ಗಿಲ್ ಫೇಲ್.. ಕೆಎಲ್ ಪಾಸ್.. ಸೂರ್ಯ? – T-20Iನಲ್ಲೂ SAಗೆ ಸೋಲು ಫಿಕ್ಸಾ?
ಪಾಂಡ್ಯ ಬ್ಯಾಕ್.. ಪ್ಲೇಯಿಂಗ್ 11 ಹೇಗೆ?

ಗಿಲ್ ಫೇಲ್.. ಕೆಎಲ್ ಪಾಸ್.. ಸೂರ್ಯ? – T-20Iನಲ್ಲೂ SAಗೆ ಸೋಲು ಫಿಕ್ಸಾ?ಪಾಂಡ್ಯ ಬ್ಯಾಕ್.. ಪ್ಲೇಯಿಂಗ್ 11 ಹೇಗೆ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿ, ಏಕದಿನ ಸರಣಿ ಮುಗಿದಿದ್ದು ಡಿಸೆಂಬರ್ 9 ಅಂದ್ರೆ ನಾಳೆಯಿಂದ 5 ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗಲಿದೆ. ಉಭಯ ತಂಡಗಳೂ ಒಂದೊಂದು ಸರಣಿಯಲ್ಲಿ ವಿನ್ ಆಗಿವೆ. ಆದ್ರೆ ಟಿ-20ಐನಲ್ಲಿ ಮಸ್ಟ್ ಌಂಡ್ ಶುಡ್ ಭಾರತವೇ ಗೆಲ್ಲಬೇಕು. ಸೂರ್ಯನ ಕ್ಯಾಪ್ಟನ್ಸಿಯಲ್ಲಿ ಭಾರತದ ನೋ ಲಾಸ್ ಜರ್ನಿ ಕಂಟಿನ್ಯೂ ಆಗ್ಬೇಕು. 2026 ಟಿ-20 ವಿಶ್ವಕಪ್​ಗೆ ರಗಡ್ ಎಂಟ್ರಿ ಕೊಡ್ಬೇಕು.

ಇದನ್ನೂ ಓದಿ : 200ಕ್ಕೂ ಹೆಚ್ಚು ರೈತರನ್ನ ಬಲಿ ಪಡೆದಿದ್ದೇ ನಿಮ್ಮ ಕೊಡುಗೆ – ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಗುಡುಗು

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ಸ್ಟ್ರಗಲ್ ಪಡ್ತಿದ್ರೂ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಿದೆ. ಅದ್ರಲ್ಲೂ ಟಿ-20ಐ ಫಾರ್ಮೆಟ್​ನಲ್ಲಿ ಒಂದೂವರೆ ದಶಕದಿಂದ ಒಂದೇ ಒಂದು ಸರಣಿ ಸೋತಿಲ್ಲ. 2026ರ ಟಿ-20 ವಿಶ್ವಕಪ್​ಗೆ ಕಾನ್ಫಿಡೆಂಟಾಗಿ ಎಂಟ್ರಿ ಕೊಡೋಕೆ ಈ ಸರಣಿ ಎರಡೂ ರಾಷ್ಟ್ರಗಳಿಗೆ ತುಂಬಾನೇ ಮುಖ್ಯ ಆಗುತ್ತೆ. ಹಾಗೇ ಆಟಗಾರರ ಪ್ರದರ್ಶನದ ಮೇಲೂ ಆಯ್ಕೆ ಸಮಿತಿ ಕಣ್ಣಿಡಲಿದೆ. ಸೂರ್ಯಕುಮಾರ್ ಯಾದವ್ ಭಾರತವನ್ನ ಮುನ್ನಡೆಸಿದ್ರೆ ಏಡಂ ಮಾರ್ಕ್ರಂ ಸೌತ್ ಆಫ್ರಿಕಾವನ್ನ ಲೀಡ್ ಮಾಡಲಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಶುಭಮನ್ ಗಿಲ್

ಸೂರ್ಯಕುಮಾರ್ ಯಾದವ್

ತಿಲಕ್ ವರ್ಮಾ

ಸಂಜು ಸ್ಯಾಮ್ಸನ್‌

ಹಾರ್ದಿಕ್ ಪಾಂಡ್ಯ

ಶಿವಂ ದುಬೆ

ಅಕ್ಷರ್ ಪಟೇಲ್

ಕುಲ್ದೀಪ್ ಯಾದವ್

ಜಸ್ಪ್ರೀತ್ ಬುಮ್ರಾ

ವರುಣ್ ಚಕ್ರವರ್ತಿ

ಹೀಗೆ ಐವರು ಬ್ಯಾಟರ್ಸ್, ಮೂವರು ಆಲ್ ರೌಂಡರ್ಸ್ ಌಂಡ್ ಮೂವರು ಬೌಲರ್ಸ್ ಜೊತೆ ಕಣಕ್ಕಿಳಿಯೋ ಸಾಧ್ಯತೆ ಇದೆ. ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಮಾದರಿಯಲ್ಲಿ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 18 ಪಂದ್ಯ ಗೆದ್ದಿದ್ರೆ ದಕ್ಷಿಣ ಆಫ್ರಿಕಾ 12 ಪಂದ್ಯ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಉಭಯ ತಂಡಗಳು ಕೊನೇ ಬಾರಿಗೆ 2024ರ ನವೆಂಬರ್‌ನಲ್ಲಿ ಮುಖಾಮುಖಿಯಾಗಿದ್ದು ಪಂದ್ಯದಲ್ಲಿ ಭಾರತ 135ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಈ ಮ್ಯಾಚಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇಬ್ಬರೂ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ರು. ಹಾಗೇ 4 ಪಂದ್ಯಗಳ ಸರಣಿಯನ್ನ ಭಾರತ ಮೂರರಲ್ಲಿ ಗೆದ್ದು ಕೈವಶ ಮಾಡಿಕೊಂಡಿತ್ತು. ಒಟ್ನಲ್ಲಿ ಟಿ-20ಐ ಫಾರ್ಮೆಟ್​ನಲ್ಲಿ ಪ್ರಸ್ತುತ ಭಾರತ ಜಗತ್ತಿನಲ್ಲೇ ನಂಬರ್ 1 ಟೀಂ ಆಗಿದೆ. ಟಿ-20 ವಿಶ್ವಕಪ್​ನ ಹಾಲಿ ಚಾಂಪಿಯನ್ಸ್ ಆಗಿರೋ ಭಾರತ ರನ್ನರ್​ಅಪ್ ಆಗಿರೋ ಸೌತ್ ಆಫ್ರಿಕಾ ಮುಖಾಮುಖಿಯಾಗ್ತಿದ್ದು ಟಫ್ ಫೈಟ್ ಇರೋದಂತೂ ಪಕ್ಕಾ.

Shantha Kumari