TEST ಸೋಲಿಗೆ ODIನಲ್ಲಿ ಸೇಡು – ಟೆಂಬಾಗೆ ಪಾಠ ಕಲಿಸ್ತಾರಾ RO-KO?
KL ಕ್ಯಾಪ್ಟನ್.. 8 ಚೇಂಜ್.. ಸವಾಲೇನು?

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರೋ ಭಾರತಕ್ಕೆ ರಿವೇಂಜ್ ತೀರಿಸಿಕೊಳ್ಳೋಕೆ ಬೆಸ್ಟ್ ಆಪರ್ಚುನಿಟಿ ಇದೆ. ರೆಡ್ ಬಾಲ್ ಫಾರ್ಮೆಟ್ನಲ್ಲಿ ಆಗಿರೋ ಗಾಯಕ್ಕೆ ವೈಟ್ ಬಾಲ್ ಸಿರೀಸ್ನಲ್ಲಿ ಮುಲಾಮು ಹಚ್ಚಬಹುದು. ಅಂದ್ರೆ ಇದೇ ನವೆಂಬರ್ 30ರಿಂದ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲೇ ಮೂರು ಪಂದ್ಯಗಳ ಏಕದಿನ ಸರಣಿ ಸ್ಟಾರ್ಟ್ ಆಗುತ್ತೆ.
ಇದನ್ನೂ ಓದಿ : ಸಂಸತ್ತಿನಲ್ಲಿ ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಪದ ಬಳಕೆ ಮಾಡುವಂತಿಲ್ಲ
ಭಾರತದ ನೆಲದಲ್ಲಿ 25 ವರ್ಷಗಳ ನಂತ್ರ ಟೆಸ್ಟ್ ಸರಣಿ ಗೆದ್ದಿರೋ ದಕ್ಷಿಣ ಆಫ್ರಿಕಾ ಫುಲ್ ಕಾನ್ಫಿಡೆನ್ಸ್ನಲ್ಲಿದೆ. ಏಕದಿನ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿರುವ ಟೆಂಬಾ ಬವುಮಾ ಅವ್ರೇ ಏಕದಿನ ತಂಡಕ್ಕೂ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಭಾರತ ಏಕದಿನ ಸರಣಿಯನ್ನ ಗೆದ್ದು ಟೆಂಬಾ ಮತ್ತು ತಂಡಕ್ಕೆ ಸೋಲಿನ ಪಾಠ ಕಲಿಸೋಕೆ ರೆಡಿಯಾಗ್ತಿದ್ದಾರೆ. ಅದೂ ಅಲ್ದೇ ಈ ಸಿರೀಸ್ನಲ್ಲಿ ರೋಹಿತ್ & ಕೊಹ್ಲಿ ಇರೋದೇ ಭಾರತ ತಂಡಕ್ಕೆ ಬಿಗ್ ಅಡ್ವಾಂಟೇಜ್ ಆಗುತ್ತೆ. ಹಾಗೇ ತಂಡದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಮೊದ್ಲಿಗೆ ಟೂರ್ನಿಗೆ ಸೆಲೆಕ್ಟ್ ಆಗಿರೋ ಆಟಗಾರರು ಯಾರೆಲ್ಲಾ ಅನ್ನೋದನ್ನ ನೋಡಿದ್ರೆ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್ ಹಾಗೇ ಧ್ರುವ್ ಜುರೆಲ್ ಸೆಲೆಕ್ಟ್ ಆಗಿದ್ದಾರೆ.
ಕೆಎಲ್ ರಾಹುಲ್ ಕ್ಯಾಪ್ಟನ್.. ತಂಡದಲ್ಲಿ 8 ಬದಲಾವಣೆ!
