ಅಯ್ಯರ್ ಫೈಯರ್ ಗೆ WI ರೋಸ್ಟ್ – ಭಾರತದಲ್ಲೂ ಸದ್ದು ಮಾಡ್ತಿಲ್ಲ ಸಂಜು
ಡೆಬ್ಯೂನಲ್ಲೇ ನಡುಗಿಸಿದ ನಮನ್

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ-20ಐ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದಿದೆ. ಕ್ಯಾಪ್ಟನ್ ಆದ್ಮೇಲೆ ಶ್ರೇಯಸ್ ಅಯ್ಯರ್ ಫಾರ್ ದಿ ಫಸ್ಟ್ ಟೈಂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ರು. ಬಟ್ ಸಂಜು ಸ್ಯಾಮ್ಸನ್ ಮಾತ್ರ ಯಾಕೋ ಮತ್ತೆ ಸೈಲೆಂಟ್ ಆಗಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಯುಗ ಅಂತ್ಯ!- 21 ಆಟಕ್ಕೆ ವರ್ಷಗಳ ಭಾವುಕ ವಿದಾಯ
ಲಕ್ನೋದಲ್ಲಿ ನಡೆದ ಫಸ್ಟ್ ಮ್ಯಾಚಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 19.1 ಓವರ್‌ಗಳಲ್ಲಿ 171 ರನ್‌ಗಳನ್ನು ಕಲೆ ಹಾಕಿದ್ರು. ನಾಯಕ ಶಾಯ್ ಹೋಪ್ ಮತ್ತು ಶೆರ್ಪೆನ್ ರುದರ್ಪೊರ್ಡ್ ಅರ್ಧಶತಕ ಬಾರಿಸಿದ್ದು ಉಳಿದವ್ರೆಲ್ಲಾ ಬೇಗನೇ ವಿಕೆಟ್ ಒಪ್ಪಿಸಿದ್ರು. ಭಾರತದ ಪರ ನಮನ್ ಧೀರ್ ನಾಲ್ಕು ಓವರ್‌ಗಳಲ್ಲಿ 31 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು, ಅರ್ಷದೀಪ್ ಸಿಂಗ್ ಮತ್ತು ಮಯಾಂಕ್ ಯಾದವ್ ತಲಾ ಒಂದು ವಿಕೆಟ್ ಬೇಟೆಯಾಡಿದ್ರು. ಅಲ್ಲಿಗೆ 172 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಹಾಗೂ ಸಂಜು ಸ್ಯಾಮ್ಸನ್ ಬೇಗನೇ ಔಟ್ ಆಗ್ತಾರೆ. 35 ರನ್‌ಗಳಿಗೆ 2 ವಿಕೆಟ್ ಕಳ್ಕೊಂಡಿದ್ದ ಭಾರತದ ಪರ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಒಳ್ಳೆ ಪಾರ್ಟ್ನರ್ಶಿಪ್ ಬಂತು. ಕಿಶನ್ 37 ರನ್ ಬಾರಿಸಿದ್ರೆ ಶ್ರೇಯಸ್ ಅಯ್ಯರ್ 43 ಬಾಲಲ್ಲಿ 10 ಬೌಂಡರಿ ಹಾಗೇ 6 ಸಿಕ್ಸರ್ಗಳ ನೆರವಿನಿಂದ 102 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಮ್ಯಾಚ್ ವಿನ್ ಮಾಡ್ಸಿದ್ರು. 14.4 ಓವರ್ಗಳಲ್ಲೇ ಭಾರತ ಟಾರ್ಗೆಟ್ ಚೇಸ್ ಮಾಡಿ ಒನ್ ಸೈಡೆಡ್ ಆಗಿ ವಿನ್ ಆಗಿದೆ.
ಮೊದಲ ಟಾಸ್ಕ್ ಗೆದ್ದ ಭಾರತ!
5 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಲೀಡ್ ಸಾಧಿಸಿದ ಭಾರತ
ಟಿ-20ಐ ಡೆಬ್ಯೂನಲ್ಲೇ 3 ವಿಕೆಟ್ ತೆಗೆದು ಇಂಪ್ಯಾಕ್ಟ್ ಮಾಡಿದ ನಮನ್ ಧೀರ್
ಕ್ಯಾಪ್ಟನ್ ಆದ್ಮೇಲೆ ಮೊದಲ ಬಾರಿ ಶ್ರೇಯಸ್ ಬೆಸ್ಟ್ ಪ್ರದರ್ಶನ.. ಮೊದಲ ಶತಕ
ಕಳೆದ 4 ಪಂದ್ಯಗಳಿಂದ ಸಿಂಗಲ್ ಡಿಜಿಟ್ ಔಟ್ ಆಗಿರುವ ಸಂಜು ಬಗ್ಗೆ ನಿರಾಸೆ

ನೋಡಿರಿ

