IND Vs SA.. ಭಾರತಕ್ಕೆ ಟ್ರೋಫಿ? – ಅಜೇಯ ತಂಡಗಳಲ್ಲಿ ಯಾರು ಸ್ಟ್ರಾಂಗ್?
ಫೈನಲ್ ಪಂದ್ಯಕ್ಕೆ ಮಳೆ ಬಂದ್ರೆ ಹೇಗೆ?

IND Vs SA.. ಭಾರತಕ್ಕೆ ಟ್ರೋಫಿ? – ಅಜೇಯ ತಂಡಗಳಲ್ಲಿ ಯಾರು ಸ್ಟ್ರಾಂಗ್?ಫೈನಲ್ ಪಂದ್ಯಕ್ಕೆ ಮಳೆ ಬಂದ್ರೆ ಹೇಗೆ?

ಟಿ-20 ವಿಶ್ವಕಪ್​ನ ರಣರೋಚಕ ಕದನಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನಾಲ್ಕು ವಾರಗಳ ಮಹಾ ಕದನದ ಕಿಂಗ್ ಯಾರು ಅನ್ನೋದು ಡಿಸೈಡ್ ಆಗೋಕೆ ಇರೋದು ಇನ್ನೊಂದೇ ಹೆಜ್ಜೆ. ಶನಿವಾರ ನಡೆಯಲಿರುವ ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ಹೈವೋಲ್ಟೇಜ್ ಫೈನಲ್ ಫೈಟ್​ನಲ್ಲಿ 2024ರ ಚುಟುಕು ಸಮರದ ಚಾಂಪಿಯನ್ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ. ಸೋಲೇ ಕಾಣದೇ ಫಿನಾಲೆಗೆ ಲಗ್ಗೆ ಇಟ್ಟಿರೋ ಉಭಯ ತಂಡಗಳ ನಡುವೆ ನೆಕ್​ ಟು ನೆಟ್ ಫೈಟ್ ನಡೆಯೋದ್ರಲ್ಲಿ ಅನುಮಾನವೇ ಇಲ್ಲ. ಅಷ್ಟಕ್ಕೂ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯದ ಸ್ಪೆಷಾಲಿಟಿ ಏನು? ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಈ ಗೆಲುವು ಎಷ್ಟು ಮುಖ್ಯ? ವಿಶ್ವಕಪ್​ನ ಟ್ರೋಫಿ ಯಾರ ಮುಡಿಗೇರಲಿದೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ಕುಗ್ಗಿದ ಕೊಹ್ಲಿಗೆ HITಮ್ಯಾನ್ ಬೂಸ್ಟ್ – ವಿಶ್ವಕಪ್ ಕಿರೀಟ ನಿನಗೇ ಎಂದ ಗೆಳೆಯ

ಚುಟುಕು ಸಮರದ ಸೆಮಿಫೈನಲ್ ಕದನದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಟೀಂ ಇಂಡಿಯಾ ಫಿನಾಲೆಗೆ ಲಗ್ಗೆ ಇಟ್ಟಿದೆ. ಟಿ20 ವಿಶ್ವಕಪ್‌ ಫೈನಲ್‌ಗೆ ಭಾರತ ಪ್ರವೇಶಿಸುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮುನ್ನ 2007ರಲ್ಲಿ ಮತ್ತು 2014ರಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಆದ್ರೆ ಫೈನಲ್‌ನಲ್ಲಿ ಗೆದ್ದದ್ದು 2007ರಲ್ಲಿ ಮಾತ್ರ. ಇದೀಗ ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಫೈನಲ್​ಗೆ ಎಂಟ್ರಿ ಕೊಟ್ಟಿದೆ.  ಈ ಮೂಲಕ 2022ರಲ್ಲಿ ಇಂಗ್ಲೆಂಡ್ ವಿರುದ್ಧದ 10 ವಿಕೆಟ್‌ಗಳ ಹೀನಾಯ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. ಈಗ ಭಾರತಕ್ಕೆ ಇರೋ ಗುರಿ ಒಂದೇ. ಅದು ಚಾಂಪಿಯನ್ ಪಟ್ಟಕ್ಕೇರೋದು. ದಕ್ಷಿಣಾ ಆಫ್ರಿಕಾ ತಂಡವನ್ನ ಸೋಲಿಸುವ ಮೂಲಕ 2ನೇ ಬಾರಿಗೆ ಟಿ-20 ವಿಶ್ವಕಪ್​ನ ಮಹಾರಾಜನಾಗಲು ರೋಹಿತ್ ಶರ್ಮಾ ಪಡೆ ರೆಡಿಯಾಗಿದೆ. ಮತ್ತೊಂದೆಡೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫೈನಲ್ ಘಟ್ಟಕ್ಕೆ ಬಂದಿರೋ ದಕ್ಷಿಣಾ ಆಫ್ರಿಕಾ ತಂಡ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಡೋ ತವಕದಲ್ಲಿದೆ. ಹೀಗಾಗಿ ಶನಿವಾರದ ಅಂತಿಮ ಹಣಾಹಣಿ ಉಭಯ ತಂಡಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಟಿ-20 ವಿಶ್ವಕಪ್​ನ ಫೈನಲ್ ಪಂದ್ಯವು ಜೂನ್ 29ರಂದು ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಐಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಗಳು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಮುಖಾಮುಖಿಯಾಗಲಿವೆ. ಅಲ್ದೇ 2024ರ ಟಿ-20 ವಿಶ್ವಕಪ್ ಫೈನಲ್ ಪಂದ್ಯ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಅಜೇಯ ತಂಡಗಳ ಮೆಗಾ ಫೈಟ್!

