ಜಡ್ಡುಗೆ ಪಂತ್ ತಲ್ವಾರ್ ಪಂಚ್ – DSP ಅಟ್ಯಾಕ್.. ಲಂಕನ್ನರು ಅರೆಸ್ಟ್
ಕೆಎಲ್-ಪಡಿಕ್ಕಲ್ ಅಣ್ತಮ್ಮನ ಅಪ್ಪುಗೆ

ಜಡ್ಡುಗೆ ಪಂತ್ ತಲ್ವಾರ್ ಪಂಚ್ – DSP ಅಟ್ಯಾಕ್.. ಲಂಕನ್ನರು ಅರೆಸ್ಟ್ಕೆಎಲ್-ಪಡಿಕ್ಕಲ್ ಅಣ್ತಮ್ಮನ ಅಪ್ಪುಗೆ

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ಈಗ ರೋಚಕ ಘಟ್ಟದಲ್ಲಿದೆ. ಫಸ್ಟ್ ಇನ್ನಿಂಗ್ಸ್​​ನಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ಖದರ್ ತೋರಿಸಿದ್ರೂ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಟಾಪ್-ಆರ್ಡರ್ ಬ್ಯಾಟರ್​ಗಳು ಬೇಗನೇ ವಿಕೆಟ್​ಗಳನ್ನ ಕಳ್ಕೊಳ್ಬೇಕಾಯ್ತು. ಹೀಗಿದ್ರೂ ಈ ಪಂದ್ಯವನ್ನ ಭಾರತವೇ ಗೆಲ್ಲೋ ಚಾನ್ಸಸ್ ಜಾಸ್ತಿ ಇದೆ. ಇನ್ನು ಪಂದ್ಯದ ನಡುವೆ ಕೆಲ ಇಂಟ್ರೆಸ್ಟಿಂಗ್ ಘಟನೆಗಳು ನಡೆದಿವೆ. ತಲ್ವಾರ್ ಎಂಟ್ರಿಯಾಗಿದೆ.. ಅರೆಸ್ಟ್ ಮಾಡೋಕೆ ಡಿಎಸ್​ಪಿ ಬಂದಿದ್ದಾರೆ. ಅಂಪೈರ್ ಜಸ್ಟ್ ಮಿಸ್ ಆಗಿದ್ದಾರೆ. ಅಣ್ತಮ್ಮನ ಅಪ್ಪುಗೆ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ : ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿದ ಭಾರತ – 193ಕ್ಕೆ ಆಲ್‌ಔಟ್‌, ಲಂಕಾಕ್ಕೆ 372 ರನ್‌ ಟಾರ್ಗೆಟ್

ಗಾಲೆಯಲ್ಲಿ ನಡೆಯುತ್ತಿರೋ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕೆಲ ತಮಾಷೆಯ ಘಟನೆಗಳೂ ನಡೆದಿವೆ. ಅದ್ರಲ್ಲೂ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೈದಾನದಲ್ಲಿ ಇದ್ರಂತೂ ನಾನ್​ಸ್ಟಾಪ್ ಕಾಮಿಡಿ ಇದ್ದದ್ದೇ. ಸ್ಟಂಪ್ ಮೈಕ್​ನಲ್ಲಿ ಸೆರೆಯಾಗಿರೋ ಕೆಲ ಸಂಭಾಷಣೆಗಳು ನಿಜಕ್ಕೂ ನಗು ತರಿಸುವಂತಿವೆ. ಅದ್ರ ಜೊತೆಗೆ ಬೆರಗು ಮೂಡಿಸೋ ಥರದ ಘಟನೆಗಳೂ ನಡೆದಿವೆ.

ಜಡ್ಡು ಮತ್ತು ಪಂತ್ ನಡುವೆ ತಲ್ವಾರ್ ವರಸೆ!

