ಸೋಲದ IND.. ಗೆಲ್ಲದ UAE – ಗೆಲುವಿನ ಸರದಾರರ ವೀಕ್ ನೆಸ್ ಏನು?
UAE ಟೀಂನಲ್ಲೂ ಭಾರತೀಯರೇ ಸ್ಟಾರ್ಸ್

ಸೋಲದ IND.. ಗೆಲ್ಲದ UAE – ಗೆಲುವಿನ ಸರದಾರರ ವೀಕ್ ನೆಸ್ ಏನು?UAE ಟೀಂನಲ್ಲೂ ಭಾರತೀಯರೇ ಸ್ಟಾರ್ಸ್

ಸೆಪ್ಟೆಂಬರ್ 9ಕ್ಕೆ ಏಷ್ಯಾಕಪ್ ಟೂರ್ನಿ ಕಿಕ್ ಸ್ಟಾರ್ಟ್ ಆಗಿದ್ದು ನಿರೀಕ್ಷೆಯಂತೆಯೇ ಫಸ್ಟ್ ಮ್ಯಾಚಲ್ಲಿ ಹಾಂಗ್​ಕಾಂಗ್ ತಂಡವನ್ನ ಸೋಲಿಸಿ ಅಫ್ಘಾನಿಸ್ತಾನ ಶುಭಾರಂಭ ಮಾಡಿದೆ. ಬಟ್ ಎಲ್ರೂ ಕಾಯ್ತಿರೋದು ಭಾರತದ ಪಂದ್ಯಕ್ಕಾಗಿ. ಬುಧವಾರ ಯುಎಇ ತಂಡದ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನ ಆಡಲಿದೆ. ಭಾರತಕ್ಕೆ ಇದು ಒನ್ ಸೈಡೆಡ್ ಮ್ಯಾಚ್​ನಂತೆಯೇ ಇದೆ. ಯಾಕಂದ್ರೆ ಕಳೆದೊಂದು ವರ್ಷದಿಂದ ಭಾರತ ಟಿ-20ಐ ಸರಣಿ ಸೋತೇ ಇಲ್ಲ. ಇತ್ತ ಯುಎಇ ಟೀಂ ಸಾಕಷ್ಟು ಅಪ್ಸ್ ಌಂಡ್ ಡೌನ್ ಕಂಡಿದೆ. ಕ್ರಿಕೆಟ್ ಶಿಶು ಅಂತಾ ಕರೆಸಿಕೊಳ್ಳೋ ಯುಎಇ ಟೀಂ ಜಗತ್ತಿನ ಟಿ-20ಐ ಕ್ರಿಕೆಟ್​ನ ನಂಬರ್ 1 ಟೀಂ ಭಾರತಕ್ಕೆ ಯಾವ ರೀತಿಯಲ್ಲೂ ಪೈಪೋಟಿ ನೀಡೋಕೆ ಚಾನ್ಸೇ ಇಲ್ಲ.

ಇದನ್ನೂ ಓದಿ : 8 ತಂಡ.. ಕಪ್ ಗೆದ್ದಿದ್ದೇ 3 ಟೀಂ – ಭಾರತಕ್ಕೆ ಲಂಕನ್ನರೇ ವಿಲನ್!

ಟಿ-20 ವಿಶ್ವಕಪ್ ಗೆದ್ದ ಬಳಿಕ ಸರಣಿಯನ್ನೇ ಸೋಲದ ಭಾರತ!

2024ರ ಜೂನ್​ನಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿದ್ದ ಭಾರತ ಟಿ-20ಐ ಫಾರ್ಮೆಟ್​ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಿದೆ. ಕಳೆದ 15 ತಿಂಗಳಲ್ಲಿ ಯಾವುದೇ ಟಿ-20ಐ ಸರಣಿಯನ್ನೂ ಸೋತಿಲ್ಲ.

Gxf Plate : ಸೋಲಿಲ್ಲದ ಟೀಂ ಇಂಡಿಯಾ!

