ಮ್ಯಾಚ್ ಗೆದ್ದ IND.. ಮನಗೆದ್ದ ZIM – ಓಪನರ್ ಚೇಂಜ್ ಆಗಿದ್ದೇ ಪ್ಲಸ್

ಮ್ಯಾಚ್ ಗೆದ್ದ IND.. ಮನಗೆದ್ದ ZIM – ಓಪನರ್ ಚೇಂಜ್ ಆಗಿದ್ದೇ ಪ್ಲಸ್

ಜಿಂಬಾಬ್ವೆ ವಿರುದ್ಧದ ಮಸ್ಟ್ ವಿನ್ ಮ್ಯಾಚಲ್ಲಿ ಭಾರತ ಭರ್ಜರಿಯಾಗೇ ಗೆದ್ದಿದೆ. ಪ್ಲೇಯಿಂಗ್ 11 ಚೇಂಜಸ್, ಟಾಪ್ ಆರ್ಡರ್ ಬ್ಯಾಟಿಂಗ್ ವೇರಿಯೇಷನ್ ಕ್ಲಿಕ್ ಆಗಿದೆ. ಹಾಗಂತ ಕಂಪ್ಲೀಟ್ ಡಾಮಿನೇಟ್ ಮಾಡಿ ಗೆದ್ದಿದ್ಯಾ ಅಂದ್ರೆ ಇಲ್ಲ. ಕೆಲ ವೀಕ್​ನೆಸ್​ಗಳೂ ರಿವೀಲ್ ಆಗಿದೆ. ಬಟ್ ಸೆಮಿಫೈನಲ್ ಹಾದಿಯಂತೂ ಕ್ಲಿಯರ್ ಆಗಿದೆ.

ಇದನ್ನೂ ಓದಿ : 11 ಗಂಟೆ ಆಕಾಶದಲ್ಲೇ ಸುತ್ತಾಟ – ಲ್ಯಾಂಡ್ ಆಗದೆ ವಾಪಸ್ ಆದ ಬೆಂಗಳೂರಿನಿಂದ ನೇಪಾಳಕ್ಕೆ ಹೋದ ವಿಮಾನ

ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ 2 ಚೇಂಜಸ್​ನೊಂದಿಗೆ ಕಣಕ್ಕಿಳಿದಿದ್ದ ಭಾರತಕ್ಕೆ ಎರಡೂ ಪ್ರಯೋಗಗಳೂ ಕೈ ಹಿಡಿದಿವೆ. ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ಸೇರಿದ್ದು ಪ್ಲಸ್ ಆಗಿದೆ. ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಬ್ಯಾಟರ್​ಗಳು ಅಬ್ಬರಿಸಿದ್ರು. ದಾಖಲೆಯ ಮೊತ್ತ ಕಲೆ ಹಾಕಿದ್ರು. 257 ರನ್‌ಗಳ ಬೃಹತ್ ಗುರಿ ನೀಡೋ ಮೂಲಕ ಈವರೆಗಿನ ಟಿ20 ವಿಶ್ವಕಪ್‌ಗಳಲ್ಲೇ ಭಾರತದ ಅತಿ ದೊಡ್ಡ ಟಾರ್ಗೆಟ್‌ ಮತ್ತು ಹಾಲಿ ವಿಶ್ವಕಪ್‌ನಲ್ಲಿ ಇದುವರೆಗಿನ ಅತಿ ದೊಡ್ಡ ಟಾರ್ಗೆಟ್‌ ಅನ್ನೋ ದಾಖಲೆಯನ್ನೂ ಬರೆಯಿತು.

ಭಾರತದ ಪರ ಬ್ಯಾಟರ್ ಗಳ ಸಿಡಿಲಬ್ಬರ!

