3ನೇ ಪಂದ್ಯಕ್ಕಿಲ್ಲ ಪ್ರಸಿದ್ಧ್, ಸುಂದರ್ – ಅಕ್ಷರ್ ಪಟೇಲ್ ಬಿಟ್ಟಿದ್ದೇ ತಪ್ಪಾಯ್ತಾ?
ಟೆಂಬಾ ಓಟಕ್ಕೆ RO-KO ಬ್ರೇಕ್?

3ನೇ ಪಂದ್ಯಕ್ಕಿಲ್ಲ ಪ್ರಸಿದ್ಧ್, ಸುಂದರ್ – ಅಕ್ಷರ್ ಪಟೇಲ್ ಬಿಟ್ಟಿದ್ದೇ ತಪ್ಪಾಯ್ತಾ?ಟೆಂಬಾ ಓಟಕ್ಕೆ RO-KO ಬ್ರೇಕ್?

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಾಳೆ ಏಕದಿನ ಸರಣಿಯ ಕ್ಲೈಮ್ಯಾಕ್ಸ್ ಫೈಟ್ ಇದೆ. ಆಲ್ರೆಡಿ ಇಬ್ಬರೂ ಒಂದೊಂದು ಪಂದ್ಯಗಳನ್ನ ಗೆದ್ದಿರೋದ್ರಿಂದ ಕೊನೇ ಮ್ಯಾಚ್ ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಕಳೆದ ಎರಡೂ ಪಂದ್ಯಗಳೂ ಲಾಸ್ಟ್ ಓವರ್​ವರೆಗೂ ನಡೆದಿದೆ. ಅಂದ್ರೆ ಎರಡೂ ತಂಡಗಳ ನಡುವೆ ನೆಕ್ ಟು ನೆಕ್ ಫೈಟ್ ನೋಡಿದ್ದೇವೆ. ಇದೀಗ ಎಲ್ಲರ ಕಣ್ಣು ಮೂರನೇ ಪಂದ್ಯದತ್ತ ನೆಟ್ಟಿದೆ. ಈ ಮ್ಯಾಚ್ ಗೆದ್ರಷ್ಟೇ ಭಾರತ ತವರಿನಲ್ಲಿ ಮರ್ಯಾದೆ ಉಳಿಸಿಕೊಳ್ಳುತ್ತೆ. ಯಾಕಂದ್ರೆ ಟೆಸ್ಟ್​ನಲ್ಲಿ ಕ್ಲೀನ್ ಸ್ವೀಪ್ ಆಗಿರೋದ್ರಿಂದ ಏಕದಿನ ಸರಣಿ ಗೆದ್ದು ರಿವೇಂಜ್ ತಗೊಳ್ಬೇಕು. ನೆಕ್ಸ್​ಟ್ ಟಿ-20ಐ ಸಿರೀಸ್​ಗೆ ಕಾನ್ಫಿಡೆನ್ಸ್ ಬೂಸ್ಟ್ ಮಾಡ್ಬೇಕು.

ಇದನ್ನೂ ಓದಿ : Devil ಬರ್ತಿದೆ ಚಿನ್ನ – D BOSS ಗ್ರಹಣ ಬಿಡ್ತಾ? – ಜೈಲಿನ TVಯಲ್ಲಿ ಡೆವಿಲ್ ‘ದರ್ಶನ’

ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್‌ಗಳಿಂದ ಗೆದ್ದಿತ್ತು. ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅಂತರರಾಷ್ಟ್ರೀಯ ಮೈದಾನದಲ್ಲಿ ಸರಣಿ ಡಿಸೈಡರ್ ಮ್ಯಾಚ್ ಫಿಕ್ಸ್ ಆಗಿದೆ. ಹೇಳಿ ಕೇಳಿ ಈ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ. ಐಪಿಎಲ್​ನಲ್ಲೇ ರನ್​​ಗಳ ಮಳೆ ಸುರಿದಿದೆ. ಸೋ ನಾಳಿನ ಮ್ಯಾಚಲ್ಲೂ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಇನ್ನು ಮೂರನೇ ಪಂದ್ಯ ಡು ಆರ್ ಡೈ ಆಗಿರೋದ್ರಿಂದ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆ ಆಗೋ ಚಾನ್ಸಸ್ ಇದೆ.

ಪ್ರಸಿದ್ಧ್ ಕೃಷ್ಣ ಬದಲಿಗೆ ನಿತೀಶ್ ರೆಡ್ಡಿಗೆ ಚಾನ್ಸ್?

