ವೈಲೆಂಟ್ ವೈಭವ್.. ಕಿಚ್ಚಿನ ಕಿಶನ್ – 45ಕ್ಕೆ ಗಂಟು ಮೂಟೆ ಕಟ್ಟಿದ ಲಂಕಾ
IND Vs PAK ಗೋಲ್ಡ್ ಗುದ್ದಾಟ!

ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್ ಫೈನಲ್ ಪಂದ್ಯ ಹಿಂದೆಂದೂ ಕಾಣದ ರಣರೋಚಕ ಕಾಳಗಕ್ಕೆ ಸಾಕ್ಷಿಯಾಗಲಿದೆ. ಯಾಕಂದ್ರೆ ಫಾರ್ ದಿ ಫಸ್ಟ್ ಟೈಂ ಇಂಡೋ-ಪಾಕ್ ತಂಡಗಳು ಗೋಲ್ಡನ್ ಮೆಡಲ್ಗಾಗಿ ಗುದ್ದಾಡಲಿದ್ದಾರೆ. ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾವನ್ನ ಸೋಲಿಸಿ ಪಾಕಿಸ್ತಾನ ಫೈನಲ್ಗೆ ಬಂದ್ರೆ ಎರಡನೇ ಸೆಮೀಸ್ನಲ್ಲಿ ಶ್ರೀಲಂಕಾವನ್ನ ಮಣ್ಣುಮುಕ್ಕಿಸಿ ಟೀಂ ಇಂಡಿಯಾ ಗೋಲ್ಡನ್ ಮೆಡಲ್ ಸುತ್ತಿಗೆ ಕಾಲಿಟ್ಟಿದೆ.
ಇದನ್ನೂ ಓದಿ : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ! – ಗಿಲ್ ದ್ವಿಶತಕಕ್ಕೆ WI ಧೂಳೀಪಟ!
ಜಪಾನ್ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸೆಮೀಸ್ ಕಾಳಗ ಕೂಡ ಮುಗಿದಿವೆ. ಅಕ್ಟೋಬರ್ 3ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ವಾಲಿಫೈ ಆಗಿದ್ದು ಶನಿವಾರ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ 6 ವಿಕೆಟ್ಗಳಿಂದ ಗೆದ್ದಿದೆ. 13 ಓವರ್ಗಳಿಗೆ ಸೀಮಿತವಾಗಿದ್ದ ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಬಾಂಗ್ಳಾ 111 ರನ್ ಗಳಿಸಿತ್ತು. ಟಾರ್ಗೆಟ್ ಬೆನ್ನಟ್ಟಿದ್ದ ಪಾಕಿಸ್ತಾನ 11.3 ಓವರ್‌ಗಳಲ್ಲಿ ಟಾರ್ಗೆಟ್ ರೀಚ್ ಆಗಿ ಫೈನಲ್ಗೆ ಎಂಟ್ರಿಯಾಗಿದೆ. ಮತ್ತೊಂದೆಡೆ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಯಂಗ್ಸ್ಟರ್ಸ್ ಸುನಾಮಿ ಎಬ್ಬಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಪ್ಲೇಯಿಂಗ್ 11 ಸೆಲೆಕ್ಷನ್. ಪವರ್ ಹಿಟ್ಟರ್ ಅಭಿಷೇಕ್ ಶರ್ಮಾ, ಕ್ಲಾಸಿಕ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೇ ಬಾಸ್ ಬೇಬಿ ವೈಭವ್ ಸೂರ್ಯವಂಶಿ ಮೂವರೂ ಕೂಡ ಫಾರ್ ದಿ ಫಸ್ಟ್ ಟೈಂ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದಿದ್ರು. ಇದು ಚೆನ್ನಾಗಿ ವರ್ಕೌಟ್ ಕೂಡ ಆಯ್ತು.
ಭಾರತದ ಎದುರು ಹೀನಾಯವಾಗಿ ಸೋತ ಶ್ರೀಲಂಕಾ ಪ್ಲೇಯರ್ಸ್!
