ಬವುಮಾ ತಂತ್ರಕ್ಕೆ ಶರಣು.. ಜೈಸ್ವಾಲ್, ಜಡ್ಡು ಹಿಂಗೂ ಆಡ್ತಾರಾ? – 400+ ರನ್ಸ್ ಹೊಡೆದ್ರಷ್ಟೇ ಗೆಲ್ತಾರಾ?

ಭಾರತದ ಬ್ಯಾಟಿಂಗ್ ನೋಡ್ದಾಗ ವ್ಹಾವ್ ನಾವೇ ಗೆಲ್ಲೋದು ಅನ್ನಿಸ್ತಿತ್ತು. ಬಟ್ ಭಾರತದ ಫೀಲ್ಡಿಂಗ್, ಬೌಲಿಂಗ್ ನೋಡ್ದಾಗ ಛೇ ಹಿಂಗೂ ಆಡ್ತಾರಾ ಅನ್ನಿಸಿಬಿಡ್ತು. ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆಲ್ಲೋ ಮ್ಯಾಚ್ನ ಕೈಚೆಲ್ಲಿದೆ. ಮೂರು ಪಂದ್ಯಗಳ ಸರಣಿ ಸದ್ಯ 1-1 ರಿಂದ ಸಮಬಲಗೊಂಡಿದೆ. ಫಸ್ಟ್ ಬ್ಯಾಟಿಂಗ್ ಮಾಡಿ ಭಾರತ ತಂಡ ದಕ್ಷಿಣ ಆಫ್ರಿಕಾಗೆ 359 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಹರಿಣಪಡೆ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿದೆ. ಬಿಗ್ ಸ್ಕೋರ್ ಇದ್ರೂ ಭಾರತ ಏನೆಲ್ಲಾ ಮಿಸ್ಟೇಕ್ಸ್ ಮಾಡ್ತು? ಟೆಂಬಾ ಬವುಮಾ ಪಡೆ ರಣತಂತ್ರ ಹೇಗೆ ವರ್ಕೌಟ್ ಆಯ್ತು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 99ನೇ ವಯಸ್ಸಿನಲ್ಲಿ ದೇವರಾದ ಡಾಕ್ಟರ್ ಅಜ್ಜಿ – ಆಸ್ಪತ್ರೆಗೆ 3.4 ಕೋಟಿ ರೂಪಾಯಿ ದಾನ
ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಶತಕ ಮತ್ತು ಕೆಎಲ್ ರಾಹುಲ್ ಅವ್ರ ಅರ್ಧಶತಕದ ನೆರವಿನಿಂದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆ ಹಾಕಿತ್ತು. ಕಳೆದ ಪಂದ್ಯಕ್ಕಿಂತ ಈ ಪಂದ್ಯದಲ್ಲಿ 9 ರನ್ಸ್ ಜಾಸ್ತಿನೇ ಇತ್ತು. ಆದ್ರೆ ಗೆದ್ರಾ ಅಂದ್ರೆ ಇಲ್ಲ. ಹಾಗಾದ್ರೆ ರಾಂಚಿಯ ಪಂದ್ಯಕ್ಕೂ ರಾಯ್ಪುರದ ಪಂದ್ಯಕ್ಕೂ ಏನ್ ಮಿಸ್ ಆಯ್ತು ಅಂದ್ರೆ ತುಂಬಾ ರೀಸನ್ಸ್ ಏನಿಲ್ಲ. ಎರಡೂ ಪಂದ್ಯಗಳಲ್ಲೂ ಟಾಸ್, ರನ್ಸ್ ಎಲ್ಲಾ ಸಿಮಿಲಾರಿಟಿಸ್ ಇದ್ರೂ ಭಾರತ ಸೋಲ್ತು. ಅದಕ್ಕೆ ಒಂದಷ್ಟು ಕಾರಣಗಳಿವೆ.
