ಅಭಿಷೇಕ್ ಫ್ಲಾಪ್, ಪ್ರಭ್ಸಿಮ್ರಾನ್ IN? ಶಿವಂ ದುಬೆ ಕೋಕ್ ಶೆಡ್ಗೆಗೆ ಚಾನ್ಸ್?
ಸರಣಿ ಗೆಲ್ಲಲು ಶ್ರೇಯಸ್ ಪ್ಲ್ಯಾನ್

ಜಿಂಬಾಂಬೆ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಹೆಚ್ಚು ಬದಲಾವಣೆ ಮಾಡೋವುದ್ದಕ್ಕೆ ಹೋಗಲ್ಲ. ಯಾಕಂದ್ರೆ ಮೊದಲ ಮ್ಯಾಚ್‌ನಲ್ಲಿ ಒಳ್ಳೆ ಫರ್ಪಾಮೆನ್ಸ್ ಕೊಟ್ಟಿದ್ದಾರೆ. ಹಾಗಂತ ಬದಲಾವಣೆ ಮಾಡೋದೇ ಇಲ್ಲ ಅಂತ ಹೇಳುವುದ್ದಕ್ಕೆ ಆಗಲ್ಲ. ಕೆಲ ಬದಲಾವಣೆಯನ್ನ ಟೀಂ ಇಂಡಿಯಾ ಮಾಡಬಹುದು. ಹಾಗಿದ್ರೆ ಏನೆಲ್ಲಾ ಬದಲಾವಣೆ ಮಾಡಬಹುದು ಅನ್ನೋದ್ದನ್ನ ನೋಡೋಣ ಬನ್ನಿ.
ಅಶೋಕ್ ಶರ್ಮಾಗೆ ಸಿಗಲ್ವಾ ಮತ್ತೊಂದು ಚಾನ್ಸ್?
ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಅಶೋಕ್ ಶರ್ಮಾ ಚೊಚ್ಚಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ನಾಲ್ಕು ಓವರ್‌ಗಳಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟರಾದರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಹೀಗಾಗಿ ಇವರನ್ನ ಪ್ಲೇಯಿಂಗ್ 11 ನಿಂದ ಕೈ ಬಿಡುವ ಸಾಧ್ಯತೆ ಇದೆ. ಆದ್ರೆ ಒಂದೇ ಪಂದ್ಯದಲ್ಲಿ ಇವರ ಆಟವನ್ನ ಅಳೆಯುವುದ್ದಕ್ಕೆ ಆಗಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಇವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ಅಭಿಷೇಕ್ ಬದಲಿಗೆ ಪ್ರಭ್‌ಸಿಮ್ರಾನ್‌ಗೆ ಅವಕಾಶ?
ಇನ್ನೂ ಮಾಡಿದ್ರೆ ಬ್ಯಾಟಿಂಗ್ ವಿಭಾಗದಲ್ಲಿ 1 ಬದಲಾವಣೆಯಾಗಬಹುದು. ಅಭಿಷೇಕ್ ಶರ್ಮಾ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ವಿಶ್ವಕಪ್‌ನಲ್ಲಿ ಅವರ ಪ್ರದರ್ಶನವೂ ಕಳಪೆಯಾಗಿತ್ತು. ಇವರು ತಮ್ಮ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 73 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಮೊದಲ ಟಿ20ಯಲ್ಲಿ 8 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಹೀಗಾಗಿ ಅಭಿಷೇಕ್ ಬದಲಿಗೆ ಪ್ರಭ್‌ಸಿಮ್ರಾನ್‌ಗೆ ಅವಕಾಶ ನೀಡಬಹುದು. ಒಂದು ವೇಳೆ ಹೀಗಾದ್ರೆ ವೈಭವ್ ಜೊತೆ ಪ್ರಭ್‌ಸಿಮ್ರಾನ್ ಒಪನರ್ಸ್ ಆಗಿ ಅಖಾಡಕ್ಕೆ ಇಳಿಯಲಿದ್ದಾರೆ.
ಶಿವಂ ದುಬೆ OUT ಶೆಡ್ಗೆ IN?