ಕಳೆದ ಎರಡು ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಬಿಗ್ ಸ್ಕೋರ್ ಕಲೆ ಹಾಕಿದ್ರೂ ಬೌಲಿಂಗ್​ನಲ್ಲಿ ಒದ್ದಾಡಿದೆ. ಮೊದಲ ಮ್ಯಾಚ್ ಗೆದ್ರೂ ಅದೂ ಕೂಡ ಲಾಸ್ಟ್​ ಮೂಮೆಂಟ್​ನಲ್ಲಿ. ಹಾಗೇ ಎರಡನೇ ಪಂದ್ಯದಲ್ಲಿ 359 ರನ್ಸ್ ಟಾರ್ಗೆಟ್ ಕೊಟ್ರೂ ಗೆಲ್ಲೋಕೆ ಆಗ್ಲಿಲ್ಲ. ಅದಕ್ಕೆ ಕಾರಣವೇ ಕಳಪೆ ಬೌಲಿಂಗ್. ಅದ್ರಲ್ಲೂ ದುಬಾರಿಯಾಗಿ ಪರಿಣಮಿಸಿದ್ದೇ ಪ್ರಸಿದ್ಧ್ ಕೃಷ್ಣ. ಕಳೆದ ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಕರ್ನಾಟಕದ ವೇಗಿ ರಾಯ್‌ಪುರದಲ್ಲಿ 8.2 ಓವರ್‌ಗಳನ್ನು ಬೌಲಿಂಗ್ ಮಾಡಿ 85 ರನ್‌ಗಳನ್ನು ಬಿಟ್ಟುಕೊಟ್ಟರು. 2 ವಿಕೆಟ್‌ತಗೊಂಡ್ರೂ ಕೂಡ ಎಕಾನಮಿ ದರ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಇನ್ನು ಮೊದಲ ಪಂದ್ಯದಲ್ಲೂ 6.54 ಇತ್ತು. ಹೀಗಾಗಿ ನಾಳಿನ ಪಂದ್ಯಕ್ಕೆ ಪ್ರಸಿದ್ಧ್ ಬದಲಿಗೆ ನಿತೀಶ್ ರೆಡ್ಡಿಗೆ ಅವಕಾಶ ನೀಡುವ ಸಾಧ್ಯತೆ ಇದೆ.  ಹಾಗೇ ವಾಷಿಂಗ್ಟನ್ ಸುಂದರ್ ಕೂಡ ಎಫೆಕ್ಟಿವ್ ಇಲ್ಲ. ಬ್ಯಾಟಿಂಗ್ & ಬೌಲಿಂಗ್​ನಲ್ಲಿ ಯಾವ ಸಾಥ್ ಕೊಡ್ತಿಲ್ಲ. ರಾಂಚಿಯಲ್ಲಿ 3 ಓವರ್, ರಾಯ್​ಪುರದಲ್ಲಿ 4 ಓವರ್ ಬೌಲ್ ಮಾಡಿದ್ರು. ಹೀಗಾಗಿ ಸುಂದರ್​ನ ಹೊರಗಿಟ್ಟು ತಿಲಕ್ ವರ್ಮಾಗೆ ಅವಕಾಶ ಕೊಟ್ರೆ ರನ್ಸ್ ಆದ್ರೂ ಜಾಸ್ತಿ ಸ್ಕೋರ್ ಮಾಡ್ಬೋದು ಅನ್ನೋ ಇಂಟೆನ್ಷನ್​ನಲ್ಲಿದ್ದಾರೆ.  ಹೀಗೆ ನಾಳಿನ ಪಂದ್ಯಕ್ಕೆ ಈ ಎರಡು ಬದಲಾವಣೆ ಬಿಟ್ರೆ ಉಳಿದೆಲ್ಲಾ ಸ್ಲಾಟ್​ಗಳು ಹಿಂದಿನ ಪಂದ್ಯದಂತೆಯೇ ಕಂಟಿನ್ಯೂ ಆಗ್ಬೋದು.

ಚಾಂಪಿಯನ್ಸ್ ಟ್ರೋಫಿ ಸ್ಟಾರ್ ಅಕ್ಷರ್ ಕೈಬಿಟ್ಟಿದ್ದೇಕೆ?

