ಬಲಿಷ್ಠ ಭಾರತ.. ಬಲವಿಲ್ಲದ ಅಮೆರಿಕ – PAKನೇ ಸೋಲಿಸಿದ್ದ USA ಡಮ್ಮಿನಾ?
ಇಂಡಿಯನ್ಸ್ Vs ಇಂಡಿಯನ್ಸ್ ಆಗುತ್ತಾ?

ಬಲಿಷ್ಠ ಭಾರತ.. ಬಲವಿಲ್ಲದ ಅಮೆರಿಕ – PAKನೇ ಸೋಲಿಸಿದ್ದ USA ಡಮ್ಮಿನಾ?ಇಂಡಿಯನ್ಸ್ Vs ಇಂಡಿಯನ್ಸ್ ಆಗುತ್ತಾ?

ಗೊಂದಲ, ಗದ್ಧಲ, ಕುತೂಹಲಗಳ ನಡುವೆಯೇ ಟಿ-20 ವಿಶ್ವಕಪ್ ಅಖಾಡ ರಂಗೇರಿದೆ. ಟೂರ್ನಿಯ ಮೊದಲ ದಿನವೇ ಟೀಂ ಇಂಡಿಯಾ ಕೂಡ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಯುಎಸ್​ಎ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಹಾಗೇ ಈ ಮ್ಯಾಚ್​ನ ಇಂಡಿಯಾ ಗೆಲ್ಲೋದ್ರಲ್ಲಿ ಡೌಟೇ ಇಲ್ಲ. ಬಟ್ ಯುಎಸ್​ಎ ವಿರುದ್ಧದ ಪಂದ್ಯ ಭಾರತಕ್ಕೆ ಸಾಕಷ್ಟು ವಿಚಾರಗಳಿಂದ ತುಂಬಾನೇ ಮುಖ್ಯ ಆಗುತ್ತೆ.

ಇದನ್ನೂ ಓದಿ : ಇಂದಿನಿಂದ T20 ವಿಶ್ವಕಪ್‌ – 4 ಗಂಪು, 20 ಟೀಮ್, ಹೇಗಿದೆ ಅಖಾಡ?

ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ ಅಜೇಯವಾಗಿ ಮುನ್ನುಗ್ತಿರೋ ಭಾರತ ಟಿ-20ಐ ತಂಡ ಈ ಬಾರಿ ಮತ್ತೆ ಚಾಂಪಿಯನ್ಸ್ ಆಗೋ ರೇಸ್​ನಲ್ಲಿ ಫಸ್ಟ್ ಇದ್ದಾರೆ. ಈ ಹೈವೋಲ್ಟೇಜ್ ಜರ್ನಿಯಲ್ಲಿ ಯುಎಸ್​ಎ ವಿರುದ್ಧ ಮೊದಲ ಪಂದ್ಯ ಆಡಲು ಭಾರತ ತಂಡ ಸಜ್ಜಾಗಿದೆ. ಌಕ್ಚುಲಿ ಅಮೆರಿಕ ವಿರುದ್ಧದ ಪಂದ್ಯ ಅಂದ್ರೆ ಭಾರತಕ್ಕೆ ಒಂಥರಾ ಸ್ಪೆಷಲ್ ಇದ್ದಂತೆ. ಯಾಕಂದ್ರೆ ಆ ತಂಡದಲ್ಲೂ ಭಾರತೀಯ ಮೂಲದವ್ರ ದಂಡೇ ಇದೆ. ಜೊತೆಗೆ ಟೂರ್ನಿಯಲ್ಲಿ ಮುಂದೆ ಹೋಗೋಕೆ ತಂಡದ ಪ್ಲಸ್ ಌಂಡ್ ಮೈನಸ್​​ಗಳ ಕ್ಯಾಲ್ಕುಲೇಷನ್​ಗೆ ಒಂದು ಕ್ಲಿಯರ್ ಪಿಕ್ಚರ್ ಸಿಗುತ್ತೆ. ಗೆಲ್ತೀವಿ ಅನ್ನೋ ಕಾನ್ಫಿಡೆನ್ಸ್ ಇದ್ರೂ ಬ್ಯಾಟಿಂಗ್ ಆರ್ಡರ್, ಬೌಲಿಂಗ್ ಯುನಿಟ್, ಫೀಲ್ಡಿಂಗ್ ಹೀಗೆ ಟೂರ್ನಿ ಆರಂಭಕ್ಕೆ ಒಂದು ಐಡಿಯಾ ಸಿಗುತ್ತೆ. ಅಲ್ದೇ

ಅಮೆರಿಕ ತಂಡದ ಕ್ಯಾಪ್ಟನ್ ಭಾರತೀಯ ಮೂಲದ ಮೊನಾಂಕ್!

