ND Vs SL.. ಯಾರಿಗೆ ಚಾನ್ಸ್? – ಬೌಂಡರಿ ಕಿಂಗ್ SKYಗೆ ಅಗ್ನಿಪರೀಕ್ಷೆ
RO-KO ಇಲ್ಲದ್ದೇ ಲಂಕೆಗೆ ಅದೃಷ್ಟನಾ?

ND Vs SL.. ಯಾರಿಗೆ ಚಾನ್ಸ್? – ಬೌಂಡರಿ ಕಿಂಗ್ SKYಗೆ ಅಗ್ನಿಪರೀಕ್ಷೆRO-KO ಇಲ್ಲದ್ದೇ ಲಂಕೆಗೆ ಅದೃಷ್ಟನಾ?

ಭಾರತ ವರ್ಸಸ್ ಶ್ರೀಲಂಕಾ ನಡುವಿನ ಹೈವೋಲ್ಟೇಜ್ ಕನದಕ್ಕೆ ಕೌಂಟ್ಡೌನ್ ಶುರುವಾಗಿದೆ.  ಟೀಮ್ ಇಂಡಿಯಾದ ನೂತನ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಮೊದಲ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟೀಮ್ ಇಂಡಿಯಾಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಟಿ20 ನಾಯಕನ ಪಟ್ಟಕ್ಕೇರಿರೋ ಸೂರ್ಯನ ಅಡಿಯಲ್ಲಿ ಲಂಕಾ ದಹನಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ. ಶನಿವಾರದಿಂದ ಟಿ20 ಸರಣಿ ಆರಂಭವಾಗಲಿದ್ದು, ಸೂರ್ಯಕುಮಾರ್ ನಾಯಕತ್ವದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮತ್ತೊಂದ್ಕಡೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸೋಕೆ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಈಗಾಗ್ಲೇ ಪ್ಲ್ಯಾನ್ ರೆಡಿ ಮಾಡಿದ್ದು ಬ್ಲ್ಯೂ ಬಾಯ್ಸ್ನ ಅಖಾಡಕ್ಕಿಳಿಸೋಕೆ ರೆಡಿಯಾಗಿದ್ದಾರೆ.  ಇಂದಿನ ಪಂದ್ಯದಲ್ಲಿ ಭಾರತದ ಪರ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ..? ಯಾರು ಬೆಂಚ್ ಕಾಯಿಸ್ತಾರೆ? ಸೂರ್ಯ ಮತ್ತೊಮ್ಮೆ ಸಿಡಿಯೋದು ಪಕ್ಕನಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕು

ಟಿ20 ಕ್ರಿಕೆಟ್ ಅಂದ್ರೆನೇ ಹೊಡಿಬಡಿ ಆಟ. ಇಲ್ಲೇನಿದ್ರೂ ಬ್ಯಾಟ್ ಸದ್ದು ಮಾಡಿದ್ರೇನೆ ಕಿಮ್ಮತ್ತು. ವಿಕೆಟ್ ಎಷ್ಟು ಉರುಳ್ತು ಅನ್ನೋದಕ್ಕಿಂಥ ರನ್ ಎಷ್ಟು ಸ್ಕೋರ್ ಆಯ್ತು ಅನ್ನೋದೇ ಮೇನ್ ಇಂಪಾರ್ಟೆಂಟ್. ಇಲ್ಲಿ ಬಾಲ್ಗಳನ್ನ ಸಿಕ್ಸ್, ಫೋರ್ ಅಂತಾ ಮೈದಾನದ ಮೂಲೆ ಮೂಲೆಗೂ ಚೆಂಡು ಅಟ್ಟೋನೇ ಹೀರೋ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಈ ಟ್ವೆಂಟಿ-ಟ್ವೆಂಟಿ ಫೈಟ್ ಅಂದ್ರೇನೆ ಸಿಕ್ಕಾಪಟ್ಟೆ ಮಜಾ. ಸದ್ಯ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಗೌತಮ್ ಗಂಭೀರ್ ಅವರ ಮುಖ್ಯ ಕೋಚಿಂಗ್ ಅಡಿಯಲ್ಲಿ ಟೀಂ ಇಂಡಿಯಾದ ಮೊದಲ ಸರಣಿ ಇದಾಗಿದೆ.

