ಡಿ ಕಾಕ್ ಕೇಕೆಗೆ IND ಸರೆಂಡರ್ – ಬಂದ ಪುಟ್ಟ ಹೋದ ಪುಟ್ಟ ಬ್ಯಾಟರ್ಸ್
T-20I ಸ್ಥಿತಿಯೂ ಗಂಭೀರವಾಗುತ್ತಾ?

ಕಟಕ್‌ನಲ್ಲಿ ನಡೆದ ಮೊದಲ ಟಿ20ಐ ಮ್ಯಾಚಲ್ಲಿ ಭಾರತ ಒನ್ ಸೈಡೆಡ್ ಆಗಿ ಗೆದ್ದಿತ್ತು. ಬಟ್ ಸೆಕೆಂಡ್ ಮ್ಯಾಚಲ್ಲಿ ಸೌತ್ ಆಫ್ರಿಕಾ ಒನ್ ಸೈಡೆಡ್ ಆಗಿ ವಿನ್ ಆಗಿದೆ. ಐದು ಪಂದ್ಯಗಳ ಸರಣಿ ಸದ್ಯ ಸಮಬಲ ಆಗಿವೆ. ಇಂಟ್ರೆಸ್ಟಿಂಗ್ ಅಂದ್ರೆ ಭಾರತ ಎರಡನೇ ಮ್ಯಾಚಲ್ಲಿ ಸಾಕಷ್ಟು ಮಿಸ್ಟೇಕ್ಸ್ ಮಾಡ್ಕೊಂಡಿದೆ.
ಇದನ್ನೂ ಓದಿ : 7 ವೈಡ್ ಹಾಕಿದ ಅರ್ಶ್‌ದೀಪ್ ಮೇಲೆ ಕೋಚ್ ಸಿಟ್ಟು – ಗಂಭೀರ್ ಬೈಗುಳಕ್ಕೆ ಬೌಲರ್ ಥಂಡಾ
ಮೊದಲ ಮ್ಯಾಚಲ್ಲಿ ದಕ್ಷಿಣ ಆಫ್ರಿಕಾವನ್ನು 101 ರನ್ಗಳಿಂದ ಸೋಲಿಸಿದ್ದ ಟೀಂ ಇಂಡಿಯಾ ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 51 ರನ್ಗಳಿಂದ ಸೋಲು ಕಂಡಿದೆ. ಫೈಟ್ ಕೊಟ್ಟು ಸೋತ್ರೆ ಅದೊಂಥರಾ ಬಟ್ ಭಾರತ ನಿನ್ನೆ ಮ್ಯಾಚಲ್ಲಿ ಬೌಲಿಂಗ್ನಲ್ಲೂ ಎಫೆಕ್ಟಿವ್ ಇರ್ಲಿಲ್ಲ. ಬ್ಯಾಟಿಂಗ್ನಲ್ಲೂ ಇಂಪ್ಯಾಕ್ಟ್ ಮಾಡ್ಲಿಲ್ಲ. ಅದ್ರಲ್ಲೂ ಭಾರತದ ಸೋಲಿಗೆ ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್, ವೈಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ನೇರ ಹೊಣೆ ಅಂದ್ರೂ ತಪ್ಪಾಗಲ್ಲ. ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಟಾಸ್ ಗೆದ್ದ ಭಾರತ ಫೀಳ್ಡಿಂಗ್ ಆಯ್ಕೆ ಮಾಡಿಕೊಳ್ತು. ಬಟ್ ಬೌಲಿಂಗ್ನಲ್ಲಿ ಹಿಗ್ಗಾಮುಗ್ಗಾ ಹೊಡೆಸ್ಕೊಂಡ್ರು.
