IND Vs WI.. 5ನೇ ದಿನಕ್ಕೆ ಮ್ಯಾಚ್ – ಜಾನ್ & ಹೋಪ್ ಅಬ್ಬರಕ್ಕೆ IND ಶೇಕ್
ಮ್ಯಾಚ್ ಸೋತ್ರೂ ವಿಂಡೀಸ್ ಖುಷ್

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತವೇ ಕಂಪ್ಲೀಟ್ ಡಾಮಿನೇಟ್ ಮಾಡಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ವೆಸ್ಟ್ ಇಂಡೀಸ್ ತಂಡವನ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಆಲೌಟ್ ಮಾಡಿತ್ತು. ವಿಂಡೀಸ್ ಪರ ಯಾವೊಬ್ಬ ಬ್ಯಾಟರ್ ಕೂಡ ಅರ್ಧಶತಕ ಬಾರಿಸೋಕೂ ಬಿಟ್ಟಿರ್ಲಿಲ್ಲ. ಅರ್ಧಶತಕ ಇರ್ಲಿ 40 ರನ್ ಕೂಡ ಯಾರೂ ಹೊಡ್ದಿರಲಿಲ್ಲ. ಇನ್ನು ಎರಡನೇ ಪಂದ್ಯದಲ್ಲಿ ಫಸ್ಟ್ ಇನ್ನಿಂಗ್ಸ್ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ 5 ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಘೋಷಣೆ ಮಾಡಿತ್ತು. ಬಿಗ್ ಚೇಸ್ ಬೆನ್ನತ್ತಿದ ವಿಂಡೀಸ್ ಪಡೆ ಫಸ್ಟ್ ಇನ್ನಿಂಗ್ಸ್ನಲ್ಲಿ ಯಾರೊಬ್ರೂ ಅರ್ಧಶತಕ ಗಳಿಸೋಕೆ ಆಗ್ಲಿಲ್ಲ. 248 ರನ್‌ಗಳಿಗೆ ಆಲೌಟ್ ಆಗಿದ್ರು. ಮೊದಲ ಇನ್ನಿಂಗ್ಸ್ ಬಳಿಕ 270 ರನ್‌ಗಳ ಮುನ್ನಡೆಯಲ್ಲಿದ್ದ ಭಾರತ ಫಾಲೋ ಆನ್ ಘೋಷಿಸಿತು. ಹೀಗಾಗಿ ವೆಸ್ಟ್ ಇಂಡೀಸ್ ತಂಡ 3ನೇ ದಿನವೇ ತನ್ನ 2ನೇ ಇನ್ನಿಂಗ್ಸ್ ಕೂಡ ಶುರುಮಾಡಿತ್ತು. ಭಾರತದ ಡಾಮಿನೇಷನ್ ನೋಡ್ತಿದ್ರೆ ಮೂರನೇ ದಿನವೇ ಮ್ಯಾಚ್ ಮುಗಿಯುತ್ತೆ ಅನ್ಕೊಂಡ್ರೆ ಸೆಕೆಂಡ್ ಇನ್ನಿಂಗ್ಸ್ಗಲ್ಲಿ ವಿಂಡೀಸ್ ಪಡೆ ಕಂಪ್ಲೀಟ್ ರಿವರ್ಸ್ ಗೇರ್ನಲ್ಲಿ ಚಾರ್ಜ್ ಶುರು ಮಾಡಿದ್ರು. ಭಾರತದ ಲೆಕ್ಕಾಚಾರವನ್ನ ತಲೆ ಕೆಳಗಾಗಿಸಿದ್ರು.
ಇದನ್ನೂ ಓದಿ : ಪಾರ್ಟ್ನರ್ ಗಿಲ್ಲಿ ಬೇಡ ಎಂದ ಕಾವ್ಯ – ಡೊಡ್ಮನೆಯ ಒಂಟಿ, ಜಂಟಿ ಆಟಕ್ಕೆ ಕಡೆಗೂ ಬ್ರೇಕ್!
ಭಾರತದ ಬೌಲರ್ ಗಳನ್ನ ಕಾಡಿದ ಕ್ಯಾಂಪ್ಬೆಲ್ & ಶಾಯ್ ಹೋಪ್!