ಇನ್ನು ಜಿಂಬಾಂಬೆ ವಿರುದ್ಧದ ಇವತ್ತಿನ ಪಂದ್ಯದಲ್ಲಿ ಶಿವಂ ದುಬೆ ಅವರನ್ನು ಕೈಬಿಡಬಹುದು. ಇವರ ಬದಲಿಗೆ ಸೂರ್ಯಾಂಶ್ ಶೆಡ್ಗೆಗೆ ಚಾನ್ಸ್ ನೀಡುವ ಸಾಧ್ಯತೆ ಇದೆ. ದುಬೆ ಸ್ಥಿರವಾಗಿ ಆಡುತ್ತಿದ್ದಾರೆ. ಆದ್ರೆ ಈ ಹಿಂದಿನ ಪಂದ್ಯದಲ್ಲಿ 4 ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಹೆಚ್ಚು ರನ್ ಕೊಟ್ಟವರು ಇವರೇ ಹೀಗಾಗಿ ಇವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಬಹುದು. ನಾಳೆ ಕೂಡ ಮ್ಯಾಚ್ ಇರುವುದ್ದರಿಂದ ನಾಳೆಯ ಪಂದ್ಯದಲ್ಲಿ ಶಿವಂ ದುಬೆಗೆ ಚಾನ್ಸ್ ನೀಡಬಹುದು.
ಇದನ್ನೂ ಓದಿ: ಸಚಿನ್ ದಾಖಲೆ ಮುರಿದ ಸೂರ್ಯವಂಶಿ – ಮಯಾಂಕ್ ಯಾದವ್ ಕಂಬ್ಯಾಕ್
ಮತ್ತೊಂದ್ಕಡೆ ಸ್ಪಿನ್ ಆಲ್‌ರೌಂಡರ್ ಹರ್ಷ್ ದುಬೆಯನ್ನು ಸೇರಿಸಬಹುದು. ಹರ್ಷ್ ದುಬೆ ಏಕದಿನ ಪಂದ್ಯಗಳಲ್ಲಿ ತುಂಬಾ ಚೆನ್ನಾಗಿ ಆಡಿದ್ದಾರೆ. ಆದ್ದರಿಂದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅವರನ್ನು ಟಿ20ಯಲ್ಲೂ ಪ್ರಯತ್ನಿಸಬಹುದು. ಬಟ್ ಇವತ್ತಿನ ಪಂದ್ಯದಲ್ಲಿ ಬದಲಾವಣೆ ತುಂಬಾ ಕಮ್ಮಿ. ಇಂದಿನ ಪಂದ್ಯದಲ್ಲಿ ಪ್ಲೇಯಿಂಗ್ 11 ಕೈ ಕೊಡ್ತು ಅಂದ್ರೆ ನಾಳೆ ಪಂದ್ಯಕ್ಕೆ ಕೆಲ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇನ್ನೂ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನವು ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿನ ಚಳಿಗಾಲದ ವಾತಾವರಣವು ಪವರ್‌ಪ್ಲೇ ಅವಧಿಯಲ್ಲಿ ಚೆಂಡು ಸ್ವಿಂಗ್ ಆಗಲು ಸಹಾಯ ಮಾಡುತ್ತದೆ. ಹಾಗಾಗಿ, ಆರಂಭಿಕ ಓವರ್‌ಗಳಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುವುದು ಅನಿವಾರ್ಯ. ಒಮ್ಮೆ ಚೆಂಡು ಹಳೆಯದಾದ ಮೇಲೆ ರನ್ ಗಳಿಸುವುದು ಸುಲಭ. ಹಾಗೇ ಪಿಚ್‌ನಲ್ಲಿರುವ ತೇವಾಂಶವು ಇರುವುದ್ದರಿಂದ ಆರಂಭಿಕ ಬ್ಯಾಟರ್‌ಗಳಿಗೆ ಸವಾಲಾಗಲಿದೆ. ಈ ಮೈದಾನದಲ್ಲಿ ಇತ್ತೀಚೆಗೆ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಯಶಸ್ಸು ಕಂಡಿವೆ. . ಹೀಗಾಗಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ನೋಡಿರಿ

