ಲಂಕೆ ಚೆಂಡಾಡಿದ ಸುತಾರ್, ಜಡ್ಡು – ಮ್ಯಾಚ್ ದಿಕ್ಕು ಬದಲಿಸಿದ್ದೇ ಪ್ರಸಿದ್ಧ್
ಕನ್ನಡಿಗರ ಕೈಯಲ್ಲಿ ಗಾಲೆ ಪಂದ್ಯ

ಲಂಕೆ ಚೆಂಡಾಡಿದ ಸುತಾರ್, ಜಡ್ಡು – ಮ್ಯಾಚ್ ದಿಕ್ಕು ಬದಲಿಸಿದ್ದೇ ಪ್ರಸಿದ್ಧ್ಕನ್ನಡಿಗರ ಕೈಯಲ್ಲಿ ಗಾಲೆ ಪಂದ್ಯ

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಗಿದಿದೆ. ಮೊದಲ ಎರಡೂ ದಿನ ಬ್ಯಾಟಿಂಗ್​ನಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡಿದ್ದ ಭಾರತ ಮೂರನೇ ದಿನ ಬೌಲಿಂಗ್​ನಲ್ಲಿ ಸ್ವಲ್ಪ ಸ್ಟ್ರಗಲ್ ಕಾಣ್ತಿತ್ತು. ಹೀಗಿದ್ರೂ ಕೊನೇ ಸೆಷನ್​ನಲ್ಲಿ ಕಂ ಬ್ಯಾಕ್ ಮಾಡಿದ ಬೌಲರ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್ ತಗೊಂಡ್ರು.

ಇದನ್ನೂ ಓದಿ : ಲಂಕೆಯಲ್ಲಿ ಗೆದ್ರೂ INDಗಿಲ್ಲ ರಿಲೀಫ್ – 9 ಮ್ಯಾಚ್.. ಟಾರ್ಗೆಟ್ ಗೆಲುವೆಷ್ಟು?

ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರದಿಂದ ಆರಂಭವಾಗಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ದ ಭಾರತಕ್ಕೆ ಒಳ್ಳೆಯ ಆರಂಭವೇ ಸಿಕ್ಕಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್‌ಗಳಿಗೆ ಆಲೌಟ್ ಆಯಿತು. ದೇವದತ್ ಪಡಿಕ್ಕಲ್ ಅವ್ರ 167 ರನ್​ಗಳ ಇನ್ನಿಂಗ್ಸ್, ಕೆಎಲ್ ರಾಹುಲ್ ಅವ್ರ 82 ರನ್ಸ್ ಹಾಗೇ ಧ್ರುವ್ ಜುರೇಲ್ ಅವ್ರ ಅರ್ಧಶತಕದ ನೆರವಿನಿಂದ ಭಾರತ ಉತ್ತಮ ರನ್ಸ್ ಕಲೆ ಹಾಕಿತ್ತು. ಹೀಗಾಗಿ ಬಿಗ್ ಸ್ಕೋರ್ ಬೆನ್ನಟ್ಟಿದ ಶ್ರೀಲಂಕಾ ಪರ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿತ್ತು. ಹೀಗಿದ್ರೂ ಮಿಡಲ್ ಆರ್ಡರ್​ನಲ್ಲಿ ಇಬ್ಬರು ಬ್ಯಾಟರ್​ಗಳು ಅಕ್ಷರಶಃ ಕಾಟ ಕೊಟ್ರು.

ಬೌಲಿಂಗ್ ನಲ್ಲೂ ಕಟ್ಟಿ ಹಾಕಿದ ಭಾರತ!

462 ರನ್ ಗಳ ಗುರಿ ಬೆನ್ನಟ್ಟಿದ ಲಂಕಾಗೆ ಮೊದಲ ಓವರ್ ನಲ್ಲೇ ಆಘಾತ

ಮೊಹಮ್ಮದ್ ಸಿರಾಜ್ 2ನೇ ಎಸೆತದಲ್ಲೇ ನಿಶಾನ್ ಮದುಷ್ಕ ಔಟ್

ಟಾಪ್-5 ಬ್ಯಾಟರ್ಸ್ 30 ರನ್ಸ್ ಒಳಗೆ ಔಟ್.. 99 ರನ್ಸ್ ಗೆ 5 ವಿಕೆಟ್..

ಸೋನಾಲ್ ದಿನುಷಾ ಮತ್ತು ನಿರೋಷನ್ ಡಿಕ್ವೆಲ್ಲಾ ಅದ್ಭುತ ಜೊತೆಯಾಟ

6ನೇ ವಿಕೆಟ್‌ಗೆ 124 ರನ್‌ಗಳ ಜೊತೆಯಾಟ, ಲಂಕಾ ತಂಡಕ್ಕೆ ನಿಟ್ಟುಸಿರು

ಭಾರತಕ್ಕೆ ತಲೆಬಿಸಿಯಾಗಿದ್ದ ಇಬ್ಬರ ಪಾರ್ಟ್ನರ್ ಶಿಪ್ ಮುರಿದ ಪ್ರಸಿದ್ಧ್

ಸೋನಾಲ್ 100 ರನ್, ನಿರೋಷನ್ ಡಿಕ್ವೆಲ್ಲಾ 80 ರನ್ ಗಳಿಸಿ ಔಟ್

284 ರನ್ ಗಳಿಗೆ ಲಂಕಾ ಆಲೌಟ್, ಭಾರತಕ್ಕೆ 178 ರನ್ಸ್ ಮುನ್ನಡೆ

ಸುತಾರ್ 4, ಜಡೇಜಾ 3, ಸಿರಾಜ್, ಪ್ರಸಿದ್ಧ್, ಕುಲ್ದೀಪ್ ತಲಾ 1 ವಿಕೆಟ್

ಫಾಲೋ ಆನ್ ಹೇರುವ ಅವಕಾಶ ತಪ್ಪಿಸಿಕೊಂಡ ಟೀಂ ಇಂಡಿಯಾ

ಮೊದಲ ಎರಡೂ ದಿನ ಬ್ಯಾಟಿಂಗ್​ನಲ್ಲಿ ಲಂಕಾ ಬೌಲರ್​ಗಳಿಗೆ ಕಾಟ ಕೊಟ್ಟಿದ್ದ ಭಾರತ ಮೂರನೇ ದಿನದಾಟದಲ್ಲಿ ಇಡೀ ಲಂಕಾ ತಂಡವನ್ನು ಆಲೌಟ್ ಮಾಡಿದ್ರು. ಮೂರು ದಿನಗಳಲ್ಲಿ ಮೊದಲ ಇನ್ನಿಂಗ್ಸ್ ಮುಗಿದಿದ್ದು ನಾಳೆಯ ಆಟ ಭಾರತಕ್ಕೆ ಮುಖ್ಯವಾಗಲಿದೆ. ನಾಳೆ ಎಷ್ಟು ಸ್ಕೋರ್ ಸೆಟ್ ಮಾಡಿ ಲಂಕಾ ಪಡೆಯನ್ನ ಆಲೌಟ್ ಮಾಡ್ತಾರೆ.

Shantha Kumari