RO-KO ಪವರ್.. KL ಖದರ್ – ವಿಂಡೀಸ್ ಬೇಟೆಗೆ ಬಲೆ ಬೀಸಿದ ಭಾರತ
20 ವರ್ಷ.. ಇನ್ನಾದ್ರೂ ಗೆಲ್ಲುತ್ತಾ WI?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಭಾನುವಾರ ಮಧ್ಯಾಹ್ನ ತಿರುವನಂಪುರದಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದೆ. 2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಹಾಗೇ ರೋಹಿತ್ ಮತ್ತು ಕೊಹ್ಲಿ ಕೂಡ ಆಡೋದ್ರಿಂದ ಈ ಪಂದ್ಯಕ್ಕಾಗಿ ಫ್ಯಾನ್ಸ್ ಕೂಡ ಫುಲ್ ಎಕ್ಸೈಟ್ ಆಗಿ ಕಾಯ್ತಿದ್ದಾರೆ.
ಇದನ್ನೂ ಓದಿ : ಕೌರ್ GOLDEN ಗುಡ್ ಬೈ? – ಸ್ಮೃತಿ ಮಂದಾನಗೆ ಒಲಿಯುತ್ತಾ ಕ್ಯಾಪ್ಟನ್ಸಿ?
ಭಾರತ ಮತ್ತು ವಿಂಡೀಸ್ ನಡುವೆ ಒಟ್ಟು ಮೂರು ದಿನಗಳ ಏಕದಿನ ಸರಣಿ ಹಾಗೇ 5 ಪಂದ್ಯಗಳ ಟಿ-20ಐ ಸರಣಿ ನಡೆಯಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯಕ್ಕೆ ತಿರುವನಂತಪುರ ಸಿದ್ಧವಾಗಿದ್ದು ಈಗಾಗ್ಲೇ ಉಭಯ ತಂಡಗಳ ಆಟಗಾರರು ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಕೊಹ್ಲಿಗೂ ಕೂಡ ಗ್ರ್ಯಾಂಡ್ ವೆಲ್ಕಂ ಸಿಕ್ಕಿದೆ. ಭಾರತಕ್ಕೆ ಈ ಸರಣಿ ಪ್ರತಿಷ್ಠೆಯಾದ್ರೆ ವಿಂಡೀಸ್ಗೆ ಮರುಜನ್ಮದ ಪ್ರಶ್ನೆಯಾಗಿದೆ.
ಕಳೆದ 20 ವರ್ಷಗಳಿಂದ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದೇ ಇಲ್ಲ!
ಕೆರೆಬಿಯನ್ ಕಲಿಗಳು ಅಂದ್ರೆ ಹಿಂದೆಲ್ಲಾ ಇಡೀ ಕ್ರಿಕೆಟ್ ಜಗತ್ತೇ ಶೇಕ್ ಆಗ್ತಿತ್ತು. ಆದ್ರೆ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ. 1970 ಮತ್ತು 1980ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಆದ್ರೆ 2006ರ ನಂತರ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ದ್ವಿಪಕ್ಷೀಯ ಏಕದಿನ ಸರಣಿಯನ್ನು ಸೋತಿಲ್ಲ. ಅಂದ್ರೆ ಕಳೆದ ಎರಡು ದಶಕಗಳಿಂದ ಟೀಮ್ ಇಂಡಿಯಾ ಸತತವಾಗಿ ಸರಣಿ ಗೆಲುವಿನ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಒಟ್ಟಾರೆಯಾಗಿ ಭಾರತ ಹಾಗೇ ವಿಂಡೀಸ್ ನಡುವೆ 142 ಏಕದಿನ ಪಂದ್ಯಗಳು ನಡೆದಿದ್ದು ಇದ್ರಲ್ಲಿ ಭಾರತ 72 ಪಂದ್ಯಗಳನ್ನ ಗೆದ್ದಿದ್ರೆ ವಿಂಡೀಸ್ 64 ಪಂದ್ಯಗಳನ್ನ ವಿನ್ ಆಗಿದ್ದಾರೆ. 2 ಪಂದ್ಯ ಟೈ ಆಗಿದ್ರೆ 4 ಪಂದ್ಯಗಳ ರಿಸಲ್ಟ್ ಬಂದಿಲ್ಲ. ಇಲ್ಲಿ ಓವರ್ ಆಲ್ ಅಂತಾ ನೋಡಿದಾಗ ಭಾರತ ಹೆಚ್ಚಿನ ಪಂದ್ಯಗಳನ್ನ ಗೆದ್ದಿದೆ. ಕಳೆದ 2 ದಶಕಗಳಿಂದ ವಿಂಡೀಸ್ ವಿರುದ್ಧ ಸರಣಿ ಸೋತೇ ಇಲ್ಲ. ಹೀಗಾಗಿ ಕೆರೆಬಿಯನ್ ದೈತ್ಯರು ಈ 20 ವರ್ಷಗಳ ಸೋಲಿನ ಸುಳಿಯಿಂದ ಹೊರ ಬರೋಕೆ ಕಾಯ್ತಾ ಇದ್ದಾರೆ. ಭಾರತಕ್ಕೆ ಈ ಸರಣಿ ಅಜೇಯವಿಜಯಯಾತ್ರೆಯ ಪ್ರತಿಷ್ಠೆಯಾಗಿದ್ರೆ ವಿಂಡೀಸ್ಗೆ ರೀಬರ್ತ್ ಪ್ರಶ್ನೆಯಾಗಿದೆ.
