1 ಪಂದ್ಯ ಗೆದ್ರೆ ಭಾರತಕ್ಕೆ ಜಿಂಬಾಬ್ವೆ ಸರಣಿ ಕೈ ವಶ – ಸವಾಲುಗಳೆಷ್ಟು?
ಅನುಭವಿ ಆಟಗಾರರ ಆಬ್ಸೆನ್ಸ್ ನಡುವೆ ಜಿಂಬಾಬ್ವೆಗೆ ಹಾರಿದ್ದ ಯಂಗ್ ಟೈಗರ್ಸ್ ಆರಂಭದಲ್ಲಿ ಮುಗ್ಗರಿಸಿದ್ರೂ ಕೂಡ ಬಳಿಕ ಗ್ರೇಟ್ ಕಮ್ಬ್ಯಾಕ್ ಮಾಡಿದ್ರು. ಹಿರಿಯ ಆಟಗಾರರ ಕೊರತೆ ನಡುವೆಯೇ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಶುಭಮನ್ ಗಿಲ್ ಸಾರಥ್ಯದಲ್ಲಿ ಭಾರತದ ಟಿ20 ಕ್ರಿಕೆಟ್ ತಂಡ ಜಿಂಬಾಬ್ವೆ ನೆಲದಲ್ಲಿ ಅದ್ಭುತ ಆಟವಾಡುತ್ತಿದ್ದು, ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಈಗಾಗ್ಲೇ 3 ಪಂದ್ಯಗಳು ಮುಗಿದಿವೆ. ಈ ಪೈಕಿ ಜಿಂಬಾಬ್ವೆ 1 ಪಂದ್ಯ ಹಾಗೇ ಭಾರತ 2 ಪಂದ್ಯಗಳನ್ನ ಗೆದ್ದು ಕೊಂಡಿದೆ. ಹರಾರೆಯಲ್ಲಿರುವ ಸೂಪರ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಶನಿವಾರ ಸರಣಿಯ ನಾಲ್ಕನೇ ಪಂದ್ಯ ನಡೆಯಲಿದೆ. ಹಾಗೇನಾದ್ರೂ ಶನಿವಾರದ ಪಂದ್ಯದಲ್ಲಿ ಗಿಲ್ ಬಾಯ್ಸ್ ಗೆದ್ದು ಬೀಗಿದ್ರೆ ಟ್ರೋಫಿ ಗೆಲ್ಲೋದು ಕನ್ಫರ್ಮ್ ಆಗಲಿದೆ. ಬಟ್ ಈಗ ಕೋಚ್ ವಿವಿಎಸ್ ಲಕ್ಷ್ಮಣ್ ಹಾಗೇ ಗಿಲ್ಗೆ ಇರೋ ಮೇನ್ ಚಾಲೆಂಜ್ ಅಂದ್ರೆ ಪ್ಲೇಯಿಂಗ್ 11 ಆಯ್ಕೆ.
ಇದನ್ನೂ ಓದಿ: KING ಮೇಲೆ ಬಿದ್ದ PAK ಕಣ್ಣು – ಭಾರತವನ್ನೇ ಮರೆಯುತ್ತಾರಾ ಕೊಹ್ಲಿ?
4ನೇ ಪಂದ್ಯಕ್ಕೆ ಹೇಗಿದೆ ಟೀಂ?
ಜಿಂಬಾಬ್ವೆ ವಿರುದ್ಧದ ಸರಣಿಯ ಮೊದರ ಎರಡು ಪಂದ್ಯಗಳು ಹಾಗೂ ಮೂರನೇ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಮೂರನೇ ಪಂದ್ಯಕ್ಕೆ ನಾಲ್ಕು ಬದಲಾವಣೆಯನ್ನು ತಂದು ಕಣಕ್ಕಿಳಿದಿತ್ತು. ಸ್ಟಾರ್‌ಗಳಾದ ಸಂಜು ಸ್ಯಾಮ್ಸನ್ ವಿಕೆಟ್‌ಕೀಪರ್ ಆದ್ರೆ, ಯಶಸ್ವಿ ಜೈಸ್ವಾಲ್ ಓಪನರ್ ಆಗಿದ್ರು. ಹಾಗೇ ಶಿವಂ ದುಬೇ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ರು. ಈ ತ್ರಿಮೂರ್ತಿಗಳಿಗೆ ರಿಯಾನ್ ಪರಾಗ್, ಧ್ರುವ್ ಜುರೆಲ್, ಸಾಯಿ ಸುದರ್ಶನ್ ಜಾಗ ಬಿಟ್ಟುಕೊಟ್ಟರು. ಇನ್ನು ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ಅಚ್ಚರಿಯ ಬದಲಾವಣೆ ಎಂಬಂತೆ ವೇಗಿ ಮುಖೇಶ್ ಕುಮಾರ್ ಅವರನ್ನು ಹೊರಗಿಟ್ಟು ಎಡಗೈ ವೇಗಿ ಖಲೀಲ್ ಅಹ್ಮದ್ ಅವರನ್ನು ಆಡಿಸಲಾಗಿತ್ತು. ಈಗ ನಾಲ್ಕನೇ ಟಿ20 ಪಂದ್ಯದಲ್ಲೂ ಭಾರತ ತಂಡ ಕನಿಷ್ಠ 1 ಬದಲಾವಣೆ ತಂದುಕೊಳ್ಳುವ ಸಾಧ್ಯತೆ ಇದೆ. ಮೊದಲ ಮೂರು ಪಂದ್ಯಗಳಲ್ಲಿ ಆಡಿ ಪ್ರಮುಖ ವಿಕೆಟ್ ಟೇಕರ್ ಎನಿಸಿರುವ ಅನುಭವಿ ಬಲಗೈ ವೇಗಿ ಅವೇಶ್ ಖಾನ್ ಅವರಿಗೆ ವಿಶ್ರಾಂತಿ ನೀಡಿ ಮುಖೇಶ್ ಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆಟಗಾರರ ಮೇಲಿನ ಹೊರೆ ನಿರ್ವಹಣೆ ನಿಟ್ಟಿನಲ್ಲಿ ಫಾಸ್ಟ್ ಬೌಲರ್‌ಗಳನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ಮಾದರಿಯಲ್ಲಿ ಬದಲಾಯಿಸುವ ಮೂಲಕ ಬಳಕೆ ಮಾಡಿಕೊಳ್ಳುತ್ತಿದೆ. ಅವೇಶ್ ಖಾನ್ ಸ್ಥಾನದಲ್ಲಿ ಭಾರತ ತಂಡಕ್ಕೆ ಯಶಸ್ಸು ತಂದುಕೊಡುವ ಎಲ್ಲಾ ಸಾಮರ್ಥ್ಯ ಮುಖೇಶ್ ಕುಮಾರ್ ಅವರಲ್ಲಿದೆ.ಸೋ ಶನಿವಾರದ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ ಟೀಂ ಹೇಗಿರಬಹುದು ಅನ್ನೋದನ್ನ ನೋಡೋದಾದ್ರೆ, ಯಶಸ್ವಿ ಜೈಸ್ವಾಲ್ ಹಾಗೇ ಶುಭಮನ್ ಗಿಲ್ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ. 3ಣೇ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ, 4ನೇ ಸ್ಥಾನದಲ್ಲಿ ಋತುರಾಜ್ ಗಾಯಕ್ವಾಡ್ ಐದನೇ ಪ್ಲೇಸ್ನಲ್ಲಿ ರಿಂಕುಸಿಂಗ್ ಕಾಣಿಸಿಕೊಳ್ಳಬಹುದು. ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ಆಲ್ರೌಂಡರ್ ಶಿವಂ ದುಬೆ, ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಫಾಸ್ಟ್ ಬೌಲರ್ ಮುಖೇಶ್ ಕುಮಾರ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಎಡಗೈ ವೇರಿ ಖಲೀಲ್ ಅಹ್ಮದ್ ಸ್ಥಾನ ಪಡೆಯೋ ಸಾಧ್ಯತೆ ಇದೆ.
ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದೆ. ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಉಳಿದ ಎರಡು ಪಂದ್ಯಗಳಲ್ಲಿ 1 ಪಂದ್ಯ ಗೆದ್ದರೂ ಸಿರೀಸ್ ಕೈವಶ ಮಾಡಿಕೊಳ್ಳಲಿದೆ. ಮತ್ತೊಂದೆಡೆ ಬ್ಯಾಕ್ ಟು ಬ್ಯಾಕ್ 2 ಸೋಲು ಕಂಡಿರೋ ಜಿಂಬಾಬ್ವೆ ಪ್ಲೇಯರ್ಸ್ ಕೂಡ ನಾಲ್ಕನೇ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸೋ ಯೋಜನೆಯಲ್ಲಿದ್ದಾರೆ. ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೂ ತುಂಬಾನೇ ಮಹತ್ವದ್ದಾಗಿದೆ. ಒಂದು ವೇಳೆ ಭಾರತ ಗೆದ್ರೆ ಸರಣಿ ಕೈವಶವಾಗಲಿದೆ. ಹಾಗೇನಾದ್ರೂ ಜಿಂಬಾಬ್ವೆ ಗೆಲುವು ಸಾಧಿಸಿದ್ರೆ ಭಾನುವಾರ ನಡೆಯಲಿರುವ ಅಂತಿಮ ಪಂದ್ಯ ಹೈವೋಲ್ಟೇಜ್ ಪಡೆದುಕೊಳ್ಳಲಿದೆ.