ALL OUT ಟಾರ್ಗೆಟ್ ಸಕ್ಸಸ್ – ಮೊದಲ ದಿನವೇ ಹರಿಣಗಳು ಪಲ್ಟಿ
159 ರನ್ಸ್.. ಭಾರತಕ್ಕೆ ಪ್ಲಸ್ ಏನು?

ALL OUT ಟಾರ್ಗೆಟ್ ಸಕ್ಸಸ್ – ಮೊದಲ ದಿನವೇ ಹರಿಣಗಳು ಪಲ್ಟಿ159 ರನ್ಸ್.. ಭಾರತಕ್ಕೆ ಪ್ಲಸ್ ಏನು?

ಟಾಸ್ ಗೆದ್ದಿದ್ದು ದಕ್ಷಿಣ ಆಫ್ರಿಕಾ ತಂಡವೇ ಆದ್ರೂ ಮ್ಯಾಚ್​ನಲ್ಲಿ ಡಾಮಿನೇಷನ್ ಮಾಡಿದ್ದು ಟೀಂ ಇಂಡಿಯಾ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೀತಿರೋ ಮೊದಲ ಪಂದ್ಯದ ಮೊದಲ ದಿನವೇ ಭಾರತ ಕಂಪ್ಲೀಟ್ ಮೇಲುಗೈ ಸಾಧಿಸಿದೆ. ಫಸ್ಟ್ ಸೆಷನ್​ನಿಂದ ಶುರುವಾದ ಗಿಲ್ ಪಡೆಯ ಗರ್ಜನೆ ದಿನದಾಟದ ಅಂತ್ಯದವರೆಗೂ ಕಂಟಿನ್ಯೂ ಆಗಿತ್ತು. ಅದ್ರಲ್ಲೂ ಜಸ್ಪ್ರೀತ್ ಬುಮ್ರಾ ಅಂತೂ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ನೀಡಿದ್ರು.

ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಟ್ವಿಸ್ಟ್ ಇದೆ. ಮೂವರು ವಿಕೆಟ್ ಕೀಪರ್ಸ್ ಬ್ಯಾಟರ್ಸ್.. 6 ಆಟಗಾರರು ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್.. ಌಂಡ್ ವಾಷಿಂಗ್ಟನ್ ಸುಂದರ್​ಗೆ ನಂಬರ್ 3 ಸ್ಲಾಟ್ ಬ್ಯಾಟಿಂಗ್.. ಹೀಗೆ ಹೊಸ ಪ್ರಯೋಗದೊಂದಿಗೆ ಫೀಲ್ಡಿಗಿಳಿದ ಭಾರತ ತಂಡ ಮೊದಲ ದಿನವೇ ಎದುರಾಳಿಗಳ ನೀರಿಳಿಸಿದೆ. ಟಾಸ್ ಸೋತು ಬೌಲಿಂಗ್​ಗೆ ಇಳಿದ ಭಾರತ ಇಡೀ ದಿನ ಪ್ರಾಬಲ್ಯ ಮೆರೆದಿದೆ.

ಇದನ್ನೂ ಓದಿ : ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ – ಆರ್.ಅಶೋಕ್ ಟಾಂಗ್

