ಕೊಹ್ಲಿ ಬಿಟ್ಮೇಲೆ ಟೆಸ್ಟ್ ಸೋತಿದ್ದೆಷ್ಟು – ಬುಮ್ರಾ KING ಮಾತು ನಿಜವಾಯ್ತಾ?
ಸೋಲು ಗಂಭೀರ್ ಕೊಡುಗೆಯೇ?

ಟೀಂ ಇಂಡಿಯಾ ಸದ್ಯ ವೈಟ್ ಬಾಲ್ ಫಾರ್ಮೆಟ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಟಿ-20ಐನಲ್ಲಿ ಸರಣಿ ಸೋತೇ ಇಲ್ಲ. ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ವಿನ್ನರ್ಸ್.. ಬಟ್ ಟೆಸ್ಟ್ ಫಾರ್ಮೆಟ್ ಅಂದ್ರೆ ಬಂದ್ರೆ ಭಾರತ ದಿನೇ ದಿನೆ ಡಮ್ಮಿಯಾಗ್ತಿದೆ. ಸೌತ್ ಆಫ್ರಿಕಾ ವಿರುದ್ಧ 15 ವರ್ಷಗಳ ಬಳಿಕ ಭಾರತದಲ್ಲಿ ಸೋಲು ಕಂಡಿದೆ. ಅದೂ ಕೂಡ ಕೇವಲ 124 ರನ್ಗಳ ಟಾರ್ಗೆಟ್ನ ಚೇಸ್ ಮಾಡೋಕೆ ಸಾಧ್ಯವಾಗದೇ. ಹರಿಣಪಡೆ ಕೊನೇ ಬಾರಿಗೆ 2010ರಲ್ಲಿ ಭಾರತದಲ್ಲಿ ಗೆದ್ದದ್ದು. ಆದ್ರೆ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಲೆಗಸಿ ಡೆಸ್ಟ್ರಾಯ್ ಆಗ್ತಿದೆ. ಹೆಡ್ ಕೋಚ್ ಗೌತಮ್ ಗಂಭೀರ್ ಕ್ರಿಕೆಟ್ನಲ್ಲಿ ಸ್ಟಾರ್ಡಂ ಇಲ್ದೇ ಇರೋ ಥರ ಮಾಡ್ತೀನಿ ಅಂತೇಳಿದ್ರು. ಗಂಭೀರ್ ಹೆಡ್ಕೋಚ್ ಆದ ವರ್ಷದೊಳಗೇ ರೋಹಿತ್ & ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ಹಿಂದೆ ಸರಿದಿದ್ದೂ ಆಯ್ತು. ಆದ್ರೆ ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿ ಇರ್ಬೇಕಿತ್ತು ಅನ್ನೋದು ಈಗ ಗೊತ್ತಾಗ್ತಿದೆ.
ಇದನ್ನೂ ಓದಿ : RCBಗೆ ಬೇಕು ಬ್ಯಾಕಪ್ ಬೌಲರ್ – ಹೇಜಲ್ ವುಡ್ ಬಗ್ಗೆ ಪಠಾಣ್ ಎಚ್ಚರಿಕೆ
ಟೆಸ್ಟ್ ಕ್ರಿಕೆಟ್ ನ KING ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕಂಡಂತರ ಲೆಜೆಂಡರಿ ಆಟಗಾರ. ಮೂರೂ ಫಾರ್ಮೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡಿರೋ ಸ್ಟಾರ್. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ ಅಂತಾ ಬಂದಾಗ ಕೊಹ್ಲಿಗೆ ಅವ್ರೇ ಸರಿಯಾಟಿ ಆಗ್ಬೇಕು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ 2014ರಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡಿದ್ರು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಆಡಿದ 68 ಟೆಸ್ಟ್ ಪಂದ್ಯಗಳಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. 17 ಸೋಲುಗಳು ಮತ್ತು 11 ಡ್ರಾಗಳೊಂದಿಗೆ, ಕೊಹ್ಲಿಯ ಗೆಲುವಿನ ಶೇಕಡಾವಾರು (58.82%) ಎಂಎಸ್ ಧೋನಿ (45%), ಸೌರವ್ ಗಂಗೂಲಿ (42.85%) ಮತ್ತು ಮೊಹಮ್ಮದ್ ಅಜರುದ್ದೀನ್ (29.78%)ಗಿಂತ ಬೆಸ್ಟ್ ಆಗಿದೆ. 