ಭಾರತ ಮತ್ತು ಸೌತ್ ಆಫ್ರಿಕಾ ಉಭಯ ತಂಡಗಳು ಒಂದೂ ಪಂದ್ಯವನ್ನ ಸೋಲದೇ ಫೈನಲ್ ಪ್ರವೇಶಿಸಿವೆ. ಸೌತ್ ಆಫ್ರಿಕಾ ತಂಡವು ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ದ್ವಿತೀಯ ಸುತ್ತಿನಲ್ಲಿ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಸೆಮಿಫೈನಲ್​ನಲ್ಲಿ ಗೆಲ್ಲುವ ಮೂಲಕ ಒಟ್ಟು 8 ಮ್ಯಾಚ್​ಗಳಲ್ಲಿ ವಿಜಯ ಸಾಧಿಸಿದೆ. ಇತ್ತ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ 3 ಜಯ ಸಾಧಿಸಿತ್ತು. ಆದ್ರೆ ಕೆನಡಾ ವಿರುದ್ಧದ ನಾಲ್ಕನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ದ್ವಿತೀಯ ಸುತ್ತಿನಲ್ಲಿ ಭಾರತ 3 ಗೆಲುವು ದಾಖಲಿಸಿದೆ. ಇದೀಗ ಸೆಮಿಫೈನಲ್​ನಲ್ಲೂ ಗೆದ್ದು ಬೀಗುವ ಮೂಲಕ ಫೈನಲ್​ಗೆ ಪ್ರವೇಶಿಸಿದೆ. ಈ ಮೂಲಕ ಸತತ 7 ಗೆಲುವು ಕಂಡಿರುವ ಟೀಮ್ ಇಂಡಿಯಾ 8 ಜಯ ಸಾಧಿಸಿರುವ ಸೌತ್ ಆಫ್ರಿಕಾ ವಿರುದ್ಧ ಸೆಣಸಲು ಎಂಟ್ರಿ ಕೊಟ್ಟಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್​ನಲ್ಲಿ ಆಡುವ ತಂಡಗಳು ಅಜೇಯರಾಗಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿವೆ. ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡ 11 ಬಾರಿ ಗೆಲುವು ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ. ಇಲ್ಲಿ ಉಭಯ ತಂಡಗಳು ಒಂದೂ ಪಂದ್ಯ ಸೋಲದೆ ಫಿನಾಲೆಗೆ ಎಂಟ್ರಿ ಕೊಟ್ಟಿರೋದ್ರಿಂದ  ಗೆಲುವಿನ ಲಯದಲ್ಲಿರುವುದು ಸ್ಪಷ್ಟ.

ಸದ್ಯ ಇಂಗ್ಲೆಂಡ್ ವಿರುದ್ಧ ಗೆದ್ದಿರುವ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಮೂಲಕ  ಎರಡನೇ ಬಾರಿ ಟಿ20 ವಿಶ್ವಕಲ್‌ 2024ರ ಚಾಂಪಿಯನ್ ಆಗೋ ತವಕದಲ್ಲಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ಹೀಗಾಗಿ ಶತಾಯ ಗತಾಯ ಟ್ರೋಫಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಆದ್ರೆ ಈ ಪಂದ್ಯಕ್ಕೆ ಮಳೆ ಭೀತಿ ಕಾಡ್ತಿದೆ. ಈಗಾಗ್ಲೇ ಹಲವು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಆದ್ರೆ ಫೈನಲ್ ಪಂದ್ಯ ಮಳೆ ಬಂದ್ರೂ ರದ್ದಾಗೋದಿಲ್ಲ. ಯಾಕಂದ್ರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಟಿ20 ವಿಶ್ವಕಪ್‌ನ ಈ ಅಂತಿಮ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನೂ ನಿಗದಿಪಡಿಸಿದೆ. ಮಳೆಯಿಂದಾಗಿ ಈ ಪಂದ್ಯವನ್ನು ಜೂನ್ 29 ರಂದು ನಡೆಸಲು ಸಾಧ್ಯವಾಗದಿದ್ದರೆ, ಮರುದಿನ ಅಂದರೆ ಜೂನ್ 30 ಕ್ಕೆ ಪೂರ್ಣಗೊಳ್ಳುತ್ತದೆ.

