USA ಮಣಿಸಿ ಸೂಪರ್ 8ಗೆ IND – ಟೀಂ ಇಂಡಿಯಾ ಅಬ್ಬರಕ್ಕೆ PAK ಶೇಕ್
ವಿಶ್ವಕಪ್ ರೇಸ್ ನಿಂದ ಪಾಕ್ ಔಟ್

USA ಮಣಿಸಿ ಸೂಪರ್ 8ಗೆ IND – ಟೀಂ ಇಂಡಿಯಾ ಅಬ್ಬರಕ್ಕೆ PAK ಶೇಕ್ವಿಶ್ವಕಪ್ ರೇಸ್ ನಿಂದ ಪಾಕ್ ಔಟ್

ಟಿ-20 ವಿಶ್ವಕಪ್ ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ಮಸ್ತ್ ಎಂಟರ್​ಟೈನ್ ಮೆಂಟ್ ನೀಡ್ತಿದೆ. ಸುಲಭವಾಗಿ ತೆಗೆದುಕೊಂಡ ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿವೆ. ಬುಧವಾರ ಭಾರತ ಮತ್ತು ಅಮೆರಿಕ ನಡುವೆ ಮ್ಯಾಚ್ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೂ ತುಂಬಾನೇ ಇಂಪಾರ್ಟೆಂಟ್. ಯಾಕಂದ್ರೆ ಈಗಾಗ್ಲೇ ಭಾರತ ಆಡಿರುವ ತನ್ನ ಎರಡೂ ಪಂದ್ಯಗಳನ್ನ ಗೆದ್ದುಕೊಂಡಿದೆ. ಮತ್ತೊಂದೆಡೆ ಅಮೆರಿಕ ಕೂಡ 2 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಬುಧವಾರ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್ 8 ಹಂತಕ್ಕೇರಲಿದೆ. ಬಟ್ ಇಲ್ಲಿ ಭಾರತದ ಬದ್ಧವೈರಿ ಪಾಕಿಸ್ತಾನ ಮಾತ್ರ ಈ ಕದನದಲ್ಲಿ ಭಾರತವೇ ಗೆಲ್ಲಲಿ ಅಂತಾ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಪಾಕಿಸ್ತಾನ ವಿಶ್ವಕಪ್ ಜರ್ನಿಯನ್ನ ಮುಂದುವರಿಸಬೇಕು ಅಂದ್ರೆ ಭಾರತ ಗೆಲ್ಲಲೇಬೇಕು.

ಭಾರತದ ಪರ ಪಾಕ್ ಪ್ರಾರ್ಥನೆ!

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಭಾರತ ಮತ್ತು ಯುಎಸ್‌ಎ ನಡುವೆ ಗುಂಪು ಹಂತದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ಪಾಕಿಸ್ತಾನ ಅಭಿಮಾನಿಗಳೊಂದೊಗೆ ಆಟಗಾರರು ಕೂಡ ಪ್ರಾರ್ಥಿಸುತ್ತಿದ್ದಾರೆ. ಯಾಕಂದ್ರೆ ವಿಶ್ವಕಪ್ ಟೂರ್ನಿಯ ಎ ಗುಂಪಿನಲ್ಲಿ ಟೀಂ ಇಂಡಿಯಾ ಮತ್ತು ಯುಎಸ್​ಎ ತಂಡಗಳು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಭಾರತ ವಿರುದ್ಧ ಅಮೆರಿಕಾ ಗೆದ್ದರೆ ಪಾಕಿಸ್ತಾನ ಸೂಪರ್-8ನಿಂದ ಬಹುತೇಕ ಹೊರಗುಳಿಯಲಿದೆ. ಯಾಕಂದ್ರೆ, ಯುಎಸ್ಎ ತನ್ನ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-8 ಗೆ ಅರ್ಹತೆ ಪಡೆಯುತ್ತದೆ. ಭಾರತ ಈಗಾಗಲೇ ಎರಡ ಪಂದ್ಯಗಳನ್ನು ಗೆದ್ದಿದೆ. ಕೊನೆಯ ಪಂದ್ಯವು ದುರ್ಬಲ ಕೆನಡಾ ವಿರುದ್ಧ ಆಡಲಿದ್ದು ಸುಲಭವಾಗಿ ಸೋಲಿಸಬಹುದು. ಅಷ್ಟೇ ಅಲ್ಲ, ಪಾಕಿಸ್ತಾನ ಟೂರ್ನಿಯಲ್ಲಿ ಉಳಿಯಲು ಭಾರತ ಗೆದ್ದರೆ ಸಾಲದು ಯುಎಸ್ಎ ದೊಡ್ಡ ಅಂತರದಿಂದ ಸೋಲಬೇಕು. ಆಗ ಯುಎಸ್‌ಎ ರನ್ ರೇಟ್ ಕಡಿಮೆ ಆಗುತ್ತದೆ. ಕೊನೆಯ ಪಂದ್ಯವನ್ನು ಪಾಕಿಸ್ತಾನ ಉತ್ತಮ ರನ್ ರೇಟ್‌ನೊಂದಿಗೆ ಗೆಲ್ಲುವ ಮೂಲಕ ಸೂಪರ್-8 ಗೆ ಅರ್ಹತೆ ಪಡೆಯಬಹುದು. ಹಾಗಂತ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಗೆದ್ದು, ಯುಎಸ್ಎ ತನ್ನ ಎರಡೂ ಪಂದ್ಯಗಳಲ್ಲಿ ಸೋತರೂ, ಸೂಪರ್‌-8 ಗೆ ಅರ್ಹತೆ ಪಡೆಯುವ ಗ್ಯಾರಂಟಿ ಇಲ್ಲ. ಏಕೆಂದರೆ, ಅಂತಿಮವಾಗಿ ಸೂಪರ್-8 ತಂಡ ರನ್ ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ.

