4 ವಿಕೆಟ್.. ಭಾರತಕ್ಕೆ ಗೆಲುವು – ಡ್ರಾ ಟಾರ್ಗೆಟ್ ನಲ್ಲಿದ್ಯಾ ಲಂಕಾ?
5ನೇ ದಿನ.. ಹೇಗಿದೆ ಲೆಕ್ಕಾಚಾರ?  

4 ವಿಕೆಟ್.. ಭಾರತಕ್ಕೆ ಗೆಲುವು – ಡ್ರಾ ಟಾರ್ಗೆಟ್ ನಲ್ಲಿದ್ಯಾ ಲಂಕಾ?5ನೇ ದಿನ.. ಹೇಗಿದೆ ಲೆಕ್ಕಾಚಾರ?  

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಕೂಡ ಇಂಟ್ರೆಸ್ಟಿಂಗ್ ಆಗಿತ್ತು. ನಿರೀಕ್ಷೆಯಂತೆಯೇ ಫಾಲೋ ಆನ್ ಹೇರಿದ ಭಾರತ ಎರಡನೇ ಇನ್ನಿಂಗ್ಸ್​ನಲ್ಲೂ ಡಾಮಿನೇಟ್ ಮಾಡಿದೆ. ಹಾಗೇ ಗೆಲುವಿನ ಹೊಸ್ತಿಲಲ್ಲಿದೆ.

ಇದನ್ನೂ ಓದಿ : 2 ದಿನ.. 30 ವಿಕೆಟ್.. ಪಂದ್ಯ ಫಿನಿಶ್ – ಸೋಲಿನ ಭಯಕ್ಕೆ ಪಿಚ್ ಬದಲಿಸಿದ್ರಾ?

ಕೊಲೊಂಬೊದಲ್ಲಿ ನಡೆಯುತ್ತಿರೋ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 503 ರನ್ ಗಳಿಸಿದ್ರೆ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 290 ರನ್​ಗಳಿಗೆ ಆಲೌಟ್ ಆಯ್ತು. ಹೀಗಾಗಿ ಫಸ್ಟ್ ಇನ್ನಿಂಗ್ಸ್​ನ್ಲಲೇ 213 ರನ್​ಗಳ ಲೀಡ್ ಪಡೆದ ಭಾರತ ಶ್ರೀಲಂಕಾ ತಂಡಕ್ಕೆ ಫಾಲೋ ಆನ್ ಹೇರಿತು. ಅದರಂತೆ ಲಂಕಾ ಪಡೆ ತನ್ನ ಎರಡನೇ ಇನ್ನಿಂಗ್ಸ್ ಕೂಡ ಆರಂಭಿಸಿತು. ಒನ್ಸ್ ಅಗೇನ್ ಲಂಕಾಗೆ ಟಾಪ್ ಆರ್ಡರ್ ಕೈಕೊಟ್ರೂ ಮಿಡಲ್ ಆರ್ಡರ್​ನಿಂದ ಸ್ಟ್ರಾಂಗ್ ಫೈಟ್ ಬಂತು. ಸೋ ಇಡೀ ದಿನ ಮ್ಯಾಚ್ ನಡೀತು.

 ಗೆಲುವಿನ ಹೊಸ್ತಿಲಲ್ಲಿ ಭಾರತ!

213 ರನ್ಸ್ ಹಿನ್ನಡೆ ಅನುಭವಿಸಿದ್ದ ಲಂಕಾ ಎರಡನೇ ಇನ್ನಿಂಗ್ಸ್ ಆರಂಭ
ಲಂಕಾ ಪರ ಮತ್ತೆ ಬ್ಯಾಟಿಂಗ್ ನಲ್ಲಿ ಓಪನರ್ಸ್ ಕಡೆಯಿಂದ ಫ್ಲ್ಯಾಪ್ ಶೋ

ಪಸಿಂದು ಸೂರಿಯಬಂಡಾರ & ಕಮಿಂದು ಮೆಂಡಿಸ್ 100+ ರನ್ಸ್ ಜೊತೆಯಾಟ

ಸೂರಿಯಬಂಡಾರ 92, ಮೆಂಡಿಸ್ 55 ರನ್ ಗಳಿಸಿದ್ರೆ, ಸಿಲ್ವಾ 22ಕ್ಕೆ  ಔಟ್,

ನಾಲ್ಕನೇ ದಿನದಾಟದ ಅಂತ್ಯಕ್ಕೆ 229ಕ್ಕೆ 6 ವಿಕೆಟ್ ಕಳ್ಕೊಂಡಿರೋ ಲಂಕಾ

16 ರನ್ಸ್ ಲೀಡ್ ನೊಂದಿಗೆ ಐದನೇ ದಿನದಾಟದಲ್ಲಿ ಮತ್ತೆ ಲಂಕಾ ಬ್ಯಾಟಿಂಗ್

ನಾಲ್ಕು ವಿಕೆಟ್​ ಗಳನ್ನು ಬೇಗ ತೆಗೆದ್ರೆ ನಾಳೆ ಮಧ್ಯಾಹ್ನದ ಒಳಗೆ ಭಾರತ ವಿನ್

ಪ್ರಸ್ತುತ ಸುತಾರ್ 2 ವಿಕೆಟ್, ಉಳಿದೆಲ್ಲಾ ಬೌಲರ್ಸ್ ತಲಾ ಒಂದೊಂದು ವಿಕೆಟ್

ಸದ್ಯ ಇಡೀ ಪಂದ್ಯ ಭಾರತದ ಕಡೆಯೇ ಇದೆ. ಶ್ರೀಲಂಕಾ ಈ ಮ್ಯಾಚ್ ಗೆಲ್ತಾರೆ ಅನ್ನೋದು ಕನಸಿನ ಮಾತು. ಬಟ್ ತುಂಬಾ ಚೆನ್ನಾಗಿ ಆಡಿದ್ರೆ ಡ್ರಾ ಮಾಡಿಕೊಳ್ಳೋಕೆ ಚಾನ್ಸ್ ಇದೆ. ಯಾಕಂದ್ರೆ ನಾಳೆ ಐದನೇ ದಿನದಾಟ. ಕೊನೇ ದಿನ. ಒಂದ್ವೇಳೆ ನಾಳೆ ಎರಡು ಸೆಷನ್ ಲಂಕಾ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ದೇ ಆದ್ರೆ ಆಗ ಭಾರತ ಕೊನೇ ಸೆಷನ್​ನಲ್ಲಿ ಚೇಸಿಂಗ್ ಸ್ವಲ್ಪ ಕಷ್ಟ ಆಗ್ಬೋದು. ಆಗ ಡ್ರಾ ಮಾಡಿಕೊಳ್ಳೋಕೆ ಒಂದು ಚಾನ್ಸಸ್ ಇರುತ್ತೆ. ಬಟ್ ಭಾರತದ ಬೌಲಿಂಗ್ ಚೆನ್ನಾಗಿದೆ. ಸೋ ನಾಳೆ ಮಧ್ಯಾಹ್ನದ ವೇಳೆಗೆ ರಿಸಲ್ಟ್ ಗೊತ್ತಾಗುತ್ತೆ.

Shantha Kumari

Leave a Reply

Your email address will not be published. Required fields are marked *