INDಗೆ ವಿಶ್ವ ಚಾಂಪಿಯನ್ಸ್ ಚಾಲೆಂಜ್ – ಟೆಂಬಾ ಟೀಂ ಬೇಟೆಗೆ ಗಿಲ್ ಪಡೆ ರೆಡಿ
2 ಟೆಸ್ಟ್ ಮ್ಯಾಚ್.. ಹೇಗಿದೆ ಹಿಸ್ಟರಿ?

ಒಂದ್ಕಡೆ ಮೂರೂ ಫಾರ್ಮೆಟ್ನಲ್ಲಿ ಡಾಮಿನೇಟ್ ಮಾಡ್ತಿರೋ ಭಾರತ.. ಇನ್ನೊದ್ಕಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ಸ್ ಸೌತ್ ಆಫ್ರಿಕಾ ಟೀಂ. ಮೂರೂ ಮಾದರಿ ಟೆಸ್ಟ್, ಏಕದಿನ ಌಂಡ್ ಟಿ-20ಐ ಸರಣಿಗಾಗಿ ಹರಿಣಗಳ ಪಡೆ ಭಾರತಕ್ಕೆ ಎಂಟ್ರಿ ಕೊಡಲಿದೆ. ಮೊದ್ಲಿಗೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ಮೊದಲ ಪಂದ್ಯ ನವೆಂಬರ್ 14 ರಿಂದ ಅಂದ್ರೆ ಇದೇ ಶುಕ್ರವಾರದಿಂದ ಆರಂಭವಾಗ್ಲಿದೆ. ಮೊದಲ ಪಂದ್ಯ ಕ್ರಿಕೆಟ್ ಕಾಶಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಇನ್ನು ಎರಡನೇ ಪಂದ್ಯ ನವೆಂಬರ್ 22ರಿಂದ 26ರವರೆಗೆ ಗುವಾಹಟಿಯಲ್ಲಿ ನಡೆಯಲಿದೆ. ಕಳೆದ ಬಾರಿ ಇಂಗ್ಲೆಂಡ್ ವಿರುದ್ಧದ ರೆಡ್ ಬಾಲ್ ಸಿರೀಸ್ನಲ್ಲಿ ಡ್ರಾ ಸಾಧಿಸಿದ್ದ ಭಾರತ ಕಾನ್ಫಿಡೆಂಟ್ ಆಗಿಯೇ ರೆಡಿಯಾಗಿದೆ.
ಇದನ್ನೂ ಓದಿ : ಮೋದಿ ಗ್ರೌಂಡಲ್ಲಿ T-20WC ಫೈನಲ್ – 5 ನಗರ.. ಬೆಂಗಳೂರು ಕೈ ಬಿಟ್ಟಿದ್ದೇಕೆ?
ಬ್ಯಾಟರ್ಸ್
ಶುಭ್ ಮನ್ ಗಿಲ್
ಯಶಸ್ವಿ ಜೈಸ್ವಾಲ್
ಕೆಎಲ್ ರಾಹುಲ್
ದೇವದತ್ ಪಡಿಕ್ಕಲ್
ಸಾಯಿ ಸುದರ್ಶನ್
ವಿಕೆಟ್ ಕೀಪರ್ಸ್
ರಿಷಭ್ ಪಂತ್
ಧ್ರುವ್ ಜುರೇಲ್
ಆಲ್ ರೌಂಡರ್ಸ್
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್
ಅಕ್ಷರ್ ಪಟೇಲ್
ನಿತೀಶ್ ಕುಮಾರ್ ರೆಡ್ಡಿ
ಬೌಲರ್ಸ್
ಕುಲ್ದೀಪ್ ಯಾದವ್
ಆಕಾಶ್ ದೀಪ್
ಜಸ್ಪ್ರೀತ್ ಬುಮ್ರಾ
ಮೊಹಮ್ಮದ್ ಸಿರಾಜ್
ಇನ್ನು ಈ ಸರಣಿಗೆ ಟೀಂ ಇಂಡಿಯಾ ಫ್ಯಾನ್ಸ್ ಗೆ ಗುಡ್ ನ್ಯೂಸ್ ಏನಪ್ಪಾ ಅಂದ್ರೆ ರಿಷಭ್ ಪಂತ್ ಕಮ್ ಬ್ಯಾಕ್. ಇಂಗ್ಲೆಂಡ್ ಸಿರೀಸ್ನಲ್ಲಿ ಕಾಲಿಗೆ ಗಾಯವಾಗಿ ರೆಸ್ಟ್ನಲ್ಲಿದ್ದ ಪಂತ್ ಇತ್ತೀಗಷ್ಟೇ ಸೌತ್ ಆಫ್ರಿಕಾ ವಿರುದ್ಧದ ಭಾರತ ಎ ತಂಡದಲ್ಲಿ ಆಡಿದ್ದಾರೆ. ಬಟ್ ಈ ಸರಣಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣರನ್ನ ಡ್ರಾಪ್ ಮಾಡಲಾಗಿದೆ. ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್ ಬಂದಿದ್ದಾರೆ. ಅಕ್ಷರ್ ಪಟೇಲ್ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನು 2024ರಲ್ಲಿ ಆಡಿದ್ದರು. ಮತ್ತೊಂದೆಡೆ ಆಸೀಸ್ ಸರಣಿ ಬಳಿಕ ಮೊಹಮ್ಮದ್ ಶಮಿಯನ್ನ ಈ ಬಾರಿಯೂ ಕೈಬಿಡಲಾಗಿದೆ. ಹಾಗೇ ರಣಜಿಯಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ಕೊಡ್ತಿರೋ ಕನ್ನಡಿಗ ಕರುಣ್ ನಾಯರ್ ಕೂಡ ಸ್ಥಾನ ಕಳ್ಕೊಂಡಿದ್ದಾರೆ. ಇನ್ನು ಸೌತ್ ಆಫ್ರಿಕಾ ತಂಡದ ಬಗ್ಗೆ ನೋಡೋದಾದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಹಾಲಿ ಚಾಂಪಿಯನ್ಗಳಾಗಿರೋ ಹರಿಣಗಳ ಪಡೆಯನ್ನ ಟೆಂಬಾ ಬವುಮಾ ಮುನ್ನಡೆಸಲಿದ್ದಾರೆ. 15 ಸದಸ್ಯರ ತಂಡದಲ್ಲಿ ಕೇಶವ್ ಮಹಾರಾಜ್ ಮತ್ತು ಐಡೆನ್ ಮಾರ್ಕ್ರಾಮ್ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಬವುಮಾ ನಾಯಕತ್ವದಲ್ಲಿ ಹರಿಣ ಪಡೆ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಪಾಕ್ ವಿರುದ್ಧದ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತ್ತು. ಇದೀಗ ಭಾರತದ ವಿರುದ್ಧ ಸರಣಿ ಆಡಲು ಕಾಲಿಡ್ತಿದೆ. ಅದೂ ಕೂಡ ಇದು 35 ದಿನಗಳ ದೀರ್ಘ ಪ್ರವಾಸ. ಟೆಸ್ಟ್ ಸರಣಿ ಬಳಿಕ ಎರಡೂ ತಂಡಗಳು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಬಳಿಕ ಡಿಸೆಂಬರ್ 9 ರಿಂದ ಡಿಸೆಂಬರ್ 19 ರವರೆಗೆ ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ನೋಡಿರಿ