ಡಿ ಕಾಕ್ ಅಬ್ಬರಕ್ಕೆ ಭಾರತದ ಬೌಲರ್ಸ್ ಥಂಡಾ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 213 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಗಳಿಸಿದರು. ಌಂಡ್ ಮಿಡಲ್ ಓವರ್ನಲ್ಲೂ ಒಳ್ಳೆ ರನ್ಸ್ ಬಂತು. ಅದ್ರಲ್ಲೂ ಭಾರತದ ಬೌಲರ್ಸ್ ತುಂಬಾ ಎಕ್ಸ್ಪೆನ್ಸಿವ್ ಆಗಿದ್ರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಎಂಟು ಓವರ್‌ಗಳಲ್ಲಿ ಒಟ್ಟು 99 ರನ್‌ಗಳನ್ನು ಬಿಟ್ಟುಕೊಟ್ಟರು. ಅದ್ರಲ್ಲೂ ಅರ್ಶದೀಪ್ ವೈಡ್ ಕೊಟ್ಟಿದ್ದೇ ಕೊಟ್ಟಿದ್ದೇ. ಒಂದೇ ಓವರ್ನಲ್ಲಿ 7 ವೈಡ್ ಹಾಕಿ ಒಂದು ಓವರ್ನಲ್ಲಿ ದಾಖಲೆಯ 13 ಬಾಲ್ ಎಸೆದ್ರು. ಹೀಗೆ 213 ರನ್ಗಳನ್ನ ಕೊಟ್ಟು ದಾಖಲೆಯ 214 ರನ್ ಚೇಸಿಂಗ್ಗೆ ಇಳಿದ ಭಾರತ ಫಸ್ಟ್ ಓವರ್ನಲ್ಲೇ ವಿಕೆಟ್ ಕಳ್ಕೊಳ್ತು. ಆ ಮೇಲೆ ಪೆವಿಲಿಯನ್ ಪರೇಡ್ ನಡೀತಾನೇ ಇತ್ತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ತಿಲಕ್ ವರ್ಮಾ 62 ರನ್ ಗಳಿಸಿದ್ರೂ ಸಪೋರ್ಟ್ ಸಿಗ್ಲಿಲ್ಲ. ಅಂತಿಮವಾಗಿ 19ನೇ ಓವರ್ನಲ್ಲಿ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ 51 ರನ್‌ಗಳ ಹೀನಾಯ ಸೋಲು ಅನುಭವಿಸಿದ್ರು. ಅಷ್ಟಕ್ಕೂ ಭಾರತದ ಸೋಲಿಗೆ ಏನೆಲ್ಲಾ ಕಾರಣ ಆಯ್ತು.
ಭಾರತದ ಸೋಲಿಗೆ ಕಾರಣಗಳು!
ಬೌಲಿಂಗ್ ನಲ್ಲಿ ದಾರಾಳವಾಗಿ ರನ್ಸ್ ಕೊಟ್ಟ ಬೌಲರ್ಸ್
ಫಸ್ಟ್ ಓವರ್ ವಿಕೆಟ್, ಕ್ರಿಸ್ ಕಚ್ಚಿ ನಿಲ್ಲದ ಬ್ಯಾಟರ್ಸ್
ಬ್ಯಾಟಿಂಗ್ ಆರ್ಡರ್ ಬದಲಾವಣೆ, ನಂ.3ಗೆ ಅಕ್ಷರ್
ಗಿಲ್ & ಸೂರ್ಯ ಈ ಪಂದ್ಯದಲ್ಲೂ ಫೇಲ್ಯೂರ್
ಸೌತ್ ಆಫ್ರಿಕಾ ಬ್ಯಾಟಿಂಗ್ & ಬೌಲಿಂಗ್ ಸೂಪರ್
ಹೀಗೆ ಭಾರತದ ಸೋಲಿಗೆ ತಂಡದ ಕಳಪೆ ಪ್ರದರ್ಶನವೇ ಪ್ರಮುಖ ಕಾರಣ. ಅದ್ರಲ್ಲೂ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಪದೇಪದೆ ಫೇಲ್ಯೂರ್ ಆಗ್ತಿದ್ರೂ ಅದು ಹೇಗೆ ಚಾನ್ಸ್ ಕೊಡ್ತಿದ್ದಾರೋ ಬಿಸಿಸಿಐಗೇ ಗೊತ್ತು.

ನೋಡಿರಿ