ಚಾನ್ಸ್ ಕೊಟ್ರೂ ಕ್ಲಿಕ್ ಆಗದ ಯಶಸ್ವಿ ಜೈಸ್ವಾಲ್
ಶುಭ್ಮನ್ ಗಿಲ್ ಇಂಜುರಿ ಆದ್ಮೇಲೆ ಅವ್ರ ಪ್ಲೇಸ್ಗೆ ರಿಪ್ಲೇಸ್ ಆಗಿ ಬಂದವ್ರೇ ಯಶಸ್ವಿ ಜೈಸ್ವಾಲ್. ಅಲ್ದೇ ಕಳೆದ ಪಂದ್ಯಗಳಲ್ಲಿ ಗಿಲ್ ಫೇಲ್ಯೂರ್ ಆದಾಗ ಜೈಸ್ವಾಲ್ಗೆ ಚಾನ್ಸ್ ಕೊಡಿ ಅಂತಾ ತುಂಬಾ ಜನ ಒತ್ತಾಯ ಮಾಡಿದ್ರು. ಬಟ್ ಈಗ ಜೈಸ್ವಾಲ್ ಕೂಡ ಅವಕಾಶವನ್ನ ಸಮರ್ಥವಾಗಿ ಬಳಸಿಕೊಳ್ತಿಲ್ಲ.
ನಂಬರ್ 1 – ಸಕ್ಸಸ್ ಆಗದ ಜೈಸ್ವಾಲ್
ನಂಬರ್ – 2, ಸುಂದರ್ ಗ್ಯಾಕೆ ಅವಕಾಶ?
ನಂಬರ್ 3, ಬೌಲಿಂಗ್ & ಫೀಲ್ಡಿಂಗ್ ವೀಕ್!
ಭಾರತದ ಬ್ಯಾಟಿಂಗ್ ಓಕೆ ಅನ್ಸಿದ್ರೆ ಫೀಲ್ಡಿಂಗ್ ಅಷ್ಟು ಎಫೆಕ್ಟಿವ್ ಇರ್ಲಿಲ್ಲ. ಭಾರತದ ಸೋಲಿಗೆ ಇದೂ ಕಾರಣ ಆಯ್ತು. ಹಾಗೇ ಟೆಂಬಾ ಬವುಮಾ ರಣತಂತ್ರ ಕೂಡ ವರ್ಕೌಟ್ ಆಯ್ತು. ಟಾಸ್ ಗೆದ್ದ ಟೆಂಬಾ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತಾರೆ. ಯಾಕಂದ್ರೆ ಅದು ಚೇಸಿಂಗ್ ಪಿಚ್ ಅನ್ನೋದು ಗೊತ್ತಿದೆ. ಅದಕ್ಕೆ ಆಯ್ಕೆ ಮಾಡಿಕೊಂಡ್ರು. ನೆಕ್ಸ್ಟ್ ಟಾರ್ಗೆಟ್ ಫಿಕ್ಸ್ ಆದಾಗ ದಕ್ಷಿಣ ಆಫ್ರಿಕಾ ಬ್ಯಾಟರ್ಸ್ ಮಿಡಲ್ ಆರ್ಡರ್ ನಲ್ಲಿ ರನ್ ವೇಗ ಹೆಚ್ಚಿಸಿದ್ದು ಅಡ್ವಾಂಟೇಜ್ ಆಯ್ತು. ಸೋ ಇದೆಲ್ಲಾ ಕಾರಣಗಳಿಂದಲೇ ಭಾರತ 2ನೇ ಪಂದ್ಯ ಸೋತಿದೆ. ಈಗ ಮೂರನೇ ಪಂದ್ಯ ಡಿಸೆಂಬರ್ 6ಕ್ಕೆ ವಿಶಾಖಪಟ್ಟಣದಲ್ಲಿ ನಡೆಯುತ್ತೆ,. ಈ ಮೈದಾನ ಬ್ಯಾಟಿಂಗ್ ಫ್ರೆಂಡ್ಲಿ ಇರೋದ್ರಿಂದ ಭಾರತ ಏನಾದ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ ಗೆಲ್ಬೇಕು ಅಂದ್ರೆ ಬಹುಶಃ 400ಪ್ಲಸ್ ರನ್ಸ್ ಹೊಡಿಬೇಕೋ ಏನೋ. ಯಾಕಂದ್ರೆ ಈ ಬೌಲರ್ಸ್, ಫೀಲ್ಡಿಂಗ್ ಇಟ್ಕೊಂಡು ಎಷ್ಟೇ ಬಿಗ್ ಸ್ಕೋರ್ ಇದ್ರೂ ಗೆಲ್ಲೋದು ಕಷ್ಟನೇ.

ನೋಡಿರಿ