ಕುತ್ತಿಗೆ ನೋವಿನಿಂದ ರೆಸ್ಟ್ನಲ್ಲಿರೋ ಶುಭ್ಮನ್ ಗಿಲ್ ಈಗ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಶುಭ್ಮನ್ ಗಿಲ್ ಆಬ್ಸೆನ್ಸ್ನಲ್ಲಿ ಬಿಸಿಸಿಐ ಕೆಎಲ್ ರಾಹುಲ್ಗೆ ಕ್ಯಾಪ್ಟನ್ಸಿ ನೀಡಿದೆ. ಹಾಗೇ ತಂಡದಲ್ಲಿ ಸಾಕಷ್ಟು ಚೇಂಜಸ್ ಕೂಡ ನೋಡ್ಬೋದು. ಅಂದ್ರೆ ಕಳೆದ ಬಾರಿ ಆಸೀಸ್ ಸಿರೀಸ್ಗೆ ಸೆಲೆಕ್ಟ್ ಆಗಿದ್ದ ತಂಡಕ್ಕೂ ಈಗ ಅನೌನ್ಸ್ ಆಗಿರೋ ತಂಡಕ್ಕೂ ಸಾಕಷ್ಟು ಚೇಂಜಸ್ ಇದೆ. 8 ಆಟಗಾರರನ್ನ ಕೈಬಿಡಲಾಗಿದೆ. ಕುತ್ತಿಗೆ ನೋವಿನಿಂದ ಬಳಲ್ತಿರೋ ಕ್ಯಾಪ್ಟನ್ ಶುಭ್ಮನ್ ಗಿಲ್ ಹಾಗೇ ಆಸೀಸ್ ಸಿರೀಸ್ನಲ್ಲಿ ಇಂಜುರಿಗೆ ಒಳಗಾಗಿರೋ ವೈಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಇಬ್ಬರೂ ಡ್ರಾಪ್ ಆಗಿದ್ದಾರೆ. ಇನ್ನು ಫಿಟ್ನೆಸ್ ಸಮಸ್ಯೆ ಕಾರಣ ನೀಡಿ ಹಾರ್ದಿಕ್ ಪಾಂಡ್ಯರನ್ನ ಕೈಬಿಡಲಾಗಿದೆ. ಭಾರತ ಟೆಸ್ಟ್ ತಂಡದ ಖಾಯಂ ಪ್ಲೇಯರ್ ಆಗಿರೋ ಮೊಹಮ್ಮದ್ ಸಿರಾಜ್ಗೂ ಅವಕಾಶ ಕೊಟ್ಟಿಲ್ಲ. ಇನ್ನು ಆಸೀಸ್ ಸಿರೀಸ್ನಲ್ಲಿ ಸದ್ದು ಮಾಡದ ಅಕ್ಷರ್ ಪಟೇಲ್ ಕೂಡ ಹೊರಬಿದ್ದಿದ್ದಾರೆ. ವರುಣ್ ಚಕ್ರವರ್ತಿಯನ್ನೂ ಕೂಡ ಪರಿಗಣಿಸಿಲ್ಲ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಸೋ ಈ ಬದಲಾವಣೆಯೇ ಈಗ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆಲ್ಲಿಸುತ್ತಾ ಅನ್ನೋ ಪ್ರಶ್ನೆಗಳು ಎದುರಾಗಿವೆ. ಬಟ್ ತಂಡದಲ್ಲಿ ಯಾರೇ ಇದ್ರೂ ಇಲ್ಲದಿದ್ರೂ ರೋಹಿತ್ ಮತ್ತು ಕೊಹ್ಲಿ ಇರೋದೇ ದೊಡ್ಡ ಅಡ್ವಾಂಟೇಜ್ ಆಗುತ್ತೆ.
ಟೆಂಬಾಗೆ ಸೋಲಿನ ರುಚಿ ತೋರಿಸ್ತಾರಾ ರೋ-ಕೊ?