ಲಂಕಾ ಪ್ರವಾಸದ ಮೂಲಕ ಸೂರ್ಯನಿಗೆ ಅಗ್ನಿಪರೀಕ್ಷೆ 

ಟಿ20 ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳೋ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಂ ಇಂಡಿಯಾ ಚುಟುಕು ಸಮರಕ್ಕೆ ಸಜ್ಜಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರೋದ್ರಿಂದ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಇದೆ. ಸೂರ್ಯನಿಗೆ ಈ ಹಿಂದೆ 7 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರೋದರಿಂದ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಂತೂ ಇದೆ. ಆದ್ರೆ ಭಾರತದ ವಿಶ್ವ ಚಾಂಪಿಯನ್ ಹಿರಿಮೆಯನ್ನು ಮುಂದುವರೆಸುವ ಭಾರ ಅವರ ಮೇಲಿದೆ.  ಇನ್ನು ಸರಣಿ ಆರಂಭಕ್ಕೂ ಮುನ್ನವೇ ಎರಡೂ ತಂಡಗಳ ಆಟಗಾರರು ಗಾಯಗೊಂಡಿದ್ದಾರೆ. ಭಾರತ ತಂಡದ ಮೊಹಮ್ಮದ್ ಸಿರಾಜ್ ಗಾಯಗೊಂಡಿದ್ದು ಲಂಕಾ ಪ್ರವಾಸದಲ್ಲಿ ಕಣಕ್ಕಿಳಿಯೋ ಅನುಮಾನ ಇದೆ. ಇತ್ತ ಲಂಕಾ ತಂಡದ ಇಬ್ಬರು ಆಟಗಾರರು ಸರಣಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದು, ಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ವೇಗಿಗಳಾದ ನುವಾನ್ ತುಷಾರ ಮತ್ತು ದುಷ್ಮಂತ ಚಮೀರಾ ಗಾಯಕ್ಕೆ ತುತ್ತಾಗಿದ್ದು, ಅವರ ಬದಲಿಯಾಗಿ ಈಗಾಗಲೇ ಇಬ್ಬರು ಆಟಗಾರರು ತಂಡ ಸೇರಿಕೊಂಡಿದ್ದಾರೆ.

ಲಂಕಾ ಸಂಹಾರ ಮಾಡ್ತಾರಾ ಸೂರ್ಯ ಕುಮಾರ್?

ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ನೋಡೋಕಷ್ಟೇ ಸೈಲೆಂಟ್. ಆದ್ರೆ ಆಟ ಮಾತ್ರ ಸಿಕ್ಕಾಪಟ್ಟೆ ವೈಲೆಂಟ್. ದಂಡಂ ದಶಗುಣಂ ಆಟಕ್ಕೆ ಎತ್ತಿದ ಕೈ. ಮೈದಾನದಲ್ಲಿ ಕ್ರೀಸ್ ಕಚ್ಚಿ ನಿಂತ್ರು ಅಂದ್ರೆ ರನ್ ಸುನಾಮಿ ಸೃಷ್ಟಿಸ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಟ್ಟ ಮೂರೇ ವರ್ಷದಲ್ಲಿ ಟಿ20 ಕ್ರಿಕೆಟ್ ಲೋಕವನ್ನ ಕಬ್ಜಾ ಮಾಡಿ, ಅಧಿಪತಿಯಾಗಿ ಮೆರೆದಾಡ್ತಿದ್ದಾರೆ. ಮೋಸ್ಟ್ ಡೇಂಜರಸ್ ಬ್ಯಾಟರ್ ಅನ್ನೋ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಮಾಡ್ರನ್ ಕ್ರಿಕೆಟ್ನ ವಿಧ್ವಂಸಕಾರಿ ಬ್ಯಾಟ್ಸ್ಮನ್ ಟಿ20 ಕ್ರಿಕೆಟ್ನಲ್ಲಿ ಸೂರ್ಯನ ಹೆಸರು ಹೇಳಿದ್ರೆ ಸಾಕು, ಬೌಲರ್ಗಳು ಬೆಚ್ಚಿ ಬೀಳ್ತಾರೆ. ಆ ಮಟ್ಟಿಗೆ ಭಯ ಹುಟ್ಟಿಸಿದ್ದಾರೆ. ಇವರ ಬ್ಯಾಟ್ನಿಂದ ಸಿಡಿಯುವ ಸಿಕ್ಸರ್ಗಳಂತೂ ನಿಜಕ್ಕೂ ನಂಬಲು ಅಸಾಧ್ಯ. ಹಾಗೇಯೆ ಬೌಂಡರಿಗಳನ್ನ ನೀರು ಕುಡಿದಷ್ಟೇ ಸುಲಭವಾಗಿ ಬಾರಿಸುವ ಪಂಟರ್ ಕೂಡ ಹೌದು. ಅದ್ಯಾವ ಮಟ್ಟಿಗೆ ಅಂದರೆ ಬೌಂಡರಿ ಗಳಿಸೋದ್ರಲ್ಲಿ ಸೂರ್ಯ ಮುಂದೆ ಇನ್ನೊಬ್ಬ ಆಟಗಾರನಿಲ್ಲ. ಚ್ಯುಯಿಂಗ್ ಗಮ್ ಜಗಿಯುತ್ತಲೇ ಸೈಲೆಂಟ್ ಫೇಸ್ನಲ್ಲಿ ವೈಲೆಂಟ್ ಪ್ರದರ್ಶನ ನೀಡ್ತಾರೆ.

