲಿನ ಸುಳಿಯಿಂದ ಬಿಡಿಸಿಕೊಂಡು ಸೆಮೀಸ್ ಟಿಕೆಟ್ ಗಿಟ್ಟಿಸಿಕೊಳ್ಳೋದೇ ಭಾರತಕ್ಕೆ ದೊಡ್ಡ ಸವಾಲಾಗಿದೆ. ಟೀಂ ಇಂಡಿಯಾದ ಅಸಲಿ ವಿಶ್ವಕಪ್ ಯುದ್ಧ ಈಗ ಶುರುವಾಗಿದೆ. ಈಗ ಜಿಂಬಾಬ್ವೆ ಮತ್ತು ವಿಂಡೀಸ್ ಎರುದು ಮಸ್ಟ್ ಌಂಡ್ ಶುಡ್ ವಿನ್ ಆಗ್ಬೇಕು. ಆದ್ರೂ ನೆಟ್​ರನ್ ರೇಟ್ ಲೆಕ್ಕಾಚಾರಗಳೂ ನಡೆಯುತ್ತೆ. ಅದ್ರಲ್ಲೂ ಜಿಂಬಾಬ್ವೆ ವಿರುದ್ಧದ ಇವತ್ತಿನ ಪಂದ್ಯವೇ ಬಾರೀ ಕುತೂಹಲ ಮೂಡಿಸಿದೆ. ಅದ್ರಲ್ಲೂ ಭಾರತ ಬ್ಯಾಟಿಂಗ್​ನಲ್ಲಿ ಸಿಡಿದೇಳಲೇಬೇಕಿದೆ.

ಟಾಪ್ ಆರ್ಡರ್ ಬ್ಯಾಟಿಂಗ್ ನಿಂದ ಬೇಕಿದೆ ಬಿಗ್ ಸ್ಕೋರ್!

