ವಿಂಡೀಸ್ ಬೆಂಡೆತ್ತಿದ DSP ಸಿರಾಜ್ – TESTನಲ್ಲಿ ಮತ್ತೆ ರಾಹುಲ್ PASS
ಫಸ್ಟ್ ಡೇ IND ಪವರ್ ಶೋ ಹೇಗಿತ್ತು?

ವಿಂಡೀಸ್ ಬೆಂಡೆತ್ತಿದ DSP ಸಿರಾಜ್ – TESTನಲ್ಲಿ ಮತ್ತೆ ರಾಹುಲ್ PASSಫಸ್ಟ್ ಡೇ IND ಪವರ್ ಶೋ ಹೇಗಿತ್ತು?

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ತವರಿನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಸರಣಿ ಇದು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಮೊದಲ ಪಂದ್ಯ ನಡೀತಿದೆ. ಫಸ್ಟ್ ಡೇನೇ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವಿಂಡೀಸ್ ಬ್ಯಾಟರ್​ಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆರಿಬಿಯನ್ ತಂಡ ಬ್ಯಾಟಿಂಗ್​ನಲ್ಲಿ ಅಟ್ಟರ್ ಫ್ಲ್ಯಾಪ್ ಆಗಿದೆ. ಟಾಪ್ ಆರ್ಡರ್​ನಲ್ಲಿ ಸಿರಾಜ್ ಸಿಂಹಸ್ವಪ್ನವಾದ್ರೆ ಆ ಬಳಿಕ ಬುಮ್ರಾ ಮತ್ತು ಕುಲ್ದೀಪ್ ಕೂಡ ವಿಂಡೀಸ್​ ಪಡೆಯನ್ನ ಉಡೀಸ್ ಮಾಡಿದ್ದಾರೆ.

ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ ಯುವ ಟೆಸ್ಟ್‌ ಗೆದ್ದ ಭಾರತ U -19 ಟೀಂ – ವೈಭವ್‌ ಸೂರ್ಯವಂಶಿ ಭರ್ಜರಿ ಶತಕ

ಫಸ್ಟ್ ಇನ್ನಿಂಗ್ಸ್ ನಲ್ಲಿ 162 ರನ್ ಗಳಿಗೆ ವಿಂಡೀಸ್ ಆಲೌಟ್!

ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್​ಗೆ ಮೊಹಮ್ಮದ್ ಸಿರಾಜ್ ಫಸ್ಟ್ ಶಾಕ್ ಕೊಟ್ರು. ತೇಜ್​ನಾರಾಯಣ್​ ಚಂದ್ರಪಾಲ್ ಖಾತೆ ತೆರೆಯದೇ ಜುರೆಲ್​ಗೆ ಕ್ಯಾಚ್ ನೀಡಿ ಹೊರಟ್ರು. ಸಿರಾಜ್ ಬೆನ್ನಲ್ಲೇ ಬುಮ್ರಾ ವಿಂಡೀಸ್​ಗೆ ಸೆಕೆಂಡ್ ಶಾಕ್ ನೀಡಿದ್ರು. 7ನೇ ಓವರ್​ನಲ್ಲಿ ಬುಮ್ರಾ 8 ರನ್​ಗಳಿಸಿದ್ದ ಕ್ಯಾಂಪ್​ಬೆಲ್​ ವಿಕೆಟ್ ಪಡೆದ್ರು. ಹಾಗೇ ನೆಕ್ಸ್​ಟ್ 10 ಮತ್ತು 12 ನೇ ಓವರ್‌ಗಳಲ್ಲಿ ಮೊಹಮ್ಮದ್ ಸಿರಾಜ್​ ಮತ್ತೆ 2 ವಿಕೆಟ್ ಪಡೆದು ವಿಂಡೀಸ್​​ ಉಸಿರುಗಟ್ಟಿಸಿದ್ರು. ಮೊದ್ಲು 13 ರನ್​ಗಳಿಸಿದ್ದ ಬ್ರಾಂಡನ್ ಕಿಂಗ್ ಅವರನ್ನು ಬೌಲ್ಡ್ ಮಾಡಿದ ಸಿರಾಜ್ ನಂತರ ಅಲಿಕ್ ಅಥಾಂಜೆ 12ರನ್​ಗಳಿಸಿ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಆ ಬಳಿಕ  ವಿಕೆಟ್ ಕೀಪರ್ ಶಾಯ್ ಹೋಪ್ ಹಾಗೂ ನಾಯಕ ಚೇಸ್​ 5ನೇ ವಿಕೆಟ್​ ಜೊತೆಯಾಟದಲ್ಲಿ 48 ರನ್​ ಸೇರಿಸಿದರು. ಇನ್ನೇನು ಇಬ್ಬರು ಬಿಗ್ ಸ್ಕೋರ್​ನಲ್ಲಿ ಪಾರ್ಟ್ನರ್​ಶಿಪ್ ಬಿಲ್ಡ್ ಮಾಡ್ಬೇಕು ಅನ್ನುವಷ್ಟ್ರಲ್ಲಿ ಕುಲ್ದೀಪ್ ಯಾದವ್ ಬಿಗ್ ಬ್ರೇಕ್ ಥ್ರ್ಯೂ ತಂದುಕೊಟ್ರು. 26 ರನ್​ಗಳಿಸಿದ್ದ ಶಾಯ್ ಹೋಪರ್​ರನ್ನ ಏಷ್ಯಾಕಪ್ ಹೀರೋ ಕುಲ್ದೀಪ್ ಯಾದವ್​ ಬೌಲ್ಡ್ ಮಾಡಿದರು. ಌಂಡ್ ನೆಕ್ಸ್​ಟ್ 15 ರನ್​ಗಳ ಅಂತರದಲ್ಲಿ ನಾಯಕ ರೋಸ್ಟನ್ ಚೇಸ್ 43 ಎಸೆತಗಳಲ್ಲಿ 24 ರನ್​ಗಳಿಸಿ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ರು. ಇನ್ನು 34 ಎಸೆತಗಳಲ್ಲಿ 11 ರನ್​ಗಳಿಸಿದ್ದ ಪಿಯರ್​ರನ್ನ ವಾಷಿಂಗ್ಟನ್ ಸುಂದರ್ ಎಲ್​ಬಿ ಬಲೆಗೆ ಬೀಳಿಸಿದರು. 48 ಎಸೆತಗಳಲ್ಲಿ 4 ಬೌಂಡರಿ ಸಹಿತ 32 ರನ್​ಗಳಿಸಿದ ತಂಡದ ಗರಿಷ್ಠ ಸ್ಕೋರರ್ ಆಗಿದ್ದ ಗ್ರೀವ್ಸ್ ಬುಮ್ರಾ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ಜೊಮೆಲ್ ವಾರಿಕನ್ 8 ರನ್, ಜಹಾನ್ ಲೇನ್ 1ನರ್ಗಳಿಗೆ ಸೀಮಿತವಾದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 42ಕ್ಕೆ3, ಮೊಹಮ್ಮದ್ ಸಿರಾಜ್ 40ಕ್ಕೆ4, ಕುಲ್ದೀಪ್ ಯಾದವ್ 25ಕ್ಕೆ2, ವಾಷಿಂಗ್ಟನ್ ಸುಂದರ್ 9ಕ್ಕೆ1 ವಿಕೆಟ್ ಪಡೆದು ಭಾರತಕ್ಕೆ ನೆರವಾದ್ರು. ಈ ಮೂಲಕ ವಿಂಡೀಸ್ ಪಡೆ 44.1 ಓವರ್​ಗಳಲ್ಲಿ ಅಂದ್ರೆ 265 ಎಸೆತಗಳಲ್ಲಿ ವಿಂಡೀಸ್  162 ರನ್​ಗಳಿಗೆ ಆಲೌಟ್ ಆಯ್ತು.

ಯಶಸ್ವಿ ಜೈಸ್ವಾಲ್ ಮತ್ತು ರಾಹುಲ್ ತಾಳ್ಮೆಯುತ ಆಟ!