ಭಾರತದ ಫಾಲೋ ಆನ್ ಬಳಿಕ ಬ್ಯಾಟಿಂಗ್ ಶುರು ಮಾಡಿದ ವಿಂಡೀಸ್ ಆರಂಭದಲ್ಲೇ ವಿಕೆಟ್ ಕಳ್ಕೊಂಡಿತ್ತು. ಕೇವಲ 35 ರನ್‌ಗಳಿಗೆ 2 ವಿಕೆಟ್ ಉರುಳಿತ್ತು. ಆದ್ರೆ ಆ ಬಳಿಕ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯ್ ಹೋಪ್ ಜೋಡಿ ಭಾರತೀಯ ಬೌಲರ್ಗಳನ್ನ ಅಕ್ಷರಶಃ ಚೆಂಡಾಡಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ಮೂರನೇ ವಿಕೆಟ್ ಬೀಳೋ ಹೊತ್ತಿಗೆಲ್ಲಾ 212 ರನ್ಗಳನ್ನ ಪೇರಿಸಿದ್ರು. ಈ ಜೋಡಿಯನ್ನ ಬ್ರೇಕ್ ಮಾಡೋಕೆ ಜಡ್ಡುನೇ ಬರ್ಬೇಕಾಯ್ತು. 115 ರನ್ ಗಳಿಸಿದ್ದ ಕ್ಯಾಂಪ್ಬೆಲ್ ಜಡೇಜಾ ಅವ್ರ ಎಲ್ಬಿ ಡಬ್ಲ್ಯೂ ಬಲೆಗೆ ಬಿದ್ರು. ಆ ನಂತ್ರ ಕ್ಯಾಪ್ಟನ್ ರೋಸ್ಟನ್ ಚೇಸ್ 40 ರನ್‌ಗಳಿಗೆ ಆಟ ಮುಗಿಸಿದ್ರೆ ಶಾಯ್ ಹೋಪ್ 103 ರನ್ ಗಳಿಸಿ ಔಟಾದ್ರು. 311 ರನ್‌ಗಳಿಗೆ ವಿಂಡೀಸ್ ತಂಡ 9 ವಿಕೆಟ್ ಕಳ್ಕೊಂಡಿತ್ತು. ಆದ್ರೆ 10ನೇ ವಿಕೆಟ್ಗೆ ಜೊತೆಯಾದ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಟಾಪ್ ಆರ್ಡರ್ ಬ್ಯಾಟರ್ಗಳೇ ನಾಚುವಂತೆ ಬ್ಯಾಟಿಂಗ್ ಮಾಡಿದ್ರು. ಕೊನೇ ವಿಕೆಟ್ಗೆ ಇಬ್ಬರ ಜೊತೆಯಾಟದಲ್ಲಿ 79 ರನ್ಸ್ ಬಂತು. ಅಂತಿಮವಾಗಿ ಬುಮ್ರಾ 32 ರನ್ ಗಳಿಸಿದ್ದ ಸೀಲ್ಸ್ನ ಔಟ್ ಮಾಡೋ ಮೂಲಕ ಆಲೌಟ್ ಮಾಡಿದ್ರು. ಈ ಮೂಲಕ ವಿಂಡೀಸ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 390 ರನ್ ಗಳಿಸಿ ಆಲೌಟ್ ಆಯ್ತು. ಈ ಮೂಲಕ ಭಾರತಕ್ಕೆ 121 ರನ್‌ಗಳ ಟಾರ್ಗೆಟ್ ನೀಡಿತು. ಭಾರತ ಪರ ಬುಮ್ರಾ ಮತ್ತು ಕುಲ್ದೀಪ್ ತಲಾ 3 ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್ ಪಡೆದರು. ಜಡೇಜಾ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.
ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದ ವಿಂಡೀಸ್!