ಹೇಗಿದೆ ಪಿಚ್?  

ಫೈನಲ್ ಪಂದ್ಯ ನಡೆಯಲಿರುವ ಬಾರ್ಬಡೋಸ್​ನ ಮೈದಾನದಲ್ಲಿ ಭಾರತ ಈವರೆಗೆ ಒಟ್ಟು 3 ಪಂದ್ಯಗಳನ್ನು ಆಡಿದೆ. 2010 ರ ಟಿ 20 ವಿಶ್ವಕಪ್​ನಲ್ಲಿ ಮೇ 7ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 49 ರನ್ ಗಳಿಂದ ಮಣಿಸಿತ್ತು. 184ರನ್​ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಕೇವಲ 135ಕ್ಕೆ ಆಲೌಟ್ ಆಗಿತ್ತು. ಇದಾದ ಎರಡು ದಿನಗಳ ನಂತರ ಇದೇ ಮೈದಾನದಲ್ಲಿ ಭಾರತ ತಂಡ ಮೇ 9 ರಂದು ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ವಿರುದ್ಧ ಭಾರತ 14 ರನ್​ಗಳ ಸೋಲು ಕಂಡಿತ್ತು. ವಿಂಡೀಸ್​ 169ರನ್​ಗಳಿಸಿದರೆ, ಭಾರತ 155ರನ್​ಗಳಿಸಿ ಸೋಲೊಪ್ಪಿಕೊಂಡಿತ್ತು. ಇನ್ನು 3ನೇ ಪಂದ್ಯವನ್ನ 2024ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಆಡಿತ್ತು. ಈ ಪಂದ್ಯವನ್ನ ಟೀಮ್ ಇಂಡಿಯಾ ಸುಲಭವಾಗಿ ಗೆದ್ದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್​ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ  ಅಫ್ಘಾನಿಸ್ತಾನ್ ತಂಡವನ್ನ 134ಕ್ಕೆ ಆಲೌಟ್ ಮಾಡಿತ್ತು. ಇನ್ನು ಈ ಮೈದಾನದಲ್ಲಿ ಒಟ್ಟು 32 ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಹೆಚ್ಚಾಗಿ ಡಾಮಿನೇಟ್ ಮಾಡಿರೋದು ಫಲಿತಾಂಶಗಳಿಂದ ಗೊತ್ತಾಗಿದೆ. ಒಟ್ಟು 32 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 19 ಗೆಲುವುಗಳನ್ನು ದಾಖಲಿಸಿದ್ದರೆ, ಮೊದಲು ಬೌಲಿಂಗ್ ಮಾಡುವ ತಂಡವು ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಉಳಿದ ಪಂದ್ಯಗಳು ರದ್ದಾಗಿವೆ.

ಸದ್ಯ ಟೀಂ ಇಂಡಿಯಾದ ಗೆಲುವಿನ ಸವಾರಿ ನೋಡ್ತಿದ್ರೆ ಫೈನಲ್ ಪಂದ್ಯವನ್ನೂ ಗೆದ್ದು ಕಪ್ ಎತ್ತಿ ಹಿಡೀತಾರೆ ಅಂತಾ ಕೋಟಿ ಕೋಟಿ ಭಾರತೀಯರು ಕಾಯ್ತಿದ್ದಾರೆ. ಹಾಗೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗ್ತಿದೆ. ಓಪನರ್ ಆಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಷ್​ದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇರ್ತಾರೆ. ಈ ಮೂಲಕ ಬಲಿಷ್ಠ ಬಣದೊಂದಿಗೆ ಫೈನಲ್ ಪಂದ್ಯಕ್ಕೆ ರೆಡಿಯಾಗ್ತಿರೋ ಭಾರತ 17 ವರ್ಷಗಳ ಬಳಿಕ ಟ್ರೋಫಿ ಗೆಲ್ಲೋ ನಿರೀಕ್ಷೆಯಲ್ಲಿದೆ.

Shwetha M

Leave a Reply

Your email address will not be published. Required fields are marked *