2022ರ ಟಿ-20 ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ್ದ ಪಾಕಿಸ್ತಾನ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಬಾರಿ ಫೈನಲ್​ನಲ್ಲಿ ಟ್ರೋಫಿ ಗೆಲ್ಲೋ ಕನಸಿನೊಂದಿಗೆ ಟೂರ್ನಿ ಆರಂಭಿಸಿತ್ತು. ಬಟ್ ಆರಂಭದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು. ಬಳಿಕ ಭಾರತ ಎದುರು ಕಡಿಮೆ ಸ್ಕೋರಿಂಗ್‌ ಪಂದ್ಯದಲ್ಲಿ ಮುಗ್ಗರಿಸಿತ್ತು. ಕೊನೆಗೂ ಮಂಗಳವಾರ ಗೆಲುವಿನ ಖಾತೆ ತೆರೆದಿತ್ತು. ಕೆನಡಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೂಪ್‌ ಹಂತದಲ್ಲಿ ಎಲಿಮನೇಟ್‌ ಆಗುವ ಭೀತಿಯಿಂದ ಹೊರಬಂದಿತ್ತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. 107 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ, ಮೊಹಮ್ಮದ್ ರಿಜ್ವಾನ್ ಅವರ ಅಜೇಯ ಅರ್ಧಶತಕದ ನೆರವಿನಿಂದ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಹೀಗಾಗಿ ಒಂದು ಗೆಲುವು ಸಾಧಿಸಿರೋ ಪಾಕಿಸ್ತಾನ ಜೂನ್ 16ರಂದು ಐರ್ಲೆಂಡ್ ತಂಡವನ್ನ ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುವ ವಿಶ್ವಾಸದಲ್ಲಿದೆ. ಬಟ್ ಪಾಕಿಸ್ತಾನ ಗೆದ್ರೂ ಕೂಡ ಅಂತಿಮವಾಗಿ ರನ್ ರೇಟ್ ಆಧಾರದಲ್ಲಿ ತಂಡಗಳನ್ನ ಆಯ್ಕೆ ಮಾಡಲಾಗುತ್ತೆ. ಅದೇನೇ ಇದ್ರೂ ಪಾಕಿಸ್ತಾನಕ್ಕೆ ಲಾಭನೋ ನಷ್ಟನೋ ಅದು ಬೇರೆ ಪ್ರಶ್ನೆ. ಬಟ್ ಬುಧವಾರದ ಪಂದ್ಯದಲ್ಲಿ ಭಾರತ ಗೆಲ್ಲಲಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯಲಿ ಅನ್ನೋದಷ್ಟೇ ಕೋಟಿ ಕೋಟಿ ಭಾರತೀಯರ ಪ್ರಾರ್ಥನೆ.

Shwetha M