2022ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸೋಲಿನ ಬಳಿಕ ನಾಯಕತ್ವದಿಂದ ಕೆಳಗಿಳಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೂರು ವರ್ಷ ಆಡಿದರು.ಒಟ್ಟಾರೆ 123 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 46.85 ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಅದರಲ್ಲಿ 30 ಶತಕ ಮತ್ತು 31 ಅರ್ಧಶತಕಗಳು ಇವೆ. ಹಾಗಂತ ಕೊಹ್ಲಿ ಕ್ಯಾಪ್ಟನ್ ಆದಾಗ ಪಂದ್ಯಗಳನ್ನ ಸೋತೇ ಇಲ್ಲ ಅಂತಲ್ಲ. ಅವ್ರಿದ್ದಾಗ್ಲೂ ಮ್ಯಾಚ್ಗಳನ್ನ ಸೋತಿದ್ದಾರೆ. 2024 ರಲ್ಲಿ ರೋಹಿತ್ ಌಂಡ್ ಕೊಹ್ಲಿ ಇದ್ದಾಗ್ಲೇ ನ್ಯೂಜಿಲೆಂಡ್ ವಿರುದ್ಧ ವೈಟ್ ವಾಶ್ ಆಗಿದ್ರು. ಆದ್ರೆ ಸಮಸ್ಯೆ ಇರೋದು ಇಲ್ಲಿ ಆಟಗಾರರಿಂದಲ್ಲ. ಹೆಡ್ಕೋಚ್ ಗೌತಮ್ ಗಂಭೀರ್ರಿಂದ. ಗಂಭೀರ್ಗೆ ಟೆಸ್ಟ್ ಕ್ರಿಕೆಟ್ನ ರಿದಮ್ ಗೊತ್ತಾಗ್ತಿಲ್ಲ. ಌಂಡ್ ಕೋಚಿಂಗ್ ಪ್ರಾಬ್ಲಂ ಆಗ್ತಿದೆ. ಸೋ ಅದನ್ನ ಸರಿ ಮಾಡಿಕೊಳ್ಬೇಕು. ಇನ್ನಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ನಿವೃತ್ತಿ ಬಳಿಕ ಭಾರತ 8 ಪಂದ್ಯಗಳನ್ನ ಆಡಿದೆ. ಹಾಗೇ 4ರಲ್ಲಿ ಗೆದ್ದು ಮೂರರಲ್ಲಿ ಸೋತು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.
ಭಾರತ ತಂಡಕ್ಕೆ ಕೊಹ್ಲಿ ಬೇಕಿತ್ತು ಎಂದಿದ್ದ ಬುಮ್ರಾ!
ವಿರಾಟ್ ಕೊಹ್ಲಿ ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದಾಗ ಜಸ್ಪ್ರೀತ್ ಬುಮ್ರಾ ಒಂದು ಮಾತನ್ನ ಹೇಳ್ತಾರೆ. ಅಂದ್ರೆ ತಂಡಕ್ಕೆ ವಿರಾಟ್ ಕೊಹ್ಲಿ ಅವರ ಅಗತ್ಯದ ಕುರಿತಾದ ಹೇಳಿಕೆ ಅದು. ನಾವು ಕೊಹ್ಲಿಗೆ ಅಗತ್ಯವಿಲ್ಲದೇ ಇರಬಹುದು ಆದ್ರೆ ಆದರೆ ನಮಗೆ ಕೊಹ್ಲಿ ಬೇಕು ಅಂದಿದ್ರು. ಅಂದ್ರೆ ತಂಡಕ್ಕೆ ಕೊಹ್ಲಿ ಎಷ್ಟು ಮುಖ್ಯ ಎಂದು ಹೇಳಿದ್ರು. ಇಲ್ಲೇ ಗೊತ್ತಾಗುತ್ತೆ ವಿರಾಟ್ ಪ್ರಸೆನ್ಸ್ ತಂಡದಲ್ಲಿ ಎಷ್ಟು ಇಂಪಾರ್ಟೆಂಟ್ ಇತ್ತು ಅನ್ನೋದು. ಹಾಗಂತ ಇಲ್ಲಿ ವಿರಾಟ್ ಕೊಹ್ಲಿ ನಿವೃತ್ತಿ ಹೇಳಲೇಬಾರದಾ ಅಂತಾ ನಾವಿಲ್ಲಿ ಹೇಳ್ತಿಲ್ಲ. ಬಟ್ ಇನ್ನು ಎರಡು ವರ್ಷ ಆದ್ರೂ ಕಂಟಿನ್ಯೂ ಆಗ್ಬೋದಿತ್ತೇನೋ ಅನ್ನೋದಷ್ಟೇ ನಮ್ಮ ವಾದ. ಒಟ್ನಲ್ಲಿ ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಟೆಸ್ಟ್ ಫಾರ್ಮೆಟ್ ತೀರಾ ಹದಗೆಡ್ತಿದೆ. ನ್ಯೂಜಿಲೆಂಡ್ ವಿರುದ್ಧ ವಿರುದ್ಧ ಕ್ಲೀನ್ ಸ್ವೀಪ್ ಆಗಿದ್ದ ಭಾರತ ಈಗ 15 ವರ್ಷಗಳ ಬಳಿಕ ಭಾರತದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತಿದ್ದಾರೆ. ಅಟ್ಲೀಸ್ಟ್ ಮುಂದಿನ ಪಂದ್ಯದಲ್ಲಾದ್ರೂ ಗೆದ್ದು ಸರಣಿ ಸಮಬಲ ಮಾಡಿಕೊಳ್ಬೇಕು.

ನೋಡಿರಿ