ಎದುರಾಳಿ                 ವಿನ್ನರ್                     ಮಾರ್ಜಿನ್

ಜಿಂಬಾಂಬ್ವೆ                 ಭಾರತ                       4-1(5)

ಶ್ರೀಲಂಕಾ                  ಭಾರತ                       3-0(3)

ಬಾಂಗ್ಲಾದೇಶ               ಭಾರತ                        3-0(3)

ಸೌತ್ ಆಫ್ರಿಕಾ            ಭಾರತ                         3-1 (4)

ಇಂಗ್ಲೆಂಡ್                ಭಾರತ                          4-1(5)

ಸೋ ಹೀಗೆ ಭಾರತ ಕಳೆದ 15 ತಿಂಗಳಲ್ಲಿ 5 ಸರಣಿಗಳಿಂದ ಟೋಟಲ್ಲಾಗಿ 20 ಪಂದ್ಯಗಳನ್ನ ಆಡಿದೆ. ಈ ಪೈಕಿ ಭಾರತ ಮೂರು ಪಂದ್ಯಗಳನ್ನಷ್ಟೇ ಸೋತಿದೆ. ಇದೀಗ ಏಷ್ಯಾಕಪ್ ಟೂರ್ನಿ ಕೂಡ ಟಿ-20ಐ ಮಾದರಿಯಲ್ಲೇ ನಡೀತಾ ಇರೋದ್ರಿಂದ ಭಾರತವೇ ಚಾಂಪಿಯನ್ ಆಗುವಂಥ ಫೇವರೆಟ್ ಟೀಂ ಎನಿಸಿಕೊಂಡಿದೆ. ಬಟ್ ಭಾರತ ಟಿ-20ಐ ತಂಡದ ಒಂದು ವೀಕ್​ನೆಸ್ ಅಂದ್ರೆ ಕಳೆದ 15 ತಿಂಗಳಲ್ಲಿ 8ನೇ ಕ್ರಮಾಂಕದ ಬಳಿಕ ಭಾರತದ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ 25+ ರನ್ ಗಳಿಸೋಕೆ ಸಾಧ್ಯವಾಗಿಲ್ಲ. ಇನ್ನು ಯುಎಇ ಟೀಂ ಸಿಚುಯೇಷನ್ ಬೇರೆಯದ್ದೇ ಆಗಿದೆ. ಯಾಕಂದ್ರೆ ವಿಶ್ವಕ್ರಿಕೆಟ್​ನಲ್ಲಿ ಆಲ್ರೆಡಿ ಬಿಗ್ ಬಾಸ್ ಆಗಿರೋ ಭಾರತದ ಮುಂದೆ ಕ್ರಿಕೆಟ್ ಶಿಶುಗಳಂತೆ ಕಾಣ್ತಿದ್ದಾರೆ. ವೈಟ್ ಬಾಲ್ ಫಾರ್ಮೆಟ್​ನಲ್ಲೂ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ.

ಏಷ್ಯಾಕಪ್ ಗೆ 17 ಜನರ ಟೀಂ.. ತಂಡದಲ್ಲಿದ್ದಾರೆ 6 ಜನ ಭಾರತೀಯರು!

ಏಷ್ಯಾಕಪ್ ಟೂರ್ನಿ ಆರಂಭಕ್ಕೆ ಇನ್ನೂ ಮೂರ್ನಾಲ್ಕು ವಾರಗಳು ಬಾಕಿ ಇರುವಾಗ ಎಲ್ಲಾ ತಂಡಗಳು ಸ್ಕ್ವಾಡ್ ಅನೌನ್ಸ್ ಮಾಡಿದ್ರೆ ಯುಎಇ ಟೀಂ ಮಾತ್ರ ಕೇವಲ 5 ದಿನಗಳು ಬಾಕಿ ಇರುವಾಗ ತನ್ನ 17 ಸದಸ್ಯರ ಬಳಗವನ್ನ ಪ್ರಕಟ ಮಾಡಿತ್ತು. ತಂಡವನ್ನು ಮುಹಮ್ಮದ್ ವಸೀಮ್ ಮುನ್ನಡೆಸಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಯುಎಇ ಟೀಂ ಅನೌನ್ಸ್ ಮಾಡಿರುವ 17 ಜನರ ತಂಡದಲ್ಲಿ ಭಾರತ ಮೂಲದ 6 ಆಟಗಾರರಿದ್ದಾರೆ. ಹರ್ಷಿತ್ ಕೌಶಿಕ್, ಸಿಮ್ರನ್ ಜೀತ್ ಸಿಂಗ್, ಧ್ರುವ್ ಪರಾಶರ್, ಅಲಿಶನ್ ಶರಫು, ಆರ್ಯನ್ಶ್ ಶರ್ಮಾ, ರಾಹುಲ್ ಚೋಪ್ರಾ ಭಾರತೀಯ ಮೂಲದವರಾಗಿದ್ದಾರೆ. ಈ ಮೂಲಕ ಭಾರತ ತಂಡದ ವಿರುದ್ಧ ಭಾರತೀಯರೇ ಕಣಕ್ಕಿಳಿಯೋ ಸಿಚುಯೇಷನ್ ಕ್ರಿಯೇಟ್ ಆಗಿದೆ.