ಬೌಂಡರಿ ಕಿಂಗ್.. ಭಯಂಕರ ಸ್ಟ್ರೈಕ್ ರೇಟ್!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 65 ಇನ್ನಿಂಗ್ಸ್ ಆಡಿರೋ ಸೂರ್ಯ ಕಮ್ಮಿ ಎಸೆತದಲ್ಲಿ ಬೌಂಡ್ರಿ ಗಳಿಸೋದ್ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2340 ರನ್ ಗಳಿಸಿರೋ ಅವರು ಪ್ರತಿ 4.1 ಬಾಲ್ಗೆ ಬೌಂಡರಿ ಗಳಿಸಿದ್ದಾರೆ. 47 ಇನ್ನಿಂಗ್ಸ್ಗಳಿಂದ 1141 ರನ್ ಗಳಿಸಿದ ಫಿನ್ ಅಲೇನ್ ಕೂಡ ಸರಾಸರಿ 4.1 ಬಾಲ್ಗೆ ಬೌಂಡರಿ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ನ ಆಂಡ್ರೆ ರಸೆಲ್ 71 ಇನ್ನಿಂಗ್ಸ್ ಆಟವಾಡಿ 1033 ರನ್ ಬಾರಿಸಿದ್ದು, ಪ್ರತಿ 4.3 ಎಸೆತಕ್ಕೆ ಬೌಂಡರಿ ಗಳಿಸಿದ್ದಾರೆ. ಎವಿನ್ ಲೆವೆಸ್ 52 ಇನ್ನಿಂಗ್ಸ್ಗಳಿಂದ 1465 ರನ್ ಗಳಿಸಿದ್ದು 4.4 ಎಸೆತಕ್ಕೊಂದು ಬೌಂಡರಿ ಬಾರಿಸಿದ್ದಾರೆ. ಕಾಲಿನ್ ಮುನ್ರೋ 62 ಇನ್ನಿಂಗ್ಸ್ ಆಡಿದ್ದು, 1724 ರನ್ ಗಳಿಸಿದ್ದಾರೆ. ಪ್ರತಿ 4.6 ಎಸೆತಕ್ಕೊಂದು ಬೌಂಡರಿ ಸಿಡಿಸಿದ್ದಾರೆ. ಹಾಗೇ ಸೂರ್ಯ ಟಿ20 ಕ್ರಿಕೆಟ್ನ ಬೆಸ್ಟ್ ಸ್ಟ್ರೈಕ್ರೇಟ್ ಬ್ಯಾಟ್ಸ್ಮನ್. ಇದೇ ಕಾರಣಕ್ಕೆ ಸೂರ್ಯ ಹೆಚ್ಚು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 167.74ರ ಭಯಾನಕ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. ಇದು ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲಿ 3ನೇ ಗರಿಷ್ಠ ಸ್ಟ್ರೈಕ್ರೇಟ್ ಆಗಿದೆ. ಬಿಲಾಲ್ ಜಲ್ಮಿ 176.01 ಹಾಗೂ ಕೆಜಿ ಸ್ಟ್ಯಾಂಗೋ 175.44 ಸ್ಟ್ರೈಕ್ ರೇಟ್ ಮೂಲಕ ಮೊದಲೆರಡು ಸ್ಥಾನದಲ್ಲಿದ್ದಾರೆ. ಸದ್ಯ ಅತ್ಯದ್ಭುತ ಫಾರ್ಮ್ನಲ್ಲಿರೋ ಸೂರ್ಯ, ಇವರಿಬ್ಬರನ್ನ ಹಿಂದಿಕ್ಕಿ, ಸ್ಕೈಕ್ರೇಟ್ ಕಾ ಕಿಂಗ್ ಅನ್ನಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಅದ್ರಲ್ಲೂ ಬೌಂಡರಿ ಗಳಿಸೋದ್ರಲ್ಲಿ ಸೂರ್ಯ ಎಲ್ಲರನ್ನ ಚಕಿತಗೊಳಿಸಿದ್ದಾರೆ. ಆಡಿದ 65 ಇನ್ನಿಂಗ್ಸ್ಗಳಲ್ಲೇ ಈಗಾಗ್ಲೇ 207 ಬೌಂಡರಿ ಸಿಡಿಸಿದ್ದಾರೆ. ಆ ಮೂಲಕ ತಾನೋರ್ವ ಡೇಂಜರಸ್ ಬ್ಯಾಟರ್ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅವರ ವೀರಾವೇಶ, ಸಿಕ್ಸರ್-ಬೌಂಡರಿಗಳ ಮೊರೆತ ಲಂಕಾ ಪ್ರವಾಸದಲ್ಲೂ ಮುಂದುವರೆಯೋ ನಿರೀಕ್ಷೆ ಇದೆ. ಇನ್ನು ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಷಭ್ ಪಂತ್,  ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಹಾಗೂ ಅರ್ಷದೀಪ್ ಸಿಂಗ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯೋ ಚಾನ್ಸ್ ಇದೆ.