ಇಂಟ್ರೆಸ್ಟಿಂಗ್ ಅಂದ್ರೆ ಭಾರತದ ವಿರುದ್ಧ ಕಣಕ್ಕಿಳಿಯಲಿರೋ ಅಮೆರಿಕ ತಂಡದ ಕ್ಯಾಪ್ಟನ್ ಮೊನಾಂಕ್ ಪಟೇಲ್ ಭಾರತೀಯ ಮೂಲದವರೇ ಆಗಿದ್ದಾರೆ. ಗುಜರಾತ್ ನಲ್ಲಿ 1993ರ ಮೇ 1ರಂದು ಜನಿಸಿದರು. ಭಾರತದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದು ಅಂಡರ್ 16 ಮತ್ತು ಅಂಡರ್ 19 ಹಂತದ ಕ್ರಿಕೆಟ್ ನಲ್ಲಿ ಗುಜರಾತ್ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಆಡಿರುವ ಅನುಭವವೂ ಇದೆ. 2010ರಲ್ಲಿ ಅಮೆರಿಕದಿಂದ ಗ್ರೀನ್ ಕಾರ್ಡ್ ಸಿಕ್ಕ ಮೇಲೆ ಅಲ್ಲಿಯೇ ಇದ್ದಾರೆ. 2019ರಲ್ಲಿ ಅಮೆರಿಕದ ರಾಷ್ಟ್ರೀಯ ತಂಡದಲ್ಲಿ ಚಾನ್ಸ್ ಸಿಕ್ಕಿದ್ದು  2021ರಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. 2024ರ ಟಿ20 ವಿಶ್ವಕಪ್ ನಲ್ಲಿ ಮೊನಾಂಕ್ ನಾಯಕತ್ವದಲ್ಲೇ ಅಮೆರಿಕ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಸೋ ಈ ಸೀಸನ್​ನಲ್ಲೂ ಅಮೆರಿಕ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಅಮೆರಿಕ ಸ್ಕ್ವಾಡ್​ನಲ್ಲಿ 9 ಆಟಗಾರರು ಭಾರತೀಯ ಮೂಲದವ್ರೇ ಆಗಿದ್ದಾರೆ ಅನ್ನೋದೇ ವಿಶೇಷ.

ಇನ್ನು ಟಿ-20ಐ ಫಾರ್ಮೆಟ್​ನಲ್ಲಿ ಭಾರತ ಮತ್ತು ಅಮೆರಿಕ ತಂಡಗಳು ಒಂದು ಸಲ ಮಾತ್ರ ಮುಖಾಮುಖಿ ಆಗಿವೆ. 2024ರ ಟಿ20 ವಿಶ್ವಕಪ್ ನಲ್ಲಿ. ಆ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಜಯಗಳಿಸಿತು. ಈಗ  ಎರಡನೇ ಬಾರಿಗೆ ಮುಖಾಮುಖಿ ಆಗ್ತಿದ್ದಾರೆ. ಕ್ರಿಕೆಟ್​ನಲ್ಲಿ ಶಿಶುಗಳಂತಿರೋ ಅಮೆರಿಕ ತಂಡ ಬಲಿಷ್ಠ ಭಾರತೀಯ ತಂಡವನ್ನ ಹೇಗೆ ಫೇಸ್ ಮಾಡುತ್ತೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಇನ್ನು ಪಂದ್ಯ ನಡೆಯಲಿರುವ ವಾಂಖೆಡೆ ಸ್ಟೇಡಿಯಂ ಪಿಚ್ ಬಗ್ಗೆ ಹೇಳೋದಾದ್ರೆ ಬ್ಯಾಟಿಂಗ್ ಫ್ರೆಂಡ್ಲಿಯಾಗಿದೆ. ಫಸ್ಟ್ ಬ್ಯಾಟಿಂಗ್ ಮಾಡುವ ತಂಡಗಳು ನಾರ್ಮಲಿ 175 ರಿಂದ 190 ರನ್‌ಗಳ ನಡುವೆ ಸ್ಕೋರ್ ಮಾಡಿವೆ. ಚೇಸಿಂಗ್ ಮಾಡುವಂಥ ತಂಡಗಳು 60 ಟು 70 ಪರ್ಸೆಂಟ್ ಗೆಲುವಿನ ರೆಕಾರ್ಡ್ಸ್ ಹೊಂದಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಚೂಸ್ ಮಾಡಿಕೊಳ್ಳೋ ಚಾನ್ಸಸ್ ಜಾಸ್ತಿ ಇದೆ.

Shantha Kumari

Leave a Reply

Your email address will not be published. Required fields are marked *