ಟೆಂಬಾ ಬವುಮಾ. ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನಲ್ ಪ್ಲೇಯರ್. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಸೋಲನ್ನೇ ಕಾಣದೆ 13 ಪಂದ್ಯಗಳ್ಲ್ಲಿ ತಂಡವನ್ನ ಮುನ್ನಡೆಸಿರೋ ಏಕೈಕ ನಾಯಕ. ರೆಡ್ ಬಾಲ್ ಫಾರ್ಮೆಟ್ನಲ್ಲಿ ಫುಲ್ ಟ್ರೆಂಡಿಂಗ್ನಲ್ಲಿರೋ ಟೆಂಬಾಗೆ ಏಕದಿನ ಸಿರೀಸ್ನಲ್ಲಿ ಭಾರತ ಸೋಲಿನ ರುಚಿ ತೋರಿಸಬೇಕಿದೆ. ಅದರಲ್ಲೂ ಸರಣಿಯಲ್ಲಿ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರೋದೇ ಬಿಗ್ ಅಡ್ವಾಂಟೇಜ್ ಆಗುತ್ತೆ. ಮೂರೂ ಮಾದರಿ ಕ್ರಿಕೆಟ್ನಲ್ಲಿ ಸಾಕಷ್ಟು ಮೈಲ್ಸ್ಟೋನ್ ಸೃಷ್ಟಿಸಿರೋ ಈ ಜೋಡಿಯ ಅನುಭವ ಹಾಗೇ ಆಟವೇ ಭಾರತ ತಂಡಕ್ಕೆ ಪ್ಲಸ್ ಆಗುತ್ತೆ. ಕಳೆದ ಬಾರಿ ಆಸ್ಟ್ರೇಲಿಯಾ ಸಿರೀಸ್ನಲ್ಲಿ ಕೊನೇ ಮ್ಯಾಚಲ್ಲಿ 150 ಪ್ಲಸ್ ಪಾರ್ಟ್ನರ್ಶಿಪ್ ಬಂದಿತ್ತು. ನಾಯಕರಾಗಿಯೂ ದಾಖಲೆ ನಿರ್ಮಿಸಿರೋ ಈ ಜೋಡಿ ಸೌತ್ ಆಫ್ರಿಕಾ ತಂಡವನ್ನ ಸೋಲಿಸೋಕೆ ಆನ್ ಫೀಲ್ಡ್ನಲ್ಲಿ ಸರ್ವತಂತ್ರಗಳನ್ನೂ ಬಳಸೋದು ಪಕ್ಕಾ.
ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನವೆಂಬರ್ 30ಕ್ಕೆ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯುತ್ತೆ. ನೆಕ್ಸ್ ಡಿಸೆಂಬರ್ 3ಕ್ಕೆ ರಾಯ್ಪುರ ಮತ್ತು ಡಿಸೆಂಬರ್ 6ಕ್ಕೆ ವಿಶಾಖಪಟ್ಟಣಂನಲ್ಲಿ ಕೊನೇ ಪಂದ್ಯ ನಡೆಯಲಿದೆ. ಏಕದಿನ ಮಾದರಿಯಲ್ಲಿ ಉಭಯ ತಂಡಗಳ ರೆಕಾರ್ಡ್ಸ್ ಹೇಗಿದೆ ಅನ್ನೋದನ್ನ ನೋಡಿದ್ರೆ ಉಭಯ ರಾಷ್ಟ್ರಗಳು ಇದುವರೆಗೆ 94 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದ್ರಲ್ಲಿ ಭಾರತ 40 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಏಕದಿನ ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಈ ನಂಬರ್ಸ್ ನೋಡಿದ್ರೆ ಏಕದಿನ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕಂಪ್ಲೀಟ್ ಆಗಿ ಡಾಮಿನೇಟ್ ಮಾಡಿರೋದು ಗೊತ್ತಾಗುತ್ತೆ. ಆಲ್ರೆಡಿ ಟೆಸ್ಟ್ ಸರಣಿ ಗೆದ್ದಿರೋದ್ರಿಂದ ಈ ಕಾನ್ಫಿಡೆನ್ಸ್ ಲೆವೆಲ್ ಇನ್ನೂ ಡಬಲ್ ಆಗಿರುತ್ತೆ.

ನೋಡಿರಿ

