2ನೇ ಟೆಸ್ಟ್ ನಿಂದ ಹೊರಬಿದ್ದ ಗಿಲ್ – ನಿತೀಶ್ ರೀ ಎಂಟ್ರಿ ಟ್ರಿಕ್ಸ್ ಏನು?
ಪ್ಲೇಯಿಂಗ್ 11 ಟ್ವಿಸ್ಟ್ ಕೊಡ್ತಾರಾ?

2ನೇ ಟೆಸ್ಟ್ ನಿಂದ ಹೊರಬಿದ್ದ ಗಿಲ್ – ನಿತೀಶ್ ರೀ ಎಂಟ್ರಿ ಟ್ರಿಕ್ಸ್ ಏನು?ಪ್ಲೇಯಿಂಗ್ 11 ಟ್ವಿಸ್ಟ್ ಕೊಡ್ತಾರಾ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನ ಟೀಂ ಇಂಡಿಯಾ ಶತಾಯ ಗತಾಯ ಗೆಲ್ಲಲೇಬೇಕು. ಆಲ್ರೆಡಿ ಮೊದಲ ಪಂದ್ಯವನ್ನ ಸೋತು ಆಗಿರೋ ಡ್ಯಾಮೇಜ್​ನ ಪ್ಯಾಚ್​ಅಪ್ ಮಾಡಿಕೊಳ್ಬೇಕು. ಬಟ್ ಇಂಥಾ ಟೈಮಲ್ಲೇ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಶುಭ್​ಮನ್ ಗಿಲ್ ಎರಡನೇ ಪಂದ್ಯದಿಂದ ಹೊರ ಬಿದ್ದಿದ್ದು ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ : ಪದೇ ಪದೇ ಹೋಗ್ತೀನಿ ಅಂತಾರೆ ಅಶ್ವಿನಿ ಗೌಡ – ಇವರ ಆಸೆ ಈಡೇರಿಸ್ತಾರಾ ಬಿಗ್‌ಬಾಸ್?

ಭಾರತ-ಸೌತ್ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಆರಂಭವಾಗಲಿದೆ. ಈ ಮ್ಯಾಚ್ ಗುವಾಹಟಿಯಲ್ಲಿ ನಡೆಯಲಿದೆ. ಟೆಂಬಾ ಬವುಮಾ ನಾಯಕತ್ವದ ಸೌತ್ ಆಫ್ರಿಕಾ ತಂಡ ಮೊದಲ ಮ್ಯಾಚ್ ಗೆದ್ದು ಸರಣಿಯಲ್ಲಿ ಲೀಡ್ ಸಾಧಿಸಿದೆ. ಹೀಗಾಗಿ ಭಾರತ 2 ಪಂದ್ಯಗಳ ಈ ಟೆಸ್ಟ್ ಸರಣಿಯನ್ನ ಗೆಲ್ಲೋಕಂತೂ ಚಾನ್ಸೇ ಇಲ್ಲ. ಅಟ್​ಲೀಸ್ಟ್ ಡ್ರಾ ಮಾಡ್ಬೇಕು ಅಂದ್ರೆ 2ನೇ ಪಂದ್ಯ ಗೆಲ್ಬೇಕು. ಈ ಟೈಮಲ್ಲಿ ತಂಡದಲ್ಲಿ ಬಿಗ್ ಚೇಂಜಸ್ ಆಗಿದೆ. ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.

ಸರಣಿಗೂ ಮುನ್ನ ಆಯ್ಕೆ.. ಆಮೇಲೆ ಬಿಡುಗಡೆ.. ಈಗ ಮತ್ತೆ ಸೇರ್ಪಡೆ!

ಸೌತ್ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸ್ಕ್ಯಾಡ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿತ್ತು.  ಸೌತ್ ಆಫ್ರಿಕಾ ಎ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದಿದ್ದರು. ಆದ್ರೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿಗೆ ಆಯ್ಕೆ ಸಮಿತಿ ಬುಲಾವ್ ನೀಡಿದೆ. ಸೋ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸೋ ಚಾನ್ಸಸ್ ಇದೆ. ಈ ದಿಢೀರ್ ಬದಲಾವಣೆಗೆ ಕಾರಣ ಶುಭ್​ಮನ್ ಗಿಲ್ ಇಂಜುರಿ.

ಕುತ್ತಿಗೆ ನೋವಿನಿಂದ 2ನೇ ಪಂದ್ಯ ಆಡಲ್ವಾ ಗಿಲ್?

ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಕುತ್ತಿಗೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದುದು ಅನುಮಾನ ಎನ್ನಲಾಗಿದೆ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ರಿಟೈರ್ಡ್ ಹರ್ಟ್ ಆಗಿದ್ರು. ಆ ನಂತ್ರ ಎರಡನೇ ಇನ್ನಿಂಗ್ಸ್​ನಲ್ಲೂ ಆಡಿಲ್ಲ. ಸದ್ಯ ರೆಸ್ಟ್ ಪಡೆಯುವಂತೆ ವೈದ್ಯರು ಸೂಚಿಸಿದ್ದು ಮುಂದಿನ ಪಂದ್ಯ ಆಡೋದು ಡೌಟ್ ಇದೆ. ಇದರ ಬೆನ್ನಲ್ಲೇ ನಿತೀಶ್ ಕುಮಾರ್ ರೆಡ್ಡಿಗೆ ಭಾರತ ತಂಡಕ್ಕೆ ರಿಜಾಯ್ನ್ ಆಗುವಂತೆ ಸೂಚನೆ ನೀಡಲಾಗಿದೆ.  ಈ ಬೆಳವಣಿಗೆಯನ್ನ ನೋಡಿದ್ರೆ ಗುವಾಹಟಿಯಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಿಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಗಿಲ್ ಅನುಪಸ್ಥಿತಿಯಲ್ಲಿ ವೈಸ್ ಕ್ಯಾಪ್ಟನ್ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಬಹುದು. ಬಟ್ ಇಲ್ಲಿ ಇರುವಂಥ ಪ್ರಶ್ನೆ ಅಂದ್ರೆ ಗಿಲ್ ಪಂದ್ಯ ಆಡಿಲ್ಲ ಅಂದ್ರೆ ಪ್ಯೂರ್ ಬ್ಯಾಟರ್​ನೇ ಕಣಕ್ಕಿಳಿಸ್ತಾರಾ ಅಥವಾ ಆಲ್​ರೌಂಡರ್​ನ ಕಣಕ್ಕಿಳಿಸ್ತಾರಾ ಅನ್ನೋದು. ಗಿಲ್ ಬದಲಿಗೆ ಸಾಯಿ ಸುದರ್ಶನ್ ಆಡಿಸ್ಬೋದು. ನಂಬರ್ 3ನಲ್ಲಿ ಸಾಯಿ ಸುದರ್ಶನ್ ಆಡಿದ್ರೆ ನಂಬರ್ 4ನಲ್ಲಿ ವಾಷಿಂಗ್ಟನ್ ಸುಂದರ್ ಬರ್ತಾರೆ. ವಾಷಿ ಲಾಸ್ಟ್ ಮ್ಯಾಚಲ್ಲಿ ನಂಬರ್ 3ನಲ್ಲಿ ಆಡಿದ್ರು.  ನಿತೀಶ್ ರೆಡ್ಡಿ ಆಡಿದ್ರೆ ಬ್ಯಾಟಿಂಗ್ ಆರ್ಡರ್ ಕಂಪ್ಲೀಟ್ ಚೇಂಜ್ ಆಗುತ್ತೆ. ಸೋ ಯಾವ ಕ್ಯಾಲ್ಕುಲೇಷನ್ ಮೇಲೆ ಪ್ಲೇಯಿಂಗ್ 11 ಸೆಟ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

Shantha Kumari