ಇನ್ನು ಕ್ರಿಕೆಟರ್​ಗಳು ಬ್ಯಾಟಿಂಗ್​ನಲ್ಲಿ ಬಿಗ್ ಸ್ಕೋರ್ ಬಂದಾಗ ಅಥವಾ ವಿಕೆಟ್ಸ್ ತಗೊಂಡಾಗ ತಮ್ಮದೇ  ತಮ್ಮದೇ ಸ್ಟೈಲಲ್ಲೇ ಸೆಲೆಬ್ರೇಟ್ ಮಾಡೋದನ್ನ ನೋಡೇ ಇರ್ತೀವಿ. ಒಬ್ಬೊಬ್ರಿಗೂ ಒಂದೊಂದು ರೀತಿಯ ಯುನಿಕ್ ಸ್ಟೈಲ್ ಇರುತ್ತೆ. ಅದ್ರಲ್ಲೂ ನಮ್ಮ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಇನ್ನೂ ಸ್ಪೆಷಲ್. ಕತ್ತಿವರಸೆ ರೀತಿಯಲ್ಲಿ ಸೆಲೆಬ್ರೇಟ್ ಮಾಡ್ತಾರೆ. ಇದೇ ವಿಧಾನವನ್ನ ಪ್ರಸ್ತಾಪಿಸಿ ಪಂತ್ ಜಡ್ಡು ಅವ್ರ ಕಾಲೆಳೆದಿದ್ದಾರೆ. ಲಂಕಾ ಬ್ಯಾಟರ್ಸ್ ಬ್ಯಾಟಿಂಗ್ ಮಾಡುವಾಗ ಫೀಲ್ಡಿಂಗ್​ನಲ್ಲಿದ್ದ ಸರ್ಫರಾಜ್ ಖಾನ್, ಜಡ್ಡು ಕುರಿತು ಜಡ್ಡು ಅಣ್ಣ ಆಟ ಸಾಕಷ್ಟು ಬಾಕಿ ಇದೆ. ಎಲ್ರೂ ವಿಕೆಟ್​ಗಳನ್ನ ಶೇರ್ ಮಾಡಿ ತಿನ್ನೋಣ ಎಂದಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಪಂತ್ ಔರ್ ಸಬ್ ತಲ್ವಾರ್ ಚಲಾಯೇಂಗೆ ಅಂದ್ರೆ ಎಲ್ಲರೂ ಕತ್ತಿವರಸೆ ಪ್ರದರ್ಶನ ಮಾಡಲಿದ್ದಾರೆ ಎಂದಿದ್ದಾರೆ. ಪಂದ್ಯದ ಬಳಿಕ ಇದಕ್ಕೆ ರಿಯಾಕ್ಟ್ ಮಾಡಿದ ಜಡ್ಡು ನನ್ನ ತಲ್ವಾರ್ ಸೆಲೆಬ್ರೇಷನ್ ಕಾಪಿ ಮಾಡೋದು ಅಷ್ಟು ಸುಲಭ ಇಲ್ಲ. ಬೇಕಿದ್ರೆ ನೆಕ್ಸ್​ಟ್ ಟೈಂ ನಾನೇ ಪಂತ್​ಗೆ ಟ್ರೈನಿಂಗ್ ಕೊಡ್ತೇನೆ ಅಂತಾ ಟಾಂಟ್ ಕೊಟ್ಟಿದ್ದಾರೆ.

ಲಂಕಾ ಬ್ಯಾಟರ್ಸ್ ಅರೆಸ್ಟ್ ಮಾಡಲು ಡಿಎಸ್ ಪಿ ಸಿರಾಜ್ ಎಂಟ್ರಿ!