ಭಾರತದ ಪ್ಲಸ್ & ಮೈನಸ್!
ಭಾರತದ ಪರ ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಇಬ್ಬರ ಅನುಭವ
ಶುಭ್ ಮನ್ ಗಿಲ್, ಜೈಸ್ವಾಲ್, ರಾಹುಲ್ ರಂಥ ಸ್ಟಾರ್ ಬ್ಯಾಟಿಂಗ್ ಲೈನಪ್
ಭಾರತೀಯ ಪಿಚ್ ಗಳಲ್ಲಿ ಜಡೇಜಾ & ಕುಲ್ದೀಪ್ ಸ್ಪಿನ್ ವರ್ಕ್ ಆಗಬಹುದು
ನಮನ್ ಧೀರ್, ಗುರ್ನೂರ್ ಬ್ರಾರ್, ನಭಿ ತಂಡದಲ್ಲಿದ್ದು ಬೆಂಚ್ ಪರೀಕ್ಷೆ
ಮೈನಸ್ ಅಂದ್ರೆ ತಂಡದಲ್ಲಿ ಶ್ರೇಯಸ್, ಕಿಶನ್, ಬುಮ್ರಾ, ಪಟೇಲ್ ಇಲ್ಲ
ಮಿಡಲ್ ಆರ್ಡರ್ ನಲ್ಲಿ ಕೆಎಲ್ ಮೇಲೆ ಮಾತ್ರವೇ ಡಿಪೆಂಡ್ ಆಗಬೇಕು
ನಿತೀಶ್ ರೆಡ್ಡಿ ಮತ್ತು ನಮನ್ ಧೀರ್ ಇದ್ರೂ ಏಕದಿನದಲ್ಲಿ ಹೆಚ್ಚಿನ ಅನುಭವ ಇಲ್ಲ
ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್, ಪ್ರಸಿದ್ಧ್, ಆಕಿಬ್ ನಬಿ ಬೌಲಿಂಗ್ ಹೇಗೆ?
ಹೀಗೆ ಭಾರತ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಾ ಇದ್ರೂ ಒಂದಷ್ಟು ವೀಕ್ನೆಸ್ ಕೂಡ ಇದೆ. ಇದೆಲ್ಲವನ್ನೂ ಮೆಟ್ಟಿ ವಿಂಡೀಸ್ ಪಡೆಯನ್ನ ಹಿಮ್ಮೆಟ್ಟಬೇಕಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ನಲ್ಲಿ ಅನುಭವಿ ಆಟಗಾರ ಜೇಸನ್ ಹೋಲ್ಡರ್ಗೆ ರೆಸ್ಟ್ ನೀಡಿದ್ದು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಶೈ ಹೋಪ್ಗೆ ಕ್ಯಾಪ್ಟನ್ಸಿ ನೀಡಲಾಗಿದೆ. ಹೋಲ್ಡರ್ಗೆ ಭಾರತೀಯ ಪರಿಸ್ಥಿತಿಗಳಲ್ಲಿ ಅವರ ಅಪಾರ ಅನುಭವ ಮತ್ತು ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದರು. ಹೋಲ್ಡರ್ ಅನುಪಸ್ಥಿತಿ ವಿಂಡೀಸ್ಗೆ ಸ್ವಲ್ಪ ಹಿನ್ನಡೆಯಾಗಬಹುದು.
