2ನೇ ಟೆಸ್ಟ್.. ಪಿಚ್ ವಿಲನ್ – ಬ್ಯಾಟರ್ಸ್ ಗೆ ಕೈ ಕೊಡ್ತಾ ಐಡಿಯಾ?
ಸ್ಪಿನ್ Or ಪೇಸ್.. ರಿವರ್ಸ್ ಹೊಡ್ಯುತ್ತಾ?

2ನೇ ಟೆಸ್ಟ್.. ಪಿಚ್ ವಿಲನ್ – ಬ್ಯಾಟರ್ಸ್ ಗೆ ಕೈ ಕೊಡ್ತಾ ಐಡಿಯಾ?ಸ್ಪಿನ್ Or ಪೇಸ್.. ರಿವರ್ಸ್ ಹೊಡ್ಯುತ್ತಾ?

ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚಲ್ಲಿ ಭಾರತ ಸೋಲು ಕಂಡಿದೆ. ನಾಳೆ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು ಈ ಪಂದ್ಯವನ್ನ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದ್ರೆ ಇಲ್ಲಿರೋ ಸವಾಲು ಅಂದ್ರೆ ಪಿಚ್. ಮೊದಲ ಮ್ಯಾಚಲ್ಲಿ ಇವ್ರೇ ಹೇಳಿ ಮಾಡಿಸಿದ್ದ ಪಿಚ್ ರಿವರ್ಸ್ ಹೊಡ್ದಿತ್ತು.  ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ ಮ್ಯಾಚಲ್ಲಿ ಜಸ್ಟ್ ಎರಡೂವರೆ ದಿನದಲ್ಲೇ ಎರಡೂ ತಂಡಗಳು ಆಲೌಟ್​ ಆಗಿ ರಿಸಲ್ಟ್ ಹೊರಬಿದ್ದಿತ್ತು. ಶುಭ್​ಮನ್ ಗಿಲ್ ರಿಟೈರ್ಡ್ ಹರ್ಟ್​ ಆಗಿದ್ರಿಂದ ಟೋಟಲ್ಲಾಗಿ 38 ವಿಕೆಟ್​ಗಳನ್ನ ಬೌಲರ್​ಗಳ ಬೇಟೆಯಾಡಿದ್ರು. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಎರಡೂ ತಂಡಗಳಿಂದ ಅರ್ಧಶಕತಕ್ಕಿಂತ ಜಾಸ್ತಿ ರನ್ ಬಾರಿಸಿದ ಏಕೈಕ ಬ್ಯಾಟರ್ ಟೆಂಬಾ ಬವುಮಾ. ಸೌತ್ ಆಫ್ರಿಕಾ ಕ್ಯಾಪ್ಟನ್ ಬವುಮಾ ಮಾತ್ರನೇ ಎರಡನೇ ಇನ್ನಿಂಗ್ಸ್​ನಲ್ಲಿ 55 ರನ್​ ಗಳಿಸಿ ನಾಟೌಟ್ ಆಗಿ ಉಳಿದಿದ್ರು. ಮಿಕ್ಕವ್ರೆಲ್ಲಾ ಬಿಲೋ 40 ಒಳಗೆ ವಿಕೆಟ್ ಒಪ್ಪಿಸಿದ್ರು. ಅದಕ್ಕೆ ಕಾರಣ ಪಿಚ್ ಮಾಡ್ಯುಲೇಷನ್.

ಇದನ್ನೂ ಓದಿ : 7 ಕೋಟಿ ದರೋಡೆ ಕೇಸ್ನ ಮಾಸ್ಟರ್‌ಮೈಂಡ್‌ ಒಬ್ಬನಲ್ಲ.. ಇಬ್ಬರು! – ಸೀಜ್‌ ಆಯ್ತು 5.30 ಕೋಟಿ ರೂ. ಹಣ!

ಗುವಾಹಟಿ ಮೈದಾನದಲ್ಲಿ ಭಾರತದ ಮೊದಲ ಟೆಸ್ಟ್ ಪಂದ್ಯ!

ಎರಡನೇ ಟೆಸ್ಟ್ ಪಂದ್ಯ ನಡೆಯಲಿರೋ ಗುವಾಹಟಿಯ ಬರ್ಸಪಾರ ಮೈದಾನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇದುವರೆಗೆ ಈ ಮೈದಾನದಲ್ಲಿ ಒಂದೇ ಒಂದು ಟೆಸ್ಟ್ ಮ್ಯಾಚ್ ಆಯೋಜನೆ ಮಾಡಿಲ್ಲ. ಗುವಾಹಟಿ ಕ್ರೀಡಾಂಗಣದಲ್ಲಿ ಭಾರತ ತಂಡವು ಟಿ20 ಅಂತರರಾಷ್ಟ್ರೀಯ ಮತ್ತು ಏಕದಿನ ಪಂದ್ಯಗಳನ್ನು ಆಡಿದೆ.  ಬರ್ಸಪಾರ ಕ್ರಿಕೆಟ್ ಸ್ಟೇಡಿಯಂ ಅನ್ನು 2012ರಲ್ಲಿ ನಿರ್ಮಿಸಲಾಗಿದೆ. ಇದ್ರಲ್ಲಿ 2017 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ಮೂಲಕ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಸಲಾಗಿತ್ತು. ಇದ್ರಲ್ಲಿ ಭಾರತ 8 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಇನ್ನು ಭಾರತ ತಂಡವು ಇಲ್ಲಿ ಇದುವರೆಗೆ 4 ಟಿ 20 ಅಂತರರಾಷ್ಟ್ರೀಯ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದೆ. ಈ 6 ಪಂದ್ಯಗಳಲ್ಲಿ, ಟೀಮ್ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದೆ, 2 ಪಂದ್ಯಗಳಲ್ಲಿ ಸೋತಿದೆ. ಮಳೆಯಿಂದಾಗಿ ಒಂದು ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ತಂಡವು 2023 ರಲ್ಲಿ ಕೊನೆಯ ಬಾರಿಗೆ ಇಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು. ಇದ್ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.