ಇನ್ನು ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ರು.  ಇಂಗ್ಲೆಂಡ್ ಸಿರೀಸ್​ನಲ್ಲಿ ಜೈಸ್ವಾಲ್ ಫಾಸ್ಟ್ ಆಗಿ ರನ್ ಸ್ಕೋರ್ ಮಾಡಿದ್ರೆ ಕೆಎಲ್ ರಾಹುಲ್ ಸ್ಲೋ ಆಗಿ ಇನ್ನಿಂಗ್ಸ್ ಬಿಲ್ಡ್ ಮಾಡ್ತಿದ್ರು. ಬಟ್ ಈ ಸಲ ಜೈಸ್ವಾಲ್ ಅಂತೂ ಕಂಪ್ಲೀಟ್ ಡಿಫೆನ್ಸಿವ್ ಮೋಡ್​ನಲ್ಲೇ ಬ್ಯಾಟ್ ಬೀಸಿದ್ರು. 36 ಬಾಲ್ ಫೇಸ್ ಮಾಡಿದ್ರೂ 4 ರನ್ ಅಷ್ಟೇ ಕಲೆ ಹಾಕಿದ್ರು. ಇನ್ನು ಫೈನಲ್ ಸೆಷನ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಟೈಮಲ್ಲಿ ಮಳೆ ಎಂಟ್ರಿಕೊಟ್ಟಿತ್ತು. ಈ ವೇಳೆ ಕೆಲ ಕಾಲ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು. ಆ ನಂತ್ರ ಮತ್ತೆ ಪಂದ್ಯ ಆರಂಭವಾಗಿದ್ದು ಈ ವೇಳೆ ಜೈಸ್ವಾಲ್ ಕಂಪ್ಲೀಟ್ ಅಗ್ರೆಸ್ಸಿವ್ ಮೋಡ್​ನಲ್ಲಿ ಬ್ಯಾಟ್ ಬೀಸ್ತಿದ್ರು. ರಾಹುಲ್ ಮತ್ತು ಜೈಸ್ವಾಲ್ ಇಬ್ಬರು ಕೂಡ 68 ರನ್​ಗಳ ಪಾರ್ಟ್ನರ್ ಶಿಪ್ ನೀಡಿದ್ರು. ಬಟ್ ಬ್ಯಾಡ್​ಲಕ್ ಅಷ್ಟ್ರಲ್ಲಿ ಜೈಸ್ವಾಲ್ ಜೇಡನ್ ಸೀಲ್ಸ್ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆದ್ರು. 57 ಎಸೆತಗಳಲ್ಲಿ 7 ಬೌಂಡರಿಸಹಿತ 36 ರನ್​ಗಳಿಸಿ ಪೆವಿಲಿಯನ್ ಸೇರಿದ್ರು. ಆ ನಂತ್ರ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಎಂಟ್ರಿಯಾದ್ರು. ಬಟ್ ಈ ಸಲ ಕೂಡ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. 19 ಬಾಲ್​ಗಳಲ್ಲಿ 7 ರನ್ ಗಳಿಸಿ ರೋಸ್ಟೊನ್ ಚೇಸ್ ಅವ್ರ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಗೆ ಬಂದ್ರು. ಒನ್ಸ್ ಅಗೇನ್ ಭಾರತದ ಪರ ಟೆಸ್ಟ್​ನಲ್ಲಿ ಕೆಎಲ್ ರಾಹುಲ್ ತುಂಬಾನೇ ಪೇಷನ್ಸ್ ಇಂದ ಬ್ಯಾಟಿಂಗ್ ಮಾಡಿದ್ರು. ಅರ್ಧಶತಕ ಕೂಡ ಕಂಪ್ಲೀಟ್ ಮಾಡಿದ್ರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 38 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ಸ್ ಕಲೆಹಾಕಿದೆ. ರಾಹುಲ್ 53 ರನ್ ಗಳಿಸಿದ್ರೆ ಗಿಲ್ 18 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

2025ರ ಕ್ಯಾಲೆಂಡರ್ ವರ್ಷದಲ್ಲಿ ಸಿರಾಜ್ ಅಬ್ಬರ!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದ ಮೊಹಮ್ಮದ್ ಸಿರಾಜ್ ಸದ್ಯ ವಿಂಡೀಸ್ ವಿರುದ್ಧದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೂ 4 ವಿಕೆಟ್ ಪಡೆದು ಶೈನ್ ಆದ್ರು. ಈ ಮೂಲಕ 2025ರ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ವಿಕೆಟ್​ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ಈ ವರ್ಷ ಸಿರಾಜ್​ ಇಲ್ಲಿಯವರೆಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ (29 ವಿಕೆಟ್‌ಗಳು), ನಾಥನ್ ಲಿಯಾನ್ (24 ವಿಕೆಟ್​) ಮತ್ತು ಕೆರಿಬಿಯನ್ ಬೌಲರ್ ಶಮರ್ ಜೋಸೆಫ್ (22 ವಿಕೆಟ್​) ಅವರನ್ನು ಹಿಂದಿಕ್ಕಿದ್ದಾರೆ. ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 20 ವಿಕೆಟ್, ಇಂಗ್ಲೆಂಡ್ ಟೆಸ್ಟ್ ಸಿರೀಸ್​ನಲ್ಲಿ 23 ವಿಕೆಟ್ ಪಡೆದಿದ್ದ ಸಿರಾಜ್ ಈಗ ನಾಲ್ಕು ವಿಕೆಟ್ ಪಡೆದಿದ್ದು ಟೀಂ ಇಂಡಿಯಾ ಬೌಲಿಂಗ್​ನಲ್ಲಿ ವೆಪನ್ ಆಗ್ತಿದ್ದಾರೆ.

Shantha Kumari