ಟಾಸ್ ಗೆದ್ದ ಬವುಮಾಗೆ ಬೌಲಿಂಗ್ ನಲ್ಲೇ ಬೆವರಿಳಿಸಿದ ಬುಮ್ರಾ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ಪರ ಏಡನ್ ಮಾರ್ಕ್ರಂ ಹಾಗೇ ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ರು. ಌಂಡ್ ಇಬ್ಬರ ಪಾರ್ಟ್ನರ್​ಶಿಪ್ ಚೆನ್ನಾಗೇ ಇತ್ತು. ಆದ್ರೆ 23 ರನ್ ಗಳಿಸಿದ್ದ ರಿಯಾನ್ ರಿಕಲ್ಟನ್ ಬುಮ್ರಾ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು. ಅಲ್ಲಿಂದ ಶುರುವಾದ ಪೆವಿಲಿಯನ್ ಪರೇಡ್ ಆಲೌಟ್​ವರೆಗೂ ನಿಲ್ಲಲೇಇಲ್ಲ. ಹಾಗೇ ನೆಕ್ಸ್​ಟ್ ಆಡಂ ಮಾರ್ಕ್ರಂ 31 ರನ್​ಗಳಿಗೆ ಔಟಾದ್ರು. ಇಬ್ಬರು ಓಪನರ್​ಗಳ ವಿಕೆಟ್ ತೆಗೆದು ಬುಮ್ರಾ ಬವುಮಾ ಪಡೆ ಬೆನ್ನೆಲುಬು ಮುರಿದ್ರು. ಇನ್ನು ನಾಯಕ ಬವುಮಾ 3 ರನ್​ಗಳಿಗೆ ಸುಸ್ತಾದ್ರು. ಫಸ್ಟ್ ಸೆಷನ್​ನಲ್ಲೇ 71 ರನ್ ಗಳಿಸಿ ಮೂರು ವಿಕೆಟ್ ಕಳ್ಕೊಂಡಿತ್ತು. ಌಂಡ್ ಲಂಚ್ ಬ್ರೇಕ್ ಆದ್ಮೇಲೂ ಕಂ ಬ್ಯಾಕ್ ಮಾಡೋಕೆ ಸಾಧ್ಯವಾಗ್ಲಿಲ್ಲ. ಎರಡನೇ ಸೆಷನ್​ನಲ್ಲಿ 5 ವಿಕೆಟ್​ಗಳು ಉರುಳಿದ್ವು. ಟೀ ಬ್ರೇಕ್ ವೇಳೆಗೆ 8 ವಿಕೆಟ್ ಕಳ್ಕೊಂಡು 154 ರನ್ಸ್ ಗಳಿಸಿದ್ರು. ಇನ್ನು ಟೀ ಬ್ರೇಕ್ ಮುಗಿಸಿ ಬಂದು ಜಸ್ಟ್ 5 ರನ್ ಗಳಿಸುವಷ್ಟರಲ್ಲೇ ಇನ್ನೆರಡು ವಿಕೆಟ್ ಉರುಳಿದ್ವು. ಸೋ 159 ರನ್ ಗಳಿಸಿದ ಸೌತ್ ಆಫ್ರಿಕಾ ಆಲೌಟ್ ಆಯ್ತು.

27 ರನ್ ನೀಡಿ 5 ವಿಕೆಟ್ ಕಿತ್ತ ಜಸ್ಪ್ರೀತ್ ಬುಮ್ರಾ!

ಌಕ್ಚುಲಿ ಇವತ್ತಿನ ಮ್ಯಾಚಲ್ಲಿ ಹೈಲೆಟ್ ಅಂದ್ರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಖದರ್. ಭಾರತದಲ್ಲಿ ಬೂಮಾಸ್ತ್ರ ಇದ್ದಾಗ ಎದುರಾಳಿಗಳ ಎದೆನಡುಗೋದು ಪಕ್ಕಾ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಭಾರತದ ಪರ 14 ಓವರ್​ಗಳನ್ನ ಬೌಲ್ ಮಾಡಿದ ಬುಮ್ರಾ ಜಸ್ಟ್ 27 ರನ್​ಗಳನ್ನ ಮಾತ್ರ ನೀಡಿದ್ರು. ಇದ್ರಲ್ಲಿ 5 ಮೇಡನ್ ಓವರ್ಸ್ ಸಹ ಇದ್ವು. 1.93ರ ಎಕಾನಮಿಯಲ್ಲಿ ರನ್ಸ್ ನೀಡಿದ ಬುಮ್ರಾ ಐದು ವಿಕೆಟ್​ಗಳನ್ನ ತೆಗೆದು ಹರಿಣಗಳ ಪಡೆಯನ್ನ ಧೂಳೀಪಟ ಮಾಡಿದ್ರು. ಹಾಗೇ ಬೌಲಿಂಗ್ ಕರಿಯರ್​ನಲ್ಲಿ ಮತ್ತೊಂದು ಫೈಫರ್ ವಿಕೆಟ್​​ಗಳ ದಾಖಲೆಯನ್ನ ಬರೆದ್ರು. ಉಳಿದಂತೆ ಮೊಹಮ್ಮದ್ ಸಿರಾಜ್ 2, ಅಕ್ಷರ್ ಪಟೇಲ್ 1 ಮತ್ತು ಕುಲದೀಪ್ ಯಾದವ್ 2 ವಿಕೆಟ್ ಪಡೆದು ಸೌತ್ ಆಫ್ರಿಕಾವನ್ನ ಆಲೌಟ್ ಮಾಡುವಲ್ಲಿ ಯಶಸ್ವಿಯಾದ್ರು.

ಬ್ಯಾಟಿಂಗ್ ಶುರು ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ!