ಇನ್ನು ಪಂದ್ಯದ ಮೂರನೇ ದಿನದಾಟದಲ್ಲಿ ಲಂಕಾ ಪರ ಸೋನಾಲ್ ಮತ್ತು ಡಿಕ್ವೆಲ್ಲಾ ಶತಕದ ಜೊತೆಯಾಟವಾಡಿ ಭಾರತದ ಬೌಲರ್​ಗಳಿಗೆ ಕಾಟ ಕೊಡ್ತಿದ್ರು. ಈ ಟೈಮಲ್ಲಿ ಕೆಎಲ್ ರಾಹುಲ್ ಮತ್ತು ಪಂತ್ ನಡುವೆ ಒಂದು ಫನ್ನಿ ಕಾನ್ವರ್ಸೇಷನ್ ಆಗಿದೆ. ಪಂತ್ ಜೊತೆ ಮಾತನಾಡುತ್ತಾ ರಾಹುಲ್ ಹೇಳ್ತಾರೆ. ವಿಕೆಟ್ ಬೀಳದೆ ತುಂಬಾ ಟೈಂ ಆಯ್ತು. ನಾವು ಡಿಎಸ್​ಪಿ ಸಿರಾಜ್​ರನ್ನ ಅಟ್ಯಾಕ್​ಗೆ ತರಬೇಕು ಎಂದಿದ್ದಾರೆ. ಆಗ ಪಂತ್ ಹೌದು, ಡಿಎಸ್​ಪಿ ಬಂದ್ರೆ ಅಎಲ್ರನ್ನೂ ಅರೆಸ್ಟ್ ಮಾಡ್ತಾರೆ, ಬೇಗ ಬನ್ನಿ ಸಿರಾಜ್ ಭಾಯ್ ಅಂತಾ ಕಾಲೆಳೆದಿದ್ದಾರೆ.

ಸಿರಾಜ್ ಎಸೆದ ಬಾಲ್ ನಿಂದ ಅಂಪೈರ್ ಜಸ್ಟ್ ಮಿಸ್!

ಇನ್ನು ಭಾರತದ ಫೀಲ್ಡಿಂಗ್ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಬಾಲ್​ನಿಂದ ಆನ್​ಫೀಲ್ಡ್ ಅಂಪೈರ್ ಜಸ್ಟ್ ಮಿಸ್ ಆಗಿದ್ದಾರೆ. ಜಡ್ಡು ಬೌಲಿಂಗ್ ವೇಳೆ ಲಂಕಾ ಬ್ಯಾಟರ್ ಸೋನಲ್ ದಿನುಶಾ ರಿವರ್ಸ್ ಸ್ವೀಪ್ ಮಾಡಿ ಡೀಪ್ ಪಾಯಿಂಟ್ ಕಡೆಗೆ ಚೆಂಡನ್ನು ಹೊಡೆದಿದ್ರು. ಬೌಂಡರಿ ಲೈನ್‌ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಸ್ಪೀಡಾಗಿ ಬಂದು ಚೆಂಡನ್ನ ತಗೊಂಡು ನಾನ್-ಸ್ಟ್ರೈಕರ್ ಎಂಡ್‌ ಕಡೆಗೆ ರಾಕೆಟ್ ಸ್ಪೀಡಲ್ಲಿ ಬಾಲ್ ಎಸೆದಿದ್ರು. ಈ ವೇಳೆ ಅಲ್ಲೇ ನಿಂತಿದ್ದ ಲೆಗ್ ಅಂಪೈರ್ ಅಹ್ಸಾನ್ ರಾಝ ಅವರ ತಲೆಯ ಕಡೆಗೇ ಬಾಲ್ ನುಗ್ಗಿತ್ತು. ಈ ವೇಳೆ ಅಂಪೈರ್ ಬಾಲ್​ನಿಂದ ಜಸ್ಟ್ ಮಿಸ್ಸಾಗಿದ್ದಾರೆ.

ಪಡಿಕ್ಕಲ್ ಮಾತಿಂದ ಕೆಎಲ್ ಗೆ ಜೀವದಾನ.. ಅಣ್ತಮ್ಮರ ಪ್ರೀತಿಯ ಅಪ್ಪುಗೆ!

