ಅಭಿ-ಕಿಶನ್ ಪವರ್ ಜೋಡಿ  – ರಾಣಾ ಔಟ್.. DSP ಸಿರಾಜ್ ಇನ್!
ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ?

ಅಭಿ-ಕಿಶನ್ ಪವರ್ ಜೋಡಿ  – ರಾಣಾ ಔಟ್.. DSP ಸಿರಾಜ್ ಇನ್!ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ?

ಫೈನಲಿ ಟಿ-20 ವಿಶ್ವಕಪ್ ಯುದ್ಧ ಸ್ಟಾರ್ಟ್ ಆಯ್ತು. ಟೂರ್ನಿಯಲ್ಲಿ 20 ತಂಡಗಳಿದ್ರೂ ಎಲ್ಲರ ಕಣ್ಣು ಆಲ್ಮೋಸ್ಟ್ ಭಾರತದ ಮೇಲೇ ಇರುತ್ತೆ. ಯಾಕಂದ್ರೆ ಟೀಂ ಇಂಡಿಯಾ ಹಿಂದೆಂದಿಗಿಂತಲೂ ಸೂಪರ್ ಸ್ಟ್ರಾಂಗ್ ಆಗಿದೆ. ಬ್ಯಾಟಿಂಗ್​ನಲ್ಲಿ ಭಾರತವನ್ನ ಬೀಟ್ ಮಾಡೋದಿರ್ಲಿ ಹತ್ತಿರಕ್ಕೂ ಬರೋಕೆ ಆಗ್ತಿಲ್ಲ. ಅದ್ರಲ್ಲೂ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಸೆಂಟ್ರ್ ಆಫ್ ಅಟ್ರ್ಯಾಕ್ಷನ್.

ಇದನ್ನೂ ಓದಿ : RCBಗೆ ಹ್ಯಾಟ್ರಿಕ್ ಕಪ್ – ಡೆಲ್ಲಿ ಬೇಟೆಯಾಡಿದ ಸಿಂಹಿಣಿಯರು

ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಮ್ಯಾಚಲ್ಲೇ ಪಾಕಿಸ್ತಾನ ಮತ್ತು ನೆದರ್​ಲ್ಯಾಂಡ್ ತಂಡಗಳು ಮುಖಾಮುಖಿಯಾಗಿವೆ. ಹಾಗೇ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ  ಭಾರತ ಮತ್ತು ಅಮೆರಿಕ ತಂಡಗಳು ಕಣಕ್ಕಿಳಿಯಲಿದೆ. ಅಮೆರಿಕ ತಂಡದೆದುರು ಭಾರತವೇ ಗೆಲ್ಲೋದು ಅನ್ಸಿದ್ರೂ ಕೂಡ ಬಲಿಷ್ಠ ಪಡೆಯನ್ನೇ ಅಖಾಡಕ್ಕಿಳಿಸ್ಬೇಕಿದೆ.  ಯಾಕಂದ್ರೆ ಅಗ್ರೆಸಿವ್ ಫಾರ್ಮುಲಾದೊಂದಿಗೆ ಯುಎಸ್​​ ತಂಡವನ್ನ ಬಗ್ಗುಬಡಿದ್ರೆ ಪಾಯಿಂಟ್ಸ್ ಟೇಬಲ್​ನಲ್ಲಿ ಪ್ಲಸ್ ಆಗುತ್ತೆ. ಹೀಗಾಗಿ ಯಾರನ್ನೆಲ್ಲಾ ಕಣಕ್ಕಿಳಿಸಬೇಕು ಅನ್ನೋ ಚರ್ಚೆ ನಡೆವೆಯೇ ಟೀಂ ಇಂಡಿಯಾದಲ್ಲಿ ಮೇಜರ್ ಬದಲಾವಣೆ ಆಗಿದೆ. ಹರ್ಷಿತ್ ರಾಣಾ ವಿಶ್ವಕಪ್​​ ಟೂರ್ನಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ.

ರಾಣಾ ಔಟ್.. ವಿಶ್ವಕಪ್ ತಂಡ ಸೇರಿದ ಡಿಎಸ್ ಪಿ ಸಿರಾಜ್!

