IND Vs ZIM ಫೈಟ್ ​ನಲ್ಲಿ ಟ್ವಿಸ್ಟ್ – 3 ಬದಲಾವಣೆ.. ಜೈಸ್ವಾಲ್ ಡ್ರಾಪ್?
ಗಿಲ್ & ಲಕ್ಷ್ಮಣ್ ಸ್ಟ್ರಾಟಜಿ ಹೇಗಿದೆ?

IND Vs ZIM ಫೈಟ್ ​ನಲ್ಲಿ ಟ್ವಿಸ್ಟ್ – 3 ಬದಲಾವಣೆ.. ಜೈಸ್ವಾಲ್ ಡ್ರಾಪ್?ಗಿಲ್ & ಲಕ್ಷ್ಮಣ್ ಸ್ಟ್ರಾಟಜಿ ಹೇಗಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಟಿ-20 ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮೊದಲ ಮ್ಯಾಚ್​ನಲ್ಲಿ ಜಿಂಬಾಬ್ವೆ ಬಾಯ್ಸ್ ವಿನ್ ಆಗಿದ್ರೆ ಸೆಕೆಂಡ್ ಮ್ಯಾಚ್​ನಲ್ಲಿ ಟೀಂ ಇಂಡಿಯಾ ದಾಖಲೆಯ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಮತ್ತೊಂದು ಗೆಲುವಿನ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸೋ ಜೋಶ್​ನಲ್ಲಿದ್ದಾರೆ ಭಾರತೀಯ ಆಟಗಾರರು. ಬಟ್ ಈ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಯಾರನ್ನೆಲ್ಲಾ ಕಣಕ್ಕೆ ಇಳಿಸ್ಬೇಕು? ಯಾರನ್ನ ಬೆಂಚ್ ಕಾಯಿಸ್ಬೇಕು ಅನ್ನೋದೇ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ದೊಡ್ಡ ಸವಾಲಾಗಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳೀತಾರೆ? ಯಾರನ್ನ ಡ್ರಾಪ್ ಮಾಡ್ತಾರೆ? ನಾಯಕ ಶುಭ್​ಮನ್ ಗಿಲ್ ಹಾಗೇ ಕೋಚ್ ವಿವಿಎಸ್ ಲಕ್ಷ್ಮಣ್ ಅವ್ರಿಗೆ ಇರೋ ಸವಾಲೇನು? ಈ  ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇಬ್ಬರು ಪತ್ನಿ ಜೊತೆಗೆ ಬಿಗ್‌ಬಾಸ್ ಗೆ ಎಂಟ್ರಿ – ದೊಡ್ಮನೆಯಲ್ಲಿ ಹೆಂಡ್ತಿಗಾಗಿ ಜಗಳ

ಟಿ-20 ವಿಶ್ವಕಪ್ ಬಳಿಕ ಭಾರತದ ಸೀನಿಯರ್ ಪ್ಲೇಯರ್ಸ್ ರೆಸ್ಟ್ ಮೂಡ್​ನಲ್ಲಿದ್ದಾರೆ. ಮತ್ತೊಂದ್ಕಡೆ ಯಂಗ್ ಟೈಗರ್ಸ್ ಜಿಂಬಾಬ್ವೆ ಸರಣಿದ್ದಾರೆ. ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನ ಖಾಯಂ ಮಾಡಿಕೊಳ್ಬೇಕು ಅಂದ್ರೆ ಈಗಿನಿಂದಲೇ ಈ ಯಂಗ್ ಪ್ಲೇಯರ್ಸ್ ಅಬ್ಬರಿಸಬೇಕಿದೆ. ಸೋ ಈಗ ಜಿಂಬಾಬ್ವೆ ಸರಣಿ ಒಂಥರಾ ಟೀಂ ಇಂಡಿಯಾದ ಬಲಿಷ್ಠ ತಂಡದ ಆಯ್ಕೆಗೆ ನಡೆಯುತ್ತಿರೋ ಆಡಿಷನ್ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಮುಂಬರುವ ಸರಣಿಗಳಲ್ಲಿ ಒಂದಷ್ಟು ಸೀನಿಯರ್ ಪ್ಲೇಯರ್ಸ್ ತಂಡಕ್ಕೆ ಕಮ್​ಬ್ಯಾಕ್ ಮಾಡ್ತಾರೆ. ಆ ಬಳಿಕ ಯಂಗ್​ಸ್ಟರ್ಸ್​​ಗೆ ಚಾನ್ಸ್ ಸಿಕ್ಕೇ ಸಿಗುತ್ತೆ ಅಂತಾ ಹೇಳೋಕೆ ಆಗಲ್ಲ. ಹೀಗಾಗಿ ಸಿಕ್ಕಿರೋ ಸಣ್ಣ ಟೈಮಲ್ಲೇ ಏನಾದ್ರೂ ಅಚೀವ್​ಮೆಂಟ್ ಮಾಡ್ಬೇಕಿದೆ. ಈ ಌಂಗಲ್​ನಲ್ಲಿ ನೋಡೋದಾದ್ರೆ ಅಭಿಷೇಕ್ ಶರ್ಮಾ ಈಗಾಗ್ಲೇ ಭರವಸೆಯ ಆಟಗಾರ ಅನ್ನೋ ನಂಬಿಕೆ ಗಳಿಸಿದ್ದಾರೆ. ಟೀಂ ಇಂಡಿಯಾದ ಡೆಬ್ಯು ಮ್ಯಾಚ್​ನಲ್ಲಿ ಡಕ್​ಔಟ್ ಆದ್ರೂ ಕೂಡ ಸೆಕೆಂಡ್ ಮ್ಯಾಚ್​ನಲ್ಲೇ ಗ್ರೇಟ್ ಕಮ್ ಬ್ಯಾಕ್ ಮಾಡಿ ಸೆಂಚುರಿ ಸಿಡಿಸಿದ್ರು. ಒಂದ್ ಲೆವೆಲ್​ಗೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸೋ ಉಳಿದ ಆಟಗಾರರಿಗೂ ಕೂಡ ತಮ್ಮ ಸ್ಥಾನವನ್ನ ಕನ್ಫರ್ಮ್ ಮಾಡುವ ಸವಾಲು ಇದೆ.

ಸದ್ಯ ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ-20 ಸಿರೀಸ್​ನಲ್ಲಿ ಈಗಾಗ್ಲೇ ಎರಡು ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ಸಮಬಲ ಸಾಧಿಸಿವೆ. ಮೊದಲ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 13 ರನ್​ಗಳ ರೋಚಕ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 100 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಇದೀಗ ಮೂರನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿ ನಿಂತಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ 3 ಬದಲಾವಣೆಗಳಾಗೋ ನಿರೀಕ್ಷೆ ಇದೆ. ಯಾಕಂದ್ರೆ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಇದೀಗ ತಂಡವನ್ನು ಸೇರಿಕೊಂಡಿದ್ದಾರೆ. ಈ ಮೂವರು ಆಟಗಾರರು ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಹೀಗಾಗಿ ಝಿಂಬಾಬ್ವೆ ಸರಣಿಗೆ ತೆರಳಲು ವಿಳಂಬವಾಗಿತ್ತು. ಇದೀಗ ಮೂವರು ಆಟಗಾರರು ಹರಾರೆಯಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋ ಚಾನ್ಸಸ್ ಇದೆ.

ಮೂವರು ಪ್ಲೇಯರ್ಸ್ ತಂಡಕ್ಕೆ ಮರಳಿದ್ರು ಅನ್ನೋ ಖುಷಿಗಿಂತ ಯಾರನ್ನ ಕೈಬಿಡ್ಬೇಕು ಅನ್ನೋ ಟೆನ್ಷನ್ನೇ ಜಾಸ್ತಿ ಇದೆ. ಐದು ಪಂದ್ಯಗಳ ಭಾರತ-ಜಿಂಬಾಬ್ವೆ ಟಿ20 ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಆದರೆ ಭಾರತದ ನೂತನ ನಾಯಕ ಶುಭಮನ್ ಗಿಲ್ ಹಾಗೂ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಹೊಸ ತಲೆನೋವು ಎದುರಾಗಿದೆ. ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾದ ಶಿವಂ ದುಬೆ, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಮತ್ತೆ ಸೇರ್ಪಡೆಗೊಂಡಿದ್ದು, ಅಂತಿಮ ತಂಡ ಫೈನಲ್ ಮಾಡೋದೇ ದೊಡ್ಡ ಸವಾಲಾಗಿದೆ. ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರರ ಆಗಮನದೊಂದಿಗೆ ಟೀಂ ಇಂಡಿಯಾದಲ್ಲಿ ಬದಲಾವಣೆ ಆಗಬೇಕಿದೆ. ನಾಯಕನಾಗಿ ಶುಭ್​ಮನ್ ಗಿಲ್ ತಂಡದಲ್ಲಿ ಇರೋದು ಕನ್ಫರ್ಮ್. ಅತ್ತ ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ  ಶತಕ ಸಿಡಿಸಿದರೆ, ರುತುರಾಜ್ ಗಾಯಕ್ವಾಡ್ 77 ರನ್ ಗಳಿಸಿದ್ರು. ಹಾಗೇ ರಿಂಕು ಸಿಂಗ್ ಕೂಡ ಹೊಡಿಬಡಿ ಎಂಬಂತೆ ಬಾರಿಸಿದ್ರು. ಹೀಗಾಗಿ ಟಾಪ್-3 ನಿಂದ ಮೂವರನ್ನು ಕೈ ಬಿಡೋಕೆ ಚಾನ್ಸೇ ಇಲ್ಲ. ಆದ್ರೆ ಸಾಯಿ ಸುದರ್ಶನ್ ಅವರನ್ನು ಕೈ ಬಿಟ್ಟರೆ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಸಿಗಬಹುದು. ಇನ್ನು ಧ್ರುವ್ ಜುರೇಲ್ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯಬಹುದು. ಅದೇ ರೀತಿ ರಿಯಾನ್ ಪರಾಗ್ ಬದಲಿಗೆ ಆಲ್​ರೌಂಡರ್ ಆಗಿ ಶಿವಂ ದುಬೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಮೂರು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ ಮೂರನೇ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು.