ವಿಂಡೀಸ್ ಪ್ಲಸ್ & ಮೈನಸ್!
ವಿಂಡೀಸ್ ತಂಡದ ಅತಿದೊಡ್ಡ ಶಕ್ತಿಯೇ ಬಿಗ್ ಹಿಟ್ಟಿಂಗ್ ಬ್ಯಾಟರ್ಸ್
ಶೇರ್ಫೇನ್ ರುದರ್ಫೋರ್ಡ್, ಶಾಯ್ ಹೋಪ್, ಜ್ಯುವೆಲ್ ಆಂಡ್ರ್ಯೂ ಅಗ್ರೆಶನ್
ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್ & ಜೇಡನ್ ಸೀಲ್ಸ್ ರ ವೇಗದ ಬೌಲಿಂಗ್
ಅನುಭವಿ ಓಪನರ್ ಜಾನ್ ಕ್ಯಾಂಪ್ಬೆಲ್ ಗಾಯದಿಂದ ಕಂ ಬ್ಯಾಕ್ ನಿಂದ ಬೂಸ್ಟ್
ವೀಕ್ ನೆಸ್ ಅಂದ್ರೆ ವಿಂಡೀಸ್ ಬ್ಯಾಟರ್ಸ್ ಸ್ಪಿನ್ನರ್ ಗಳ ಎದುರಲ್ಲಿ ಸ್ಟ್ರಗಲ್ಸ್
ವೈಯಕ್ತಿಯವಾಗಿ ಪಂದ್ಯ ಗೆಲ್ಲಿಸೋರು ಇದ್ರೂ 50 ಓವರ್ ಆಡುವುದು ಕಷ್ಟ
ಶಿಮ್ರಾನ್ ಹೆಟ್ಮೆಯರ್ ತಂಡದಲ್ಲಿ ಇಲ್ಲದಿರುವುದು ಮಧ್ಯಮ ಕ್ರಮಾಂಕ ವೀಕ್
ಹೀಗೆ ಎರಡೂ ತಂಡಗಳಲ್ಲೂ ಒಂದಷ್ಟು ಪ್ಲಸ್ ಌಂಡ್ ಮೈನಸ್ ಅಂತಾ ಇದ್ದೇ ಇದೆ. ಉಭಯ ತಂಡಗಳ ಕಂಪೇರಿಸನ್ ನೋಡಿದ್ರೆ ಭಾರತ ಸೂಪರ್ ಸ್ಟ್ರಾಂಗ್ ಆಗಿದೆ. ಪ್ರಸ್ತುತ ಏಕದಿನ ಐಸಿಸಿ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅತ್ತ ವೆಸ್ಟ್ ಇಂಡೀಸ್ ಪ್ರಸ್ತುತ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನದಲ್ಲಿದೆ. ಌಂಡ್ ಏಕದಿನ ವಿಶ್ವಕಪ್ ಆಡೋಕೆ ಡೈರೆಕ್ಟ್ ಟಿಕೆಟ್ ಕೂಡ ಸಿಕ್ಕಿಲ್ಲ. ಮುಂದಿನ ವರ್ಷ ನಡೆಯಲಿರುವ ಕ್ವಾಲಿಫೈಯರ್ (ಅರ್ಹತಾ ಸುತ್ತು) ಪಂದ್ಯಾವಳಿಯಲ್ಲಿ ಕಡ್ಡಾಯವಾಗಿ ಗೆಲ್ಲಬೇಕಾಗುತ್ತದೆ. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ವಿಂಡೀಸ್ ಗೆದ್ದರೂ ಸಹ ಅವರು ಅಗ್ರ 8 ರೊಳಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಅವರು ನೇರ ಅರ್ಹತೆಯ ಅವಕಾಶವನ್ನು ಅಧಿಕೃತವಾಗಿ ಕಳೆದುಕೊಂಡಿದ್ದಾರೆ. 2027 ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ನಡೆಯಲಿರುವ 10 ತಂಡಗಳ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ಗೆದ್ರೆ ಮಾತ್ರವೇ ವಿಶ್ವಕಪ್ ಆಡ್ತಾರೆ. ಇಲ್ದಿದ್ರೆ ಈ ಸಲವೂ ಮಿಸ್ ಮಾಡಿಕೊಳ್ತಾರೆ ಅಷ್ಟೇ.

ನೋಡಿರಿ