ಲಂಕಾ ವಿರುದ್ಧ ಭಾರತದ ಮೇಲುಗೈ

ಭಾರತ ಮತ್ತು ಶ್ರೀಲಂಕಾ ತಂಡಗಳು ಈವರೆಗೆ 29 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಶ್ರೀಲಂಕಾ 9 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನು ಪಂದ್ಯ ನಡೆಯಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್  ಬ್ಯಾಟರ್ ಹಾಗೂ ಬೌಲರ್ಗಳಿಗೆ ಸಮನಾಗಿ ನೆರವಾಗಲಿದೆ. ಮೈದಾನವು ಬ್ಯಾಟರ್ಗಳಿಗೆ ಹೊಡಿಬಡಿ ಆಟಕ್ಕೆ ಬೆಸ್ಟ್ ಚಾಯ್ಸ್ ಆಗಿದೆ. ಮತ್ತೊಂದೆಡೆ ವೇಗದ ಬೌಲರ್ಗಳು ಹೊಸ ಚೆಂಡಿನೊಂದಿಗೆ ಪವರ್ಪ್ಲೇ ಸಮಯದಲ್ಲಿ ವಿಕೆಟ್ ಟೇಕಿಂಗ್ ಪ್ರದರ್ಶನ ನೀಡಬಹುದು. ಇದೆಲ್ಲದ್ರ ನಡುವೆ ಶಾಕಿಂಗ್ ವಿಚಾರ ಅಂದ್ರೆ ಆಕ್ಯುವೆದರ್ ಪ್ರಕಾರ, ಜುಲೈ 27ರ ಶನಿವಾರದಂದು ಪಲ್ಲೆಕೆಲೆಯಲ್ಲಿ 88ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಂಭಾವ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಕೊಹ್ಲಿ ಮತ್ತು ರೋಹಿತ್ ಇಲ್ಲದ ಟಿ-20 ಯುದ್ಧ