ಇಲ್ಲಿ ಇನ್ನೊಂದು ಌಂಗಲ್​ನಲ್ಲಿ ನೋಡಿದ್ರೆ ಯಶಸ್ವಿ ಜೈಸ್ವಾಲ್ ಬೆಂಚ್​ಗೆ ಸೀಮಿತರಾಗ್ತಾರಾ ಅನ್ನೋ ಅನುಮಾನ ಕೂಡ ಮೂಡಿದೆ. ಎರಡನೇ ಟಿ20ಯಲ್ಲಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಹಾಗೂ ಕ್ಲಾಸಿಕ್ ಇನ್ನಿಂಗ್ಸ್ ಮೂಲಕ ಫಾರ್ಮ್ ತೋರಿದ ಋತುರಾಜ್ ಗಾಯಕ್ವಾಡ್ ತಂಡದಲ್ಲಿ ಮುಂದುವರಿಯಲಿದ್ದಾರೆ. ನಾಯಕ ಗಿಲ್ ತಂಡದಲ್ಲಿ ಇರುವುದು ಅನಿವಾರ್ಯ, ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯವಿಲ್ಲದ ಕಾರಣ ಜೈಸ್ವಾಲ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎನ್ನಲಾಗಿದೆ. ಇನ್ನು, ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ 2 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದು, ಈ ಪಂದ್ಯದಲ್ಲಾದರೂ ಮಿಂಚಬೇಕಾದ ಅಗತ್ಯವಿದೆ. ಸ್ಪಿನ್ನರ್‌ ರವಿ ಬಿಷ್ಣೋಯ್‌ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. 2 ಪಂದ್ಯಗಳಲ್ಲಿ 8 ಓವರ್‌ ಎಸೆದಿರುವ ಅವರು ಕೇವಲ 24 ರನ್ ಬಿಟ್ಟುಕೊಟ್ಟು, 6 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ  ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ , ಶಿವಂ ದುಬೆ, ರಿಂಕು ಸಿಂಗ್ , ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯ್ , ಅವೇಶ್ ಖಾನ್ , ಮುಖೇಶ್ ಕುಮಾರ್ ಇಂದು ಕಣಕ್ಕಿಳಿಯೋ ಸಾಧ್ಯತೆ ಇದೆ.

ಟೀಮ್ ಇಂಡಿಯಾದಲ್ಲಿ ಈಗ ಯುವ ಆಟಗಾರರಿಗೆ ಅಕ್ಷರಶಃ ಅಗ್ನಿಪರೀಕ್ಷೆ ನಡೆಯುತ್ತಿದೆ. ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ಗೆದ್ದು ಕೊಟ್ಟ ತಂಡದಲ್ಲಿದ್ದ ಆಟಗಾರರ ಪೈಕಿ ಮೂವರು ಅನುಭವಿಗಳು ನಿವೃತ್ತಿ ತೆಗೆದುಕೊಂಡರೆ, ಮತ್ತೆ ಕೆಲವರು ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಹೀಗಾಗಿ ಆಡುವ 11ರ ಬಳಗದಲ್ಲಿ ಖಾಲಿಯಾದ ಸ್ಥಾನಗಳನ್ನು ತುಂಬಿರುವ ಯುವ ಆಟಗಾರರು ತಮ್ಮ ಸಾಮರ್ಥ್ಯ ಅನಾವರಣ ಪಡಿಸಿ ತಂಡದಲ್ಲಿ ಖಾಯಂ ಆಗಿ ಉಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದ್ಕಡೆ ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ಜಿಂಬಾಬ್ವೆ ಕಳೆದ ಪಂದ್ಯದಲ್ಲಿ ಮುಗ್ಗರಿಸಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದೆ. ನಾಯಕ ಸಿಕಂದರ್‌ ರಝಾ ಆಲ್ರೌಂಡ್‌ ಪ್ರದರ್ಶನ ನೀಡುತ್ತಿದ್ದು, ಇತರರಿಂದ ಸೂಕ್ತ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *