2ನೇ ಟೆಸ್ಟ್ ನೂ ಕೈಚೆಲ್ಲಿದ ಭಾರತ – ತವರಿನ ಪಿಚ್ ನಲ್ಲೂ ಯಾಕೀ ಚೆಲ್ಲಾಟ?
ಇಂಡಿಯಾಗೆ ಟೆಂಬಾ ಮಾಸ್ಟರ್ ಸ್ಟ್ರೋಕ್

2ನೇ ಟೆಸ್ಟ್ ನೂ ಕೈಚೆಲ್ಲಿದ ಭಾರತ – ತವರಿನ ಪಿಚ್ ನಲ್ಲೂ ಯಾಕೀ ಚೆಲ್ಲಾಟ?ಇಂಡಿಯಾಗೆ ಟೆಂಬಾ ಮಾಸ್ಟರ್ ಸ್ಟ್ರೋಕ್

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡ್ತಿರೋ ಭಾರತಕ್ಕೆ ತವರಿನಲ್ಲಿ ಮತ್ತೊಂದು ಮುಖಭಂಗ ಫಿಕ್ಸ್ ಆಗಿದೆ. ಆಲ್ರೆಡಿ ಫಸ್ಟ್ ಮ್ಯಾಚ್ ಸೋತಿದ್ದವ್ರು ಈಗ ಎರಡನೇ ಪಂದ್ಯವನ್ನ ಡ್ರಾ ಮಾಡಿಕೊಳ್ಳೋಕೂ ಆಗ್ದೇ ಇರೋ ಸ್ಟೇಜ್​ನಲ್ಲಿದ್ದಾರೆ. ಟೆಂಬಾ ಬವುಮಾ ಪಡೆ ರನ್​ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದು ಪಂದ್ಯದ ಗೆಲುವಿನ ಹೊಸ್ತಿಲಲ್ಲಿದೆ.

ಇದನ್ನೂ ಓದಿ : ನ.28ಕ್ಕೆ ಉಡುಪಿಗೆ ಮೋದಿ ಭೇಟಿ, ವೇಳಾ ಪಟ್ಟಿ ಪ್ರಕಟ – ರೋಡ್‌ ಶೋ ಕ್ಯಾನ್ಸಲ್

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೀತಿದ್ದು ಸೌತ್ ಆಫ್ರಿಕಾ ತಂಡ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದೆ. ಮೊದಲ ದಿನ ಅಂದ್ರೆ ಪಂದ್ಯ ಶುರುವಾಗಿದ್ದ ಶನಿವಾರ ಎರಡೂ ತಂಡಗಳು ಈಕ್ವಲ್ ಪರ್ಫಾಮೆನ್ಸ್ ಕೊಟ್ಟಿದ್ರು. ಆದ್ರೆ ಭಾನುವಾರ ಸೌತ್ ಆಫ್ರಿಕಾ ಬ್ಯಾಟರ್​ಗಳು ಪಾರುಪತ್ಯ ಮೆರೆದಿದ್ದಾರೆ. ಭಾರತದ ಬೌಲರ್​ಗಳಿಗೆ ನೀರು ಕುಡ್ಸಿದ್ದಾರೆ. ಇಡೀ ಪಂದ್ಯದ ಚಿತ್ರಣ ಬದಲಾಗಿದ್ದೇ ಇಲ್ಲಿ.

ಟೆಂಬಾ ಪಡೆಯ ಡಾಮಿನೇಷನ್!

ಮೊದಲ ದಿನ 6 ವಿಕೆಟ್ ನಷ್ಟಕ್ಕೆ 267 ರನ್ಸ್

2ನೇ ದಿನ ಪಂದ್ಯದ ದಿಕ್ಕು ಬದಲಿಸಿದ ಬ್ಯಾಟರ್ಸ್

ಸೆನುರನ್ ಮುತುಸಾಮಿ (109) & ಮಾರ್ಕೊ ಜಾನ್ಸೆನ್ (93)

ಎರಡನೇ ದಿನ 489 ರನ್ ಕಲೆ ಹಾಕಿ ಆಲೌಟ್

ಭಾರತದ ಪರ ಬ್ಯಾಟರ್ಸ್ ಪೆವಿಲಿಯನ್ ಪರೇಡ್

ಯಶಸ್ವಿ ಜೈಸ್ವಾಲ್ (58) ಬಿಟ್ರೆ ಉಳಿದವ್ರೆಲ್ಲಾ ಬೇಗ ಔಟ್

ಹೀಗೆ ಭಾರತ ಮಾಡಿಕೊಂಡಿರೋ ಮಿಸ್ಟೇಕ್ಸ್​ನಿಂದಲೇ ಈಗ ಈ ಪಂದ್ಯವನ್ನೂ ಸೋಲೋ ಹಂತಕ್ಕೆ ಬಂದಿದ್ದಾರೆ. ಸದ್ಯದ ಸಿಚುಯೇಷನ್​ನಲ್ಲಿ ಭಾರತ ಈ ಪಂದ್ಯವನ್ನ ಗೆಲ್ಲುತ್ತೆ ಅನ್ನೋದು ಕನಸಿನ ಮಾತು. ಅಟ್​ಲೀಸ್ಟ್​ ಡ್ರಾನಲ್ಲಾದ್ರೂ ಮುಗಿಸ್ತಾರೆ ಅಂದ್ರೆ ಅದೂ ಸಾಧ್ಯವಾಗ್ತಿಲ್ಲ. ಮೂರನೇ ದಿನವೂ ಸೌತ್ ಆಫ್ರಿಕಾವೇ ಪಾರುಪತ್ಯ ಮೆರೀತಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಟೆಂಬಾ ನೋ ಲಾಸ್ ಜರ್ನಿ ಕಂಟಿನ್ಯೂ ಆಗ್ತಿದ್ದು ಈಗ ಭಾರತಕ್ಕೂ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.

Shantha Kumari