DANGER ZONEನಲ್ಲಿ ಇಂಡಿಯಾ – 3ನೇ ಮ್ಯಾಚ್ ಗೆಲ್ಲೋದೇ ಚಾಲೆಂಜ್
T-20 ವಿಶ್ವಕಪ್.. ಸರಣಿ ಎಷ್ಟು ಮುಖ್ಯ?

DANGER ZONEನಲ್ಲಿ ಇಂಡಿಯಾ – 3ನೇ ಮ್ಯಾಚ್ ಗೆಲ್ಲೋದೇ ಚಾಲೆಂಜ್T-20 ವಿಶ್ವಕಪ್.. ಸರಣಿ ಎಷ್ಟು ಮುಖ್ಯ?

ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ಟಿ-20ಐ ಸರಣಿ ಸದ್ಯ ರೋಚಕ ಘಟ್ಟದಲ್ಲಿದೆ. ಸರಣಿಯ ಮೂರನೇ ಪಂದ್ಯ ಇವತ್ತು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಆಲ್ರೆಡಿ ಒಂದೊಂದು ಪಂದ್ಯ ಗೆದ್ದು ಟೈ ಆಗಿರೋದ್ರಿಂದ ಈ ಮ್ಯಾಚ್ ಗೆದ್ದವ್ರಿಗೆ ಬಿಗ್ ಅಡ್ವಾಂಟೇಜ್ ಸಿಗಲಿದೆ. ಌಂಡ್ ಸೋತವ್ರು ಮುಂದಿನ ಎರಡೂ ಪಂದ್ಯಗಳಲ್ಲೂ ಡು ಆರ್ ಡೈ ಎನ್ನುವಂತೆಯೇ ಆಡ್ಬೇಕಾಗುತ್ತೆ. ಇವತ್ತಿನ ಪಂದ್ಯ ಗೆಲ್ಲೋದು ಭಾರಕ್ಕೆ ಮೋಸ್ಟ್ ಇಂಪಾರ್ಟೆಂಟ್ ಆಗಿದ್ರೋ ಒಂದಷ್ಟು ಚಾಲೆಂಜಸ್​ಗಳಂತೂ ಇದೆ.

ಇದನ್ನೂ ಓದಿ : ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿ – ಪುಟ್ಬಾಲ್ ತಾರೆ ಎಂಟ್ರಿ ವೇಳೆ ಫ್ಯಾನ್ಸ್ ಸಂಭ್ರಮ ಹೇಗಿತ್ತು ನೋಡಿ

ಐದು ಪಂದ್ಯಗಳ ಸರಣಿಯಲ್ಲಿ ಕಟಕ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 101 ರನ್​ಗಳ ಬೃಹತ್ ಅಂತರದಲ್ಲಿ ಗೆದ್ದಿತ್ತು. ಬಟ್ ಚಂಡೀಗಡ್​ನಲ್ಲಿ ನಡೆದ ಎರಡನೇ ಮ್ಯಾಚಲ್ಲಿ 51 ರನ್​ಗಳಿಂದ ಸೋಲು ಕಂಡಿತ್ತು. ಈಗ ಮೂರನೇ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು ಉಭಯ ತಂಡಗಳಿಗೂ ಗೆಲ್ಲಲೇಬೇಕಾದ ಪ್ರೆಶರ್ ಇದೆ. ಅದ್ರಲ್ಲೂ ಕಳೆದ ಮ್ಯಾಚಲ್ಲಿ ಸೋತಿರೋ ಭಾರತ ಈ ಪಂದ್ಯದಲ್ಲಿ ಗೆದ್ದು ಕಂ ಬ್ಯಾಕ್ ಮಾಡಲೇಬೇಕಿದೆ.

ಸರಣಿ ಗೆಲ್ಲಬೇಕು ಅಂದ್ರೆ ಭಾರತಕ್ಕೆ ಈ ಪಂದ್ಯ ಮುಖ್ಯ!