ಇನ್ನು ಲಂಕಾ ನಾಡಿನಲ್ಲಿ ನಮ್ಮ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಹಾಗೇ ಇಬ್ಬರ ನಡುವಿನ ಬಾಂಡಿಂಗ್ ಅಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವಂಥದ್ದು. ಮೊದಲ ಇನ್ನಿಂಗ್ಸ್​ನಲ್ಲಿ ಇಬ್ಬರ ನಡುವೆ 150 ರನ್​ಗಳ ಪಾಟ್ನರ್​ಶಿಪ್ ಬಂದಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ಇಬ್ಬರ ಜೊತೆಯಾಟ ಚೆನ್ನಾಗಿ ಶುರುವಾಗಿತ್ತು. ಆದ್ರೆ ಲಂಕಾ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಬೌಲಿಂಗ್​ನಲ್ಲಿ ರಾಹುಲ್ ಡಿಫೆನ್ಸಿವ್ ಬ್ಯಾಟಿಂಗ್ ಆಡಿದ್ರು. ಹೀಗಿದ್ರೂ ಬ್ಯಾಟ್​ಗೆ ತಾಗದೆ ಬಾಲ್​ಗೆ ಪ್ಯಾಡ್‌ಗೆ ಬಡಿದಿತ್ತು. ಆನ್-ಫೀಲ್ಡ್ ಅಂಪೈರ್ ಕೂಡ್ಲೇ ಔಟ್ ಅಂದಿದ್ರು. ರಾಹುಲ್ ಕೂಡ ಪೆವಿಲಿಯನ್ ಕಡೆ ಹೆಜ್ಜೆ ಹಾಕ್ತಿದ್ರು. ಆಗ ದೇವದತ್ ಪಡಿಕ್ಕಲ್ ಡಿಆರ್​ಎಸ್ ತಗೊಳ್ಳುವಂತೆ ಹೇಳಿದ್ರು. ಇದ್ರಿಂದ ರಾಹುಲ್ ಕೂಡ ಅಂಪೈರ್ ಬಳಿ ಮನವಿ ಮಾಡಿದ್ರು. ಥರ್ಡ್ ಅಂಪೈರ್ ರಿವ್ಯೂ ಮಾಡುವಾಗ ಚೆಂಡು ಸ್ಟಂಪ್ಸ್‌ಗೆ ತಗುಲದೆ ಅದರ ಮೇಲಿಂದ ಹೋಗ್ತಿತ್ತು. ಸೋ ಥರ್ಡ್ ಅಂಪೈರ್ ನಾಟ್​ಔಟ್ ಅಂತಾ ತೀರ್ಪು ಕೊಟ್ರು. ಇದ್ರಿಂದ ಖುಷಿಯಾದ ರಾಹುಲ್ ಪಡಿಕ್ಕಲ್​ರನ್ನ ಅಪ್ಪಿಕೊಂಡು ಮುತ್ತು ಕೊಟ್ರು. ಕನ್ನಡಿಗರಿಬ್ಬರು ಅಣ್ತಮ್ಮನಂತೆ ನಿಂತದ್ದು ಬೆಸ್ಟ್ ಸೀನ್ ಆಫ್ ದಿ ಡೇ ಅನ್ನೋ ರೀತಿಯಲ್ಲಿ ವೈರಲ್ ಆಗಿದೆ. ಹೀಗೆ ಪಂದ್ಯದುದ್ದಕ್ಕೂ ಸಾಕಷ್ಟು ಇನ್ಸಿಡೆಂಟ್ಸ್ ಆಗಿವೆ. ಮ್ಯಾಚ್ ಜೊತೆ ಜೊತೆಗೆ ಅಲ್ಲಿನ ತರಲೆ, ತಮಾಷೆಗಳೂ ಕೂಡ ಎಲ್ಲರ ಗಮನ ಸೆಳೆದಿವೆ.

Shantha Kumari

Leave a Reply

Your email address will not be published. Required fields are marked *