121 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ನಲ್ಲಿ ಕಣಕ್ಕಿಳಿದ ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ರು. ಜೈಸ್ವಾಲ್ ಅಂತೂ ಫಸ್ಟ್ ಬಾಲ್ನಿಂದಲೇ ಬಿಗ್ ಹಿಟ್ಗಳಿಗೆ ಟ್ರೈ ಮಾಡ್ತಿದ್ರು. ಯಾಕಂದ್ರೆ ನಾಲ್ಕನೇ ದಿನದಾಟದ ಅಂತ್ಯದಲ್ಲೇ ಮ್ಯಾಚ್ ಫಿನಿಶ್ ಮಾಡೋ ಮೈಂಡ್ಸೆಟ್ನಲ್ಲಿದ್ರು. ಫಸ್ಟ್ ಓವರ್ನಲ್ಲಿ 2 ಬೌಂಡರಿ ಕೂಡ ಬಾರಿಸಿದ್ರು. ಬಟ್ ನೆಕ್ಸ್ಟ್ ಓವರ್ನಲ್ಲೇ ಮತ್ತೊಂದು ಬಿಗ್ ಹಿಟ್ಗೆ ಕೈ ಹಾಕಿ ಕ್ಯಾಚ್ ಕೊಟ್ಟು ಔಟ್ ಆದ್ರು. ಆ ನಂತ್ರ ಕೆಎಲ್ ರಾಹುಲ್ ಜೊತೆಯಾದ ಸಾಯಿ ಸುದರ್ಶನ್ ತಾಳ್ಮೆಯುತವಾಗಿ ಬ್ಯಾಟ್ ಬೀಸಿದ್ರು.. ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಸಾಯಿ ಸುದರ್ಶನ್ 30 ರನ್ ಗಳಿಸಿದ್ರೆ ಕೆಎಲ್ ರಾಹುಲ್ 25 ರನ್ಸ್ ಗಳಿಸಿದ್ದಾರೆ. ಭಾರತ ತಂಡ 1 ವಿಕೆಟ್ ನಷ್ಟಕ್ಕೆ 63 ರನ್ಸ್ ಕಲೆ ಹಾಕಿದೆ. ಇನ್ನು ಈ ಪಂದ್ಯವನ್ನ ಭಾರತ ಗೆಲ್ಲೋಕೆ 58 ರನ್ಸ್ ಬೇಕಿದೆ. ಬಹುಶಃ ಐದನೇ ದಿನದಾಟದ ಮೊದಲ ಸೆಷನ್ನಲ್ಲೇ ಭಾರತ ವಿನ್ ಆಗೋದು ಪಕ್ಕಾ ಆಗಿದೆ. ವಿಂಡೀಸ್ ತಂಡ ಈ ಪಂದ್ಯ ಸೋಲೋದು ಕನ್ಫರ್ಮ್ ಆದ್ರೂ ಅವ್ರಿಗೆ ಒಂದಂತೂ ಸಮಾಧಾನ ಇದೆ.
23 ವರ್ಷಗಳ ಬಳಿಕ ಭಾರತದಲ್ಲಿ ಶತಕ ಸಿಡಿಸಿದ ವಿಂಡೀಸ್!
ಇನ್ನು ಈ ಪಂದ್ಯದ ಇನ್ನೊಂದು ಇಂಟ್ರೆಸ್ಟಿಂಗ್ ಅಂದ್ರೆ ಬರೋಬ್ಬರಿ 23 ವರ್ಷಗ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ದ್ವಿತೀಯ ಇನಿಂಗ್ಸ್ನಲ್ಲಿ ಕ್ಯಾಂಪ್ಬೆಲ್ 115 ರನ್ ಬಾರಿಸಿದ್ರು. ಆದ್ರೆ ಕಳೆದ 23 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಯಾವುದೇ ಬ್ಯಾಟರ್ ಭಾರತದ ಪಿಚ್ನಲ್ಲಿ ಟೆಸ್ಟ್ ಶತಕ ಬಾರಿಸಿರಲಿಲ್ಲ. 2002 ರಲ್ಲಿ ನಡೆದ ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ವಾವೆಲ್ಸ್ ಹಿಂಡ್ಸ್ 100 ರನ್ಗಳಿಸಿದ್ದೇ ಕೊನೆ. ಇದಾದ ಬಳಿಕ ವಿಂಡೀಸ್ ತಂಡದ ಯಾವುದೇ ಒಪನರ್ ಬ್ಯಾಟರ್ ಭಾರತೀಯ ಪಿಚ್ನಲ್ಲಿ ಮೂರಂಕಿ ಮೊತ್ತ ಗಳಿಸಿರಲಿಲ್ಲ. ಸದ್ಯಕ್ಕೆ ಮ್ಯಾಚ್ ಸೋತ್ರೂ ವಿಂಡೀಸ್ ತಂಡಕ್ಕೆ ಇದೊಂದೇ ಸಮಾಧಾನ.
ಲಾಸ್ಟ್ ಮೂಮೆಂಟ್ನಲ್ಲಿ ವಿಂಡೀಸ್ ತಂಡ ಭಾರತದ ವಿರುದ್ಧ ಫೈಟ್ ಕೊಟ್ರೂ ಕೂಡ ಮ್ಯಾಚ್ ಸೋಲೋದಂತೂ ಪಕ್ಕಾ. ಐದನೇ ದಿನಕ್ಕೆ ಪಂದ್ಯ ಕಾಲಿಟ್ಟಿದ್ದು ಮೊದಲ ಸೆಷನ್ನಲ್ಲೇ ಭಾರತ ಟಾರ್ಗೆಟ್ ರೀಚ್ ಆಗಿ ಮ್ಯಾಚ್ ವಿನ್ ಆಗುತ್ತೆ. ಅಲ್ಲಿಗೆ ವಿಂಡೀಸ್ ವಿರುದ್ಧ ಭಾರತ ಎರಡು ಪಂದ್ಯಗಳಲ್ಲೂ ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದಂತಾಗುತ್ತೆ.

ನೋಡಿರಿ