ಸ್ಪಿನ್ ಫ್ರೆಂಡ್ಲಿ ಪಿಚ್ ಭಾರತಕ್ಕೆ ಕೈ ಕೊಡುತ್ತಾ?

ಈ ಮೈದಾನದಲ್ಲಿ ಸೀಮಿತ ಓವರ್​ಗಳನ್ನ ಮಾತ್ರ ಇದುವರೆಗೆ ಆಡಲಾಗಿದೆ.  ಅಲ್ದೇ 6 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 8 ಶತಕಗಳು ದಾಖಲಾಗಿವೆ. ಆದ್ದರಿಂದ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಅನ್ನು ನಿರೀಕ್ಷಿಸಬಹುದು. ಆದ್ರೆ ಸದ್ಯಕ್ಕೆ ಬಿಸಿಸಿಐ ಸ್ಪಿನ್ ಫ್ರೆಂಡ್ಲಿ ಪಿಚ್ ರೆಡಿ ಮಾಡ್ತಿದೆ.  ಕೆಂಪು ಮಣ್ಣಿನ ಪಿಚ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಕೆಂಪು ಮಣ್ಣಿನ ಪಿಚ್ ಪೇಸ್, ಸ್ವಿಂಗ್ ಮತ್ತು ಬೌನ್ಸ್ ಆಗುತ್ತೆ. ಗುವಾಹಟಿ ಮೈದಾನದ ಬಗ್ಗೆ ಸಾಕಷ್ಟು ತಿಳಿದಿರೋ ಬಿಸಿಸಿಐ ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ ಅವರು ಪಿಚ್ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದಾರೆ. ಗುವಾಹಟಿ ಪಿಚ್ ಬೌಲರ್ಸ್​ಗೆ ಹೆಚ್ಚು ಅನುಕೂಲವಾಗಲಿದ್ದು, ಸ್ಪಿನರ್ಸ್ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಅಂದ್ರೆ ಕಳೆದ ಪಂದ್ಯದಂತೆ ಇಲ್ಲಿಯೂ ಹೆಚ್ಚಿನ ಸ್ಕೋರ್ ಬರೋದು ಡೌಟ್ ಇದೆ.

ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಸಲಹೆಯ ಮೇರೆಗೇ ಮೊದಲ ಟೆಸ್ಟ್ ಪಂದ್ಯಕ್ಕೆ ಪಿಚ್ ರೆಡಿ ಆಗಿತ್ತು. ಆದ್ರೆ ಅದೇ ಮೈದಾನದ ಭಾರತಕ್ಕೆ ಉಲ್ಟಾ ಹೊಡೆದಿತ್ತು. ಈಗ ಮತ್ತೆ ಸೆಕೆಂಡ್ ಪಿಚ್​ಗೂ ಹೇಳಿಯೇ ಮಾಡಿಸಿದ್ದಾರೆ. ಆದ್ರೆ ಅದು ಭಾರತಕ್ಕಿಂತ ಸೌತ್ ಆಫ್ರಿಕಾಗೆ ಪ್ಲಸ್ ಆಗ್ತಿದೆ. ಅಲ್ಲಿನ ಸ್ಪಿನ್ನರ್​ಗಳು ಪ್ರಾಬಲ್ಯ ಮೆರೀತಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಕೂಡ ಇದನ್ನೇ ಹೇಳಿದ್ರು. ಭಾರತ ಮೊದಲ ಪಂದ್ಯ ಸೋತ ಬಳಿಕ ಭಾರತದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾದ ಪಿಚ್‌ಗಳನ್ನು ಸಿದ್ಧಪಡಿಸುತ್ತಿರುವುದರಿಂದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇಂತಹ ಪಿಚ್‌ಗಳಲ್ಲಿ ಎದುರಾಳಿ ತಂಡದ ಸ್ಪಿನ್ನರ್‌ಗಳು ಚುರಾಕಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಟೀಂ ಇಂಡಿಯಾವು ಹಿಂದಿನಂತೆ ಸ್ಪಿನ್ ಅನ್ನು ಚೆನ್ನಾಗಿ ಆಡುತ್ತಿಲ್ಲ ಎಂದಿದ್ದಾರೆ. ಸೋ ಇಲ್ಲಿ ಭಾರತದ ಸ್ಪಿನ್ ಬೌಲಿಂಗ್ ಎಷ್ಟು ವೀಕ್ ಆಗಿದೆ ಅನ್ನೋದ್ರ ಜೊತೆಗೆ ಭಾರತದ ಟಾಪ್ ಕ್ಲಾಸ್ ಬ್ಯಾಟರ್​ಗಳು ಸ್ಪಿನ್ನರ್​ಗಳ ವಿರುದ್ಧ ಬ್ಯಾಟಿಂಗ್​ಗೆ ಎಷ್ಟು ಸ್ಟ್ರಗಲ್ಸ್ ಮಾಡ್ತಾರೆ ಅನ್ನೋದನ್ನೂ ರಿವೀಲ್ ಮಾಡಿದ್ರು.

Shantha Kumari