ಏಷ್ಯನ್ ರಾಷ್ಟ್ರಗಳ ಪೈಕಿ ಭಾರತವೇ ಸೂಪರ್ ಸ್ಟ್ರಾಂಗ್ ಟೀಂ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಧೂಳೆಬ್ಬಿಸಿ ಗೆದ್ದಿದ್ದಾರೆ. ಜಪಾನ್ನ ಸ್ಪಿನ್ನರ್ ಫ್ರೆಂಡ್ಲಿ ಪಿಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಭಾರತ ಆರಂಭದಲ್ಲೇ ಎಡವಿತ್ತು. ಅಭಿಷೇಕ್ ಹಾಗೇ ಸಂಜು ತಲಾ 7 ರನ್ಗಳಿಗೆ ಔಟ್ ಆದ್ರು. ಬಟ್ ಸೂರ್ಯವಂಶಿ 21 ಬಾಲಲ್ಲಿ 38 ರನ್ ಗಳಿಸಿದ್ರೆ ಶ್ರೇಯಸ್ ಅಯ್ಯರ್ 13 ರನ್ಗಳಿಗೆ ಔಟ್ ಆಗಿದ್ರು. ಬಟ್ ಪಾಕೆಟ್ ಡೈನಮೋ ಇಶಾನ್ ಕಿಶನ್ ಜವಾಬ್ದಾರಿಯುತ ಬ್ಯಾಟಿಂಗ್ ಸಿಡಿಸಿ 46 ಬಾಲಲ್ಲಿ 80 ರನ್ ಸಿಡಿಸಿ ನೆರವಾದ್ರು. ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಲಂಕಾ ಪರ ಖಾತೆ ತೆರೆಯೋ ಮೊದ್ಲೇ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಲಂಕಾ ಪರ ಟಾಪ್ 3 ಬ್ಯಾಟರ್ಸ್ ಡಕ್ ಔಟ್. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ನುವಾನಿದು ಫರ್ನಾಂಡೋ 15 ರನ್ ಗಳಿಸಿದ್ದು ಬಿಟ್ರೆ ಬೇರೆ ಯಾವುದೇ ಬ್ಯಾಟರ್ ಕೂಡ ಸಿಂಗಲ್ ಡಿಜಿಟ್ ಕೂಡ ದಾಟಲಿಲ್ಲ. ಹೀಗಾಗಿ 9.5 ಓವರ್ಗಳಲ್ಲೇ 45 ರನ್ ಗಳಿಸಿ ಲಂಕಾ ಪಡೆ ಆಲೌಟ್ ಆಯ್ತು. ಅಲ್ಲಿಗೆ ಭಾರತ 124 ರನ್ಗಳ ಬೃಹತ್ ಅಂತರದಲ್ಲಿ ಪಂದ್ಯವನ್ನ ಗೆದ್ದು ಫೈನಲ್ಗೆ ಗ್ರ್ಯಾಂಡ್ ಆಗಿ ಲಗ್ಗೆ ಇಟ್ಟಿದೆ. ಭಾರತದ ಪರ ಬುಮ್ರಾ, ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ಸ್ ಬೇಟೆಯಾಡಿದ್ರೆ ವಾಷಿಂಗ್ಟನ್ ಸುಂದರ್ ಕೂಡ 1 ವಿಕೆಟ್ ಉರುಳಿಸಿದ್ರು. ಹೀಗೆ ಭಾರತ ಅದ್ಧೂರಿಯಾಗಗಿ ಫೈನಲ್ಗೆ ನುಗ್ಗೋದ್ರ ಜೊತೆಗೆ ಹಲವು ದಾಖಲೆಗಳನ್ನೂ ಬರೆದಿದೆ.
ಲಂಕಾದಹನ ಮಾಡಿದ ಭಾರತ!