ಪ್ರಸ್ತುತ ಸರಣಿಯಲ್ಲಿ ಭಾರತ ಗೆಲ್ಬೇಕು ಅಂದ್ರೆ ಇವತ್ತು ನಡೆಯಲಿರೋ ಮೂರನೇ ಪಂದ್ಯದಲ್ಲಿ ಗೆಲ್ಲಲೇಬೇಕು. ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿರೋ ಎರಡೂ ತಂಡಗಳಿಗೆ ಇವತ್ತಿನ ಮ್ಯಾಚ್ ಸೇರಿದಂತೆ 3 ಪಂದ್ಯಗಳು ಬಾಕಿ ಇವೆ. ಹೀಗಾಗಿ ಇವತ್ತು ಗೆಲ್ಲೋರಿಗೆ ಸರಣಿ ಕೈವಶ ಮಾಡಿಕೊಳ್ಳೋದು ಈಸಿಯಾಗುತ್ತೆ. ಉಳಿದ ಎರಡು ಪಂದ್ಯಗಳಲ್ಲಿ ಅಟ್​ಲೀಸ್ಟ್ ಒಂದು ಗೆದ್ರೂ ಸರಣಿ ಗೆಲ್ಲಬಹುದು. ಒಂದು ವೇಳೆ ಸೋತ್ರೆ ಮುಂದಿನ ಎರಡೂ ಪಂದ್ಯಗಳನ್ನ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ. ಹೀಗಾಗಿ ಬೆಟರ್ ಆಪ್ಶನ್ ಅಂದ್ರೆ ಇವತ್ತಿನ ಪಂದ್ಯ ಗೆಲ್ಲೋದು. ಕಳೆದ ಪಂದ್ಯದಲ್ಲಿ ಮುಗ್ಗರಿಸಿರೋ ಭಾರತಕ್ಕೆ ಇವತ್ತಿನ ಮ್ಯಾಚಲ್ಲಿ ಒಂದಷ್ಟೂ ಸವಾಲುಗಳೂ ಇವೆ.

ಭಾರತಕ್ಕೆ ಇರುವಂಥ ಸವಾಲುಗಳು!

  1. ಟಾಪ್ ಆರ್ಡರ್ ಬ್ಯಾಟಿಂಗ್ ನಲ್ಲಿ ನಿರೀಕ್ಷಿತ ರನ್ಸ್ ಬರ್ತಿಲ್ಲ
  2. ಮುಂದಿನ 2 ಪಂದ್ಯಗಳ ಪ್ರೆಶರ್ ತಗ್ಗಬೇಕು ಅಂದ್ರೆ ಗೆಲ್ಲಬೇಕು
  3. ಅಜೇಯ ಗೆಲುವಿನ ದಾಖಲೆ ಉಳಿಸಿಕೊಳ್ಳೋ ಸವಾಲು
  4. ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋಲದ ದಾಖಲೆ
  5. ಟಿ-20ಐನಲ್ಲಿ ಜಗತ್ತಿನ ನಂಬರ್ 1 ತಂಡದ ಪಟ್ಟ
  6. 2026ರ ಟಿ-20 ವಿಶ್ವಕಪ್ ಗೂ ಮುನ್ನ ಬಲಿಷ್ಠ ಟೀಂ

ಈ ಎಲ್ಲಾ ದಾಖಲೆಗಳು ಸೇಫ್ ಆಗ್ಬೇಕು ಅಂದ್ರೆ ಭಾರತ ಈ ಸರಣಿ ಗೆಲ್ಲಲೇಬೇಕು. ಸರಣಿ ಗೆಲ್ಬೇಕು ಅಂದ್ರೆ ಇವತ್ತಿನ ಮ್ಯಾಚ್ ವಿನ್ ಆಗ್ಬೇಕು. ಇಲ್ಲದೇ ಇದ್ರೆ ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಡು ಆರ್ ಡೈ ಸ್ಥಿತಿ ನಿರ್ಮಾಣವಾಗುತ್ತೆ. ಆಗ ಆಟಗಾರರ ಮೇಲೂ ಪ್ರೆಶರ್ ಬೀಳುತ್ತೆ. ಇದ್ರಿಂದ ಆಟದ ಮೇಲೂ ಎಫೆಕ್ಟ್ ಆಗೋ ಚಾನ್ಸಸ್ ಇರುತ್ತೆ. ಸೋ ಇವತ್ತಿನ ಮ್ಯಾಚ್ ಗೆದ್ರೆ ಮುಂದಿನ ಪಂದ್ಯದಲ್ಲಿ ಟೆನ್ಷನ್ ಫ್ರೀಯಾಗಿ ಗೆಲ್ಲಬಹುದು.

Shantha Kumari