ಭಾರತದ ಬೌಲಿಂಗ್ ಚೆನ್ನಾಗೇ ಇದ್ರೂ ಬ್ಯಾಟಿಂಗ್ ತೀರಾ ಕಳಪೆಯಾಗಿದೆ. ಕಳೆದ ಐದೂ ಪಂದ್ಯಗಳಲ್ಲೂ ಇದು ಎದ್ದು ಕಾಣಿಸಿದೆ. ಗ್ರೂಪ್ ಸ್ಟೇಜಲ್ಲಿ ಭಾರತ ನಾಲ್ಕೂ ಪಂದ್ಯಗಳನ್ನ ಗೆದ್ರೂ ಕೂಡ ಒಬ್ಬೊಬ್ರು ಇನಿಶಿಯೇಟ್ ತಗೊಂಡು ಪಂದ್ಯಗಳನ್ನ ಗೆಲ್ಲಿಸಿದ್ರು. ಬಟ್ ಎಲ್ಲರಿಂದ್ಲೂ ಸಾಥ್ ಸಿಕ್ಕಿಲ್ಲ. ಓಪನರ್ ಅಭಿಷೇಕ್ ಶರ್ಮಾ ಹ್ಯಾಟ್ರಿಕ್ ಡಕ್ ಔಟ್ ಆದ್ಮೇಲೆ ಸೂಪರ್ 8 ಮ್ಯಾಚಲ್ಲಿ 15 ರನ್​ಗಳಿಗೆ ಸೀಮಿತವಾದ್ರು. ಅಭಿಷೇಕ್ ಕಡೆಯಿಂದ ಇದುವರೆಗೆ ಕನ್ವಿನ್ಸಿಂಗ್ ರನ್ಸ್ ಬಂದಿಲ್ಲ. ತಿಲಕ್ ಅಂತೂ 118 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಬಿಗ್ ಸ್ಕೋರ್ ಇಲ್ವೇ ಇಲ್ಲ. ಸೂರ್ಯ ಕೂಡ ಅಮೆರಿಕ ವಿರುದ್ಧ ಆಡಿದ್ದು ಬಿಟ್ರೆ ನೆಕ್ಸ್​ಟ್ ಅವ್ರ ಸ್ಟ್ರೈಕ್ ರೇಟ್ ಕೂಡ ಮಕಾಡೆ ಮಲಗಿದೆ. ಇಶಾನ್ ಕಿಶನ್ ದಿ ಬೆಸ್ಟ್ ಇದೆ. 193 ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ ಜಿಂಬಾಬ್ವೆ ವಿರುದ್ಧದ ಮ್ಯಾಚಲ್ಲಿ ಎಲ್ರೂ ಜವಾಬ್ದಾರಿಯಿಂದ ಆಡ್ಬೇಕು. ಟಾಪ್ ಆರ್ಡರ್ ಬ್ಯಾಟರ್​ಗಳ ಕಡೆಯಿಂದ ಬಿಗ್ ಸ್ಕೋರ್ ಬರಲೇಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಹೊಡಿಬಡಿ ಆಟವಾಡ್ಬೇಕಿದೆ. ರನ್ ರೇಟ್ ಹೆಚ್ಚಿಸಿಕೊಳ್ಬೇಕು ಅಂದ್ರೆ ಬಿಗ್ ಮಾರ್ಜಿನ್ ವಿಕ್ಟರಿ ಬೇಕು. ಹೀಗಾಗಿ ಟಾಪ್ ಆರ್ಡರ್ ಬ್ಯಾಟರ್ಸ್ ಮೇಲೆ ಹೆಚ್ಚಿನ ಪ್ರೆಶರ್ ಇದೆ. ಅದೂ ಅಲ್ದೇ ಪಂದ್ಯ ನಡೆಯಲಿರೋ ಚೆಪಾಕ್ ಪಿಚ್ ಕೂಡ ಬ್ಯಾಟಿಂಗ್ ಫ್ರೆಂಡ್ಲಿಯಾಗಿದೆ. ಸ್ಪಿನ್ ಮತ್ತು ಸ್ಲೋ ಬೌಲಿಂಗ್‌ಗೆ ಹೆಚ್ಚು ಸಹಕಾರಿಯಾಗಿದೆ.  ಹೀಗಿದ್ದರೂ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸ್ಕೋರ್ ಕಲೆ ಹಾಕ್ಬೋದು. ಌಂಡ್ ಮೊದಲ ಇನ್ನಿಂಗ್ಸ್ ನಲ್ಲಿ 170-180 ಸ್ಕೋರ್‌ ನಿರೀಕ್ಷೆ ಮಾಡಬಹುದು. ಈ ಪಿಚ್​ನಲ್ಲಿ ಚೇಸಿಂಗ್‌ ಸ್ವಲ್ಪ ಕಷ್ಟಕರ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಮಾಡಿಕೊಳ್ಳೋ ಚಾನ್ಸಸ್ ಇದೆ. ಈ ಪಿಚ್ ಸ್ಪಿನ್ ಬೌಲಿಂಗ್‌ಗೆ ಅನುಕೂಲ ಇರೋದ್ರಿಂದ ಜಿಂಬಾಬ್ವೆಯನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸೋಕೆ ಅನುಕೂಲ ಮಾಡಿಕೊಡುತ್ತೆ.

ರಿಂಕು ಆಡದೇ ಇದ್ರೆ ಯಾರಿಗೆ ಚಾನ್ಸ್?