ಟೆಸ್ಟ್ ಸದಸ್ಯ ರಾಷ್ಟ್ರಗಳ ವಿರುದ್ಧ ಟಿ-20ಐನಲ್ಲಿ ಶ್ರೀಲಂಕಾದ ಜಂಟಿ ಕನಿಷ್ಠ ಮೊತ್ತ
2019 ರಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ 45 ರನ್ ಗಳಿಗೆ ಆಲೌಟ್
ಏಷ್ಯನ್ ಗೇಮ್ಸ್ ನ ಸೆಮಿಫೈನಲ್/ಫೈನಲ್ ಹಂತದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ವಿಕ್ಟರಿ
ಭಾರತೀಯ ಬ್ಯಾಟ್ಸ್ ಮನ್ ಕಿಶನ್ ನಾಕೌಟ್ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ
46 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಅಜೇಯ 80 ರನ್
59 ಎಸೆತಗಳಲ್ಲೇ ಆಲೌಟ್.. ಟೆಸ್ಟ್ ಆಡುವ ಪ್ರಮುಖ ರಾಷ್ಟ್ರವೊಂದರ ಕಳಪೆ ದಾಖಲೆ
ಭಾರತಕ್ಕೆ ಏಷ್ಯನ್ ಗೇಮ್ಸ್ ನಲ್ಲಿ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ದಾಖಲೆ
ಹೀಗೆ ಭಾರತ ಏಷ್ಯನ್ ಗೇಮ್ಸ್ನಲ್ಲಿ ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಫೈನಲ್ಗೆ ಲಗ್ಗೆ ಇಟ್ಟಿದೆ. ಬಟ್ ಈ ಬಾರಿಯ ಫೈನಲ್ ಪಂದ್ಯ ಕ್ರಿಕೆಟ್ ಜಗತ್ತನ್ನೇ ಸೆಳೀತಿದೆ. ಅದಕ್ಕೆ ಕಾರಣ ಏಷ್ಯನ್ ಗೇಮ್ಸ್ನ ಇತಿಹಾಸದಲ್ಲಿ ಭಾರತ ಪಾಕ್ ಮೊದಲ ಬಾರಿಗೆ ಮುಖಾಮುಖಿ ಆಗಲಿದ್ದಾರೆ. ಅದೂ ಕೂಡ ಫೈನಲ್ನಲ್ಲಿ ಎದುರು ಬದುರಾಗ್ತಿದ್ದಾರೆ. ಪಾಕಿಸ್ತಾನದ ಸದ್ಯದ ಸಿಚುಯೇಷನ್ ನೋಡಿದ್ರೆ ಭಾರತಕ್ಕೇ ಏಷ್ಯನ್ ಗೇಮ್ಸ್ನ ಗೋಲ್ಡ್ ಮೆಡಲ್ ಮತ್ತೆ ಸಿಗೋ ಎಲ್ಲಾ ಚಾನ್ಸಸ್ ಇದೆ.
ಟಿ-20 ವಿಶ್ವಕಪ್ & ಏಷ್ಯಾಕಪ್ ನಲ್ಲೂ ಭಾರತವೇ ಹಾಲಿ ಚಾಂಪಿಯನ್ಸ್!
ಟಿ-20 ಮಾದರಿಯಲ್ಲಿ ಭಾರತ ಸೂಪರ್ ಸಾಲಿಡ್ ಫಾರ್ಮ್ನಲ್ಲಿದ್ದು 2026ರ ಟಿ-20 ವಿಶ್ವಕಪ್ನಲ್ಲೂ ಚಾಂಪಿಯನ್ ಪಟ್ಟಕ್ಕೇರಿದೆ. 2025ರಲ್ಲಿ ನಡೆದಿದ್ದ ಏಷ್ಯಾಕಪ್ನಲ್ಲೂ ಭಾರತವೇ ಚಾಂಪಿಯನ್ಸ್. ಅದ್ರಲ್ಲೂ ಪಾಕಿಸ್ತಾನದ ವಿರುದ್ಧವೇ ಫೈನಲ್ ಗೆದ್ದು ಟ್ರೋಫಿ ಗೆದ್ದಿದ್ರು. ಕಳೆದ ನಾಲ್ಕು ವರ್ಷಗಳಿಂದ ಭಾರತದ ವಿರುದ್ಧ ಪಾಕಿಸ್ತಾನ ಟಿ-20ಐನಲ್ಲಿ ಒಂದೇ ಒಂದು ಪಂದ್ಯ ಗೆಲ್ಲೋಕಾಗಿಲ್ಲ. ಪಾಕಿಸ್ತಾನ ತಂಡವು ಭಾರತದ ವಿರುದ್ಧ ಕೊನೆಯದಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಗೆದ್ದಿದ್ದು 4 ಸೆಪ್ಟೆಂಬರ್ 2022 ರಂದು. ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2022ರ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಆ ಪಂದ್ಯದ ನಂತರ ನಡೆದ ಎಲ್ಲಾ ಟಿ20 ಮುಖಾಮುಖಿಗಳಲ್ಲಿ ಭಾರತವೇ ಗೆಲುವು ಸಾಧಿಸಿದೆ. ಸೋ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲೂ ಭಾರತವೇ ಗೆದ್ದು ಮತ್ತೊಮ್ಮೆ ಗೋಲ್ಡ್ ಮೆಡಲ್ಗೆ ಮುತ್ತಿಡೋದಂತೂ ಪಕ್ಕಾ. ಅಕ್ಟೋಬರ್ 3ರಂದು ಅಂದ್ರೆ ಶನಿವಾರ ಬೆಳಗ್ಗೆ 10 ಗಂಟೆಗೆ ಪಂದ್ಯ ಸ್ಟಾರ್ಟ್ ಆಗಲಿದೆ.

ನೋಡಿರಿ