ಸೌತ್ ಆಫ್ರಿಕಾ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದ್ದು ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಓಪನರ್ಸ್ ಆಗಿ ಕ್ರೀಸ್​ಗೆ ಬರ್ತಾರೆ. ಈ ಇಬ್ಬರ ಜೋಡಿ ಸಾಕಷ್ಟು ಪಂದ್ಯಗಳಲ್ಲಿ ಭದ್ರಬುನಾದಿಯನ್ನೇ ಹಾಕಿಕೊಟ್ಟಿದ್ದಾರೆ. ಬಟ್ ಇವತ್ತಿನ ಮ್ಯಾಚಲ್ಲಿ ಈ ಜೊತೆಯಾಟ ಹೆಚ್ಚು ಹೊತ್ತು ನಡೀಲಿಲ್ಲ. ತಂಡದ ಮೊತ್ತ 18 ಆಗಿದ್ದಾಗ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದ್ರು. ಮಾರ್ಕೋ ಜಾನ್ಸೆನ್ ಅವ್ರ ಬೌಲಿಂಗ್​ನಲ್ಲಿ ಜೈಸ್ವಾಲ್ ಬೌಲ್ಡ್ ಆದ್ರು. ಕಟ್ ಶಾಟ್ ಆಡೋಕೆ ಹೋಗಿ ಇನ್​ಸೈಡ್ ಎಡ್ಜ್ ಆಗಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ರು. ಌಂಡ್ ನೆಕ್ಸ್​ಟ್ ಅಚ್ಚರಿ ಎನ್ನುವಂತೆ ವಾಷಿಂಗ್ಟನ್ ಸುಂದರ್ ನಂಬರ್ 3 ಸ್ಲಾಟ್​ನಲ್ಲಿ ಬ್ಯಾಟಿಂಗ್​ಗೆ ಬರ್ತಾರೆ. ಸುಂದರ್ ಮತ್ತು ರಾಹುಲ್ ಜೊತೆಯಾಟ ತುಂಬಾನೇ ಪೇಷನ್ಸ್ ಇಂದ ಸಾಗಿತ್ತು. ರಾಹುಲ್ ಅಂತೂ ತುಂಬಾನೇ ಕ್ಯಾಲ್ಕುಲೇಟಿವ್ ಆಗಿ ಬ್ಯಾಟ್ ಬೀಸ್ತಿದ್ರು. ಸೋ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 37 ರನ್ಸ್ ಕಲೆ ಹಾಕಿದೆ. ಕೆಎಲ್ ರಾಹುಲ್ 13 ರನ್ ಹಾಗೇ ವಾಷಿಂಗ್ಟನ್ ಸುಂದರ್ 6 ರನ್ಗಳೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಮೊದಲ ದಿನದಾಟದಲ್ಲಿ ಭಾರತಕ್ಕೆ ಏನೆಲ್ಲಾ ಪ್ಲಸ್ ಆಯ್ತು ಅನ್ನೋದನ್ನ ನೋಡೋದಾದ್ರೆ..

ಭಾರತಕ್ಕೆ ಪ್ಲಸ್ ಆಗಿದ್ದೇನು?

  1. ಟಾಸ್ ಸೋತ್ರೂ ಬೌಲಿಂಗ್ ಮಾಡುವ ಚಾನ್ಸ್
  2. ಸೌತ್ ಆಫ್ರಿಕಾ ಆಟಗಾರರ ಪೆವಿಲಿಯನ್ ಪರೇಡ್
  3. ಬಿಗ್ ಪಾರ್ಟ್ನರ್ ಶಿಪ್ ಬರೋ ಮುಂಚೆ ಬ್ರೇಕ್
  4. ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್
  5. ಮೊದಲ ಸೆಷನ್ ನಿಂದಲೇ ರನ್ಸ್ ಕಂಟ್ರೋಲ್

ಹೀಗೆ ಫಸ್ಟ್ ಸೆಷನ್​ನಿಂದ ದಿನದಾಟದ ಅಂತ್ಯದವರೆಗೂ ಭಾರತದ ಪರ ಅದ್ಭುತ ಪ್ರದರ್ಶನ ಬಂತು. ಸೌತ್ ಆಫ್ರಿಕಾ ಪರ ಇಬ್ರಷ್ಟೇ ಕ್ಯಾಚ್ ಔಟ್ ಆಗಿದ್ದು. ಉಳಿದವ್ರೆಲ್ಲಾ ಬೌಲ್ಡ್, ಎಲ್​​ಬಿಡಬ್ಲ್ಯೂ ಬಲೆಗೆ ಬಿದ್ರು. ಸೋ ಬೌಲಿಂಗ್​ನಲ್ಲಿ ಬೆಸ್​ಟ ಪರ್ಫಾಮೆನ್ಸ್ ನೀಡಿದ ಭಾರತ ನೆಕ್ಸ್​ಟ್ ಬ್ಯಾಟಿಂಗ್​ನಲ್ಲೂ ತಾಳ್ಮೆಯುತವಾಗಿ ಆಡ್ತಿದೆ. ಜೈಸ್ವಾಲ್ ವಿಕೆಟ್ ಬೇಗ ಬಿದ್ರೂ ಕೂಡ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ಸ್ಲೋ ಆಗಿಯೇ ಇನ್ನಿಂಗ್ಸ್ ಕಟ್ತಿದೆ.

Shantha Kumari