ಟೀಂ ಇಂಡಿಯಾದ ಫಿನಿಶರ್ ರಿಂಕು ಸಿಂಗ್ ಅವರ ತಂದೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಪ್ರಾಕ್ಟೀಸ್ ಅರ್ಧಕ್ಕೇ ಬಿಟ್ಟು ಮನೆಗೆ ತೆರಳಿದ್ರು. ತಂದೆಯ ಆರೋಗ್ಯ ವಿಚಾರಿಸಿಕೊಂಡು ವಾಪಸ್ ಟೀಮ್​ಗೆ ಜಾಯ್ನ್ ಆಗಿದ್ದಾರೆ. ಒಂದ್ವೇಳೆ ತಂದೆಗೆ ಮತ್ತೆ ಎಮರ್ಜೆನ್ಸಿಯಾದ್ರೆ ರಿಂಕು ತಂಡದಿಂದ ಹೊರಗುಳಿಯೋ ಚಾನ್ಸಸ್ ಇರುತ್ತೆ. ಹಾಗೇನಾದ್ರೂ ಆದ್ರೆ ಯಾರನ್ನ ಆಡಿಸ್ತಾರೆ ಅನ್ನೋ ಕುತೂಹಲವೂ ಇದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಮತ್ತೆ ಅವಕಾಶ ಪಡೆಯೋ ಸಾಧ್ಯತೆಗಳಿದೆ. ಹಾಗೇ ಯಾವ ಸ್ಲಾಟ್​ನಲ್ಲಿ ಆಡಿಸ್ತಾರೆ ಅನ್ನೋದು ಮುಖ್ಯವಾಗುತ್ತೆ. ತಿಲಕ್​ರನ್ನ ಡ್ರಾಪ್ ಮಾಡಿ ಸಂಜುಗೆ ಓಪನರ್ ಅವಕಾಶ ಕೊಟ್ಟು ಇಶಾನ್ ಕಿಶನ್​ರನ್ನ ಒನ್ ಡೌನ್ ಆಡಿಸೋ ಸಾಧ್ಯತೆಗಳೂ ಇದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ಌಂಡ್ ಬಿಗ್ ಹಿಟ್ಸ್ ಬರೋದೇ ಮುಖ್ಯವಾಗಿದೆ.

ಇನ್ನು ಭಾರತ ಮತ್ತು ಜಿಂಬಾಬ್ವೆ ನಡುವಿನ ಹೆಡ್ ಟು ಹೆಡ್ ರೆಕಾರ್ಡ್ಸ್ ನೋಡೋದಾದ್ರೆ ಟಿ-20ಐ ಫಾರ್ಮೆಟ್​​ನಲ್ಲಿ 13 ಪಂದ್ಯಗಳನ್ನು ಆಡಿದ್ದು, 10 ಬಾರಿ ಗೆಲುವು ಸಾಧಿಸಿದೆ. ಜಿಂಬಾಬ್ವೆ 3 ಪಂದ್ಯಗಳನ್ನ ಗೆದ್ದಿದೆ. ಈ ಎರಡೂ ತಂಡಗಳು ಮೊದಲ ಬಾರಿಗೆ 2010 ರಲ್ಲಿ ಆಫ್ರಿಕನ್ ದೇಶದಲ್ಲಿ ಎರಡು ಪಂದ್ಯಗಳ ಸರಣಿಗಾಗಿ ಮುಖಾಮುಖಿಯಾದವು. ಸುರೇಶ್ ರೈನಾ ನೇತೃತ್ವದ ಭಾರತ ತಂಡವು ಜಯಶಾಲಿಯಾಗಿ ಹೊರಹೊಮ್ಮಿತು. ಎರಡೂ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಮುಖಾಮುಖಿಯಾಗಿವೆ. 2022 ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 61 ರನ್ ಗಳಿಸಿ ಅಜೇಯರಾಗುವ ಮೂಲಕ ಗರಿಷ್ಠ ಸ್ಕೋರರ್ ಆಗಿದ್ರು. ಈ ಪಂದ್ಯವನ್ನ ಭಾರತ 71 ರನ್‌ಗಳಿಂದ ಗೆದ್ದಿತ್ತು. ಹೀಗಾಗಿ ಈ ಪಂದ್ಯದಲ್ಲೂ ಭಾರತ ಬಿಗ್ ಮಾರ್ಜಿನ್​ನಲ್ಲೇ ಗೆಲ್ಲೋ ನಿರೀಕ್ಷೆಯಲ್ಲಿದೆ. ಜೊತೆಗೆ ಸೆಮೀಸ್ ಟಿಕೆಟ್ ಬೇಕಂದ್ರೆ ಈ ಅಗ್ನಿಪರೀಕ್ಷೆಯನ್ನ ಗೆಲ್ಲಲೇಬೇಕಿದೆ.

Shantha Kumari

Leave a Reply

Your email address will not be published. Required fields are marked *