ಌಕ್ಚುಲಿ ಆಲ್ ರೌಂಡರ್ ಕೋಟಾದಲ್ಲಿ ಏಕದಿನ ಮಾದರಿಗೆ ಅಕ್ಷರ್ ಪಟೇಲ್ ಬೆಸ್ಟ್ ಪಿಕ್ ಆಗಿತ್ತು. ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಅಕ್ಷರ್ ಪಟೇಲ್ ಒಳ್ಳೆ ಪ್ರದರ್ಶನ ನೀಡಿದ್ರು. ಬ್ಯಾಟಿಂಗ್, ಬೌಲಿಂಗ್ ಎರಡ್ರಲ್ಲೂ ಕ್ಲಿಕ್ ಆಗಿದ್ರು. ಕೆಎಲ್ ರಾಹುಲ್ ಗಿಂತ ಮೊದಲೇ ಬ್ಯಾಟಿಂಗ್​ಗೆ ಕಳಿಸಿದ್ರು. ಅಕ್ಷರ್ ಪಟೇಲ್​ರ ಪ್ಲಸ್ ಏನಂದ್ರೆ ಅವ್ರತ್ರ 10 ಓವರ್​ಗಳನ್ನೂ ಬೌಲ್ ಮಾಡಿಸ್ಬೋದು. ವಿಕೆಟ್ ಟೇಕಿಂಗ್ ಬೌಲರ್ ಅವ್ರು. ಹಾಗೇ ಮಿಡಲ್ ಆರ್ಡರ್ ನಲ್ಲಿ ಬಿಗ್ ಹಿಟ್​ಗಳ ಮೂಲಕ ಫಿನಿಶಿಂಗ್ ರೋಲ್ ಪ್ಲೇ ಮಾಡೋಕೆ ಕೇಪೆಬಲ್ ಇದ್ರು. ಬಟ್ ಈಗ ಅದ್ಯಾವ ಲಾಜಿಕ್ ಮೇಲೆ ಕೈಬಿಟ್ರೋ ಗೊತ್ತಿಲ್ಲ. ಆಲ್ರೆಡಿ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಡೆತ ತಿಂದಿರೋ ಟೀಂ ಇಂಡಿಯಾ ಏಕದಿನ ಫಾರ್ಮೆಟ್​ನಲ್ಲಿ ರಿವೇಂಜ್ ತಗೊಳ್ಳೇಬೇಕು. ಆದ್ರೆ ಅದು ಅಷ್ಟು ಈಸಿನಾ ಅಂದ್ರೆ ಇಲ್ವೇ ಇಲ್ಲ. ಬರೀ ಪ್ಲೇಯಿಂಗ್ 11 ಬದಲಾವಣೆ ಅಷ್ಟೇ ಅಲ್ಲ ಒಂದಷ್ಟು ವಿಚಾರಗಳಲ್ಲೂ ಅಲರ್ಟ್ ಆಗ್ಬೇಕಿದೆ.

ಮ್ಯಾಚ್ ಗೆಲ್ಲೋಕೆ ಚಾಲೆಂಜ್!

ಕ್ಯಾಪ್ಟನ್ಸ್ ಚೇಂಜ್ ಆಗ್ತಿದ್ರೂ ಬದಲಾಗದ ಟಾಸ್ ಲಕ್

ಆಲ್ ರೌಂಡರ್ಸ್ ಕಡೆಯಿಂದ ಉತ್ತಮ ಸಾಥ್ ಸಿಗ್ತಿಲ್ಲ

ಬ್ಯಾಟಿಂಗ್ ಅಬ್ಬರಿಸಿದ್ರೂ ಬೌಲಿಂಗ್ ನಲ್ಲಿ ಡಿಫೆನ್ಸ್ ಚಾಲೆಂಜ್

ಭಾರತಕ್ಕೆ ಟಫ್ ಫೈಟ್ ಕೊಡ್ತಿರೋ ಸೌತ್ ಆಫ್ರಿಕಾ ತಂಡ

ಕೊನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿರೋ ತಂಡಗಳು

ಹೀಗೆ ನಾಳಿನ ಪಂದ್ಯಕ್ಕೆ ಭಾರತ ತಂಡಕ್ಕೂ ಒಂದಷ್ಟು ಚಾಲೆಂಜ್​ಗಳಿವೆ. ಇನ್ನು ಪಿಚ್ ಬಗ್ಗೆ ನೋಡೋದಾದ್ರೆ ಈ ಮೈದಾನದಲ್ಲಿ ಭಾರತ ಇದುವರೆಗೆ 10 ಏಕದಿನ ಪಂದ್ಯಗಳನ್ನು ಆಡಿದೆ. ಏಳರಲ್ಲಿ ಗೆದ್ದು ಎರಡರಲ್ಲಿ ಸೋಲನ್ನು ಕಂಡಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಆದ್ರೆ ಈ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಒಮ್ಮೆಯೂ ಏಕದಿನ ಪಂದ್ಯ ಆಡಿಲ್ಲ. ಈ ಮೈದಾನದಲ್ಲಿ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗೆ 387 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಗಿದೆ. ಌಂಡ್ 2016ರಲ್ಲಿ 79 ರನ್​ಗಳಿಗೆ ನ್ಯೂಜಿಲೆಂಡ್ ಆಲೌಟ್ ಆಗಿದ್ದು ಲೋಯೆಸ್ಟ್ ಸ್ಕೋರ್ ಆಗಿದೆ. ಇನ್ನು ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಮೂರು ಶತಕಗಳನ್ನ ಬಾರಿಸಿದ್ದಾರೆ. ರೋಹಿತ್ ಕೂಡ ಉತ್ತಮ ದಾಖಲೆ ಹೊಂದಿದೆ. ಆಲ್ರೆಡಿ ಸೌತ್ ಆಫ್ರಿಕಾ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಶತಕ ಸಿಡಿಸಿರೋ ಕೊಹ್ಲಿ ಫುಲ್ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ರೋ-ಕೋ ಮೇಲೆ ಎಲ್ಲರ ಕಣ್ಣಿದೆ.

Shantha Kumari