ಟಿ-20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಹರ್ಷಿತ್ ರಾಣಾ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಪ್ರಾಕ್ಟೀಸ್ ಟೈಮಲ್ಲಿ  ಮೊಣಕಾಲು ಗಾಯಕ್ಕೆ ತುತ್ತಾಗಿರೋ ರಾಣಾ ರಿಕವರ್ ಆಗೋಕೆ ಸ್ವಲ್ಪ ಟೈಂ ತಗೊಳ್ಳುತ್ತೆ. ಹೀಗಾಗಿ ರಾಣಾ ಬದಲಿಗೆ ಈಗ ಮೊಹಮ್ಮದ್ ಸಿರಾಜ್​ಗೆ ವಿಶ್ವಕಪ್ ಬಾಗಿಲು ಓಪನ್ ಆಗಿದೆ. ಭಾರತ ಪರ 45 ಟೆಸ್ಟ್‌, 50 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿರುವ ಅನುಭವಿ ವೇಗಿ ಡಿಎಸ್‌ಪಿ ಖ್ಯಾತಿಯ ಮೊಹಮ್ಮದ್ ಸಿರಾಜ್, ಭಾರತ ಟಿ20 ವಿಶ್ವಕಪ್ ತಂಡಕ್ಕೆ ಜಾಯ್ನ್ ಆಗಿದ್ದಾರೆ. ಸಿರಾಜ್ 2024ರ ಭಾರತ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಆದ್ರೆ ಭಾರತದ ಪರ ಟಿ-20ಐನಲ್ಲಿ ಕಾಣಿಸಿಕೊಂಡು ವರ್ಷವೇ ಕಳೆದಿದೆ. ಹೀಗಾಗಿ ಆರಂಭದಲ್ಲಿ ಪ್ಲೇಯಿಂಗ್ 11ನಲ್ಲಿ ಆಡಿಸ್ತಾರಾ ಅನ್ನೋದು ಕೂಡ ಗೊಂದಲ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ತಿಲಕ್ ವರ್ಮಾ

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ರಿಂಕು ಸಿಂಗ್

ಶಿವಂ ದುಬೆ

ಅಕ್ಷರ್ ಪಟೇಲ್

ವರುಣ್ ಚಕ್ರವರ್ತಿ

ಅರ್ಷದೀಪ್ ಸಿಂಗ್

ಜಸ್ಪ್ರೀತ್ ಬುಮ್ರಾ

ಉಳಿದಂತೆ ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಮತ್ತು ಮೊಹಮ್ಮದ್ ಸಿರಾಜ್ ಬೆಂಚ್ ಕಾಯಿಸಬಹುದು. ಅದೂ ಅಲ್ದೇ ವಿಶ್ವಕಪ್ ಟೂರ್ನಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯೋದ್ರಿಂದ ಭಾರತ ಪ್ರತೀ ಪಂದ್ಯವನ್ನೂ ಮಸ್ಟ್ ವಿನ್​ನಂತೆಯೇ ಗೆಲ್ಬೇಕು. ಯಾಕಂದ್ರೆ  ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪರ್ ಆಗಿರೋದು ಇಂಪಾರ್ಟೆಂಟ್ ಆಗುತ್ತೆ. ಅಟ್ ದಿ ಸೇಮ್ ಟೈಂ ಭಾರತ ಎಷ್ಟೇ ಬಲಿಷ್ಠವಾಗಿದ್ರೂ ಎದುರಾಳಿ ಅಮೆರಿಕವನ್ನ ಡಮ್ಮಿ ಅಂತಾ ಪರಿಗಣಿಸೋಕೆ ಆಗಲ್ಲ. ಯಾಕಂದ್ರೆ ಅಲ್ಲೂ ಕೂಡ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ನಾಯಕ ಮೊನಕ್ ಪಟೇಲ್, ಅಲಿ ಖಾನ್, ಕರ್ನಾಟಕ ಮೂಲಕ  ಸ್ಪಿನ್ನರ್ ನೋಸ್ತುಶ್ ಕೆಂಜಿಗೆ, ಮುಕ್ಕಮಲ್ಲಾ, ಸೌರಭ್ ನೇತ್ರವಲ್ಕರ್ ಸೇರಿದಂತೆ ಅನೇಕರು ಟ್ಯಾಲೆಂಟೆಡ್ ಇದ್ದಾರೆ. ಹೀಗಾಗಿ ಈ ಪಂದ್ಯ ಅಭಿಮಾನಿಗಳಲ್ಲಿ  ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ಪಂದ್ಯದ ಬಗ್ಗೆ ಹೇಳೋದಾದ್ರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಕೋಟ್ಯಂತರ ಭಾರತೀಯರು ಭಾರತೀಯರ ಬ್ಯಾಟಿಂಗ್ ಅಬ್ಬರ ನೋಡೋಕೆ ಕಾಯ್ತಿದ್ದಾರೆ. ಅಮೆರಿಕ ಪ್ಲೇಯರ್ಸ್ ಕೂಡ ಟಫ್ ಫೈಟ್ ಕೊಡೋಕೆ ರೆಡಿಯಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *