SA ಅಗ್ನಿಪರೀಕ್ಷೆ ಗೆಲ್ತಾರಾ ಗಂಭೀರ್ – 2ನೇ ಟೆಸ್ಟ್ ಗೆಲ್ಲದಿದ್ರೆ ತಲೆದಂಡ ಫಿಕ್ಸ್?
ಹಠ.. ಪ್ರಯೋಗ.. ಉಲ್ಟಾ ಹೊಡೆದಿದ್ದೇನು?

SA ಅಗ್ನಿಪರೀಕ್ಷೆ ಗೆಲ್ತಾರಾ ಗಂಭೀರ್ – 2ನೇ ಟೆಸ್ಟ್ ಗೆಲ್ಲದಿದ್ರೆ ತಲೆದಂಡ ಫಿಕ್ಸ್?ಹಠ.. ಪ್ರಯೋಗ.. ಉಲ್ಟಾ ಹೊಡೆದಿದ್ದೇನು?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೀತಿದೆ. ಮಸ್ಟ್ ಌಂಡ್ ಶುಡ್ ಭಾರತ ಈ ಪಂದ್ಯವನ್ನ ಗೆಲ್ಲಲೇಬೇಕಿದೆ. ಆಲ್ರೆಡಿ ಫಸ್ಟ್ ಮ್ಯಾಚ್ ಸೋತಿರೋದೇ ಸಾಕಷ್ಟು ಡ್ಯಾಮೇಜ್ ಆಗಿದೆ. ಹೀಗಾಗಿ ಎರಡನೇ ಪಂದ್ಯವನ್ನಾದ್ರೂ ಗೆದ್ದು ಸರಣಿ ಸಮಬಲ ಮಾಡಿಕೊಳ್ಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಪಂದ್ಯದ ಗೆಲುವು ಹೆಡ್ ಕೋಚ್ ಗೌತಮ್ ಗಂಭೀರ್​ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ಗೆಲ್ಲದೇ ಇದ್ರೆ ಗಂಭೀರ್ ತಲೆದಂಡಕ್ಕೆ ಒತ್ತಡ ಹೆಚ್ಚಾಗುತ್ತೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ದೋಚಿದ 7.11 ಕೋಟಿದ 5.77 ಕೋಟಿ ರೂ. ವಶ – ಖಾಕಿ ಭರ್ಜರಿ ಕಾರ್ಯಾಚರಣೆ

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಅದೂ ಕೂಡ 15 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಿದೆ. ಅದೂ ಅಲ್ದೇ ಸ್ಪಿನ್ ತಂತ್ರದೊಂದಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಲು ಯೋಜನೆ ರೂಪಿಸಿದ್ದ ಭಾರತ ಮೊದಲ ಪಂದ್ಯಕ್ಕಾಗಿ ಸ್ಪಿನ್‌ಸ್ನೇಹಿ ಪಿಚ್​ ತಯಾರಿಸಿತ್ತು. ಬಟ್ ತಾನೇ ರೆಡಿ ಮಾಡಿದ ಪಿಚ್​​ನಲ್ಲಿ ತಾನೇ ಸೋಲುಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಟೆಂಬಾ ಬವುಮಾ 55 ರನ್ಸ್ ಕಲೆ ಹಾಕಿದ್ದು ಬಿಟ್ರೆ 4 ಇನ್ನಿಂಗ್ಸ್ ಪೈಕಿ ಬೇರೆ ಯಾರಿಂದಲೂ ಅರ್ಧಶತಕವೂ ಬಂದಿಲ್ಲ. ಎರಡೂಮುಕ್ಕಾಲು ದಿನದಲ್ಲೇ ಎರಡೂ ತಂಡಗಳು ಆಲೌಟ್ ಆಗಿ 38 ವಿಕೆಟ್ಸ್ ಉರುಳಿತ್ತು. ಪಂದ್ಯದ ಬಳಿಕ ಭಾರತ ತಂಡದ ಪ್ರದರ್ಶನ ಮತ್ತು ಹೆಡ್​ಕೋಚ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆದ್ರೆ ಇದೆಲ್ಲವನ್ನ ಒಂದು ಮಟ್ಟಿಗೆ ತರಬೇಕು ಅಂದ್ರೆ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಗಂಭೀರ್ ಪಾಲಿಗಂತೂ ಫ್ಯೂಚರ್ ಡಿಸೈಡರ್​ನಂತೆಯೇ ಇದೆ.

ಗಂಭೀರ್ ಗೆ ಅಗ್ನಿಪರೀಕ್ಷೆ!

  1. ಮೊದಲ ಪಂದ್ಯ ಸೋತ ಬಳಿಕ ಹೆಚ್ಚಾದ ಟೀಕೆ
  2. ಪ್ರತಿಭಾವಂತ ಆಟಗಾರರ ಕಡೆಗಣನೆ ಆರೋಪ
  3. ಬ್ಯಾಟಿಂಗ್ ಆರ್ಡರ್ ಪ್ರಯೋಗದ ವಿರುದ್ಧ ಸಿಟ್ಟು
  4. ತವರಿನಲ್ಲಿ ದಶಕದ ಬಳಿಕ ಹೀನಾಯ ಸೋಲುಗಳು
  5. ಡಬ್ಲ್ಯೂಟಿಸಿ ಅಂಕ ಪಟ್ಟಿಯಲ್ಲಿ ತಂಡದ ಕುಸಿತ

ಪ್ರತೀ ಬಾರಿ ಯಾವುದೇ ಪಂದ್ಯಗಳಿಗೆ ಟೀಂ ಅನೌನ್ಸ್ ಆದಾಗ್ಲೂ ಅಪಸ್ವರಗಳು ಕೇಳಿ ಬರ್ತಾನೇ ಇದೆ. ಌಂಡ್ ಕ್ರಿಕೆಟ್​ನಲ್ಲೂ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಪಾಲಿಟಿಕ್ಸ್ ಮಾಡ್ತಿರೋ ಆರೋಪಇದೆ. ಅಲ್ದೇ ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ತವರಿನಲ್ಲಿ ಆದ ವೈಟ್ ವಾಶ್ ಮುಖಭಂಗ ಹಸಿ ಹಸಿಯಾಗೇ ಇದೆ. ಹೀಗಿರುವಾಗ ಸೌತ್ ಆಫ್ರಿಕಾ ವಿರುದ್ಧ ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳಲೇಬೇಕು. ಇದಕ್ಕೋಸ್ಕರ ಈ ಪಂದ್ಯವನ್ನ ಗೆಲ್ಲಲೇಬೇಕು. ಆದ್ರೆ ಗಂಭೀರ್ ಹಾಗಲ್ಲ. ಭಾರತದ ಯಾವುದೇ ಪಂದ್ಯ ಇದ್ದಾಗ್ಲೂ ಡಗೌಟ್​ನಲ್ಲಿ ಕುಳಿತು ಸೀರಿಯಸ್ ಆಗಿ ಪಂದ್ಯಗಳನ್ನ ನೋಡೋದು ಬಿಟ್ರೆ ಒಂದು ಸಣ್ಣ ರಿಯಾಕ್ಷನ್ ಕೂಡ ಇರಲ್ಲ. ಗೇಮ್ ಕೈತಪ್ಪುತ್ತಿದೆ ಅಂದಾಗ್ಲೂ ಅವ್ರಿಂದ ಸಣ್ಣ ಎಕ್ಸ್​ಪ್ರೆಶನ್ ಕೂಡ ಇರಲ್ಲ. ಗಂಭೀರ್​ರ ಈ ವರ್ತನೆ ಹೀಗೇ ಕಂಟಿನ್ಯೂ ಆದ್ರೆ ತಂಡಕ್ಕೆ ಹೊಡೆತ ಬೀಳುತ್ತೆ. ದಶಕಗಳಿಂದ ಕಟ್ಟಿರೋ ಬಲಿಷ್ಠ ಕೋಟೆಗೆ ದೊಡ್ಡ ಡ್ಯಾಮೇಜ್ ಆದ್ರೂ ಅಚ್ಚರಿ ಇಲ್ಲ.

Shantha Kumari