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಈ ಪಂದ್ಯಕ್ಕೆ ಅಭಿಷೇಕ್ ಜೊತೆ ಸಂಜು ಇನ್ನಿಂಗ್ಸ್ ಆರಂಭಿಸಿದ್ದು ಪ್ಲಸ್ ಆಯ್ತು. ಇಬ್ಬರೂ ಹೊಡಿಬಡಿ ಆಟ ಶುರು ಮಾಡಿದ್ರು. ಇನ್ನೂ ಸಂಜು ಸೆಟಲ್ ಆದ್ರೂ ಅನ್ನೋ ಅಷ್ಟ್ರಲ್ಲೇ 24 ರನ್​ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಇಶಾನ್ ಕಿಶನ್ ಒನ್ ಡೌನ್ ಆಡಿದ್ದು ಅವ್ರೂ ಅದ್ಭುತವಾಗಿ ಬ್ಯಾಟ್ ಬೀಸಿದ್ರು. ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಜೊತೆ 42 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 72 ರನ್ ಸೇರಿಸಿದರು. ಇಶಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 24 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 38 ರನ್ ಗಳಿಸಿದರು. ಅಭಿಷೇಕ್ 55 ರನ್ ಗಳಿಸಿದ್ದು ಸೂರ್ಯ 33, ಪಾಂಡ್ಯ 50, ತಿಲಕ್ 44 ರನ್ ಗಳಿಸಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಈ ಎಲ್ಲಾ ಬ್ಯಾಟರ್ಸ್ 150+ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದು. ಟಿ-20 ವಿಶ್ವಕಪ್ ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಂ ಟಾಪ್ 6 ಬ್ಯಾಟರ್ಸ್ 150+ ಸ್ಟ್ರೈಕ್ ನಲ್ಲಿ ಬ್ಯಾಟ್ ಬೀಸಿದ್ರು. ಹೀಗಾಗಿ 20 ಓವರ್​ಗಳಲ್ಲೇ 256 ರನ್ ಕಲೆ ಹಾಕಿದ್ರು.

ಸೋತರೂ ಗೆದ್ದ ಜಿಂಬಾಬ್ವೆ.. ಬ್ರಿಯಾನ್ ಬೆನೆಟ್ ಅದ್ಭುತ ಆಟ!

ಬಿಗ್ ಟಾರ್ಗೆಟ್ ನೋಡಿದಾಗ್ಲೇ ಜಿಂಬಾಬ್ವೆ ರೀಚ್ ಆಗಲ್ಲ ಅನ್ನೋದು ಗೊತ್ತಿಲ್ಲ. ಬಟ್ ಲಾಸ್ಟ್ ಮೂಮೆಂಟ್​ವರೆಗೂ ಫೈಟ್ ಕೊಟ್ರು. ಆಲೌಟ್ ಆಗ್ಲಿಲ್ಲ. ಅದ್ರಲ್ಲೂ ಓಪನರ್ ಬ್ರಿಯಾನ್ ಬೆನೆಟ್ ಅಂತೂ ಲಾಸ್ಟ್ ಬಾಲ್​ವರೆಗೂ ಫೈಟ್ ಕೊಟ್ರು. 59 ಎಸೆತಗಳಲ್ಲಿ 97 ರನ್ ಕಲೆ ಹಾಕಿ ಅಜೇಯರಾಗಿ ಉಳಿದ್ರು. ಉಳಿದವ್ರಿಂದ ಸಾತ್ ಸಿಗ್ಲಿಲ್ಲ. ಹೀಗಾಗಿ 6 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿತು. ಈ ಮೂಲಕ ಭಾರತ 72 ರನ್​ಗಳಿಂದ ಪಂದ್ಯ ಗೆದ್ದುಕೊಳ್ತು. ಇನ್ನು ಬ್ರಿಯಾನ್ ಬೆನೆಟ್ ಕಳೆದ 5 ಪಂದ್ಯಗಳಲ್ಲಿ ನಾಲ್ಕನೇ ಬಾರಿ ಅಜೇಯರಾಗಿ ಉಳಿದ್ರು. ಈ ವಿಶ್ವಕಪ್ ಟೂರ್ನಿಯಲ್ಲಿ ಅವ್ರು ವಿಂಡೀಸ್ ವಿರುದ್ಧ ಮಾತ್ರವೇ ವಿಕೆಟ್ ಒಪ್ಪಿಸಿದ್ದು. ಮಾಡು ಇಲ್ಲವೇ ಮಡಿಯಂತಿದ್ದ ಮ್ಯಾಚಲ್ಲಿ ಭಾರತ ಗೆದ್ದು ಬೀಗಿದೆ. ಈಗ ಸೆಮೀಸ್ ಹಾದಿ ಕ್ಲಿಯರ್ ಆಗಿದೆ. ಅಂದ್ರೆ ಇನ್ಮುಂದೆ ಯಾವ ನೆಟ್​ ರನ್ ರೇಟ್ ಕೂಡ ಮ್ರಾಟ್ರ್ ಆಗಲ್ಲ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆದ್ರೆ ಸೆಮಿಫೈನಲ್ ಟಿಕೆಟ್ ಇಲ್ದಿದ್ರೆ ಟೂರ್ನಿಯಿಂದಲೇ ಔಟ್ ಆಗಲಿದೆ. ಭಾನುವಾರದ ಪಂದ್ಯದಲ್ಲಿ ಭಾರತದ ಭವಿಷ್ಯ ನಿರ್ಧಾರ ಆಗುತ್ತೆ.

Shantha Kumari

Leave a Reply

Your email address will not be published. Required fields are marked *