503 ರನ್ಸ್.. ಲಂಕಾ ಶೇಕ್ – ಭಾರತಕ್ಕೆ ಫಾಲೋ ಆನ್ ಬ್ರಹ್ಮಾಸ್ತ್ರ
ಸಿಂಹಳೀಯರ ಸೋಲು ಕನ್ಫರ್ಮ್?

ಶ್ರೀಲಂಕಾ ವಿರುದ್ಧದ ಎರಡನೇ ಮ್ಯಾಚಲ್ಲೂ ಟೀಂ ಇಂಡಿಯಾ ಕಂಪ್ಲೀಟ್ ಮೇಲುಗೈ ಸಾಧಿಸಿದೆ. ಮೊದಲ ದಿನ ಬ್ಯಾಟಿಂಗ್ನಲ್ಲಿ ಕನ್ನಡಿಗ ಪಡಿಕ್ಕಲ್ ಲಂಕಾ ಬೌಲರ್ಗಳನ್ನ ಚೆಂಡಾಡಿದ್ರೆ ಸೆಕೆಂಡ್ ಡೇ ಧ್ರುವ್ ಜುರೇಲ್ ಚಾರ್ಜ್ಗೆ ತಗೊಂಡಿದ್ರು. ಈಗ ಬಿಗ್ ಟಾರ್ಗೆಟ್ನೇ ಮುಂದಿಟ್ಟು ಡಿಕ್ಲೇರ್ ಘೋಷಿಸಿದ್ದಾರೆ.
ಇದನ್ನೂ ಓದಿ : 2 ಪಂದ್ಯ.. 2 ಶತಕ – ನಂ.3ಗೆ ನಾನಿದ್ದೇನೆಂದ DDP
ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಮ್ಯಾಚಲ್ಲಿ ಟಾಸ್ ಗೆದ್ದ ಭಾರತ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಅದ್ರಂತೆ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದ್ರು. ಈಗ ಎರಡನೇ ದಿನ ಒಟ್ಟಾರೆ 9 ವಿಕೆಟ್ ನಷ್ಟಕ್ಕೆ 503 ರನ್ ಗಳಿಸಿ ಭಾರತ ಡಿಕ್ಲೇರ್ ಘೋಷಣೆ ಮಾಡಿದೆ. ಬೃಹತ್ ಟಾರ್ಗೆಟ್ನ ಬೆನ್ನಟ್ಟಿ ಶ್ರೀಲಂಕಾ ಆಟಗಾರರು ಬ್ಯಾಟಿಂಗ್ ಶುರು ಮಾಡಿದ್ದಾರೆ. ಆದ್ರೆ ಲಂಕಾಗೆ ಈ ಪಂದ್ಯ ಗೆಲ್ಲೋದು ಸುಲಭ ಇಲ್ಲ.
ಲಂಕಾ ಕ್ಲೀನ್ ಸ್ವೀಪ್ ಫಿಕ್ಸ್?
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇ ಪ್ಲಸ್ ಪಾಯಿಂಟ್
ಪಡಿಕ್ಕಲ್ 117, ಜುರೇಲ್ 115 ರನ್ಸ್ ನಿಂದ 503 ರನ್ಸ್ ದಾಖಲು
ಬಿಗ್ ಸ್ಕೋರ್ ಮೂಲಕವೇ ಲಂಕಾ ಆಟಗಾರರ ಮೇಲೆ ಪ್ರೆಶರ್
ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ಸ್ ಒಳಗೆ ಆಔಟ್ ಆದ್ರೆ ಅಡ್ವಾಂಟೇಜ್
ಎರಡನೇ ಇನ್ನಿಂಗ್ಸ್ ನಲ್ಲಿ ಲಂಕಾ ಮೇಲೆ ಫಾಲೋ ಆನ್ ಹೇರಬಹುದು
ಇನ್ನಿಂಗ್ಸ್ ಜೊತೆಗೆ ಗೆಲುವು ದಾಖಲಿಸೋ ಅವಕಾಶ ಭಾರತಕ್ಕಿದೆ
ಪಂದ್ಯದ 3, 4, 5ನೇ ದಿ ಸ್ಪಿನ್ ಬೌಲರ್ಸ್ ಗೆ ಪಿಚ್ ನಲ್ಲಿ ಮೇಲುಗೈ
ಹೀಗಾಗಿ ಈ ಪಂದ್ಯವನ್ನ ಗೆಲ್ಲೋ ಎಲ್ಲಾ ಅವಕಾಶಗಳೂ ಭಾರತದ ಪರವೇ ಇದೆ. ಹಾಗೇನಾದ್ರೂ ಭಾರತ ಕೊಲೊಂಬೊದಲ್ಲೂ ಗೆದ್ರೆ ಶ್ರೀಲಂಕಾ ಕ್ಲೀನ್ ಸ್ವೀಪ್ ಆಗಲಿದ್ದು ಡಬ್ಲ್ಯೂಟಿಸಿ ರೇಸ್ನಲ್ಲಿ ಭಾರತಕ್ಕೆ ಬೂಸ್ಟ್ ಸಿಕ್ಕಂತಾಗುತ್ತೆ.

ನೋಡಿರಿ