ಟೀಂ ಇಂಡಿಯಾ ಅಂತಾ ಬಂದ್ರೆ ಫಸ್ಟ್ ನೆನಪಾಗೋದೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಆದ್ರೆ ಟಿ-20 ವಿಶ್ವಕಪ್ ಬಳಿಕ ಇಬ್ಬರೂ ಆಟಗಾರರು ನಿವೃತ್ತಿ ಘೋಷಣೆ ಮಾಡಿದ್ದರು. ಹಾಗೇ ರವೀಂದ್ರ ಜಡೇಜಾರಂಥ ಅನುಭವಿ ಆಟಗಾರರು ಇಲ್ಲದೆ ಭಾರತ ತಂಡವು ಪ್ರಮುಖ ಸರಣಿಯಲ್ಲಿ ಆಡುತ್ತಿದೆ. ಅಂತಾರಾಷ್ಟ್ರೀಯ ಕೋಚ್ ಆಗಿ ಗಂಭೀರ್ಗೆ ಇದು ಮೊದಲ ಸರಣಿ. ಅಲ್ಲದೆ ಪೂರ್ಣಪ್ರಮಾಣದಲ್ಲಿ ಟಿ20 ನಾಯಕತ್ವ ಪಡೆದ ಸೂರ್ಯಕುಮಾರ್ಗೂ ಇದು ಮೊದಲ ಸವಾಲು. ಯುವ ಪಡೆಯೇ ಇರುವ ತಂಡಕ್ಕೆ ಕೋಚಿಂಗ್ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ತವರಿನಲ್ಲಿ ಭಾರತಕ್ಕೆ ಸೋಲುಣಿಸಲು ಲಂಕಾ ಕಸರತ್ತು!

ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದ ಶ್ರೀಲಂಕಾ ತಂಡದಲ್ಲಿ ಸಾಲು ಸಾಲು ಸವಾಲುಗಳಿವೆ. ತಂಡದ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ವನಿಂದು ಹಸರಂಗ, ಕೋಚ್ ಕ್ರಿಸ್ ಸಿಲ್ವರ್ವುಡ್ ಹಾಗೂ ಸಲಹೆಗಾರ ಮಹೇಲ ಜಯವರ್ಧನೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾರತೀಯ ತಂಡದಲ್ಲಿ ಅನುಭವಿ ಆಟಗಾರರ ಅನುಪಸ್ಥಿತಿಯ ಲಾಭ ಪಡೆಯಲು ಪ್ಲ್ಯಾನ್ ರೂಪಿಸ್ತಿದ್ದಾರೆ. ಹಾಗೇ ತಂಡವನ್ನು ನಾಯಕನಾಗಿ ಮುನ್ನಡೆಸುವ ಜವಾಬ್ದಾರಿಯು ಭರವಸೆಯ ಬ್ಯಾಟರ್ ಚರಿತ್ ಅಸಲಂಕ ಮೇಲಿದೆ. ಅಲ್ದೇ ಶ್ರೀಲಂಕಾ ತನ್ನ ತವರು ಪಿಚ್ನಲ್ಲಿ ಆಡುತ್ತಿರುವ ಕಾರಣ ತನ್ನ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಟಿ20 ಪಂದ್ಯಗಳು ಪಲ್ಲೆಕೆಲೆ ಮೈದಾನದಲ್ಲಿ ನಡೆಯುತ್ತಿದ್ದು, ಸಂಜೆ 7 ಗಂಟೆಗೆ ಆರಂಭವಾಗಲಿದೆ. ಒಟ್ನಲ್ಲಿ ಟಿ-20 ವಿಶ್ವಕಪ್ ಹಾಗೇ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಗೆದ್ದು ಬೀಗಿರೋ ಟೀಂ ಇಂಡಿಯಾ ಲಂಕಾ ನೆಲದಲ್ಲೂ ಗೆಲುವಿನ ಪತಾಕೆ ಹಾರಿಸೋಕೆ ಸಜ್ಜಾಗಿದೆ.

Shwetha M

Leave a Reply

Your email address will not be published. Required fields are marked *