ಬಾಂಗ್ಲಾ ವಿರುದ್ಧ ಟಿ-20ಐ ಸರಣಿ ಗೆದ್ದು ಬೀಗಿದ್ದ ಯುಎಇ

ಇನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ಕಂಪ್ಲೀಟ್ ಡಮ್ಮಿನಾ ಅಂದ್ರೆ ಇಲ್ಲ. ಗ್ರೇಟೆಸ್ಟ್ ಅನ್ನಿಸಿಕೊಳ್ಳುವಷ್ಟು ಸದ್ದು ಮಾಡದೇ ಇದ್ರೂ ಆಗ್ಗಾಗ್ಗೆ ಸೌಂಡ್ ಮಾಡುವಂಥ ಪರ್ಫಾಮೆನ್ಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ಟಿ-20ಐ ಮಾದರಿಯಲ್ಲೇ ಬಾಂಗ್ಲಾದೇಶವನ್ನ ಮಕಾಡೆ ಮಲಗಿಸಿದ್ರು. 2025ರ ಮೇ ತಿಂಗಳಿನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ಯುಎಇ ತಂಡ ಎರಡು ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು. ಸರಣಿಯ ಮೊದಲ ಮ್ಯಾಚ್​ನಲ್ಲಿ ಬಾಂಗ್ಲಾದೇಶ್ ತಂಡ ಗೆಲುವು ದಾಖಲಿಸಿತ್ತು, ಆ ಬಳಿಕ ಯುಎಇ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳನ್ನು ಗೆದ್ದುಕೊಂಡು ಸರಣಿ ಗೆದ್ದು ಬೀಗಿತ್ತು. ಇನ್ನು ಟಿ-20 ವಿಶ್ವಕಪ್ ನಂತ್ರ 27 ಟಿ20ಐ ಮ್ಯಾಚ್​ಗಳನ್ನ ಆಡಿದ್ದು 20ರಲ್ಲಿ ಗೆಲುವು ಸಾಧಿಸಿದ್ದಾರೆ. ಎಲ್ಲವೂ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ. ತಂಡದ ವೀಕ್​ನೆಸ್ ಅಂದ್ರೆ ಪ್ರಮುಖ ಟೂರ್ನಿಗಳಲ್ಲೇ ಎಡವುತ್ತಾರೆ. ಏಷ್ಯಾಕಪ್‌ನಲ್ಲಿ ಗುಂಪು ಹಂತವನ್ನು ಮೀರಿ ಮುಂದಕ್ಕೆ ಹೋಗಿದ್ದೇ ಇಲ್ಲ. ಇನ್ನು ಯುಎಇ ಟೀಂ ಏಷ್ಯಾಕಪ್ ಆರಂಭದ ಹೊಸ್ತಿಲಲ್ಲೇ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ವಿರುದ್ಧ ತ್ರಿಕೋನ ಸರಣಿ ಆಡಿದೆ. ಉಭಯ ತಂಡಗಳ ವಿರುದ್ಧ ಎರಡೆರಡು ಸೇರಿ ಟೋಟಲ್ಲಾಗಿ ನಾಲ್ಕು ಪಂದ್ಯಗಳನ್ನ ಆಡಿದೆ. ಬಟ್ ಒಂದೂ ಪಂದ್ಯವನ್ನ ಗೆಲ್ಲೋಕೆ ಸಾಧ್ಯವಾಗಿಲ್ಲ.

ಸದ್ಯ 2016 ರ ನಂತರ ಉಭಯ ತಂಡಗಳು ಮೊದಲ ಬಾರಿಗೆ ಯುಎಇ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗ್ತಿವೆ. ಟಿ-20ಐ ಮಾದರಿಯಲ್ಲಿ ಒಂದು ಪಂದ್ಯವನ್ನಷ್ಟೇ ಆಡಿದ್ದು ಭಾರತ ಗೆಲುವು ಸಾಧಿಸಿತ್ತು. ಇದೀಗ ಬುಧವಾರ ಎರಡನೇ ಸಲ ಎದುರು ಬದುರಾಗ್ತಿದ್ದು, ಸೆಪ್ಟೆಂಬರ್ 14 ಅಂದ್ರೆ ಭಾನುವಾರ ನಡೆಯಲಿರೋ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರಿಗೆ ವಾರ್ಮ್ ಅಪ್ ಪಂದ್ಯ ಅಂದ್ರೂ ತಪ್ಪಿಲ್ಲ.

Shantha Kumari