ಫಿಟ್ ಆದ್ರೂ ಶುಭಮನ್ ಗಿಲ್ – ಟಿ20I ಆಡೋಕೆ ಸಿಕ್ಕು ಪರ್ಮಿಷನ್

ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಫುಲ್ ಫಿಟ್ ಆಗಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ ಆಯ್ಕೆಗೆ ಲಭ್ಯವಿದೆ ಎಂದು ಘೋಷಿಸಲಾಗಿದೆ. ಹೀಗಾಗಿ ಡಿ.9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗಿಲ್ ಆಡುವುದು ಖಚಿತವಾಗಿದೆ. ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತಕ್ಕೊಳಗಾಗಿದ್ದರು. ಅದರಿಂದಾಗಿ ಅವರು ಮೈದಾನ ತೊರೆದು ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದರು. ಬಳಿಕ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದರು.
ಇದನ್ನೂ ಓದಿ: ಮಂದಾನ ನಿಶ್ಚಿತಾರ್ಥ ರಿಂಗ್ ಮಿಸ್ – 1 ವಿಡಿಯೋ.. ಮದುವೆ ಕ್ಯಾನ್ಸಲ್!
ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಗಿಲ್ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸಿದ್ದಲ್ಲದೆ, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಅಗತ್ಯವಿರುವ ಎಲ್ಲಾ ಫಿಟ್‌ನೆಸ್ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಸಹ ಪೂರೈಸಿದ್ದಾರೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (COE) ನಲ್ಲಿ ಪುನರ್ವಸತಿ ಕಾರ್ಯವನ್ನು ಗಿಲ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಡಿಸೆಂಬರ್ 9 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಐದು ಪಂದ್ಯಗಳ T20I ಸರಣಿಯಲ್ಲಿ ಆಡಲು ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಆದ್ರೂ ಫಿಟ್ನೆಸ್ ಕ್ಲಿಯರೆನ್ಸ್‌ಗೆ ಬೇಕಿತ್ತು. ಅದನ್ನು ಅವರು ಈಗ ಪಡೆದಿದ್ದಾರೆ.ಕಟಕ್‌ನಲ್ಲಿ ನಡೆಯುವ ಆರಂಭಿಕ ಟಿ20ಐ ನಂತರ, ಉಳಿದ ಪಂದ್ಯಗಳನ್ನು ನ್ಯೂಚಂಡೀಗಢ (ಡಿಸೆಂಬರ್ 11), ಧರ್ಮಶಾಲಾ (ಡಿಸೆಂಬರ್ 14), ಲಕ್ನೋ (ಡಿಸೆಂಬರ್ 17) ಮತ್ತು ಅಹಮದಾಬಾದ್ (ಡಿಸೆಂಬರ್ 19) ನಲ್ಲಿ ಆಡಲಾಗುತ್ತದೆ.

ನೋಡಿರಿ

